Author: Bosstv News Desk

ಶಿವಮೊಗ್ಗ:ಮಗಳಿಗೆ ಕಾಟ ಕೊಟ್ಟ ಅಳಿಯನನ್ನೇ ಮಾವ ಮುಗಿಸಿರುವ ಘಟನೆ ನಡೆದಿದೆ. ವಿನೋಬ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಈ ಘಟನೆ ನಡೆದಿದೆ. ಅರುಣ ಸಾವನ್ನಪ್ಪಿರುವ ವ್ಯಕ್ತಿ. ಅರುಣ್ ವೈನ್ ಶಾಪ್ ಮುಂದೆ ನಿಂತಾಗ ಇಬ್ಬರು ವ್ಯಕ್ತಿಗಳು ಆತನ ಮೇಲೆ ದಾಳಿ ನಡೆಸಿ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಪರಿಣಾ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅರುಣ್ ಮೇಲೆ ಹೆಣ್ಣು ಕೊಟ್ಟ ಮಾವ ತಿಪ್ಪೇಶ್ ಮತ್ತು ಹೆಂಡತಿಯ ಸೋದರ ಮಾವ ಲೋಕೇಶ್ ದಾಳಿ ಮಾಡಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರಾಡ್ ನಿಂದ ಅರುಣ್ ತಲೆಗೆ ಬಲವಾಗಿ ಹೊಡೆದಿದ್ದರಿಂದ ಆತ ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿ ಯಾವುದೇ ಸಾಕ್ಷಿಗಳು ಕೂಡ ಸಿಕ್ಕಿಲ್ಲ. ಅರುಣ್, ಯಶಸ್ವಿನಿ ಎಂಬುವರನ್ನು ಮದುವೆಯಾಗಿದ್ದರು. ಆದರೆ ಇಬ್ಬರ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಯಶಸ್ವಿನಿ ಇತ್ತೀಚೆಗೆ ತವರು ಮನೆ ಸೇರಿದ್ದಾರೆ. ಮಗಳಿಗೆ ಅಳಿಯ ಹಿಂಸೆ ಕೊಡುತ್ತಿದ್ದಾನೆ ಎಂದುಕೊಂಡು ಹೆಣ್ಣು ಕೊಟ್ಟ ಮಾವ ಮತ್ತು ಯಶಸ್ವಿನಿ ಸೋದರ ಮಾವ ಇಬ್ಬರು ಸೇರಿ ಹತ್ಯೆ…

Read More

ಶಿವಮೊಗ್ಗ: ಶಾಸಕ ಜನಾರ್ದನ ರೆಡಡ್ ಮನೆ ಮುಂದೆ ನಿನ್ನೆ ರಾತ್ರಿಯಿಂದ ಹೈಡ್ರಾಮಾ ನಡೆಯುತ್ತಿದ್ದು, ಗಡಿ ನಾಡಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸೇರಿ 11 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಾಲ್ಮೀಕಿ ಪುತ್ತಳಿ ಅನಾವರಣ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯವರ ಮಧ್ಯೆ ದೊಡ್ಡ ಫೈಟ್ ನಡೆದಿದೆ. ಬ್ಯಾನರ್ ಗಲಾಟೆ ಸಂಬಂಧ ಬ್ರೂಸ್‌ಫೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಅಲಿಖಾನ್, ದಮ್ಮೂರ ಶೇಖರ್, ಮೋತ್ಕರ್ ಶ್ರೀನಿವಾಸ್, ಪ್ರಕಾಶ್ ರೆಡ್ಡಿ, ರಮಣ, ಪಾಲನ್ನ, ದಿವಾಕರ್, ಮಾರುತಿ ಪ್ರಸಾದ್ ಸೇರಿದಂತೆ ಹಲವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಜ. 3 ರಂದು ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂಭಾಗ ಬ್ಯಾನರ್ ಅಳವಡಿಕೆ ಮಾಡಲು ಗುಂಪು ಮುಂದಾಗಿತ್ತು. ಆ ವೇಳೆ ಗಲಾಟೆ ನಿರ್ಧಾರವಾಗಿತ್ತು. ಆ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ…

