Author: Mahanthesha

ಬೆಂಗಳೂರು, ಮಾ.17: ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದ ಅಧಿಪತ್ರ ಚಿತ್ರದ ಮೂಲಕ ನಿರ್ದೇಶನಾಗಿ ಗಮನ ಸೆಳೆದಿದ್ದವರು ಚಯನ್ ಶೆಟ್ಟಿ. ಚೊಚ್ಚಲ ಚಿತ್ರಕ್ಕೆ ಸಿಕ್ಕ ಸಕಾರಾತ್ಮಕ ಪ್ರತಿಕ್ರಿಯೆಗಳ ನಂತರ ಚಯನ್ ಸಂಪೂರ್ಣ ಮನೋರಂಜನಾತ್ಮಕ ಕಥೆಯೊಂದಿಗೆ `ಮ್ಯಾರೇಜ್ ಪಾರ್ಟಿ’ ಎಂಬ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಇದೀಗ ಸದ್ದುಗದ್ದಲವಿಲ್ಲದೆ ಮ್ಯಾರೇಜ್ ಪಾರ್ಟಿಯ ಮೊದಲ ಹಂತದ ಚಿತ್ರೀಕರಣ ಮುಗಿದಿದೆ.ಮ್ಯಾರೇಜ್ ಪಾರ್ಟಿ ಹಾಸ್ಯ ಪ್ರಧಾನ ಸಿನಿಮಾ. ಗಟ್ಟಿ ಕಥೆಯೊಂದಿಗೆ ಪ್ರತೀ ಹಂತದಲ್ಲಿಯೂ ಕಚಗುಳಿಯಿಡುವ ಕಾಮಿಡಿಯ ಮೂಲಕ ಈ ಚಿತ್ರವನ್ನು ಕಟ್ಟಿ ಕೊಡಲು ಚಯನ್ ಮುಂದಾಗಿದ್ದಾರೆ. ಒಂದೂರಿನಲ್ಲಿ ಘಟಿಸುವ ಕಥೆ ಹೊಂದಿರುವ ಮ್ಯಾರೇಜ್ ಪಾರ್ಟಿಯ ಚಿತ್ರೀಕರಣ ಕುಂದಾಪುರದ ಲೊಕೇಷನ್‌ಗಳಲ್ಲಿ ನಡೆದಿದೆ. ಈಗಾಗಲೇ ಮೊದಲ ಹಂತದಲ್ಲಿ ಇಪ್ಪತ್ತು ದಿನಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಎರಡನೇ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ಈ ಚಿತ್ರದಲ್ಲಿ ವಿನೀತ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಹಲವಾರು ತುಳು ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ಸೆಳೆದಿರುವ ವಿನೀತ್ ಮ್ಯಾರೇಜ್ ಪಾರ್ಟಿ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ…

Read More

ಬೆಂಗಳೂರು, ಮಾ.13 : ರಾಜ್ಯದಲ್ಲಿ ಉಂಟಾಗಿರುವ ಅಡುಗೆ ಅನಿಲ ಸಮಸ್ಯೆ ಮುಂದಿನ ವಾರದೊಳಗೆ ಇತ್ಯರ್ಥವಾಗಲಿದೆ. ವಾಣಿಜ್ಯ ಸಿಲಿಂಡರ್ ‍ಸ್ಟಾಕ್ ಇಲ್ಲ, ಹೋಟೆಲ್ ಉದ್ಯಮದವರು ತಾಳ್ಮೆ ಕಾಯ್ದುಕೊಳ್ಳಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ್ ಮತ್ತು ಎಂ.ನಾಗರಾಜು ಅವರು ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿಲಿಂಡರ್‌ ಪೂರೈಕೆ ಕುರಿತು ಈಗ ಉದ್ಬವವಾಗಿರುವ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂದು (ಶುಕ್ರವಾರ) ಬೆಳಗ್ಗೆ ಇಲಾಖೆ ಕಾರ್ಯದರ್ಶಿ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಆಯಿಲ್ ಕಂಪನಿಗಳ ಜೊತೆಗೆ ಸಭೆ ಮಾಡಿದ್ದೇನೆ, ಅವರು ವಾಣಿಜ್ಯ ಸಿಲಿಂಡರ್ ಪೂರೈಕೆಗೆ ಒಪ್ಪಿದ್ದಾರೆ. ಸಮಸ್ಯೆಗೆ ಶೀಘ್ರವೇ ಮುಕ್ತಿ ದೊರೆಯಲಿದೆ ಎಂದು ಮುನಿಯಪ್ಪ ಭರವಸೆ ಕೊಟ್ಟರು. ರಾಜ್ಯದ ಆಸ್ಪತ್ರೆಗಳಲ್ಲಿ ಊಟ ತಯಾರಿಕೆ ಮೇಲೂ ಸಮಸ್ಯೆ ಆಗಿದೆ. ಆಸ್ಪತ್ರೆಗಳಲ್ಲಿ ಅತ್ಯಗತ್ಯ ಪದಾರ್ಥ ತಯಾರಿಕೆಗೆ ಆಗುವಷ್ಟು ಅನಿಲ ಪೂರೈಕೆ ಮಾಡಲು ಸರ್ಕಾರ ಆದ್ಯತೆ ನೀಡಲಿದೆ.…

