Subscribe to Updates
Get the latest creative news from FooBar about art, design and business.
Author: Mahanthesha
ಬೆಂಗಳೂರು, ಫೆ.27: ಭಾರತೀಯ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ರಿಂಕು ಸಿಂಗ್‌ಗೆ ದೊಡ್ಡ ಆಘಾತ ಎದುರಾಗಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಆಸರೆಯಾಗಿರುವ ಹೊತ್ತಲ್ಲೇ ಅವರ ತಂದೆ ಖಾನ್‌ಚಂದ್ ಸಿಂಗ್ ಅವರು ನಿಧನರಾಗಿದ್ದಾರೆ.. ನಾಲ್ಕನೇ ಹಂತದ ಕ್ಯಾನ್ಸರ್‌ಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ. ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಾಕಾರಿಯಾಗದೇ ಮೃತಪಟ್ಟಿದ್ದಾರೆ. ಈ ವಾರದ ಆರಂಭದಲ್ಲೇ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ರಿಂಕು ಸಿಂಗ್, ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ತನ್ನ ತಂದೆಯನ್ನ ನೋಡಲು ತೆರಳಿದ್ರು. ಆದರೆ, ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರದ ಕಾರಣ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಆದ್ರೂ ದೇಶ ಸೇವೆಯನ್ನ ಮರಿಯದ ರಿಂಕು ಭಾರತದ ಪರ ಆಡಲು ಪುನಃ ತಂಡಕ್ಕೆ ವಾಪಸ್ ಆಗಿದ್ರು. ಆದ್ರೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅವರ ಬದಲಾಗಿ ಸಂಜು ಸ್ಯಾಮ್ಸನ್‌ರನ್ನ ಕಣಕ್ಕಿಳಿಸಲಾಗಿತ್ತು. ರಿಂಕು ಸಿಂಗ್‌ಗೆ ಪರ್ಯಾಯ ಫೀಲ್ಡರ್ ಆಗಿ ಭಾಗವಹಿಸಲು ಮಾತ್ರ ಅವಕಾಶ ಸಿಕ್ಕಿತ್ತು. ಇದೀಗ ಅವರ ತಂದೆಯನ್ನ…
ಬೆಂಗಳೂರು, ಫೆ.27: ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ಜೊತೆಗೆ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಕೂಡ ನಿರಾಳರಾಗಿದ್ದಾರೆ. ಅವರ ವಿರುದ್ಧವಾಗಿ ಇದ್ದ ಅಬಕಾರಿ ನೀತಿ ಕೇಸ್ ಕೊನೆಗೂ ಖುಲಾಸೆಗೊಂಡಿದೆ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಪ್ರಕರಣದ ಎಲ್ಲಾ 23 ಆರೋಪಿಗಳನ್ನ ಖುಲಾಸೆ ಮಾಡಿದೆ. 2021-22ರಲ್ಲಿ ದೆಹಲಿ ಸರ್ಕಾರ ಜಾರಿಗೊಳಿಸಿದ್ದ ಮದ್ಯ ನೀತಿಯಲ್ಲಿ ಸಾವಿರಾರು ಕೋಟಿ ರೂ. ಹಗರಣ ಆಗಿದೆ ಅಂತ ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಹಾಗೂ ಇಡಿ ತನಿಖೆ ನಡೆಸಿದ್ದವು. ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅರೆಸ್ಟ್ ಕೂಡ ಆಗಿದ್ದರು. ಆದ್ರೆ ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಯಾವುದೇ ನಿರ್ದಿಷ್ಟ ಸಾಕ್ಷ್ಯಾಧಾರಗಳಿಲ್ಲ ಅಂತ ಆರೋಪಿಗಳನ್ನ ಕೇಸ್‌ನಿಂದ ಖುಲಾಸೆಗೊಳಿಸಿದೆ. ಅಂದು ದೆಹಲಿ ಸರ್ಕಾರ ಜಾರಿಗೊಳಿಸಿದ್ದ ಅಬಕಾರಿ ನೀತಿಯಲ್ಲಿ ಯಾವುದೇ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶ ಇರಲಿಲ್ಲ ಅಂತ ತೀರ್ಪು ನೀಡಿದೆ. ಜೊತೆಗೆ ತನಿಖೆಯಲ್ಲಿನ ಲೋಪಗಳಿಂದಾಗಿ ಸಿಬಿಐಗೆ ನ್ಯಾಯಾಲಯ ಛೀಮಾರಿ…
ಬೆಂಗಳೂರು, ಫೆ.25: ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡಗೆ ಪ್ರಧಾನಿ ನರೇಂದ್ರ ಮೋದಿಯವರು ಶುಭ ಹಾರೈಸಿದ್ದಾರೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಮದುವೆ ಹಾಗೂ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ರಿಸೆಪ್ಷನ್ ನಡೆಯಲಿದ್ದು, ಹಲವು ಗಣ್ಯರು, ರಾಜಕಾರಣಿಗಳು ಆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವಿಜಯ್ ದೇವರಕೊಂಡ ಅವರ ತಂದೆ ಮತ್ತು ತಾಯಿ ಅವರು, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಆಹ್ವಾನ ಪತ್ರಿಕೆಯನ್ನು ನೀಡಿ ಹಲವು ಗಣ್ಯರನ್ನು ಇನ್ವೈಟ್ ಮಾಡಿದ್ದಾರೆ. ಹಾಗೆಯೇ ಪ್ರಧಾನಿ ಮೋದಿ ಅವರಿಗೂ ಇನ್ವಿಟೇಷನ್ ಕಳುಹಿಸಿದ್ದರು. ಇದೀಗ ಮೋದಿ ಅವರು ವಿಜಯ್ ದೇವರಕೊಂಡ ಪೋಷಕರ ಹೆಸರು ಸೂಚಿಸಿ ಪತ್ರ ಬರೆದು ವಧು-ವರರಿಗೆ ಶುಭ ಹಾರೈಸಿದ್ದಾರೆ. ಫೆಬ್ರವರಿ 26, 2026ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ನೀವು ನೀಡಿದ ಆಮಂತ್ರಣವನ್ನು ಸ್ವೀಕರಿಸಿ ಬಹಳ ಸಂತೋಷವಾಯಿತು. ಈ ಅತ್ಯಂತ ಹರ್ಷದಾಯಕ ಮತ್ತು ಮಂಗಳಕರ ಸಂದರ್ಭದಲ್ಲಿ ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ…
ಬೆಂಗಳೂರು, ಫೆ.25: ನ್ಯಾಷನಲ್ ಕ್ರಶ್, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆಗೆ ಕ್ಷಣಗಣನೆ ಶುರುವಾಗಿದೆ. ಕರ್ನಾಟಕದ ಮನೆ ಮಗಳು ಈಗ ತೆಲುಗು ರಾಜ್ಯದ ಸೊಸೆಯಾಗಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸೀಕ್ರೆಟ್ ಆಗಿ ಲವ್ ಮಾಡುತ್ತಿದ್ದ ಇಬ್ಬರೂ ಇದೀಗ ಸತಿಪತಿಗಳಾಗಲು ಮುಂದಾಗಿದ್ದು, ಜೈಪುರದ ಭವ್ಯ ಅರಮನೆಯಂತಾ ಹೆರಿಟೇಜ್‌ನಲ್ಲಿ ಕಲ್ಯಾಣ ಜರುಗಲಿದೆ. ಹಾಗಾದರೆ, ಇಬ್ಬರ ಮದುವೆ ಹೇಗೆ ನಡೆಯುತ್ತೆ? ಒಂದೇ ಮಂಟಪದಲ್ಲಿ ಎರಡೆರಡು ಬಾರಿ ಮದುವೆ ಆಗೋದೇಕೆ ರಶ್-ವಿಜಯ್ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ಹೌದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸುವ ಮೂಲಕ ರಶ್ಮಿಕಾ ಸಿನಿ ಇಂಡಸ್ಟ್ರಿಗೆ ಕಾಲಿಟ್ಟದ್ದರು. ಆ ಸಿನಿಮಾ ಶೂಟಿಂಗ್ ಸೆಟ್‌ನಲ್ಲೇ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಧ್ಯೆ ಲವ್ ಶುರುವಾಗಿ, ಇಬ್ಬರೂ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ಆದ್ರೆ, ಆ ಎಂಗೇಜ್‌ಮೆಂಟ್ ಎರಡು ವರ್ಷದಲ್ಲೇ ಮುರಿದು ಬಿದ್ದಿತ್ತು. ಇದಾದ ನಂತರ ತೆಲುಗಿಗೆ ಹಾರಿದ್ದ ರಶ್ಮಿಕಾ ಮಂದಣ್ಣ ಹಿಂದೆ ತಿರುಗಿ ನೋಡಲೇ ಇಲ್ಲ. ಬ್ಯಾಕ್ ಟು…
ಬೆಂಗಳೂರು, ಫೆ.23: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿರುವ, ಅತಿ ಹೆಚ್ಚು ವೀಕ್ಷಕರ ಮನಗೆದ್ದಿರುವ ‘ಮುದ್ದುಸೊಸೆ’ ಧಾರಾವಾಹಿ ಇದೀಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಆರಂಭದಿಂದಲೂ ತನ್ನ ವೇಗವಾದ ಕಥಾಹಂದರ ಹಾಗೂ ರೋಚಕ ತಿರುವುಗಳ ಮೂಲಕ ಮನೆಮಾತಾಗಿರುವ ಈ ಸೀರಿಯಲ್‌ನಲ್ಲಿ, ಇದೀಗ ಕಥಾನಾಯಕಿ ವಿದ್ಯಾಳ ಬದುಕನ್ನೇ ಬುಡಮೇಲು ಮಾಡುವಂತಹ ಘಟನೆಯೊಂದು ಸಂಭವಿಸಿದೆ. “ಕಣ್ಣಿಗೆ ಕಂಡಿದ್ದೆಲ್ಲಾ ಸತ್ಯವಲ್ಲ, ನನ್ನ ಗಂಡನ ಮೇಲಿರುವ ಅಪವಾದ ಸುಳ್ಳು!” – ಈ ಒಂದು ನಂಬಿಕೆಯ ಮೇಲೆ ಕಲರ್ಸ್ ಕನ್ನಡದ ‘ಮುದ್ದುಸೊಸೆ’ ಧಾರಾವಾಹಿಯ ಕಥಾನಾಯಕಿ ವಿದ್ಯಾ ಈಗ ಅಗ್ನಿಪರೀಕ್ಷೆಗೆ ಸಿದ್ಧಳಾಗಿದ್ದಾಳೆ. ಟ್ವಿಸ್ಟ್ ಮೂಲಕವೇ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತಿರುವ ಈ ಧಾರಾವಾಹಿ, ಇದೀಗ ಕಥೆಯ ದಿಕ್ಕನ್ನೇ ಬದಲಿಸುವಂತಹ ‘ಮಹಾ ತಿರುವು’ ಪಡೆದುಕೊಂಡಿದೆ. ಕೇವಲ ಸಂಸಾರದ ಕಲಹವಲ್ಲದೆ, ಅಸ್ತಿತ್ವ ಮತ್ತು ಸಂಬಂಧದ ನಡುವಿನ ಸಂಘರ್ಷಕ್ಕೆ ವೇದಿಕೆ ಸಜ್ಜಾಗಿದೆ. ಹೌದು, ಮುದ್ದುಸೊಸೆ ಧಾರಾವಾಹಿ, ಪ್ರಸಾರ ಆರಂಭಿಸಿದ ದಿನದಿಂದ ಇಲ್ಲಿಯವರೆಗೂ ಸಾಕಷ್ಟು ತಿರುವುಗಳನ್ನು ವೀಕ್ಷಕರಿಗೆ ನೀಡುತ್ತಲೇ ಬಂದಿದೆ. ವೆಬ್‌ಸಿರೀಸ್‌ನಂತೆ ಏಪಿಸೋಡ್‌ನಿಂದ…