Read More

ಬೆಂಗಳೂರು: ಆಕಾಶದೆತ್ತರಕ್ಕೆ ಏರಿಕೆಯಾಗಿದ್ದ ಚಿನ್ನದ ದರ ವರ್ಷದ ಕೊನೆಯ ದಿನ ಕುಸಿತವಾಗಿದ್ದು, ಪ್ರಿಯರಿಗೆ ಸಿಹಿ ಸುದ್ದಿ ಸಿಗುವಂತೆ ಮಾಡಿದೆ. ಚಿನ್ನದ ದರದಲ್ಲಿ ಇಂದೂ ಸಹ ಇಳಿಕೆ ಕಂಡು ಬಂದಿದ್ದು, 22 ಕ್ಯಾರಟ್‌ನ 1 ಗ್ರಾಂ (Gold Price Today on 31th December 2025) ಚಿನ್ನದ ಬೆಲೆಯಲ್ಲಿ 30 ರೂ. ಇಳಿಕೆಯಾಗಿದೆ. ಹೀಗಾಗಿ ಚಿನ್ನದ ಬೆಲೆ 1 ಗ್ರಾಂಗೆ 12,455 ರೂ. ಇದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 32 ರೂ. ಇಳಿಕೆ ಕಂಡು 13,588 ರೂ. ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 99,640 ರೂ. ಆದರೆ 10 ಗ್ರಾಂಗೆ 1,24,550 ರೂ. ನೀಡಿದರೆ, 100 ಗ್ರಾಂಗೆ 12,45,500 ಬೆಲೆ ಇದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನ 1,08,704 ರೂ. ಹಾಗೂ 10 ಗ್ರಾಂ ಚಿನ್ನದ ಬೆಲೆ 1,35,880 ರೂ. ಇದ್ದರೆ 100 ಗ್ರಾಂಗೆ 13,58,800 ರೂ. ಆಗಿದೆ. ಬೆಳ್ಳಿ ದರದಲ್ಲಿ ಯಥಾಸ್ಥಿತಿ…

Read More

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ಮಧ್ಯೆ ನಡೆದ ಯುದ್ಧವನ್ನು ನಿಲ್ಲಿಸುದ್ದಿ ನಾನೇ ಎಂದು ಟ್ರಂಪ್ ಹೇಳಿಕೆಯ ನಂತರ ಹೇಳಿರುವ ಚೀನಾಗೆ ಭಾರತ ತಿರುಗೇಟು ನೀಡಿದೆ. ಕದನ ವಿರಾಮ ನಿರ್ಧಾರದಲ್ಲಿ ಯಾವುದೇ ಮೂರನೇ ಪಕ್ಷದ ಪಾತ್ರ ಇರಲಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಮೇ ತಿಂಗಳಲ್ಲಿ ನಡೆದಿದ್ದ ಸೇನಾ ಸಂಘರ್ಷದ ಸಂದರ್ಭದಲ್ಲಿ ಕದನ ವಿರಾಮಕ್ಕೆ ಕಾರಣವಾಗಿದ್ದು, ಉಭಯ ದೇಶಗಳ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್ ನಡುವೆ ನಡೆದ ನೇರ ಮಾತುಕತೆ ಎಂದು ಭಾರತ ಹಿಂದೆ ಕೂಡ ಸ್ಪಷ್ಟಪಡಿಸಿದ್ದು, ಈಗಲೂ ಈ ಹೇಳಿಕೆ ನೀಡಿದೆ. “ನಾವು ಈಗಾಗಲೇ ಇಂತಹ ಹೇಳಿಕೆಗಳನ್ನು ತಳ್ಳಿಹಾಕಿದ್ದೇವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯಗಳಲ್ಲಿ ಮೂರನೇ ವ್ಯಕ್ತಿಗೆ ಯಾವುದೇ ಪಾತ್ರವಿಲ್ಲ. ಭಾರತ-ಪಾಕಿಸ್ತಾನ ಕದನ ವಿರಾಮವು ಉಭಯ ದೇಶಗಳ ಡಿಜಿಎಂಒಗಳ ನಡುವೆ ನೇರವಾಗಿ ಒಪ್ಪಂದವಾಗಿತ್ತು ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದೇವು. ಈಗಲೂ ಸ್ಪಷ್ಟಪಡಿಸುತ್ತಿದ್ದೇವೆ ಎಂದು ಭಾರತ ಹೇಳಿದೆ ಎಂದು ವರದಿಯಾಗಿದೆ.