Read More

ಬೆಂಗಳೂರು, ಮಾ.11: ಕಳೆದ ಒಂದು ವರ್ಷದಿಂದ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಒಗ್ಗಟ್ಟಿನಿಂದ ಚಿಯರ್ ಮಾಡುತ್ತಿದ್ದ ಅಭಿಮಾನಿಗಳು ಈಗ ಮತ್ತೆ ತಮ್ಮ ನೆಚ್ಚಿನ ಐಪಿಎಲ್ ಫ್ರಾಂಚೈಸಿ ತಂಡಗಳಿಗೆ ಬೆಂಬಲಿಸುವ ಮೂಲಕ ವಿವಿಧ ಗುಂಪುಗಳಾಗಿ ವಿಭಜನೆಯಾಗುವ ಸಮಯ ಹತ್ತಿರ ಬಂದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ತನ್ನ ಟಿ-20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭರ್ಜರಿ ಯಶಸ್ಸು ಕಂಡಿತು. ಸ್ವದೇಶದಲ್ಲಿ ವಿಶ್ವಕಪ್ ಗೆದ್ದ ಬೆನ್ನಲ್ಲೇ ಐಪಿಎಲ್ 19ನೇ ಆವೃತ್ತಿ ಆರಂಭವಾಗುತ್ತಿರುವುದರಿಂದ ಈ ಬಾರಿ ವೀಕ್ಷಕರು ಮತ್ತು ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗಿ ಮೇ ತಿಂಗಳ ಅಂತ್ಯದವರೆಗೆ ನಡೆಯುವ ಈ ಐಪಿಎಲ್ ಕ್ರಿಕೆಟ್ ಲೀಗ್‌ಗೆ ಈ ಬಾರಿ ಕೆಲವು ಅನಿವಾರ್ಯ ಕಾರಣಗಳಿಂದ ಕಾರ್ಮೋಡ ಎದುರಾಗುವ ಸಂಭವವಿದೆ. ಐಪಿಎಲ್ 2026 ವಿಳಂಬಕ್ಕೆ ಕಾರಣಗಳೇನು?ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಸಂಘರ್ಷದಿಂದ ಇಂಧನ ಬಿಕ್ಕಟ್ಟು :ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ…

