Author: Mahanthesha

ಬೆಂಗಳೂರು, ಮಾ.09: ನ್ಯೂಜಿಲೆಂಡ್ ‌ತಂಡವನ್ನು ಭಾರತ 96 ರನ್‌ಗಳಿಂದ ಸೋಲಿಸಿ ತನ್ನ ಮೂರನೇ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತು. ಇದರೊಂದಿಗೆ, ಭಾರತ ತಂಡವು ಅತಿ ಹೆಚ್ಚು ಟಿ20 ವಿಶ್ವಕಪ್ ಟ್ರೋಫಿಗಳನ್ನು ಗೆದ್ದ ದಾಖಲೆ ಸೃಷ್ಟಿಸಿತು. ಈ ಪಂದ್ಯದಲ್ಲಿ, ನ್ಯೂಜಿಲೆಂಡ್ ವಿರುದ್ಧ ಭಾರತ ಆರಂಭದಿಂದ ಕೊನೆಯ ಓವರ್‌ವರೆಗೆ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿತು. ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದ ಟೀಮ್ ಇಂಡಿಯಾ ಸೂಪರ್- 8 ಹಂತಕ್ಕೆ ಅರ್ಹತೆ ಪಡೆದಿತ್ತು. ಆದರೆ, ಸೂಪರ್-8ರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋಲನ್ನು ಅನುಭವಿಸಿತ್ತು. ಈ ಸೋಲು ಟೀಮ್ ಇಂಡಿಯಾಕ್ಕೆ ತವರಿನಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಹಾದಿಯನ್ನು ಕಠಿಣಗೊಳಿಸಿತ್ತು. ಸೂಪರ್ 8 ರಲ್ಲಿ ಎರಡು ಪಂದ್ಯಗಳನ್ನು ಭಾರಿ ರನ್ ರೇಟ್ ಅಂತರದಿಂದ ಗೆಲ್ಲಬೇಕಾದ ಸಂಕಷ್ಟದ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಇತ್ತು. ಇಲ್ಲಿಂದ ಈ ಒಬ್ಬ ಆಟಗಾರ ಟೀಮ್ ಇಂಡಿಯಾದಲ್ಲಿ ಗೆಲುವಿನ ಭರವಸೆಯನ್ನು ಹೆಚ್ಚಿಸಿದರು. ಅಂದು ಈ ಆಟಗಾರನನ್ನು ವೇಸ್ಟ್ ಎಂದು ಬೆಂಚ್​ ಕಾಯುವಂತೆ ಮಾಡಲಾಯಿತು. ನಂತರ,…

Read More

ಬೆಂಗಳೂರು, ಮಾ.09: 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ದಾಖಲೆಗಳ ಮಳೆಯನ್ನೇ ಸುರಿಸುತ್ತಿದೆ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ವಿಶ್ವ ದಾಖಲೆಯ ಬೆನ್ನಲ್ಲೇ, ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್ ಕೂಡ ಕ್ರಿಕೆಟ್ ಲೋಕದ ಅಪರೂಪದ ಸಾಧನೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಸಂಜು ಸ್ಯಾಮ್ಸನ್, ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಮೂರು ಇನ್ನಿಂಗ್ಸ್‌ಗಳಲ್ಲಿ 50 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ ವಿಶ್ವದ ಏಳನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಪಂದ್ಯಗಳಲ್ಲಿ 50+ ಸ್ಕೋರ್ ಮಾಡಿದ ಭಾರತದ ಕೇವಲ ಮೂರನೇ ಆಟಗಾರ ಎಂಬ ಕೀರ್ತಿ ಸಂಜು ಪಾಲಾಗಿದೆ. ಇದಕ್ಕೂ ಮೊದಲು ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಮಾತ್ರ ಈ ಸಾಧನೆ ಮಾಡಿದ್ದರು. ಈಗ ಸಂಜು ಸ್ಯಾಮ್ಸನ್ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ವಿರಾಟ್ ಕೊಹ್ಲಿ ಅವರು 2016 ಮತ್ತು 2021ರ…

