ಕಿಚ್ಚು ಹಚ್ಚಿದ ಕಿಚ್ಚನ ಯುದ್ಧದ ಮಾತು, ಸ್ಟಾರ್‌ವಾರ್‌ಗೆ ಆಹ್ವಾನ ಕೊಟ್ಟ ಮಾರ್ಕ್ ಮೂವಿ!, ಸುದೀಪ್ ಮಾತಿಗೆ ಕೌಂಟರ್ ಕೊಟ್ಟ ದಾಸನ ಪತ್ನಿ ವಿಜಯಲಕ್ಷ್ಮೀ! ಕಿಚ್ಚನ ವಿರುದ್ಧ ಮಾತಿನ ಯುದ್ಧಕ್ಕೆ ನಿಂತ ಡಿಬಾಸ್ ಫ್ಯಾನ್ಸ್, ಸೋಷಿಯಲ್ ಮೀಡಿಯಾದಲ್ಲಿ ಶುರುವಾಯ್ತು ಬಿಗ್‌ವಾರ್, ಅಷ್ಟಕ್ಕೂ ದಿಢೀರ್ ಕಿಚ್ಚ ಕೆರಳಿದ್ದು ಯಾಕೆ? ಡೆವಿಲ್ VS ಮಾರ್ಕ್ ಜಗಳ ಶುರು ಆಗಿದ್ದು ಹೇಗೆ? ಅನ್ನೋದನ್ನ ಹೇಳ್ತೀವಿ ಅದಕ್ಕೂ ಮೊದಲು ಬಾಸ್ ಟಿವಿ ಕನ್ನಡ ಚಾನೆಲ್‌ನ್ನು ಸಬ್‌ಸ್ಕ್ರೈಬ್ ಮಾಡಿ..
ಬಾದ್‌ಷಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾರ್ಕ್ ಡಿಸೆಂಬರ್ 25 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಈ ಚಿತ್ರದ ಪ್ರೀ ರಿಲೀಸ್ ಈವೆಂಟ್ ಏರ್ಪಡಿಸಲಾಗಿತ್ತು. ವೇದಿಕೆಯ ಮೇಲೆ ಮಾತನಾಡುವಾಗ ಸುದೀಪ್, ತಮ್ಮ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ರು. ನಾವು ಯುದ್ಧಕ್ಕೆ ಸಿದ್ಧ; ಮಾತಿಗೆ ಬದ್ಧ ಅಂತ ಹೇಳಿದ್ದರು. ತಡೆಯೋಕೆ ಸಾಧ್ಯವಾಗುವಷ್ಟು ತಡೆಯಿರಿ. ಮಾತನಾಡೋ ಸಮಯದಲ್ಲಿ ಮಾತನಾಡಿ ಅಂತ ಹೇಳಿದ್ದರು. ಡಿಸೆಂಬರ್-25 ರಂದು ಥಿಯೇಟರ್ ಅಲ್ಲ ನೀವು ಕೂಗೋ ಕೂಗು ಬೆಂಗಳೂರಿನಲ್ಲಿರೋ ನನಗೆ ಕೇಳಿಸಬೇಕು. ಆ ರೀತಿನೇ ಕೂಗಿ ಅಂತಲೇ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಹೇಳಿದ್ರು, ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ವಾ, ಆದರೆ ನನ್ನ ಸ್ನೇಹಿತರು ಚೆನ್ನಾಗಿ ಇರಬೇಕು ಅಂತ ಬಾಯಿ ಮುಚ್ಚಿಕೊಂಡು ಇದ್ವಿ. ಬಾಯಿ ಇಲ್ಲಾ ಅಂತ ಅಲ್ಲಾ ಅಂತಾ ಯಾರ ಹೆಸರನ್ನೂ ಪ್ರಸ್ತಾಪಿಸದೇ ಕಿಚ್ಚ ಸುದೀಪ್ ಗುಡುಗಿದ್ದರು.
ಸುದೀಪ್ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಸುದೀಪ್ ಫ್ಯಾನ್ಸ್ ಹಾಗೂ ದರ್ಶನ್ ಫ್ಯಾನ್ಸ್ ಮಧ್ಯೆ ವಾರ್ ಜೋರಾಗಿತ್ತು. ಇದೇ ವಿಚಾರಕ್ಕೆ ದಾವಣಗೆರೆಯಲ್ಲಿ ದಚ್ಚು ಪತ್ನಿ ವಿಜಿ, ಕೂಡ ಯಾರ ಹೆಸರನ್ನೂ ಉಲ್ಲೇಖಿಸಲದೇ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಕೆಲವರು ದರ್ಶನ್ ಅವ್ರು ಇಲ್ಲದೇ ಇದ್ದಾಗ ಏನೇನೋ ಮಾತಾಡ್ತಾ ಇದ್ದಾರೆ. ಅವರ ಬಗ್ಗೆ ಅವ್ರ ಫ್ಯಾನ್ಸ್ ಬಗ್ಗೆ ಎಲ್ಲಾ ಮಾತಾಡ್ತಾರೆ. ವೇದಿಕೆ ಮೇಲೆ ನಿತ್ಕೊಂಡು ಮಾತಾಡೋದು… ವೀಡಿಯಾಗಳಲ್ಲಿ ಕುಳಿತು ಮಾತಾಡೋದು… ಹೊರಗೆ ಕುತ್ಕೊಂಡ್ ಮಾತಾಡೋದು ಎಲ್ಲಾ ಮಾಡ್ತಿದ್ದಾರೆ. ಅದೇ ಜನರು ದರ್ಶನ್ ಅವರು ಇದ್ದಾಗ ಬೆಂಗಳೂರಲ್ಲಿ ಇರ್ತಾರಾ ಇಲ್ವಾ? ದರ್ಶನ್ ಟೀಕಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಅಂತ ಸೈಲೆಂಟ್ ಆಗಿ ಕೌಂಟರ್ ಕೊಟ್ಟಿದ್ದಾರೆ.
ಸದ್ಯ ಇಷ್ಟೆಲ್ಲಾ ಸ್ಟಾರ್‌ವಾರ್ ನಡೆಯುತ್ತಿದ್ರೂ ಇದಕ್ಕೂ ನಮಗೂ ಸಂಬಂಧನೇ ಇಲ್ಲ. ಜಗಳ ಆಡಿದ್ರೆ ಆಡಿಲಿ ಅಂತ ಕನ್ನಡ ವಾಣಿಜ್ಯ ಮಂಡಳಿ ಕಣ್ ಮುಚ್ಚಿ ಕುಳಿತ್ತಿರೋದು ಯಾಕೆ? ಸ್ಯಾಂಡಲ್‌ವುಡ್‌ನ ದೊಡ್ಡವರು ಅಂತ ಹೇಳೋರು ಅಂತ ಯಾರು ಇಲ್ವಾ? ಸ್ಟಾರ್‌ವಾರ್‌ನಿಂದ ಕನ್ನಡ ಚಿತ್ರರಂಗಕ್ಕೆ ನಷ್ಟನೇ ಆಗಲ್ವಾ? ಅಂತಾ ಸೋಷಿಯಲ್ ಮೀಡಿಯಾ ಹಾಗೂ ಫ್ಯಾನ್ಸ್ ಮಧ್ಯೆ ಚರ್ಚೆಯಾಗುತ್ತಿದೆ.