Read More

ಬೆಂಗಳೂರು, ಮಾ.11: ಇಸ್ರೇಲ್‌ ಮತ್ತು ಇರಾನ್‌ ಯುದ್ಧ ಇದೀಗ ಜಾಗತಿಕ ತಲ್ಲಣ, ತಳಮಳಕ್ಕೆ ಕಾರಣವಾಗುತ್ತಿದೆ. ಮಧ್ಯಪ್ರಾಚ್ಯದ ದೇಶಗಳ ಯುದ್ಧದಾಹಕ್ಕೆ ಏಷ್ಯಾದ ಜನರ ಊಟೋಪಚಾರಕ್ಕೆ ಅಡ್ಡಿ, ಆತಂಕಗಳು ಸೃಷ್ಟಿಯಾಗುತ್ತಿದೆ. ಅದ್ರಲ್ಲೂ ಹೋಟೆಲ್‌ನ್ನೇ ಅವಲಂಬಿಸಿದ್ದ ಬಹುತೇಕ ಬ್ಯಾಚುಲರ್‌ಗಳಿಗೆ ಆಘಾತ ಉಂಟಾಗಿದ್ದು, ಹೋಟೆಲ್‌ಗಳಲ್ಲಿ ಊಟ ಸಿಗದೇ ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು.. ಇರಾನ್‌ ಹಾಗೂ ಇಸ್ರೇಲ್‌ ಮಧ್ಯೆ ಯುದ್ಧ ತಾರಕಕ್ಕೇರಿದ ಬೆನ್ನಲ್ಲೇ ಏಷ್ಯಾದ ದೇಶಗಳಿಗೆ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುತ್ತಿದೆ. ಎಲ್‌ಪಿಜಿ, ಸಿಎನ್‌ಜಿ ಗ್ಯಾಸ್‌ ಪೂರೈಕೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಅದರಲ್ಲೂ ಹೋಟೆಲ್‌ಗಳಿಗೆ ವಾಣಿಜ್ಯ ಸಿಲಿಂಡರ್‌ ಪೂರೈಕೆ ಮೊದಲಿನ ಸ್ಥಿತಿಯಲ್ಲಿ ಸಪ್ಲೈ ಆಗುತ್ತಿಲ್ಲ. ಇದು ಬೆಂಗಳೂರಿನ ಹೋಟೆಲ್‌ ಉದ್ಯಮಕ್ಕೆ ಭಾರಿ ಹೊಡೆತ ನೀಡಿದೆ. ಬೀದಿ ಬದಿ ಹೋಟೆಲ್‌ಗಳು, ಫುಡ್‌ ಸ್ಟ್ರೀಟ್‌ಗಳಲ್ಲಿನ ಅಂಗಡಿಗಳು, ಹೋಟೆಲ್‌ಗಳು ಓಪನ್‌ ಆಗದೇ ಬಿಕೋ ಅಂತಿವೆ. ಇದೇ ಪರಿಸ್ಥಿತಿ ಮುಂದುವರಿದಿದ್ದೇ ಆದಲ್ಲಿ ತಿಂಡಿ ಪ್ರಿಯರಿಗೆ ಬರಸಿಡಿಲೇ ಬಡಿದಂತಾಗಲಿದೆ. ಮಿಡಲ್‌ ಈಸ್ಟ್‌ ದೇಶಗಳ ಯುದ್ಧ ದಾಹದಿಂದಾಗಿ ಹಾರ್ಮುಜ್‌ ಜಲಸಂಧಿಯನ್ನು ಕ್ಲೋಸ್‌ ಮಾಡಲಾಗಿದೆ. ಈ…

Read More

ಬೆಂಗಳೂರು, ಮಾ.11: ನಗರದ ಶ್ರೀಚಂದ್ರ ಹ್ಯಾಪಿ ವುಮೆನ್ಸ್ ಕ್ಲಬ್ ವತಿಯಿಂದ ಅನ್ಷುಲಾ ಮತ್ತು ಸುದಯ ಫೌಂಡೇಶನ್ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ “ವುಮೆನ್ ಫಿಯೆಸ್ಟಾ” (Women Fiesta) ಕಾರ್ಯಕ್ರಮದಲ್ಲಿ ಮಹಿಳೆಯರು ತಮ್ಮ ಬಾಲ್ಯದ ಸವಿನೆನಪುಗಳನ್ನು ಮೆಲುಕು ಹಾಕುವ ಮೂಲಕ ವಿಶೇಷವಾಗಿ ಮಹಿಳಾ ದಿನಾಚರಣೆಯನ್ನು ಸಂಭ್ರಮಿಸಿದರು. ಅನ್ಷುಲಾ ಮತ್ತು ಶ್ರೀಚಂದ್ರ ಹ್ಯಾಪಿ ವುಮೆನ್ಸ್ ಕ್ಲಬ್‌ನ ಅಧ್ಯಕ್ಷರಾದ ಶ್ರೀಮತಿ ಅಂಶು ಹೆಗಡೆ ಅವರು ಕಾರ್ಯಕ್ರಮದ ಕುರಿತು ಮಾತನಾಡಿ, “ಮಹಿಳೆಯರಲ್ಲಿ ಅಡಗಿರುವ ಕೌಶಲ್ಯವನ್ನು ಹೊರತರಲು ಮತ್ತು ಅವರ ಬಾಲ್ಯದ ಸುಂದರ ಕ್ಷಣಗಳನ್ನು ಮತ್ತೆ ಮೆಲುಕು ಹಾಕಲು ಈ ವೇದಿಕೆ ಕಲ್ಪಿಸಲಾಗಿದೆ. ಸಂಭ್ರಮದ ಜೊತೆಗೆ ಭಾರತದಾದ್ಯಂತ ಇರುವ ಧ್ಯಾನ ಕೇಂದ್ರಗಳಿಗೆ ದೇಣಿಗೆ ನೀಡುವ ಮೂಲಕ ಸಾಮಾಜಿಕ ಕಾರ್ಯಕ್ಕೂ ನಾವು ಕೈಜೋಡಿಸುತ್ತಿದ್ದೇವೆ,” ಎಂದು ತಿಳಿಸಿದರು. ಕ್ಲಬ್ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿ ಸಿ.ಪಿ. ಮಾತನಾಡಿ, ಮಹಿಳೆಯರು ಒತ್ತಡದಿಂದ ಮುಕ್ತರಾಗಿ ಜನರೊಂದಿಗೆ ಬೆರೆಯಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಕಾರ್ಯಕ್ರಮದ ಜೊತೆಗೆ ಅಡುಗೆ ಸ್ಪರ್ಧೆ ಮತ್ತು ಬಿಂದಾಸ್ ವಾಕ್‌ನಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಕೂಡ ವಿತರಿಸಲಾಯಿತು…

