ಕಳೆದ 17 ಸಿಸನ್‌ಗಿಂತಲೂ, ಸಿಸನ್‌ 18ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ RCB, ಈ ಬಾರಿಯ IPL ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ ಹಾಗೂ ಕಪ್‌ ಗೆಲ್ಲುವ ನಿರೀಕ್ಷೆಯಲ್ಲಿದೆ. ಆದರೆ IPL ಗೆಲ್ಲುವ ಈ ಮಹದಾಸೆಗೆ ಅನೇಕ ವಿಘ್ನಗಳೂ ಎದುರಾಗಿದೆ. ಸಿಸನ್‌ 18ರಲ್ಲಿ ಆರಂಭದಿಂದಲೂ ಪಾಯಿಂಟ್‌ ಟೇಬಲ್‌ನಲ್ಲಿ ಮೊದಲೆರಡು ಸ್ಥಾನದಲ್ಲೆ ಇದ್ದಿದ್ದ RCB ಭಾನುವಾರ ನಡೆದ SRH ನಡುವಿನ ಪಂದ್ಯದಲ್ಲಿ ಸೋಲುಂಡು ಮೂರನೇ ಸ್ಥಾನಕ್ಕೆ ಇಳಿದಿದೆ.

ಕಪ್‌ ಗೆಲ್ಲಲೂ ಎರಡೇ ಹೆಜ್ಜೆ ಇರುವ ಈ ಸಂದರ್ಭದಲ್ಲಿ RCB ಎಡವಿದೆ. ಪಾಯಿಂಟ್‌ ಟೇಬಲ್‌ನಲ್ಲಿ ಮೋದಲೆರಡು ಸ್ಥಾನಕ್ಕೆ RCB ಹಣಾಹಣಿ ನಡೆಸಬೇಕಿದ್ದು, ಮಂಗಳವಾರ ನಡೆಯುವ LSG ನಡುವಿನ ಪಂದ್ಯದಲ್ಲಿ ಗೆದ್ದರೆ ಮೋದಲೆರಡು ಸ್ಥಾನವನ್ನ ಖಚಿತ ಪಡಿಸಿಕೊಳ್ಳುವ ಸಾಧ್ಯತೆ ಇದೆ.

ಇಂಗ್ಲೆಂಡ್‌ ಮಾರಕ ಬ್ಯಾಟ್ಸ್‌ಮನ್‌ ಜಾಕಬ್ ಬೆತಲ್ ಹಾಗೂ ಆಫ್ರೀಕಾದ ವೇಗಿ ಲುಂಗಿ ಎನ್ಗಿಡಿಯ ಅಲಭ್ಯತೆ, RCBಗೆ ಭಾರಿ ಆಘಾತವನ್ನುಂಟುಮಾಡಿದೆ. ಇದರ ಜೊತೆಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಾಲ್ಟ್ ಶೀಘ್ರದಲ್ಲೇ ಇಂಗ್ಲೆಂಡ್‌ಗೆ ಮರಳುವ ಸಾಧ್ಯತೆ ಇದೆ. ಆರಂಭಿಕ ವಿದೇಶಿ ಬ್ಯಾಟ್ಸ್‌ಮನ್‌ಗಳು ಕೈ ಕೊಟ್ಟ ಹಿನ್ನಲೆ RCB ಬ್ಯಾಟಿಂಗ್‌ನಲ್ಲಿ ಕುಸಿತ ಕಾಣುವ ಸಾಧ್ಯತೆ ಇದೆ.

ಭಾನುವಾರ ನಡೆದ RCB ಮತ್ತು SRH ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವೈಪಲ್ಯ ಹಾಗೂ ಬೌಲರ್‌ಗಳ ಕಳಪೆ ಪ್ರದರ್ಶನ RCB ತಂಡಕ್ಕೆ ಏನಾಗಿದೆ ಎಂಬ ಅನುಮಾನ ಹುಟ್ಟಿದೆ. ಇದರ ಜೊತೆಯಲ್ಲಿ ಆಪತ್ಬಾಂದವ ಜೋಶ್ ಹೇಜಲ್​ವುಡ್ ವಾಪಸಾತಿ, ಮತ್ತು ಬೆತಲ್‌ ಜಾಗಕ್ಕೆ ಕಿವಿಸ್‌ ಸ್ಪೋಟಕ ಬ್ಯಾಟರ್‌ ಟೀಮ್‌ ಶಫರ್ಟ್ ಆಗಮನ ತಂಡದ ಸ್ಥಿತರ ಕಾರಣವಾಗಲಿದೆ.

IPLನಲ್ಲಿ ಸಧ್ಯದ ಮಟ್ಟಿಗೆ ಪಾಯಿಂಟ್‌ ಟೇಬಲ್‌ನ ಮೊದಲೆರಡು ಸ್ಥಾನದಲ್ಲಿ ಗುಜರಾತ್‌ ಹಾಗೂ ಪಂಜಾಬ್‌ ಇದ್ದು, RCB ಮೂರನೇ ಸ್ಥಾನದಲ್ಲಿದೆ, ಮುಂಬೈ ನಾಲ್ಕನೇ ಸ್ಥಾನದಲ್ಲಿದೆ. ಇಂದು ಹಾಗೂ ನಾಳೆ ನಡೆಯುವ ಪಂದ್ಯ ಪಾಯಿಂಟ್‌ ಟೇಬಲ್‌ ನಲ್ಲಿ ಭಾರಿ ಬದಲಾವಣೆ ಉಂಟು ಮಾಡಲಿದ್ದು. ಇಂದಿನ ಮುಂಬೈ ಮತ್ತು ಪಂಜಾಬ್‌ನ ಪಂದ್ಯದಲ್ಲಿ ಪಂಜಾಬ್‌ ಸೋತು, ನಾಳಿನ ಪಂದ್ಯದಲ್ಲಿ LSG ವಿರುದ್ಧ RCB ಗೆಲುವು ಸಾಧಿಸಿದರೆ, RCB ಪಾಯಿಂಟ್‌ ಟೇಬಲ್‌ ಟಾಪರ್‌ ಆಗಿ, ಪೈನಲ್‌ನ ಹಾದಿ ಸುಲಭವಾಗುತ್ತದೆ.

Also Read: ರಾಜ್ಯದಲ್ಲಿ Corona ರಣಕೇಕೆ.. ಶಾಲೆಗಳಿಗೆ ಸಿಗುತ್ತಾ ರಜೆ?

ಒಂದು ವೇಳೆ ಸೋತರೆ ಎಲಿಮಿನೆಟರ್‌ ಪಂದ್ಯ ಆಡಬೇಕಾಗುತ್ತದೆ. ಕಪ್‌ ಗೆಲ್ಲುವ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ RCB ಈ ಬಾರಿ ಕಪ್‌ ನೀಡುತ್ತಾ, ಇಲ್ಲ ನಿರಾಸೆ ಉಂಟುಮಾಡುತ್ತಾ ಕಾದು ನೋಡಬೇಕಾಗಿದೆ.

Share.
Leave A Reply