Author: Mahanthesha

ಬೆಂಗಳೂರು, ಫೆ.18: ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿ ಬಂದಿರುವ ಬಹುನಿರೀಕ್ಷಿತ ಚಿತ್ರ ‘ವೀರ ಕಂಬಳ’. ತುಳುನಾಡಿನ ಜನಜೀವನದೊಂದಿಗೆ ಹೊಸೆದುಕೊಂಡಿರುವ ಕಂಬಳ ಎಂಬುದು ಬಹು ಹಿಂದಿನಿಂದಲೂ ಚಿತ್ರರಂಗದವರನ್ನು ಸೆಳೆಯುತ್ತಾ ಬಂದಿದೆ. ಆದರೆ, ಅದನ್ನು ಇಡಿಯಾಗಿ ದೃಷ್ಯಗಳಲ್ಲಿ ಹಿಡಿದಿಡುವಂಥಾ ಪ್ರಯತ್ನಗಳು ನಡೆದಿರಲಿಲ್ಲ. ಮೂಲತಃ ದಕ್ಷಿಣ ಕನ್ನಡ ಭಾಗದೊಂದಿಗೆ ಕರುಳುಬಳ್ಳಿಯ ಬಂಧ ಹೊಂದಿರುವ ರಾಜೇಂದ್ರ ಸಿಂಗ್ ಬಾಬು ಅವರು ದಶಕಗಟ್ಟಲೆ ಶ್ರಮವಹಿಸಿ ಅಂಥಾದ್ದೊಂದು ಪ್ರಯತ್ನ ನಡೆಸಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಂಬಳದ ಸುತ್ತಾ ಘಟಿಸುವ ರೋಚಕ ಕಥನವಿರುವ ವೀರ ಕಂಬಳದ ಟ್ರೈಲರ್ ಅನ್ನು ನಾದಬ್ರಹ್ಮ ಹಂಸಲೇಖ ಬಿಡುಗಡೆಗೊಳಿಸಿದ್ದಾರೆ. ಇದೇ ಹೊತ್ತಿನಲ್ಲಿ ತುಳು ಆವೃತ್ತಿಯಾದ ಬಿರ್ದ್‌ದ ಕಂಬುಳದ ಟ್ರೈಲರ್ ಕೂಡಾ ಅನಾವರಣಗೊಂಡಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಟ್ರೈಲರ್ ಬಿಡುಗಡೆಗೊಳಿಸಿದ ನಾದಬ್ರಹ್ಮ ಹಂಸಲೇಖ ಅವರು ಅತ್ಯಂತ ಪ್ರೀತಿಯಿಂದ ಈ ಟ್ರೈಲರ್ ಅನ್ನು ಬಿಡುಗಡೆಗೊಳಿಸಿರೋದಾಗಿ ಮಾತುಗಳನ್ನು ಆರಂಭಿಸಿದರು. ಕಲೆ ಎಂಬುದು ಮುಪ್ಪಿಲ್ಲದ, ಸುಕ್ಕಿಲ್ಲದ ಕನ್ಯೆಯಿದ್ದಂತೆ. ಅದು ಮನುಷ್ಯನನ್ನು ಸದಾ ಜೀವಂತಿಕೆಯಿಂದ ಉಳಿಸುತ್ತದೆಂದಿರುವ ಹಂಸಲೇಖ, ವೀರತ್ವದ ಸಂಕೇತದಂತಿರೋ…