Read More

ಬೆಂಗಳೂರು, ಮಾ.07: ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ದಿನೇ ದಿನೇ ನಡುವೆ ಭೀಕರ ಸ್ವರೂಪ ಪಡೆಯುತ್ತಿರುವ ಬೆನ್ನಲೆ ಇಂಧನ ಬೆಲೆಗಳು ದಿಢೀರ್ ಏರಿಕೆಯಾಗಿದ್ದು, ತೈಲ ಕಂಪನಿಗಳು ಈ ಹೊರೆಯನ್ನು ಗ್ರಾಹಕರ ಮೇಲೆ ಹೊರಿಸಿವೆ. ಇದರಿಂದ ಭಾರತದಲ್ಲಿ ಗೃಹಬಳಕೆಯ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಭಾರೀ ಏರಿಕೆಯಾಗಿವೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಿದ್ದು, ನೂತನ ದರಗಳ ಪ್ರಕಾರ ಗೃಹಬಳಕೆಯ ಸಿಲಿಂಡ‌ರ್ 60ರೂ. ಮತ್ತು ವಾಣಿಜ್ಯ ಸಿಲಿಂಡ‌ರ್ ಮೇಲೆ 115 ರೂ. ಏರಿಕೆ ಮಾಡಲಾಗಿದೆ. ಈ ಹೆಚ್ಚಳದ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ರೂ. 913 ಆಗಿದ್ದು, ಈ ಹಿಂದೆ ರೂ. 853 ಬೆಲೆ ಇತ್ತು. 11 ತಿಂಗಳಲ್ಲಿ ಎಲ್‌ಪಿಜಿ ಬೆಲೆಯಲ್ಲಿ ಎರಡನೇ ಬಾರಿ ಏರಿಕೆಯಾಗಿದೆ. ದೇಶದ ಪ್ರಮುಖ ಮೆಟ್ರೋ ನಗರಗಳಾದ ಮುಂಬೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ರೂ. 852.50 ರಿಂದ ರೂ. 912.50ಕ್ಕೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ರೂ. 879 ರಿಂದ ರೂ.…

Read More

ಬೆಂಗಳೂರು, ಮಾ.06: ಗ್ಯಾರಂಟಿ ಯೋಜನೆಗಳ ಬರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಅನೇಕ ಯೋಜನೆಗಳನ್ನು ಘೋಷಿಸಲಾಗಿದೆ. ಈ ನಡುವೆ ಮಕ್ಕಳ ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ಘೋಷಣೆಯೊಂದನ್ನು ಈ ವೇಳೆ ಹೊರಡಿಸಲಾಗಿದ್ದು, ಇದರ ಅನ್ವಯ ಇನ್ಮುಂದೆ 16 ವರ್ಷದ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಶಾಲಾ ಮಕ್ಕಳ ಭವಿಷ್ಯ ಹಾಗೂ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧ ಮಾಡಿರುವುದಾಗಿ ಘೋಷಣೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳ ಏಕಾಗ್ರತೆ ಕುಂಠಿತವಾಗುತ್ತಿದೆ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಅಪ್ರಾಪ್ತರು ಆನ್‌ಲೈನ್ ಕಿರುಕುಳ, ಅಶ್ಲೀಲ ವಿಷಯಗಳು ಮತ್ತು ಸೈಬರ್ ವಂಚನೆಗಳಿಗೆ ಬಲಿಯಾಗುವುದನ್ನು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ. ಹೆಚ್ಚುತ್ತಿರುವ ಮೊಬೈಲ್…

Read More

ಬೆಂಗಳೂರು, ಮಾ.05: ಕರುನಾಡಿನ ಮನೆಮನಗಳಲ್ಲಿ ಒಂದಾಗಿರುವ ಕಲರ್ಸ್‌ ಕನ್ನಡ ವಾಹಿನಿ, ಭರಪೂರ ಮನರಂಜನೆ ನೀಡುವುದರಲ್ಲಿ ಯಾವಾಗಲೂ ಮುಂಚೂಣಿ. ವೈವಿಧ್ಯಮಯ ಮೆಗಾ ಧಾರಾವಾಹಿಗಳು ಮತ್ತು ನಕ್ಕು ನಗಿಸುವ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರ ಪ್ರೀತಿ ಗಳಿಸಿರುವ ವಾಹಿನಿ, ಇದೀಗ ಕರುನಾಡ ವೀಕ್ಷಕರ ಮಡಿಲಿಗೆ ಮನಮಿಡಿಯುವ ಕತೆಯೊಂದನ್ನು ಹೊತ್ತು ತರುತ್ತಿದೆ. ಅಮ್ಮ-ಮಗಳ ನಿಷ್ಕಲ್ಮಶ ಪ್ರೀತಿಯ ಮಹಾಕಾವ್ಯ ‘ರಾಣಿ’! ಇದೇ ಮಾರ್ಚ್ 9 ರಿಂದ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದ್ದು, ವೀಕ್ಷಕರಿಗೆ ಹೊಸದೊಂದು ಭಾವಲೋಕವನ್ನು ಪರಿಚಯಿಸಲಿದೆ. ʻರಾಣಿʼ ಕೇವಲ ಅಪರಾಧ ಅಥವಾ ಜೈಲಿನ ಕಥೆಯಲ್ಲ; ಬದಲಾಗಿ ವಿಧಿಯಾಟದಿಂದಾಗಿ ಸೆರೆಮನೆಯ ಕಂಬಿಗಳ ನಡುವೆಯೇ ಹುಟ್ಟಿ, ಹೊರಗಿನ ಜಗತ್ತನ್ನೇ ಕಾಣದ ಮುಗ್ಧ ಮಗು ರಾಣಿ ಮತ್ತು ಮಗಳಿಗಾಗಿ ಹಂಬಲಿಸುವ ತಾಯಿಯ ಎದೆತುಂಬಿ ಬರುವ ಕತೆ. ಜೈಲಿನ ಕಲ್ಲು ಗೋಡೆಗಳೇ ತನ್ನ ಪ್ರಪಂಚ ಎಂದು ನಂಬಿರುವ ಪುಟ್ಟ ರಾಣಿಗೆ, ಅಲ್ಲಿನ ಕತ್ತಲಲ್ಲೂ ಸೂರ್ಯನ ಕಿರಣವಾಗಿ ಅಮ್ಮನ ಪ್ರೀತಿ ಸಿಗುತ್ತದೆ. ಆದರೆ, ಕಾನೂನು ಮತ್ತು ವಿಧಿ…

Read More

ಬೆಂಗಳೂರು, ಮಾ.06: ಸದಾ ಹೊಸತನದೊಂದಿಗೆ ವೀಕ್ಷಕರನ್ನು ಮನರಂಜಿಸಿ ನಂ.1 ಸ್ಥಾನ ಪಡೆದಿರುವ ಜೀ಼ ಕನ್ನಡ 2026 ಶುರುವಿಗೆ ಮತ್ತೊಂದು ಸರ್ಪ್ರೈಸ್ ನೀಡಲು ಸಜ್ಜಾಗಿದೆ. ಪ್ರೀತಿ, ಪ್ರತೀಕಾರ ಮತ್ತು ವಿಧಿಯಾಟದ ಸುತ್ತ ನಡೆಯುವ ಹೊಚ್ಚಹೊಸ ಧಾರಾವಾಹಿ ‘ಕೃಷ್ಣ ರುಕ್ಕು’ ಇದೇ ಮಾ.09 ರಿಂದ 6:30 ಕ್ಕೆ ಜೀ಼ ಕನ್ನಡದಲ್ಲಿ ಪ್ರಸಾರವಾಗಲಿದೆ. ಕುಟುಂಬದ ಒಗ್ಗಟ್ಟು, ಜವಾಬ್ದಾರಿ, ಪ್ರೀತಿ ಜೊತೆಗೆ ಅನಿರೀಕ್ಷಿತ ತಿರುವುಗಳು ಕೂಡ ಕೃಷ್ಣ-ರುಕ್ಕು ಧಾರಾವಾಹಿಯಲ್ಲಿ ಕಾಣಸಿಗಲಿದೆ. ಅಣ್ಣನ ಅಕಾಲಿಕ ನಿಧನದ ನಂತರ ತನ್ನ ಇಡೀ ಕುಟುಂಬದ ಜವಾಬ್ದಾರಿಯನ್ನು ತನ್ನ ಹೆಗಲಮೇಲೆ ಹಾಕಿಕೊಂಡ ರುಕ್ಕು ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾಳೆ ಎಂಬುದನ್ನು ಇಲ್ಲಿ ಸುಂದರವಾಗಿ ತೋರಿಸಲಾಗಿದೆ. ಪ್ರೀತಿ, ದ್ವೇಷ ಮತ್ತು ವಿಧಿಯಾಟದ ನಡುವೆ ಕೃಷ್ಣ-ರುಕ್ಕುವಿನ ಜೀವನ ಹೇಗೆ ಸಾಗಲಿದೆ ಎನ್ನುವುದು ಈ ಧಾರಾವಾಹಿಯ ಮತ್ತೊಂದು ಕುತೂಹಲಕಾರಿ ಅಂಶ. ಮೌನ ಗುಡ್ಡೇಮನೆ ರುಕ್ಕು ಆಗಿ ನಟಿಸಿದರೆ, ಅಕ್ಷಯ್ ನಾಯಕ್ ಕೃಷ್ಣನ ಪಾತ್ರ ನಿರ್ವಹಿಸಲಿದ್ದಾರೆ. ಅಷ್ಟೇ ಅಲ್ಲದೇ ಹಿರಿತೆರೆ ಕಿರುತೆರೆಯ ನಿರ್ದೇಶಕ, ನಿರ್ಮಾಪಕ, ಬರಹಗಾರ, ನಟ, ಕಲಾ ಸಾಮ್ರಾಟ್…