Read More

ಸಾಮಾಜಿಕ ಜಾಲತಾಣದಲ್ಲಿ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ ಅವರಿಗೆ ಅಶ್ಲೀಲ ಕಮೆಂಟ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಾಗಿತ್ತು. ಆದರೆ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ವಿಜಯಲಕ್ಷ್ಮೀ ಗರಂ ಆಗಿದ್ದಾರೆ. ದೂರಿನ ಬಗ್ಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮಾಡಿದ್ದಾರೆ. ‘ನಮ್ಮ ದೇಶದಲ್ಲಿ ವ್ಯವಸ್ಥೆ ಮತ್ತು ಕಾನೂನು ಎಲ್ಲರಿಗೂ ಒಂದೇ ಎಂದು ನಾನು ಯಾವಾಗಲೂ ನಂಬಿದ್ದೆ. ಆದರೆ ಪ್ರಾಮಾಣಿಕವಾಗಿ, ಈ ಅನುಭವವು ನನ್ನ ಆ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ’ ಎಂದು ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಬರೆದುಕೊಂಡಿದ್ದಾರೆ. ದಾಖಲಿಸಿದ ದೂರು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ, ಆದರೆ ಬೇರೊಬ್ಬ ಮಹಿಳೆಯ ದೂರಿನ ಮೇಲೆ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂಬುದು ನನಗೆ ಆಶ್ಚರ್ಯ ತಂದಿದೆ. ಇದು ನಿಜವಾಗಿಯೂ ನನಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ನನ್ನ ದೂರು ಕಡಿಮೆ ಮುಖ್ಯವೇ ಅಥವಾ ಮಾನ್ಯವೇ’. ‘ನನ್ನ ವಕೀಲರಿಂದ ನಿರಂತರವಾಗಿ ವಿಚಾರಿಸಿದ ನಂತರವೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಂದು, ನನ್ನ ದೂರಿನ ಬಗ್ಗೆ…