Read More

ಬೆಂಗಳೂರು, ಫೆ.18 : ಕಾಂಗ್ರೆಸ್‌ ಸರ್ಕಾರದ ಅತ್ಯುತ್ತಮ ಕಾರ್ಯ ಅಂದ್ರೆ ಅದು ಪಂಚ ಗ್ಯಾರಂಟಿಗಳನ್ನು ಜಾರಿ ತಂದಿದ್ದು. ಕೋಟ್ಯಂತರ ಜನರು ಈ ಗ್ಯಾರಂಟಿಗಳಿಂದ ನೇರವಾಗಿ ಲಾಭ ಪಡೆಯುತ್ತಿದ್ದಾರೆ. ಯುವಶಕ್ತಿಯನ್ನು ಜಾಗೃತಗೊಳಿಸಿ, ಯುವಕರಲ್ಲಿ ಹೊಸ ಹುರುಪು ತುಂಬಲು ಜಾರಿಯಾಗಿದ್ದೇ ಯುವನಿಧಿ ಯೋಜನೆ. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆ ಕಾಂಗ್ರೆಸ್‌ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಯುವ ಜನತೆ ಕೆಲಸಗಳಿಲ್ಲದ ಸಮಯದಲ್ಲಿ ಎದುರಿಸುತ್ತಿದ್ದ ಒತ್ತಡ, ಸಮಸ್ಯೆಗಳನ್ನು ಅರಿತ ಕಾಂಗ್ರೆಸ್‌ ಸರ್ಕಾರ ಈ ಯೋಜನೆಯನ್ನ ಜಾರಿ ತಂದಿದೆ. ಪದವಿ ಅಥವಾ ಡಿಪ್ಲೋಮಾ ಪೂರ್ಣಗೊಳಿಸಿದ ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಕಾರಣಕ್ಕೆ ಈ ಯೋಜನೆಯನ್ನು ಆರಂಭಿಸಲಾಗಿದೆ. ಈ ಮೂಲಕ ನಿರುದ್ಯೋಗಿ ಯುವಕ, ಯುವತಿಯರು ಉದ್ಯೋಗ ಪಡೆಯುವವರೆಗೆ ಸರ್ಕಾರದಿಂದ ಸಹಾಯಧನ ಪಡೆಯಲಿದ್ದಾರೆ. ರಾಜ್ಯದಲ್ಲಿ ಸುಮಾರು 3.08 ಲಕ್ಷಕ್ಕೂ ಅಧಿಕ ಮಂದಿ ಈ ಯೋಜನೆಯ ಲಾಭ ಪಡೆಯುತ್ತಿದ್ದು, ವಾರ್ಷಿಕವಾಗಿ 912 ಕೋಟಿ ರೂ. ಅನುದಾನ ಒದಗಿಸಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ನಿರುದ್ಯೋಗ ನಿವಾರಣೆಗೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಂತಾಗಿದೆ.…

Read More

ಬೆಂಗಳೂರು, ಫೆ.17: ಮಹಿಳೆಯರ ಸ್ವಾವಲಂಬಿತನ, ಸ್ವತಂತ್ರವಾಗಿ ಜೀವನಕ್ಕೆ ಸಹಕಾರಿ ಆಗಲೆಂದು ರಾಜ್ಯ ಕಾಂಗ್ರೆಸ್‌ ಸರ್ಕಾರ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದ್ದು, ಅದು ಈಗ ಜನರ ಮೆಚ್ಚುಗೆ ಗಳಿಸಿದೆ. ಹೌದು.. ಗೃಹಲಕ್ಷ್ಮೀ ಸ್ಕೀಂನಡಿ ಪ್ರತಿ ತಿಂಗಳು ಪ್ರತಿ ಮನೆ ಯಜಮಾನಿ ಖಾತೆಗೆ 2,000 ರೂಪಾಯಿ ಹಣ ಹಾಕಲಾಗುತ್ತದೆ. ಇದು ಮಹಿಳಾ ಸಬಲೀಕರಣಕ್ಕಾಗಿ ಜಾರಿಗೊಳಿಸಲಾದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿದ್ದು, ನೇರ ನಗದು ವರ್ಗಾವಣೆ ಮೂಲಕ ಹಣವು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ರಾಜ್ಯದ 1 ಕೋಟಿ 24 ಲಕ್ಷದ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿ ನೇರವಾಗಿ ಅವರ ಖಾತೆಗೆ ಜಮೆ ಆಗುತ್ತಿದೆ. ಮಕ್ಕಳ ಶಿಕ್ಷಣ ಮತ್ತು ತುರ್ತು ವೈದ್ಯಕೀಯ ವೆಚ್ಚಕ್ಕೆ ಇದು ಸಹಕಾರಿಯಾಗುತ್ತಿದೆ. ಗೃಹಿಣಿಯರ ಕೈಗೆ ಸಿಕ್ಕ ನಿಜವಾದ ಆರ್ಥಿಕ ಸಹಾಯವಾಗಿದೆ. ಇದರಿಂದ ಬಡತನ ರೇಖೆಗಿಂತ ಕೆಳಗಿರುವ(BPL), ಮೇಲಿರುವ (APL) ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳ ಮುಖ್ಯಸ್ಥೆಯರ ಆರ್ಥಿಕ ಸ್ವಾವಲಂಬನೆ ಸಾಧಿಸುವುದೇ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮುಖ್ಯ ಧ್ಯೇಯವಾಗಿದೆ. 1.24…