Read More

ಬೆಂಗಳೂರು, ಮಾ.05: ಬಿಹಾರ ರಾಜ್ಯ ರಾಜಕೀಯ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಆಗಿರುವ ನಿತೀಶ್‌ಕುಮಾರ್‌ ದಿಢೀರ್‌ ರಾಜೀನಾಮೆ ನೀಡುವ ಸಾಧ್ಯತೆ ಇದೆ ಅನ್ನೋ ಸುದ್ದಿ ಬಲವಾಗಿ ಹರಿದಾಡುತ್ತಿದೆ. ಜೆಡಿಯು ನಾಯಕರಾಗಿರುವ ನಿತೀಶ್ ಕುಮಾರ್ 10ನೇ ಬಾರಿಗೆ ಸಿಎಂ ಆಗಿ 6 ತಿಂಗಳು ಕಳೆಯುವ ಮುನ್ನವೇ ಪದತ್ಯಾಗ ಮಾಡುವ ಸಾಧ್ಯತೆ ಇದೆ. ಅದರ ಹಿಂದೆ ಎನ್‌ಡಿಎ ಮೈತ್ರಿಕೂಟದ ಅತಿದೊಡ್ಡ ಸ್ಟ್ರಾಟಜಿ ಇದೆ ಅಂತಾ ಹೇಳಲಾಗ್ತಿದೆ. ಹಾಗಾದ್ರೆ, ಏನದು ಸ್ಟ್ರಾಟಜಿ? ನಿತೀಶ್‌ ರಾಜೀನಾಮೆಗೆ ಒಪ್ಪುತ್ತಿರೋದೇಕೆ ಅನ್ನೋದನ್ನ ನೋಡೋಣ ಬನ್ನಿ. ಅಷ್ಟಕ್ಕೂ ನಿತೀಶ್‌ಕುಮಾರ್‌ ರಾಜೀನಾಮೆ ಹಿಂದೆ ಒಂದು ಮಾಸ್ಟರ್‌ ಪ್ಲ್ಯಾನ್‌ ಇದೆ. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ರಾಜ್ಯಸಭೆಗೆ ಕಳಿಸಲು ಬಿಜೆಪಿ ತಂತ್ರ ರೂಪಿಸಿದೆ. ಇದರ ನಂತರ, ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಳ್ಳಲಿದೆ. ನಿತೀಶ್‌ಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡುವ ಜೊತೆಗೆ, ಅವರ ಪುತ್ರ ನಿಶಾಂತ್‌ ಕುಮಾರ್‌ರನ್ನು ಉಪಮುಖ್ಯಮಂತ್ರಿ ಮಾಡುವ ಪ್ರಸ್ತಾವನೆಯನ್ನು ಮಿತ್ರಪಕ್ಷ ಬಿಜೆಪಿ ಮಂಡಿಸಿದೆ ಎನ್ನಲಾಗಿದೆ. ಈ ಒಪ್ಪಂದ ಚುನಾವಣೆ ಹೊತ್ತಿನಲ್ಲೇ…