Read More

ಬೆಂಗಳೂರು, ಮಾ.11: ಕಿರಿಕ್‌ ಪಾರ್ಟಿ ಕನ್ನಡದಲ್ಲಿ ಸಖತ್‌ ಕ್ರೇಜ್‌ ಹುಟ್ಟು ಹಾಕಿದ್ದ ಸಿನಿಮಾ. ರಕ್ಷಿತ್‌ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರ ಲೈಫ್‌ನಲ್ಲೂ ಈ ಸಿನಿಮಾ ದೊಡ್ಡ ಟರ್ನಿಂಗ್‌ ಪಾಯಿಂಟ್‌. ತೆರೆ ಮೇಲೆ ಪ್ರೇಕ್ಷಕರ ಫೇವರಿಟ್‌ ಆಗಿದ್ದ ಈ ಜೋಡಿ ನಿಜ ಜೀವನದಲ್ಲಿ ಮದುವೆ ಆಗಲು ರೆಡಿ ಆಗಿದ್ರು. ಸಿನಿಮಾದಲ್ಲಿ ಒಂದಾಗದ ಕರ್ಣ-ಸಾನ್ವಿ ರಿಯಲ್‌ ಆಗಿ ಒಂದಾಗ್ತಿದ್ದಾರೆ ಅಂತ ಕನ್ನಡಿಗರು ಸಖತ್‌ ಖುಷಿಯಲ್ಲಿದ್ರು. ಆದರೆ, ಎಂಗೇಜ್‌ ಆದ ಒಂದೇ ವರ್ಷಕ್ಕೆ ಇಬ್ಬರು ದೂರ ಆಗಿದ್ರು. ಈ ಘಟನೆಯಿಂದ ರಶ್ಮಿಕಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ರು. ಸಾಕಷ್ಟು ಟ್ರೋಲ್‌ಗಳನ್ನ ಎದುರಿಸಿದ್ರು, ಅವರ ವ್ಯಕ್ತಿತ್ವಕ್ಕೆ ಅಗ್ನಿ ಪರೀಕ್ಷೆ ಎದುರಾಗಿತ್ತು. ಇದೀಗ ಅವರು ವಿಜಯ್‌ ದೇವರಕೊಂಡ ಜೊತೆ ಮದುವೆ ಆಗಿ ಖುಷಿಯಲ್ಲಿರೋವಾಗ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಬರೋಬ್ಬರಿ 8 ವರ್ಷಗಳ ಬಳಿಕ ರಕ್ಷಿತ್‌-ರಶ್ಮಿಕಾ ಬ್ರೇಕಪ್ ಆಗಲು ಅಸಲಿ ಕಾರಣ ಏನು ಅನ್ನೋದು ತುಂಬಾ ವೈರಲ್‌ ಆಗ್ತಿದೆ. ಈ ಆಡಿಯೋ ಮತ್ತಷ್ಟು ಅವಾಂತರಗಳನ್ನೂ ಸೃಷ್ಟಿ ಮಾಡಬಹುದು. ಹೌದು, ರಕ್ಷಿತ್‌…