Read More

ಬೆಂಗಳೂರು, ಫೆ.17: SSLC ಮತ್ತು PUC ವಿದ್ಯಾರ್ಥಿಗಳಿಗಾಗಿ ಮಹತ್ವದ ನ್ಯೂಸ್‌ ಹೊರಬಿದ್ದಿದೆ. ಇಷ್ಟು ದಿನಗಳ ಕಠಿಣ ಪರಿಶ್ರಮ, ಅಭ್ಯಾಸ ಸಾಬೀತು ಮಾಡುವ ಸಮಯ ಬಂದೇ ಬಿಟ್ಟಿದೆ. ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ದ್ವಿತೀಯ PUC ಪರೀಕ್ಷೆ ನಡೆಯಲಿದೆ. ಬಳಿಕ ಮಾರ್ಚ್ 18ರಿಂದ ಏಪ್ರಿಲ್ 4ರವರೆಗೆ SSLC ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ದ್ವಿತೀಯ PUC ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿದೆ. ಹಾಗೂ SSLC ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ಗಂಟೆವರೆಗೆ ನಡೆಯಲಿದೆ. ಈ ಬಾರಿ ದ್ವಿತೀಯ PUC ಪರೀಕ್ಷೆಗೆ ಒಟ್ಟು 7,10,363 ವಿದ್ಯಾರ್ಥಿಗಳು, SSLC ಪರೀಕ್ಷೆಗೆ 9,02,889 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗುತ್ತೆ. ನೀರು ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಪರೀಕ್ಷೆಗೆ ಬರುವ ವೇಳೆ ತೊಂದರೆ ಆಗದಂತೆ…

Read More

ಬೆಂಗಳೂರು, ಫೆ.17: ರಾಜ್ಯದಲ್ಲಿ ಸಾವಿರ ದಿನಗಳನ್ನು ಪೂರೈಸಿ ಸಾಧನೆಗೈದಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳೇ ಜೀವಾಳ. ಟೀಕೆ ಟಿಪ್ಪಣಿ, ವಿರೋಧಗಳ ನಡುವೆಯೂ ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಯಶಸ್ವಿಯಾಗಿ ನಿಭಾಯಿಸಿ ದೇಶಕ್ಕೆ ಮಾದರಿಯಾಗಿದೆ. ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರ ಬದುಕಿಗೆ ಆಶಾಕಿರಣವಾಗಿದೆ. ಮಹತ್ವಾಕಾಂಕ್ಷೆಯ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ರಾಜ್ಯದ ಜನತೆಗೆ ಉಚಿತ ವಿದ್ಯುತ್‌ ನೀಡುವ ಜೊತೆಗೆ ಅವರ ಬದುಕಲ್ಲಿ ಬೆಳಕು ಮೂಡಿಸಿದೆ. ಆಗಸ್ಟ್ 1, 2023 ರಿಂದ ಜಾರಿಯಾದ ಈ ಯೋಜನೆ ಪ್ರತಿ ಮನೆಗೆ ಪ್ರತಿ ತಿಂಗಳು ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತ ಕರೆಂಟ್‌ ನೀಡುತ್ತಾ ಬಂದಿದೆ. ಅದರಲ್ಲೂ ಬಡವರು, ಮಧ್ಯಮ ವರ್ಗದವರಿಗೆ ಆರ್ಥಿಕ ಹೊರೆಯನ್ನ ತಗ್ಗಿಸಿ ಜೀವನ ಮಟ್ಟವನ್ನು ಸುಧಾರಿಸಲು ಗೃಹಜ್ಯೋತಿ ಯೋಜನೆ ಬಹುಮುಖ್ಯ ಪಾತ್ರ ವಹಿಸಿದೆ. ವಿದ್ಯುತ್‌ ಅತ್ಯಗತ್ಯವಾಗಿರುವ ಸಂದರ್ಭದಲ್ಲಿ ಅದರ ಭಾರವನ್ನು ಶಮನಗೊಳಿಸಿ, ಆ ಹಣವನ್ನು ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ಇತರೆ ಅಗತ್ಯತೆಗಳಿಗೆ ಬಳಸಲು ಗೃಹಜ್ಯೋತಿ…