Read More

ಬೆಂಗಳೂರು, ಫೆ.28: ತಮಿಳು ಚಿತ್ರರಂಗದಲ್ಲಿ ದಳಪತಿಯಾಗಿ ಮಿಂಚಿದ್ದ ವಿಜಯ್‌ ಈಗ ದ್ರಾವಿಡ ನಾಡಿನ ದೊರೆಯಾಗೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿ ಅಬ್ಬರಿಸೋಕೆ ಮಿಂಚಿನಂತೆ ಅಬ್ಬರಿಸುತ್ತಿದ್ದಾರೆ. ಆದ್ರೆ, ಸಿಎಂ ಆಗುವ ಕನಸಿನಲ್ಲಿ ತೇಲಾಡುತ್ತಿರುವ ದಳಪತಿ ವಿಜಯ್‌ಗೆ ಪತ್ನಿಯೇ ಆಘಾತ ನೀಡಿದ್ದಾರೆ. ಹೌದು.. ತಮಿಳುನಾಡು ಚುನಾವಣೆ ಹೊಸ್ತಿಲಲ್ಲೇ ದಳಪತಿ ವಿಜಯ್‌ ಪತ್ನಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದು, ಭಾರಿ ಚರ್ಚೆ ಹುಟ್ಟು ಹಾಕಿದೆ. ಹೌದು.. ದಳಪತಿ ವಿಜಯ್‌ ಹಾಗೂ ಅವರ ಪತ್ನಿ ಸಂಗೀತಾ ಡಿವೋರ್ಸ್‌ ಪಡೆದುಕೊಳ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ವೈರಲ್‌ ಆಗ್ತಿದೆ. ಆದ್ರೆ ಈ ದಂಪತಿಗೆ ಡಿವೋರ್ಸ್‌ ಸಿಗೋದು ಅಷ್ಟು ಸುಲಭವಲ್ಲ. ಸಂಸಾರದಲ್ಲಿ ಬಿರುಕು ಮೂಡಿರೋದು ಮಾತ್ರವಲ್ಲದೇ ಡಿವೋರ್ಸ್‌ ವೇಳೆಯೂ ಸಮಸ್ಯೆ ಕಾಣಿಸಿಕೊಳ್ತಿದೆ. ಬರೋಬ್ಬರಿ 27 ವರ್ಷಗಳ ಕಾಲ ಸುಖಸಂಸಾರ ನಡೆಸಿದ್ದ ಈ ಜೋಡಿ ಇದೀಗ ಡಿವೋರ್ಸ್‌ಗೆ ಅಪ್ಲೈ ಮಾಡಿರೋದಿಕ್ಕೆ ಕಾರಣ ಏನು? ಡಿವೋರ್ಸ್‌ ಪಡೆಯಲು ಯಾಕೆ ಪ್ರಾಬ್ಲಂ ಆಗ್ತಿದೆ ಗೊತ್ತಾ? ದಳಪತಿ ವಿಜಯ್​ ಪತ್ನಿ ಸಂಗೀತಾ ಮೂಲತಃ ಶ್ರೀಲಂಕಾದ ತಮಿಳು…

Read More

ಬೆಂಗಳೂರು, ಫೆ.28: ಅಮೃತಧಾರೆ ಧಾರಾವಾಹಿಯ ಜೋಡಿ ನಿಜ ಜೀವನದಲ್ಲೂ ಒಂದಾಗೋಕೆ ನಿರ್ಧರಿಸಿದೆ. ಪಕ್ಕಾ ಡಿಬಾಸ್‌ ಫ್ಯಾನ್‌ ಆಗಿರುವ ರಾಧಾ ಭಗವತಿ, ಈಗ ದಾಂಪತ್ಯ ಜೀವನಕ್ಕೆ ಜೀವನಕ್ಕೆ ಕಾಲಿಡೋಕೆ ಸಜ್ಜಾಗಿದ್ದಾರೆ. ಜೀ ಕನ್ನಡದ ಅಮೃತಧಾರೆ ಖ್ಯಾತಿಯ ರಾಣವ್ ಗೌಡ ಮತ್ತು ಕಲರ್ಸ್ ಕನ್ನಡದ ಭಾರ್ಗವಿ LLB ನಟಿ ರಾಧಾ ಭಗವತಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಇದೀಗ ಎಂಗೇಜ್ಮೆಂಟ್‌ ಫೋಟೋಗಳನ್ನು ನೋಡಿ ಸೀರಿಯಲ್‌ ಫ್ಯಾನ್ಸ್‌ ಫುಲ್‌ ಥ್ರಿಲ್‌ ಆಗಿದ್ದಾರೆ. ಇನ್ನು, ರಾಣವ್‌ ಹಾಗೂ ರಾಧಾ ಮಧ್ಯೆ ಪ್ರೀತಿ ಹುಟ್ಟಿಕೊಂಡಿದ್ದೇ ರೋಚಕ. ಜೀ ಕನ್ನಡದಲ್ಲಿ ಪ್ರಸಾರವಾಗಿ ಜನ ಮನಗೆದ್ದಿದ್ದ ಅಮೃತಧಾರೆ ಸೀರಿಯಲ್‌ನಲ್ಲಿ ಈ ಇಬ್ಬರೂ ನಟಿಸುತ್ತಿದ್ರು. ಕ್ಯೂಟ್ ಆಕ್ಟಿಂಗ್‌ ಮೂಲಕವೇ ಅಭಿಮಾನಿಗಳ ಮನ ಗೆದ್ದಿದ್ರು. ಆ ಸೀರಿಯಲ್‌ ನೋಡುತ್ತಿದ್ದ ಜನರು, ಇಬ್ಬರೂ ನಿಜ ಜೀವನದಲ್ಲೂ ಒಂದಾಗಲಿ ಅಂತಾ ಹರಸುತ್ತಿದ್ರು. ಅದರಂತೆ ಇಬ್ಬರೂ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಅಮೃತಧಾರೆ ಧಾರಾವಾಹಿಯ ಸೆಟ್‌ನಲ್ಲೇ ಇವರಿಬ್ಬರ ಪ್ರೀತಿ ಚಿಗುರಿತ್ತು. ಇದೀಗ ಪ್ರೀತಿ ಮದುವೆಯ ಬಂಧಕ್ಕೆ ಮುನ್ನುಡಿ ಬರೆದಿದೆ. ಅಷ್ಟಕ್ಕೂ ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್‌…