Read More

ಬೆಂಗಳೂರು, ಮಾ.10: ವಿಶ್ವದಲ್ಲಿ ಮೂರನೇ ಮಹಾಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಇರಾನ್‌ ದೇಶದ ಮೇಲೆ ಇಸ್ರೇಲ್ ಮತ್ತು US ಜಂಟಿ ದಾಳಿಯಿಂದಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿ ತಿಕ್ಕಾಟ ಶುರುವಾಗಿದೆ. ಇರಾನ್-ಇಸ್ರೇಲ್ ಸಂಘರ್ಷ ಈಗ ವಿಶ್ವಕ್ಕೆ ದೊಡ್ಡ ಸಮಸ್ಯೆಯಾಗಿ ಹೆಗಲೇರಿದ್ದು, ಎಲ್ಲೆಡೆ ಭಾರೀ ದರ ಏರಿಕೆಯಿಂದಾಗಿ ಜನರು ತತ್ತರಿಸುತ್ತಿದ್ದಾರೆ. ಇದರ ಮಧ್ಯೆ UAE ರಾಯಭಾರಿ ಹುಸೇನ್ ಹಸನ್ ಮಿರ್ಜಾ ಹೇಳಿರುವ ಮಾತು ಭಾರಿ ಸದ್ದು ಮಾಡ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಮತ್ತು ಇರಾನ್‌ಗೆ ಒಂದೇ ಒಂದು ಫೋನ್ ಕರೆ ಮಾಡಿ ಸಂಘರ್ಷ ನಿಲ್ಲಿಸುವಂತೆ ಹೇಳಿದರೆ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಹಸನ್ ಮಿರ್ಜಾ ಹೇಳಿದ್ದಾರೆ. ಈ ಮಾತು ಮೋದಿ ಹಾಗೂ ಭಾರತದ ಶಕ್ತಿಯನ್ನ ಎತ್ತಿ ಹಿಡಿಯುತ್ತಿದೆ. ಇರಾನ್-ಇಸ್ರೇಲ್ ಮತ್ತು ಅಮೆರಿಕ ಯುದ್ಧ ಕುರಿತು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಭಾರತದ ಮೊದಲ UAE ರಾಯಭಾರಿ ಹುಸೇನ್ ಹಸನ್ ಮಿರ್ಜಾ, ಗಲ್ಫ್ ನಾಯಕರು ಪ್ರಧಾನಿ ಮೋದಿಯವರನ್ನ ತುಂಬಾ ಗೌರವದಿಂದ ಕಾಣುತ್ತಾರೆ ಹಾಗೂ ಅವರ ಮಾತನ್ನು…

Read More

ಬೆಂಗಳೂರು, ಮಾ.09: ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದ ಕುರಿತು ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಉದ್ವಿಗ್ನತೆಯನ್ನು ಶಮನಗೊಳಿಸಲು ʼಸಂವಾದ ಮತ್ತು ರಾಜತಾಂತ್ರಿಕತೆʼಯೊಂದೇ ಪರಿಹಾರ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಪ್ರತಿಪಾದಿಸಿದ್ದಾರೆ. ಸೋಮವಾರ ರಾಜ್ಯಸಭೆಯ ಸದನದಲ್ಲಿ ವಿರೋಧ ಪಕ್ಷದ ಸದಸ್ಯರ ಘೋಷಣೆಗಳ ನಡುವೆಯೇ ಜೈಶಂಕರ್ ಅವರು ದೇಶದ ವಿದೇಶಾಂಗ ನೀತಿ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ ಅಂತ ಸದನಕ್ಕೆ ತಿಳಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಮಾ.1 ರಂದು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್ ಭದ್ರತಾ ಸಮಿತಿ ಸಭೆ ನಡೆಸಲಾಗಿದೆ. ಇರಾನ್ ಮೇಲಿನ ವೈಮಾನಿಕ ದಾಳಿಗಳು ಮತ್ತು ಗಲ್ಫ್ ಪ್ರದೇಶದ ಇತರೆಡೆ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗಿದೆ. ಈ ಪ್ರದೇಶದಲ್ಲಿ ನೆಲೆಸಿರುವ ಸುಮಾರು ಒಂದು ಕೋಟಿ ಭಾರತೀಯರ…