Read More

ಬೆಂಗಳೂರು, ಫೆ.16: ರಾಜ್ಯ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದು, ಬಡವರ ಪಾಲಿಗೆ ನೆರಳಾಗಿದೆ. ಅದರಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಸ್ಕೀಂ, ಮಹಿಳೆಯರನ್ನು ಸ್ವಾವಲಂಬಿ ಬದುಕಿಗೆ ಬೆನ್ನೆಲುಬಾಗಿ ನಿಂತಿದೆ. ಹೌದು.. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯೂ ಒಂದು. ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕವಾಗಿ ಬೆಂಬಲ ನೀಡುವಲ್ಲಿ ಗ್ಯಾರಂಟಿ ಯೋಜನೆಗಳು ಅದರಲ್ಲೂ ಶಕ್ತಿ ಯೋಜನೆ ಅಭೂತಪೂರ್ವ ಯಶಸ್ಸು ಗಳಿಸಿದೆ. ಮಹಾತ್ಮಾ ಗಾಂಧೀಜಿಯವರ ಅಂತ್ಯೋದಯ ಹಾಗೂ ಸರ್ವೋದಯ ತತ್ವದ ಅಡಿಯಲ್ಲಿ ಹಾಗೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ನಾಯಕತ್ವದಲ್ಲಿ ರೂಪುಗೊಂಡ ಶಕ್ತಿ ಯೋಜನೆ ಜನ ಮನ್ನಣೆಗೆ ಪಾತ್ರವಾಗಿದೆ. ಕಾಂಗ್ರೆಸ್‌ ಸರ್ಕಾರದ ಸಾವಿರ ದಿನದ ಪಯಣದಲ್ಲಿ ಸಾವಿರಾರು ಮಹಿಳೆಯರ ಬಾಳಿಕೆ ಬೆಳಕಾಗಿದೆ. ಮಹಿಳೆಯರಿಗೆ ಶಕ್ತಿ ತುಂಬಿದ ಶಕ್ತಿ ಯೋಜನೆ ಸ್ಕೀಂ :ಅಷ್ಟಕ್ಕೂ ಜೂನ್ 11, 2023ರಂದು…

Read More

ಬೆಂಗಳೂರು, ಫೆ.14: ವಿಪಕ್ಷಗಳಿಗೂ ಕಾಂಗ್ರೆಸ್‌ ಆಡಳಿತ ಮಾದರಿ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 1 ಸಾವಿರ ದಿನ ಪೂರೈಸುವ ಮೂಲಕ ಹೊಸ ಸಾಧನೆಗೆ ಪಾತ್ರವಾಗಿದೆ. ನುಡಿದಂತೆ ನಡೆದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಕಾರ್ಯವೈಖರಿಗೆ ಜನರು ಬಹುಪರಾಕ್‌ ಎಂದಿದ್ದಾರೆ. ಹೌದು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಎಲ್ಲರ ಹುಬ್ಬೇರುವಂತೆ ಮಾಡಿತ್ತು.. ಆಡಳಿತ ಪಕ್ಷದ ಅಲೆಯ ನಡುವೆಯೂ ಬರೋಬ್ಬರಿ 135 ಸ್ಥಾನಗಳನ್ನು ಗೆದ್ದು ತನ್ನ ಪರಾಕ್ರಮವನ್ನು ಸಾಬೀತು ಮಾಡಿತ್ತು.. ಇದು ಹಿಂದೆಂದೂ ಕಾಣದ ಅತಿದೊಡ್ಡ ಗೆಲುವಾಗಿತ್ತು.. ನುಡಿದಂತೆ ನಡೆಯಲೇಬೇಕೆಂಬ ಛಲದಿಂದ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಿತ್ತು.. ಸಿಎಂ ಸಿದ್ದರಾಮಯ್ಯನವರು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪಣ ತೊಟ್ಟರು. ಸರ್ಕಾರ ಆಡಳಿತಕ್ಕೆ ಬಂದ ಕೇವಲ 6 ತಿಂಗಳಲ್ಲೇ ಐದು ಗ್ಯಾರಂಟಿಗಳನ್ನೂ ಅನುಷ್ಠಾನಗೊಳಿಸಿ ಜನ ಮನ್ನಣೆ ಗಳಿಸುವಲ್ಲಿ ಯಶಸ್ವಿಯಾಯಿತು. ಗ್ಯಾರಂಟಿಗಳ ಹಿಂದೆ ಹೋದ್ರೆ ಸರ್ಕಾರ ದಿವಾಳಿ ಆಗೋದು ಪಕ್ಕಾ…