Read More

ಬೆಂಗಳೂರು, ಫೆ.28: ಮೊಬೈಲ್‌ ಎಂಬುದು ಕೇವಲ ಸಂಪರ್ಕ ಸಾಧನವಾಗಿ ಇಂದು ಉಳಿದಿಲ್ಲ, ಬದಲಿಗೆ ಇಂದು ನಾವು ಮೊಬೈಲ್‌ ಇಲ್ಲದೆಯೇ ಬದಕಲು ಸಾಧ್ಯವಿಲ್ಲ ಎಂಬಂತೆ ನಮ್ಮನ್ನು ಬದಲಾಯಿಸಿಬಿಟ್ಟಿದೆ. ಡಿಜಿಟಲ್‌ ಆರೋಗ್ಯದ ಕುರಿತಾಗಿ ನೋಡುವುದಾದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ, ಡೂಮ್‌ ಸ್ಕ್ರೋಲಿಂಗ್‌(ಅತಿಯಾದ ವಿಡೀಯೋ ವೀಕ್ಷಣೆ) ಅಭ್ಯಾಸವು ನಮ್ಮ ಮೆದುಳಿನ ಪ್ರತಿಫಲ ವ್ಯವಸ್ಥೆಯನ್ನು ಬದಲಾಯಿಸಿಬಿಟ್ಟಿದೆ. ಇದರ ಪರಿಣಾಮ ಇಂದಿನ ಪೀಳಿಗೆ ಜನರು ಯಾವಾಗಲೂ ಆನ್‌ಲೈನ್‌ನಲ್ಲಿ ಇರುತ್ತಾರೆ ಜೊತೆಗೆ ನೋಡಲು ಸದಾ ಬಳಲಿದಂತೆ ಕಾಣಿಸುತ್ತಾರೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಾನಸಿಕ ಆರೋಗ್ಯ ಆಪ್ತಸಮಾಲೋಚಕರಾದ ಸುಭಾಷ್‌ ಹೆಚ್.ಜೆ ಹೇಳುತ್ತಾರೆ. ಸ್ಮಾರ್ಟ್‌ಫೋನ್‌ ಯುಗ ಆರಂಭಕ್ಕೂ ಮುನ್ನ ಜನರ ನಡುವೆ ಸಂಪರ್ಕ ಉತ್ತಮವಾಗಿತ್ತು, ಅಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ರೋಗಿಗಳು ಮತ್ತು ಅವರ ಕುಟುಂಬಗಳು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು, ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಳ್ಳುತ್ತಿದ್ದರು. ಆದರೆ ಇಂದು ಎಲ್ಲರೂ ಅವರವರ ಮೊಬೈಲ್‌ನಲ್ಲಿ ಮೌನವಾಗಿ ಮುಳುಗಿದ್ದಾರೆ, ಕನಿಷ್ಟ ಸಂವಹನ ಕ್ರಿಯೆಯನ್ನೂ ಕೂಡ ಕಳೆದುಕೊಂಡಿದ್ದಾರೆ ಎಂದು ತಜ್ಞರು ವಿಷಾದಿಸಿದರು. ಸಾಮಾಜಿಕ ಮಾಧ್ಯಮ ಬಳಕೆ ಎಂದಿಗೂ ತೃಪ್ತಿ ನೀಡದು.…

Read More