ಧರ್ಮಸ್ಥಳ ಕೇಸ್ ಎಲ್ಲಾ ಮುಗಿಯುವ ಹಂತಕ್ಕೆ ಬಂದಿದೆ. ನಮ್ಮ ಅಭಿಪ್ರಾಯದಲ್ಲಿ 90% ಕೇಸ್ ತನಿಖೆ ಮುಗಿದಿದೆ. ಎನ್‌ಐಎ, ಸಿಬಿಐ ತನಿಖೆ ಬೇಕಾಗಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಧರ್ಮಸ್ಥಳ ಪ್ರಕರಣದ ಕುರಿತು ಸತೀಶ್ ಜಾರಕಿಹೊಳಿ ಹೇಳಿಕೆಗೆ ನೆಲಮಂಗಲದಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ, ಪರಮೇಶ್ವರ್ ಕ್ಲಾರಿಟಿ ಕೊಡಬೇಕು ಎಂಬ ತೀರ್ಮಾನ ತೆಗೆದುಕೊಂಡಿದ್ದರಿಂದ ಒಂದು ಹಂತಕ್ಕೆ ಬಂದಿದೆ. ಎನ್‌ಐಎ, ಸಿಬಿಐ ಬೇಕಾಗಿಲ್ಲ, ನಮ್ಮ ಪೊಲೀಸರೇ ಸಮರ್ಥವಾಗಿದ್ದಾರೆ. ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಬಗ್ಗೆ ವ್ಯಾಪಕವಾಗಿ ಯೂಟ್ಯೂಬರ್ಸ್ ಪರ ಹಾಗೂ ವಿರೋಧ ಇದ್ದರೂ ಎಲ್ಲವೂ ಅಂತ್ಯವಾಗತ್ತದೆ ಎಂದರು.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನ ವಿಚಾರದ ಕುರಿತು ಮಾತನಾಡಿ, ಅಬ್ದುಲ್ ಕಲಾಂ ರಾಷ್ಟ್ರಪತಿಯವರಾಗಿರಲಿಲ್ವಾ? ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದಾರೆ ಅಂದ್ರೆ ಬಾನು ಮುಷ್ತಾಕ್ ಉದ್ಘಾಟನೆ ಮಾಡೋದ್ರಲ್ಲಿ ತಪ್ಪೇನಿದೆ? ಅವರು ಇದೇ ಮಣ್ಣಿನಲ್ಲಿ ಹುಟ್ಟಿ ಅಭಿಮಾನ ಇರುವಂಥವರು. ಎಲ್ಲ ಧರ್ಮವನ್ನು ಸಮಾನವಾಗಿ ಕಾಣುವಂಥವರು. ಬೂಕರ್ ಪ್ರಶಸ್ತಿ ವಿಜೇತರು ಅವರು, ಉದ್ಘಾಟನೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

Share.
Leave A Reply