Read More

ಬೆಂಗಳೂರು, ಫೆ.13: ಮಹಾ ಕುಂಭಮೇಳದಲ್ಲಿ ಮಣಿ ಹಾರಗಳನ್ನು ಮಾರಾಟ ಮಾಡುವ ಮೂಲಕ ರಾತ್ರೋರಾತ್ರಿ ದೇಶಾದ್ಯಂತ ಸುದ್ದಿಯಾಗಿದ್ದ ಮೊನಾಲಿಸಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ?. ತನ್ನ ಕಣ್ಣೋಟದಲ್ಲೇ ಜನರ ಮನ ಗೆದ್ದಿದ್ದ ಈ ಚೆಂದುಳ್ಳಿ ಚೆಲುವೆ ಇದ್ದಕ್ಕಿದ್ದಂತೆ ಪ್ರಸಿದ್ಧರಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದರು. 2025ರ ಮಹಾ ಕುಂಭಮೇಳದಲ್ಲಿ ಈಕೆಯ ನೈಜ ಸೌಂದರ್ಯ ಮತ್ತು ಸರಳತೆ ಕಂಡ ಪ್ರವಾಸಿಗರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋಗಳು ಎಲ್ಲೇಡೆ ವೈರಲ್‌ ಆಗಿ “ಮಹಾಕುಂಭದ ಮೊನಾಲಿಸಾ” ಎಂದೇ ಈಕೆ ಪ್ರಖ್ಯಾತರಾದರು. ಇತ್ತೀಚೆಗೆ, ಮೊನಾಲಿಸಾ ಕೈಯಲ್ಲಿ ಮೂರು ಚಿತ್ರಗಳಿವೆ. ಅವುಗಳಲ್ಲಿ, ‘ದಿ ಡೈರಿ ಆಫ್ ಮಣಿಪುರ’ ಮೊದಲು ಬಿಡುಗಡೆಯಾಗಲಿದೆ. ಅಂದರೆ ಇದು ಅವರ ಮೊದಲ ಚಿತ್ರ. ಪ್ರಸ್ತುತ, ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಮಧ್ಯೆ ಮೊನಾಲಿಸಾ ತನಗೆ ಜನ ಮನ್ನಣೆ ತಂದು ಕೊಟ್ಟಿದ್ದ ಪ್ರಯಾಗರಾಜ್‌ಗೆ ಭೇಟಿ ನೀಡಿ ಗಂಗಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾ ಕುಂಭಮೇಳದಲ್ಲಿ…

Read More

ಬೆಂಗಳೂರು, ಫೆ.12: ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮತ್ತು ರೋಡ್ ರೇಜ್ ಪ್ರಕರಣಗಳು ಮಿತಿಮೀರುತ್ತಿವೆ ಎಂಬುದಕ್ಕೆ ಮತ್ತೊಂದು ಆಘಾತಕಾರಿ ಸಾಕ್ಷಿ ಸಿಕ್ಕಿದೆ. ಜನನಿಬಿಡವಾದ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ವ್ಯಕ್ತಿಯೊಬ್ಬರನ್ನು ಎಳೆದೊಯ್ಯಲಾಗಿದೆ. ಈ ದೃಶ್ಯವನ್ನು ಕಂಡ ಸಾರ್ವಜನಿಕರು ಮತ್ತು ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ. ರಸ್ತೆ ತುಂಬೆಲ್ಲಾ ವಾಹನಗಳಿದ್ದರೂ, ಅದ್ಯಾವುದನ್ನೂ ಲೆಕ್ಕಿಸದೆ ಕೆಂಪು ಬಣ್ಣದ ಮಾರುತಿ ಸುಜುಕಿ XL6 ಕಾರಿನ ಚಾಲಕ ಅತಿರೇಕದ ವರ್ತನೆ ತೋರಿದ್ದಾನೆ. ಕಾರಿನ ಬಾನೆಟ್ ಮೇಲೆ ವ್ಯಕ್ತಿಯೊಬ್ಬರು ಮಲಗಿದ್ದು, ವಾಹನ ನಿಲ್ಲಿಸುವಂತೆ ಜೋರಾಗಿ ಕೂಗಿಕೊಳ್ಳುತ್ತಿದ್ದಾರೆ. ʼನಿಲ್ಲಿಸು, ನಿಲ್ಲಿಸುʼ ಎಂದು ಎಷ್ಟೇ ಅಂಗಲಾಚಿದರೂ, ಚಾಲಕ ಮಾತ್ರ ಕಾರನ್ನು ನಿಲ್ಲಿಸದೆ ವೇಗವಾಗಿ ಮುನ್ನುಗ್ಗಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬರುವಂತೆ, ಕಾರು ವೇಗವಾಗಿ ಚಲಿಸುತ್ತಿದ್ದಾಗ ಪಕ್ಕದಲ್ಲೇ ಲಾರಿಗಳು ಮತ್ತು ಆಟೋಗಳು ಸಂಚರಿಸುತ್ತಿದ್ದವು. ಬಾನೆಟ್ ಮೇಲೆ ಇದ್ದ ವ್ಯಕ್ತಿ ಭಯಭೀತರಾಗಿ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಸ್ವಲ್ಪ ಯಾಮಾರಿದ್ದರೂ ಅವರು ರಸ್ತೆಗೆ ಬಿದ್ದು, ಹಿಂದಿನಿಂದ ಬರುತ್ತಿದ್ದ ವಾಹನಗಳ ಚಕ್ರಕ್ಕೆ…

