ಕಾವೇರಿ ಆರತಿ (Cauvery Aarti )ಗೆ ಹೈಕೋರ್ಟ್‌ ನೋಟೀಸ್‌ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಆರ್ಡರ್‌ ನೋಡದೆ ನಾನೇನು ಮಾತನಾಡಲ್ಲ, ಪಾರ್ಥನೆ ಮಾಡೋದು ಪೂಜೆ ಮಾಡೋದು ಯಾರು ನಿಲ್ಲಿಸೋಕೆ ಆಗಲ್ಲ ಎಂದು ಹೇಳಿದರು.

ಯಾವ ಕೋರ್ಟು ಹಾಗೇ ಮಾಡೋಕೆ ಆಗಲ್ಲ. ನೀವೂ ಮಾಡೋಕೆ ಆಗಲ್ಲ, ನಾನೂ ಮಾಡೋಕೆ ಆಗಲ್ಲ. ಕೈ ಮುಗಿಯೋಕೆ ದೇವರ ಕೇಳೋಕೆ ಯಾರನ್ನಾದರು ಕೇಳಬೇಕಾ ಎಂದು ಹೇಳಿದರು.

ನಾಳೆ‌ ಬಾಗಿನ ಅರ್ಪಿಸೋಕೆ ಹೋಗುತ್ತಿದ್ದೇವೆ ಯಾರಾದರು ಬಂದು ತಡಿಯೋಕೆ ಆಗುತ್ತಾ…? ದಸರಾ ಪೂಜೆ ಮಾಡುತ್ತೇವೆ ಯಾರಾದರು ನಿಲ್ಲಿಸೋಕೆ ಆಗುತ್ತಾ..? ದಿನಾ ಕಾವೇರಿ ಪೂಜೆ ನಡಿತಾ ಇರ್ತದೆ ಯಾರಾದರು ನಿಲ್ಲಿಸೋಕೆ ಆಗುತ್ತಾ..? ದೊಡ್ಡ ಮಟ್ಟದಲ್ಲಿ ಮಾಡಬೇಕು ಎಂದು ಕೊಂಡಿದ್ದೇವೆ ಎಂದು ಹೇಳಿದರು.

Read Also : ಸೆ. 22ರಂದು ದಸರಾ ಉತ್ಸವಕ್ಕೆ ಚಾಲನೆ, ಅ. 2ರಂದು ಜಂಬೂಸವಾರಿ : ಸಿಎಂ ಸಿದ್ದರಾಮಯ್ಯ

Share.
Leave A Reply