Read More

ಮಾ.9: ರಾಜ್ಯ ರಾಜಧಾನಿ ಹಾಗೂ ಐಟಿ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಈಗ ನೆರೆರಾಜ್ಯದ ರಾಜಕೀಯ ಅಖಾಡದಲ್ಲೂ ಸದ್ದು ಮಾಡುತ್ತಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗ್ಗೆ ವ್ಯಂಗ್ಯವಾಡಿದ್ದು, ಹೈದರಾಬಾದ್ ಮಾಲಿನ್ಯ ಮುಕ್ತವಾಗಿ ಸಿಂಗಾಪುರ, ಟೋಕಿಯೊಗೆ ಸ್ಪರ್ಧೆ ನೀಡಲಿದೆ ಎಂದಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಬೆಂಗಳೂರಿನ ಟ್ರಾಫಿಕ್ ಮತ್ತು ಮುಂಬೈ-ಚೆನ್ನೈನ ಮೂಲಸೌಕರ್ಯಗಳ ಕುರಿತು ಟೀಕಿಸಿದ್ದಾರೆ. ಬೆಂಗಳೂರು ನಗರ ಇಂದು ಕೇವಲ ಟ್ರಾಫಿಕ್ ಜಾಮ್‌ಗೆ ಹೆಸರುವಾಸಿಯಾಗಿದೆ. ಐಟಿ ಸಿಟಿ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರಿನ ಇಂದಿನ ಸ್ಥಿತಿ ಏನಾಗಿದೆ ನೋಡಿ? ಅಲ್ಲಿನ ಜನ ಟ್ರಾಫಿಕ್‌ನಿಂದ ಹೈರಾಣಾಗಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದು, ಈ ಮೂಲಕ ಕನ್ನಡಿಗರನ್ನು ಸುಖಾ ಸುಮ್ಮನೆ ಕೆಣಕಿದ್ದಾರೆ. ಮಳೆ ಬಂದರೆ ಚೆನ್ನೈ ಮತ್ತು ಮುಂಬೈ ನಗರಗಳು ಹೇಗೆ ಸ್ಥಗಿತಗೊಳ್ಳುತ್ತವೆ ಎಂಬುದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಹೈದರಾಬಾದ್ ಅಂತಹ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದಿದ್ದಾರೆ. ಹೈದರಾಬಾದ್ ಅನ್ನು ಮಾಲಿನ್ಯ ಮುಕ್ತ…

Read More

ಬೆಂಗಳೂರು, ಮಾ.09: ಮನರಂಜನೆಯಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿ ಕನ್ನಡಿಗರ ಮನಗೆದ್ದು ಎರಡನೇ ಸ್ಥಾನಕ್ಕೆ ಜಿಗಿದಿರುವ ‘ಸ್ಟಾರ್ ಸುವರ್ಣ’ ವಾಹಿನಿಯು ಸದಾ ಮಹಿಳೆಯರ ಪರವಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಲೇ ಬರುತ್ತಿದೆ. ಇದೀಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ “ಸುವರ್ಣ ಸಖಿ” ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಿ ಸಮಾಜಕ್ಕೆ ಮಾದರಿಯಾಗಿದೆ. ಮಹಿಳೆ ಎಂದರೆ ಕೇವಲ ಒಂದು ಪದವಲ್ಲ, ಅದು ಶಕ್ತಿ, ಪ್ರೀತಿ, ತಾಳ್ಮೆ ಹಾಗೂ ತ್ಯಾಗದ ಪ್ರತೀಕ. ಆಧುನಿಕ ಸಮಾಜದಲ್ಲಿರೋ ಕಟ್ಟುಪಾಡುಗಳನ್ನೂ ಮೀರಿ ಪ್ರತಿ ಕ್ಷೇತ್ರದಲ್ಲೂ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ. ಮೊದಲೆಲ್ಲ ಪುರುಷರೇ ಆಟೋ ಡ್ರೈವರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಆದರೆ ಈಗ ತಾನು ಯಾವುದಕ್ಕೂ ಕಮ್ಮಿಯಿಲ್ಲ ಎಂಬ ದೃಢ ನಿರ್ಧಾರದೊಂದಿಗೆ ಮಹಿಳಾ ಆಟೋ ಮಣಿಯರು ರಸ್ತೆಗೆ ಲಗ್ಗೆಯಿಟ್ಟಿದ್ದಾರೆ. ಇದೆಲ್ಲದರ ಜೊತೆ ತಮ್ಮ ಕಷ್ಟ, ನೋವು, ಕುಟುಂಬ ಎಲ್ಲವನ್ನು ಬದಿಗಿಟ್ಟು, ಸಮಾಜದಲ್ಲಿ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುತ್ತಿರುವ ಬೆಂಗಳೂರಿನ ಒಂದಷ್ಟು ಮಹಿಳಾ ಆಟೋ ಚಾಲಕಿಯರಿಗೆ ಸ್ಟಾರ್ ಸುವರ್ಣ ವಾಹಿನಿಯು ಗೌರವಿಸಿ, ಕಿಟ್ ನೀಡುವುದರೊಂದಿಗೆ…

Read More