Read More

ಬೆಂಗಳೂರು, ಫೆ.12: ಎಂಥದ್ದೇ ಭವ್ಯವಾದ ಬಂಗಲೆ ಇದ್ದರೂ ಸಹ ಅಬ್ಬಬ್ಬಾ ಅಂದ್ರೆ ನೂರು, ಇನ್ನೂರು ಕೋಟಿ ಅಥವಾ 500 ಕೋಟಿ ರೂ. ಬೆಲೆ ಕಟ್ಟಬಹುದು. ಆದರೆ, ಇಲ್ಲೊಂದು ಭವ್ಯವಾದ ಬಂಗಲೆಯನ್ನು ಬರೋಬ್ಬರಿ ಸಾವಿರ ಕೋಟಿಗೆ ಮಾರಾಟಕ್ಕೆ ಇಡಲಾಗಿದೆ. ಹೌದು, ದೆಹಲಿಯ ಹೃದಯಭಾಗದಲ್ಲಿರುವ ಪ್ರಾಪರ್ಟಿಯೊಂದನ್ನ ಬರೋಬ್ಬರಿ 1000 ಕೋಟಿ ರೂಪಾಯಿಗೆ ಮಾರಾಟಕ್ಕಿಡಲಾಗಿದೆ. ತೆಹ್ರಿ ಗರ್ವಾಲ್ ರಾಜಮನೆತನಕ್ಕೆ ಸೇರಿದ ಈ ಬಂಗಲೆಯನ್ನು ಈಗಿನ ಮಹಾರಾಜ ಮನುಜೇಂದ್ರ ಶಾ ಅವರು ಮಾರಾಟಕ್ಕಿಟ್ಟಿದ್ದಾರೆ. ಭಗವಾನ್ ದಾಸ್ ರಸ್ತೆಯಲ್ಲಿರುವ 3.2 ಎಕರೆ ವಿಸ್ತೀರ್ಣದ ಅದ್ಭುತವಾದ ಎಸ್ಟೇಟ್ ತೆಹ್ರಿ ಗರ್ವಾಲ್ ಕುಟುಂಬದ ಶಾಶ್ವತ ರಾಜ ಪರಂಪರೆಗೆ ಸಾಕ್ಷಿಯಾಗಿದೆ. ಸರಿಸುಮಾರು 12 ಸಾವಿರದ 950 ಚದರ ಮೀಟರ್‌ಗಳಷ್ಟು ವಿಸ್ತೀರ್ಣದಲ್ಲಿರುವ ಈ ಬಂಗಲೆ ಲುಟ್ಯೆನ್ಸ್ ಬಂಗಲೆ ವಲಯದಲ್ಲಿನ ಪ್ರಮುಖ ಆಸ್ತಿಗಳಲ್ಲಿ ಒಂದಾಗಿದೆ. ಬಿಜೆಪಿ ಲೋಕಸಭಾ ಸದಸ್ಯೆ ಮತ್ತು ರಾಜಮನೆತನದ ಸದಸ್ಯೆ ಮಾಲಾ ರಾಜ್ಯಲಕ್ಷ್ಮಿ ಶಾ ಅವರ ನಿವಾಸ ಇದಾಗಿದ್ದು, ಈ ಬಂಗಲೆಯನ್ನು ಖರೀದಿಸಲು ಉದ್ಯಮಿಯೊಬ್ಬರು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಖರೀದಿದಾರ ಆಹಾರ ಮತ್ತು…

Read More