ಗಣೇಶ ಹಬ್ಬ ಆಚರಣೆಗೆ ಸರ್ಕಾರ ಕಠಿಣ ನಿರ್ಬಂಧ ವಿಧಿಸಿರುವುದು ಸರಿಯಲ್ಲ ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಕಿಡಿಕಾರಿದರು.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಕಾಂಗ್ರೆಸ್ ಸನಾತನ ಧರ್ಮದ ವಿರೋಧಿ ಅಂತಾ ಗುಡುಗಿದರು. ರಂಜಾನ್ಗೆ ಸರ್ಕಾರ ಕಡಿವಾಣ ಹಾಕಲಿಲ್ಲ ಸುಪ್ರೀಂಕೋರ್ಟ್ ಸೂಚನೆ ಇದ್ರೂ ಕ್ರಮ ಕೈಗೊಳ್ಳಲಿಲ್ಲ. ಆದರೆ ಗಣೇಶ ಹಬ್ಬಕ್ಕೆ ನಿರ್ಬಂಧಗಳನ್ನ ವಿಧಿಸಲಾಗಿದೆ. ಹಬ್ಬ ಆಚರಣೆಗೆ ಅವಕಾಶ ನೀಡಬೇಕು ನಿರ್ಬಂಧಗಳು ಸರಿಯಲ್ಲ ಎಂದರು.
ಭೂಕುಸಿತದಿಂದ ಸಂಕಷ್ಟದಲ್ಲಿರುವರಿಗೆ ಪರಿಹಾರಕ್ಕಾಗಿ ವಯನಾಡಿಗೆ ರಾಜ್ಯ ಸರ್ಕಾರದಿಂದ 10 ಕೋಟಿ ರೂ ಅನುದಾನ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿದ ಅಶ್ವಥ್ ನಾರಾಯಣ್, ಇದು ಕಾಂಗ್ರೆಸ್ ಪಕ್ಷದ ಹಣ ಎಂದುಕೊಂಡಿದ್ದಾರೆ ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆಯಾಗಬಾರದು. ನಾವು ಸರ್ಕಾರದ ನಿರ್ಧಾರ ಖಂಡಿಸುತ್ತೇವೆ ಎಂದರು.
Read Also : ಮಹೇಶ್ ತಿಮರೋಡಿಯನ್ನ ವಶಕ್ಕೆ ಪಡೆದ ಪೊಲೀಸರು