ಬೆಂಗಳೂರು, ಫೆ.23: ಸ್ಟಾರ್ ಕಪಲ್‌ಗಳ ಸಾಲಿಗೆ ಸೇರ್ಪಡೆಯಾಗೋದಿಕ್ಕೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸಜ್ಜಾಗಿದ್ದಾರೆ. ಬಹುಕಾಲದಿಂದ ಗಾಸಿಪ್‌ಗಳಿಗೆ ಕಾರಣವಾಗಿದ್ದ ಈ ಜೋಡಿ ಇದೀಗ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಇದೇ ಫೆಬ್ರವರಿ 26ರಂದು ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಲಿದ್ದು, ಈ ಹಿನ್ನೆಲೆ ರಾಜಸ್ಥಾನದ ಉದಯಪುರ ನಗರಕ್ಕೆ ಆಗಮಿಸಿದ್ದಾರೆ. ನಿನ್ನೆಯಷ್ಟೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ತಮ್ಮ ಮದುವೆ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದರು. ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಮದುವೆಯನ್ನು ಅಧಿಕೃತವಾಗಿ ಘೋಷಿಸಿದ್ದು, ತಮ್ಮ ಜೋಡಿಗೆ ಅಭಿಮಾನಿಗಳು ನೀಡಿದ “ವಿರೋಷ್” ಎಂಬ ಹೆಸರನ್ನೇ ಮದುವೆ ಸಮಾರಂಭದ ಶೀರ್ಷಿಕೆಯಾಗಿಸಿಕೊಂಡಿದ್ದಾರೆ. “ನಮ್ಮ ಮೇಲೆ ನೀವು ತೋರಿದ ಪ್ರೀತಿಗೆ ಗೌರವವಾಗಿ ನಮ್ಮ ಒಂದಾಗುವಿಕೆಯನ್ನು ‘ವಿರೋಷ್ ವಿವಾಹ’ ಎಂದು ಕರೆಯಲು ಬಯಸುತ್ತೇವೆ” ಎಂದು ಈ ಜೋಡಿ ಭಾವನಾತ್ಮಕವಾಗಿ ಹಂಚಿಕೊಂಡಿದೆ. ಕೊನೆಗೆ ಮದುವೆ ವಿಚಾರದ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದರಿಂದ ಅಭಿಮಾನಿಗಳಲ್ಲಿದ್ದ ಗೊಂದಲ ದೂರವಾಗಿದೆ. ಉದಯಪುರ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಪ್ರತ್ಯೇಕವಾಗಿ ಹೊರಬಂದರೂ, ಒಂದೇ…
ಬೆಂಗಳೂರು, ಫೆ.23: ಸಂಸ್ಕೃತಿ, ಸೃಜನಶೀಲತೆ ಮತ್ತು ವ್ಯಾಪ್ತಿಯನ್ನು ಆಧರಿಸಿದ ಭವಿಷ್ಯದ ವಿಷಯ (Content) ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ತನ್ನ ಬದ್ಧತೆಯನ್ನು ಮುಂದುವರಿಸುತ್ತಾ, ‘ಜೀ’ (Z) ಸಂಸ್ಥೆಯು ‘ಜೀ ಕಿರುಚಿತ್ರ ಸ್ಪರ್ಧೆ’ಯನ್ನು (Zee Short Film Contest) ಆಯೋಜಿಸುತ್ತಿದೆ. ದೇಶದಾದ್ಯಂತ ಉದಯೋನ್ಮುಖ ಚಿತ್ರ ನಿರ್ಮಾಣ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ ಮತ್ತು ಅವರನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ. ಭಾರತದ ವಿವಿಧ ಪ್ರಾದೇಶಿಕ ಸಿನೆಮಾ ಧ್ವನಿಗಳನ್ನು ಒಂದೇ ರಾಷ್ಟ್ರೀಯ ವೇದಿಕೆಯಲ್ಲಿ ಒಟ್ಟುಗೂಡಿಸುವ ಈ ಸ್ಪರ್ಧೆ, ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಬಹುಭಾಷಾ ಪ್ರತಿಭಾ ಅನ್ವೇಷಣೆಯ ಅತ್ಯಂತ ಮಹತ್ವಾಕಾಂಕ್ಷಿ ಪ್ರಯತ್ನಗಳಲ್ಲಿ ಒಂದಾಗಿದೆ. ಹಿಂದಿ, ಮರಾಠಿ, ಬೆಂಗಾಲಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಏಳು ಪ್ರಮುಖ ಭಾಷೆಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಸಿನಿಮಾ ಪರಂಪರೆ ಹೊಂದಿರುವ ಕಥೆಗಾರರಿಗೆ ರಾಷ್ಟ್ರೀಯ ಮಟ್ಟದ ಅವಕಾಶ ಸಿಗಲಿದೆ. ಈ ಸ್ಪರ್ಧೆಯ ಪ್ರಮುಖ ಆಕರ್ಷಣೆ ಎಂದರೆ ವಿವಿಧ ಪ್ರಾದೇಶಿಕ ಚಲನಚಿತ್ರ ಕ್ಷೇತ್ರಗಳಲ್ಲಿ ಹೊಸ ದಾರಿಯನ್ನು ತೋರಿಸಿದ ಗಣ್ಯ ನಿರ್ದೇಶಕ ತೀರ್ಪುಗಾರರು ಇರಲಿದ್ದಾರೆ. ‘ಗ್ಯಾಂಗ್ಸ್…
ಬೆಂಗಳೂರು, ಫೆ.19: ರಾಜನಿವಾಸ ಟ್ರೇಲರ್ ನೋಡಿದರೆ ತಕ್ಷಣ ಕಾಂತಾರದ ಝಲಕ್ ಕಾಣಿಸಿತು. ಆದರೆ, ಇದು ಕಾಂತಾರಕ್ಕಿಂತಲೂ ಮೊದಲೇ ತಯಾರಾದಂಥ ಸಬ್ಜೆಕ್ಟ್. ಆದರೆ ಕೃತಿ ರೂಪಕ್ಕೆ ಇಳಿದು ಪರದೆಗೆ ಸಿದ್ಧಗೊಳ್ಳಲು ಇಷ್ಟು ಸಮಯ ತೆಗೆದುಕೊಂಡಿದೆ. ನಿಜ ಹೇಳಬೇಕೆಂದರೆ ಕಾಂತಾರ ಬಂದ ಬಳಿಕ ಹೋಲಿಕೆಯ ಆರೋಪ ಎದುರಾದೀತು ಎಂದು ಸಾಕಷ್ಟು ಬದಲಾವಣೆಯನ್ನು ಕೂಡ ಮಾಡಲಾಗಿದೆ. ಆದರೆ ಇದು ತುಳುನಾಡು ಭಾಗದ ಕಥೆಯಾದ ಕಾರಣ ಸಹಜವಾಗಿ ಒಂದಷ್ಟು ಹೋಲಿಕೆಗಳು ಕಾಣುತ್ತವೆ. ಆದರೆ ಚಿತ್ರದಲ್ಲಿ ಬೇರೆಯೇ ಕಥೆ ಇದೆ ಎನ್ನುತ್ತಾರೆ ನಿರ್ದೇಶಕ ಮಿಥುನ್ ಸುವರ್ಣ. ರಾಜನಿವಾಸದಲ್ಲಿ ನಾಯಕ ಪಾತ್ರ ನಿರ್ವಹಿಸಿ ರಾಜನಂತೆ ಮೆರೆದಾಡಿರುವವರು ರಾಘವ್. ಹಾಡು ಮತ್ತು ಹೊಡೆದಾಟದ ಗ್ಲಿಂಪ್ಸ್ ಕಂಡವರಿಗೆ ಇದೊಂದು ಮಾಸ್ ಮೂವಿಯಾಗುವ ಎಲ್ಲ ಲಕ್ಷಣಗಳು ಗೋಚರಿಸಿದೆ. ನಾಯಕಿಯಾಗಿ ಕೃತ್ತಿಕಾ ಕಂಗೊಳಿಸಿದ್ದಾರೆ. ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿರುವುದು ಮೇಲ್ನೋಟಕ್ಕೆ ಎದ್ದು ಕಾಣಿಸಿದೆ. ಈ ಎಲ್ಲ ಕಾರಣಗಳಿಂದಲೇ ರಾಜನಿವಾಸ ಕುತೂಹಲ ಮೂಡಿಸಿದೆ. ಟ್ರೇಲರ್ ಮತ್ತು ಮೂರು ಹಾಡುಗಳು ಈಗಾಗಲೇ ಸಿನಿಮಾ ಪ್ರಿಯರ ಮನಗೆದ್ದಿದೆ. ಟ್ರೇಲರ್ ನಾಲ್ಕು ಭಾಷೆಗಳಲ್ಲಿ…
