ಮಾಜಿ ಸಚಿವ ಹಾಗೂ ಕೆ.ಆರ್. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಎಂಬುವವನ ಹತ್ಯೆಯಾಗಿದ್ದು ಈ ಪ್ರಕರಣದಲ್ಲಿ ಬೈರತಿ ಬಸವರಾಜ್ ಹೆಸರು ಕೇಳಿಬಂದಿದೆ. FIR ಕೂಡ ದಾಖಲಾಗಿದ್ದು ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ..
ಬೆಂಗಳೂರಿನ ಹಲಸೂರು ಕೆರೆ ಬಳಿ ಭಾರತಿನಗರದ ಬಿಕ್ಲು ಶಿವ ಎಂಬ ರೌಡಿಶೀಟರ್‌ನ ಕೊಲೆಯಾಗಿದೆ.. ಈ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳಾಗಿದ್ದಾರೆ. ಅದ್ರಲ್ಲಿ ಬೈರತಿ ಬಸವರಾಜ್ ಕೂಡ ಒಬ್ರು. ಜಗದೀಶ್ ಎ1 , ಕಿರಣ್ ಎ2 ವಿಮಲ್ ಎ3, ಅನಿಲ್ ಎ4 ಹಾಗೂ ಬೈರತಿ 5ನೇ ಆರೋಪಿಯಾಗಿದ್ದಾರೆ. ಸ್ವತಃ ಕೊಲೆಯಾದ ಬಿಕ್ಲು ಶಿವ ತಾಯಿಯೇ ಈ ಆರೋಪವನ್ನ ಮಾಡಿದ್ದಾರೆ. ಈ ಸಂಬಂಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ತನ್ನ ಮಗನನ್ನು ಕೊಲ್ಲಲು ಕಿತ್ತಕನೂರು ಜಾಗದ ವಿಚಾರವೇ ಕಾರಣ ಅಂತ ಶಿವನ ತಾಯಿ ಆರೋಪಿಸಿದ್ದಾರೆ. ಕೊಲೆ ಮಾಡಿರುವವರು ಹಲವು ಬಾರಿ ನನ್ನ ಮಗನಿಗೆ ಬೆದರಿಕೆ ಹಾಕಿದ್ರು. ಬೈರತಿ ಬಸವರಾಜ್, ಜಗದೀಶ್ ನನಗೆ ಪ್ರಾಣ ಬೆದರಿಕೆ ಹಾಕ್ತಿದ್ದಾರೆ ಅಂತ ಹಲವು ಬಾರಿ ಮಗ ಹೇಳಿದ್ದ. ಬೈರತಿ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ.. ಬಿಳಿ ಬಣ್ಣದ ಸ್ಕಾರ್ಪಿಯೋದಲ್ಲಿ 8 ರಿಂದ 9 ಮಂದಿ ಬಂದು ಮಚ್ಚಿನಿಂದ ಹೊಡೆದಿದ್ದಾರೆ ಅಂತ ತಾಯಿ ವಿಜಯಲಕ್ಷ್ಮಿ ಆರೋಪಿಸಿದ್ದಾರೆ.
ಆದ್ರೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.. ರಾಜಕೀಯ ನನ್ನನ್ನು ತೇಜೋವಧೆ ಮಾಡಲು ಷಡ್ಯಂತ್ರ ಮಾಡಲಾಗ್ತಿದೆ ಅಂತ ಬೈರತಿ ಪ್ರತಿಕ್ರಿಯಿಸಿದ್ದಾರೆ.. ಜೊತೆಗೆ ವಶಕ್ಕೆ ಒಳಗಾಗುವ ಭೀತಿಯಿಂದ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ ಅನ್ನೋ ಮಾಹಿತಿ ಸದ್ಯ ಹೊರಬಿದ್ದಿದೆ. ಬೈರತಿ ನಿಜಕ್ಕೂ ಕೊಲೆಯಲ್ಲಿ ಭಾಗಿಯಾಗಿದ್ರಾ..? ಅವರ ಮೇಲೆ ಆರೋಪ ಮಾಡಲು ಕಾರಣವೇನು..? ಅನ್ನೋದರ ಬಗ್ಗೆ ಮಾಹಿತಿ ತಿಳಿದುಬರಲಿದೆ.