Read More

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಡ್ರಿಂಕ್ಸ್ ಮಾಡಿದವರನ್ನೆಲ್ಲ ಪೊಲೀಸರು ಮನೆಗೆ ಹೋಗಿ ಮುಟ್ಟಿಸುತ್ತಾರೆನ್ನುವುದು ನಿಮ್ಮ ಕಲ್ಪನೆ ಎಂದು ಗೃಹ ಪರಮೇಶ್ವರ್ (G Parameshwar) ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಬಾ ಕುಡಿದಿರುವವರು, ನಡೆಯಲು ಆಗದಿರುವವರನ್ನ ವಿಶ್ರಾಂತಿ ಸ್ಥಳಕ್ಕೆ ಬಿಡುತ್ತೇವೆ. ಕೆಲವರು ಪ್ರಜ್ಞೆ ಇರದ ಮಟ್ಟಕ್ಕೆ ಕುಡಿಯುತ್ತಾರೆ. ಅಂಥವರಿಗಾಗಿ 15 ಕಡೆ ರೆಸ್ಟಿಂಗ್ ಪ್ಲೇಸ್ ಮಾಡಿದ್ದೇವೆ. ನಶೆ ಇಳಿಯುವವರೆಗೂ ಇಟ್ಟುಕೊಂಡು ನಂತರ ಕಳಿಸುತ್ತೇವೆ ಎಂದಿದ್ದಾರೆ. ಬಾರ್, ಪಬ್ ಓಪನ್ ಇಡಲು ಸಮಯ ನಿಗದಿ ಮಾಡಲಾಗಿದೆ. ಟೈಮಿಂಗ್ ಪ್ರಕಾರ ಬಾರ್ ಮುಚ್ಚಬೇಕು. ರಾತ್ರಿ ಒಂದು ಗಂಟೆಗೆ ಎಲ್ಲ ಬಾರ್‌ಗಳನ್ನು ಮುಚ್ಚಬೇಕು. ಮುಚ್ಚದಿದ್ರೆ ಕೇಸ್ ಹಾಕುತ್ತೇವೆ. ಡ್ರಿಂಕ್ ಆಂಡ್ ಡ್ರೈವ್‌ಗೆ ಅದೇ ರೀತಿಯಲ್ಲಿ ಕೇಸ್ ಇರುತ್ತೆ. 160 ಸ್ಪಾಟ್ ಐಡೆಂಟಿಫೈ ಮಾಡಿದ್ದಾರೆ. ಒಂದು ಹಂತದವರೆಗೆ ಬಿಡುತ್ತೇವೆ. ಹಂತ ಮೀರಿದಾಗ ಡ್ರೈವ್ ಮಾಡುವುದು ಕಷ್ಟವಾಗುತ್ತದೆ. ಆಗ ಅಪಘಾತಗಳಾಗಿ ಸಾಯುತ್ತಾರೆ. ಎರಡು ದಿನ ನಾವು ಕಂಟ್ರೋಲ್ ಮಾಡಿದ್ರೆ ಕೆಲವರ ಪ್ರಾಣ ಉಳಿಯುತ್ತವೆ ಎಂದಿದ್ದಾರೆ. ಹೆಚ್ಚು ಜನರು ಸೇರಿದ…

Read More

ಕೇರಳ: ವೈವಿದ್ಯತೆ ಮಧ್ಯೆ ಎಲ್ಲರೂ ಒಗ್ಗಟ್ಟಾಗಿ ಬಾಳುವುಂತಹ ದೇಶ ನಿರ್ಮಾಣ ಮಾಡುವುದು ನಾರಾಯಣ ಗುರುಗಳ ಉದ್ಧೇಶವಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. ಕೇರಳ ತಿರುವನಂತಪುರದ 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ನಾರಾಯಣ ಗುರುಗಳು ಕೇವಲ‌ ಒಬ್ಬ ಸಂತ ಮಾತ್ರ ಅಲ್ಲ. ಸಮಾನತೆ ಮತ್ತು ನೈತಿಕತೆಯ ಹರಿಕಾರರಾಗಿದ್ದರು. ಈ ನಿಟ್ಟಿನಲ್ಲಿ ಶಿವಗಿರಿ ತೀರ್ಥಯಾತ್ರೆ ಕೂಡ ಚಳವಳಿಯ ಸ್ವರೂಪ ಪಡೆದು ಜಾತಿ ದೌರ್ಜನ್ಯವನ್ನು ಅಳಿಸಿ ಸಮಾಜದ ಸಾಮಾಜಿಕ ನ್ಯಾಯದ ಕಡೆ ಮುನ್ನಡೆಸಿತು ಎಂದಿದ್ದಾರೆ.ಅಂತಹ ಮಹಾನ್ ವ್ಯಕ್ತಿಯ ಭಾರತವನ್ನು ನಾವು ಗಟ್ಟಿಗೊಳಿಸಬೇಕಿದೆ. ಶಿವಗಿರಿ ಮಠವು ಕೇವಲ ಒಂದು ಯಾತ್ರಾ ಕೇಂದ್ರವಾಗಿರದೇ,ಭಾರತದ ಆತ್ಮಸಾಕ್ಷಿಯ ನೈತಿಕ ವಿಶ್ವವಿದ್ಯಾಲಯವಾಗಿದೆ. ಬೌದ್ಧಿಕ ಮತ್ತು ವಿಶ್ವದ ಮಾನವಕುಲದ ಚಳವಳಿಯಾಗಿದೆ. ಇದು ಭೌಗೋಳಿಕವಲ್ಲ, ನೈತಿಕತೆಯ ಪ್ರವಾಸ ಎಂದು ಅವರು ಕೊಂಡಾಡಿದ್ದಾರೆ. ಆಧುನಿಕ ರಾಷ್ಟ್ರ ನಿರ್ಮಾಣದಲ್ಲಿ ಶಿವಗಿರಿ ತೀರ್ಥಯಾತ್ರೆ ಪಾತ್ರ ತುಂಬಾ ಮಹತ್ವದ್ದಾಗಿದೆ. ತುರ್ತು ಅಗತ್ಯ ಮತ್ತು ನಮ್ಮ ಕಾಲದ ಬಿಕ್ಕಟ್ಟುಗಳಿಗೆ ನೇರ ಉತ್ತರ. ಇದರ ಹಿಂದಿರುವ ಶಕ್ತಿ ಶ್ರೀ ನಾರಾಯಣ…

Read More

ಬಳ್ಳಾರಿ: ಮಾಜಿ ಸಚಿವ ಬಿ. ನಾಗೇಂದ್ರ ಅವರ ಆಪ್ತನ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿರುವ ನಾಗೇಂದ್ರ ಅವರ ಆಪ್ತ ವಿಶ್ವನಾಥ ಮನೆ ಮೇಲೆ ಸಿಬಿಐ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿರುವ ವಿಶ್ವನಾಥ ನಿವಾಸಕ್ಕೆ ನಾಲ್ಕು ಜನ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಮನೆ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ವಿಶ್ವನಾಥ ಮನೆಯಲ್ಲಿಲ್ಲದ ಕಾರಣ, ಅವರ ಸಹೋದರ ಮಹೇಶ್ರನ್ನು ಸಿಬಿಐ ಅಧಿಕಾರಿಗಳು ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲೇ ಸಿಬಿಐ ಅಧಿಕಾರಿಗಳು ವಿಶ್ವನಾಥ ಸಂಬಂಧಿತ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ದಾಳಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದೆ ಎನ್ನಲಾಗಿದ್ದು, ಪ್ರಕರಣದಲ್ಲಿ ವಿಶ್ವನಾಥ ಪಾತ್ರವಿದೆ ಎಂಬ ಆರೋಪದ ಮೇಲೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಆದರೆ, ಖಚಿತ ಮಾಹಿತಿ ಸಿಕ್ಕಿಲ್ಲ.