ಬೆಂಗಳೂರು, ಫೆ.19: ರಾಜ್ಯದಲ್ಲಿ ಜನರಿಗೆ ಮುಖ್ಯವಾಗಿ ಬೇಕಾದ ಮೂಲಸೌಕರ್ಯ ಅಂದ್ರೆ ಅದು ಆಹಾರ. ಅದೆಷ್ಟೋ ಜನರು ಬಡತನ ಮತ್ತು ಅಪೌಷ್ಟಿಕತೆಯಿಂದ ನರಳಾಡಿದ್ದು ಉಂಟು. ಆದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಈ ತೊಂದರೆ ಕಣ್ಮರೆಯಾಗಿದೆ. ಯಾಕಂದ್ರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಅದೆಷ್ಟೋ ಯೋಜನೆಗಳಲ್ಲಿ ಅತ್ಯಂತ ಪ್ರಭಾವ ಬೀರಿದ ಯೋಜನೆ ಅಂದ್ರೆ ಅದು ಅನ್ನಭಾಗ್ಯ ಯೋಜನೆ. ಮೂಲತಃ 2013 ರಲ್ಲೇ ಈ ಯೋಜನೆ ಪ್ರಾರಂಭವಾಗಿತ್ತು. ಆದ್ರೆ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮತ್ತೊಮ್ಮೆ ಅನ್ನಭಾಗ್ಯ ಯೋಜನೆಯನ್ನು ವಿಶೇಷವಾಗಿ ಜಾರಿಗೊಳಿಸಿದೆ. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದಾಗಿದ್ದು ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಜೊತೆಗೆ ದೇಶದಲ್ಲೇ ಜಾರಿಗೊಂಡ ಹಲವು ಯೋಜನೆಗಳಲ್ಲಿ ಈ ಯೋಜನೆ ಅತ್ಯಂತ ಜನಪ್ರಿಯವಾಗಿದೆ. ವಾರ್ಷಿಕ 25 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ ಪೂರೈಕೆ:ಹಸಿವು ಮುಕ್ತ ಕರ್ನಾಟಕವನ್ನಾಗಿಸಲು ಕಾಂಗ್ರೆಸ್ ಸರ್ಕಾರ ಜುಲೈ 9, 2023 ರಂದು ಅನ್ನಭಾಗ್ಯ ಯೋಜನೆಯನ್ನ ಜಾರಿಗೊಳಿಸಿದೆ. ಅಂದಿನಿಂದ ಇಲ್ಲಿವರೆಗೆ ಅದೆಷ್ಟೇ ಬಡವರ ಜೀವನಾಡಿಯಾಗಿ ಈ…
ಬೆಂಗಳೂರು, ಫೆ.18: ಮನರಂಜನೆಗೆ ಮತ್ತೊಂದು ಹೆಸರೇ ಜೀ಼ ಕನ್ನಡ. ಜನಪ್ರಿಯ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಗಳಿಂದ ಹೊಸತನದ ಮೆರುಗನ್ನು ನೀಡಿ ಎಲ್ಲಾ ವಯೋಮಿತಿಯ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದೆ. ಈಗ ಸಿನಿಪ್ರಿಯರಿಗೆ ಇಲ್ಲಿದೆ ನೋಡಿ ಮತ್ತೊಂದು ಗುಡ್ ನ್ಯೂಸ್. ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ.ಶೆಟ್ಟಿ ನಟನೆಯ, ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ‘45‘ ಚಿತ್ರವು ಇದೇ ಫೆಬ್ರವರಿ 22 ರಂದು ಸಂಜೆ 4:30 ಕ್ಕೆ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. 45 ಸಿನೆಮಾ ಫ್ಯಾಂಟಸಿ ಆಕ್ಷನ್ ಡ್ರಾಮಾ ಆಗಿದ್ದು ಇಲ್ಲಿ ಫಿಲಾಸಫಿ ಜೊತೆಗೆ ಆಕ್ಷನ್ ಹಾಗೂ ಭಾವನಾತ್ಮಕ ಅಂಶಗಳು ಮನಮುಟ್ಟುವಂತಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ನಿರ್ದೇಶಕರಾಗಿ ಪದಾರ್ಪಣೆ ಮಾಡಿರುವ ಈ ಚಿತ್ರವನ್ನು ಎಂ. ರಮೇಶ್ ರೆಡ್ಡಿ ಅವರು ಸುರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಉತ್ತಮ ತಾರಾಬಳಗ,…