Read More

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಬಯೋಕಾನ್ ಕಚೇರಿ ಉದ್ಯೋಗಿ ಕಟ್ಟಡದ ನಾಲ್ಕನೇ ಮಹಡಿಯಿಂದ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. 26 ವರ್ಷದ ಉದ್ಯೋಗಿ ಅನುಂತ ಕುಮಾರ್ ಸಾವನ್ನಪ್ಪಿರುವ ಉದ್ಯೋಗಿ ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ನಾಲ್ಕನೇ ಮಹಡಿಯ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅವರೇ ಬಿದ್ದಿದ್ದಾರೋ? ಅಥವಾ ಬೇರೆಯಾದರೂ ತಳ್ಳಿದ್ದಾರೋ? ಎಂಬುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, ಆಯ ತಪ್ಪಿ ಬಿದ್ದಿದ್ದಾರೋ? ಎಂಬುವುದು ಕೂಡ ಗೊತ್ತಾಗಿಲ್ಲ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಕೂಡ ಸಿಕ್ಕಿಲ್ಲ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫೇಸ್-II ನಲ್ಲಿರುವ ಬಯೋಕಾನ್ ಕಂಪನಿಯ ಆವರಣದಲ್ಲಿ ಈ ಘಟನೆ ನಡೆದಿದೆ. ಅನಂತಕುಮಾರ್ ಬೆಂಗಳೂರಿನ ಬನಶಂಕರಿ ಪ್ರದೇಶದ ನಿವಾಸಿ. ಘಟನೆಯ ನಂತರ, ಕುಮಾರ್ ಅವರ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಈ ಕುರಿತು ಕಂಪನಿ ಪ್ರತಿಕ್ರಿಯೆ ನೀಡಿದ್ದು, “ಬೆಂಗಳೂರಿನಲ್ಲಿ ನಮ್ಮ ಒಬ್ಬ ಉದ್ಯೋಗಿ ನಿಧನರಾದ ಬಗ್ಗೆ…

Read More

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ 2026ರ ಮಾರ್ಚ್ 19ರಂದು ತೆರೆಗೆ ಅಪ್ಪಳಿಸಲಿದೆ. ಈ ಮಧ್ಯೆ ಚಿತ್ರ ತಂಡವು ನಟಿ ನಯನತಾರಾ ಪಾತ್ರದ ಫುಸ್ಟ್ ಲುಕ್ ಬಿಡುಗಡೆ ಮಾಡಿದೆ. ಫಸ್ಟ್ ಲುಕ್ ಬಿಡುಗಡೆಯಾಗಿದ್ದೇ ತಡ ಅಭಿಮಾನಿಗಳಲ್ಲಿ ಚಿತ್ರದ ಕ್ರೇಜ್ ಹೆಚ್ಚಾಗುತ್ತಿದೆ. ಈ ಚಿತ್ರದ ಒಂದೊಂದೇ ಪಾತ್ರಗಳನ್ನು ಪರಿಚಯಿಸುತ್ತಿರುವ ಚಿತ್ರತಂಡ, ನಟಿ ನಯನತಾರಾ ಅವರ ‘ಗಂಗಾ’ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದೆ. ಗಂಗಾ ಪಾತ್ರವು ಟಾಕ್ಸಿಕ್ (Toxic) ಸಿನಿಮಾದಲ್ಲಿನ ಪ್ರಬಲ ಪಾತ್ರ ಎನ್ನಲಾಗುತ್ತಿದೆ. ನಯನತಾರಾ ಅವರು ‘ಟಾಕ್ಸಿಕ್’ ಮೂಲಕ ಕನ್ನಡಕ್ಕೆ ಮರಳಿದ್ದಾರೆ. ಹಿಂದೆ ಉಪೇಂದ್ರ ಅವರ ಸೂಪರ್ ಸಿನಿಮಾದಲ್ಲಿ ನಯನತಾರಾ ನಟಿಸಿದ್ದರು. ಗಂಗಾ ಪಾತ್ರದಲ್ಲಿ ನಯನತಾರಾ ಅದ್ಭುತವಾಗಿ ಕಂಡಿದ್ದಾರೆ. ಭಯರಹಿತ ವ್ಯಕ್ತಿತ್ವ ಈ ಫಸ್ಟ್‌ ಲುಕ್‌ನಲ್ಲಿ ಎದ್ದು ಕಾಣುತ್ತಿದೆ. ಕೈಯಲ್ಲಿ ಗನ್ ಹಿಡಿದು ನೀಡಿರುವ ಪೋಸ್ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. ಸದ್ಯ ನಯನತಾರಾ ಅವರ ಫಸ್ಟ್ ಲುಕ್ ನೋಡಿದ ಅವರ ಅಭಿಮಾನಿಗಳು ಚಿತ್ರ ಬಿಡುಗಡೆಗಾಗಿ…

Read More