Author: Bosstv News Desk

ಬೆಂಗಳೂರು: ಇತ್ತೀಚೆಗೆ ಜನರು ಡಿಜಿಟಲೀಕರಣದ ಭಾಗವಾಗಿದ್ದಾರೆ. ಪ್ರತಿಯೊಬ್ಬರು ಕ್ಯಾಶ್ ಗಿಂತ ಪೋನ್ ಪೇನಂತಹ ಆಪ್ ಗಳನ್ನು ನಂಬಿಕೊಂಡಿದ್ದಾರೆ. ಆದರೆ, ಇವುಗಳನ್ನು ಬಳಸುವ ಮುನ್ನ ಸಾಕಷ್ಟು ಎಚ್ಚರಿಕೆಯ ಅವಶ್ಯಕತೆ ಇರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ 6 ರೂ. ಕೊಡಬೇಕಾಗಿತ್ತು. ಆದರೆ ಅದರ ಬದಲು 60 ಸಾವಿರ ರೂ. ಹಾಕಿ ಫಜೀತಿ ಅನುಭವಿಸಿದ್ದಾನೆ. ಈ ಘಟನೆ ಬಿಎಂಟಿಸಿ ಬಸ್ ನಲ್ಲಿ ನಡೆದಿದ್ದು, ಜ. 14ರಂದು ರಾತ್ರಿ ವೇಳೆ ಬನಶಂಕರಿಯಲ್ಲಿ ನಡೆದಿದೆ. ಆ ವ್ಯಕ್ತಿ ಬನಶಂಕರಿಯಿಂದ ಕದಿರೇನಹಳ್ಳಿಗೆ ಪ್ರಯಾಣ ಮಾಡುತ್ತಿದ್ದರು. 6 ರೂಪಾಯಿ ಬದಲು 60 ಸಾವಿರ ಪೋನ್ ಪೇ ಮಾಡಿದ್ದಾರೆ. ಪ್ರಯಾಣಿಕ 6 ರೂ. ಮಾಡುವ ಬದಲು ತಪ್ಪಿ 60 ಸಾವಿರ ರೂ ಮಾಡಿದ್ದಾರೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ. ಬಸ್ ನಿರ್ವಾಹಕ ಖಾತೆ ಪರಿಶೀಲಿಸಿದಾಗ 62,316 ರೂ ಹಾಕಿರುವುದು ಗೊತ್ತಾಗಿದೆ. ಇದನ್ನು ಕಂಡು ನಿರ್ವಾಹಕರು ಶಾಕ್ ಆಗಿದ್ದಾರೆ. ಆಗ ನಿರ್ವಾಹಕರು, ಹಣವನ್ನು ತಕ್ಷಣದಲ್ಲಿ ನೀಡಲು ಸಾಧ್ಯವಿಲ್ಲ. ಮೊದಲು ನಿರ್ವಾಹಕ ಈ…

Read More

ಬೆಂಗಳೂರು: ಇಂದಿನಿಂದ ರಾಜ್ಯ ಸರ್ಕಾರವು ವಿಶೇಷ ಜಂಟಿ ಅಧಿವೇಶನ ಕರೆದಿತ್ತು. ಆದರೆ ರಾಜ್ಯಪಾಲರು, ಭಾಷಣದ ವೇಳೆ ಸರ್ಕಾರ ಕೊಟ್ಟಿದ್ದನ್ನು ಪೂರ್ತಿ ಓದದೆ ಮೊದಲು, ಕೊನೆ ಪ್ಯಾರಾಗಳನ್ನು ಮಾತ್ರ ಓದಿದ್ದಾರೆಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಸಿಎಂ, ಸ್ಪೀಕರ್, ಎಲ್ಲ ಸದಸ್ಯರಿಗೆ ಜಂಟಿ ಅಧಿವೇಶನಕ್ಕೆ ಸ್ವಾಗತ. ಸರ್ಕಾರ ಆರ್ಥಿಕ, ಸಾಮಾಜಿಕ, ಬೌದ್ಧಿಕ ಅಭಿವೃದ್ಧಿಗೆ ಬದ್ಧವಾಗಿದೆ. ರಾಜ್ಯದ ಆರ್ಥಿಕ, ಸಾಮಾಜಿಕ, ಬೌದ್ಧಿಕ ವಿಕಾಸ 2 ಪಟ್ಟು ಹೆಚ್ಚಿಸಲು ಸರ್ಕಾರ ಬದ್ಧ. ಜೈಹಿಂದ್, ಜೈ ಕರ್ನಾಟಕ ಎಂದು ರಾಜ್ಯಪಾಲರು ಭಾಷಣ ಮುಗಿಸಿದ್ದಾರೆ. ಆದರೆ, ಭಾಷಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಹೆಸರನ್ನೇ ರಾಜ್ಯ ಸರ್ಕಾರ ಬದಲಿಸಿದೆ ಎನ್ನಲಾಗಿದೆ. ‘ರಾಮ್’ ಹೆಸರು ಬಳಸದ ರಾಜ್ಯ ಸರ್ಕಾರ, ವಿಬಿ ಜಿ ರಾಮ್ ಜಿ ಬದಲು ವಿಬಿ ಗ್ರಾಮ್ ಜಿ ಎಂದು ನಮೂದು ಮಾಡಿದೆ. ರಾಜ್ಯಪಾಲರ ಭಾಷಣದ ಪ್ರತಿಯಲ್ಲಿನ ಅಂಶ ವಿಧಾನಸಭೆಯಲ್ಲಿ ದಾಖಲಾಗುತ್ತೆ. ಅಧಿಕೃತ ಯೋಜನೆಯ ಹೆಸರನ್ನೇ ರಾಜ್ಯ ಸರ್ಕಾರ ಬದಲಾಯಿಸಿದೆ ಎನ್ನಲಾಗಿದೆ. ಭಾಷಣ ಓದದ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.…

Read More

ಬೆಂಗಳೂರು: ಕೇರಳ, ತಮಿಳುನಾಡಿನಂತೆ ರಾಜ್ಯದಲ್ಲೂ ರಾಜ್ಯಪಾಲರು ಹಾಗೂ ಸರ್ಕಾರದ ವಿರುದ್ಧ ಸಂಘರ್ಷ ಆರಂಭವಾಗಿದೆ. ಇಂದಿನಿಂದ ನಡೆಯುತ್ತಿರುವ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಒಂದೇ ವಾಕ್ಯದಲ್ಲಿ ತಮ್ಮ ಭಾಷಣ ಮುಗಿಸಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನರೇಗಾ ಯೋಜನೆ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದ್ದರಿಂದಾಗಿ ರಾಜ್ಯ ಸರ್ಕಾರವು ವಿಶೇಷ ಅಧಿವೇಶನ ಕರೆದಿತ್ತು. ಈ ವಿಷಯವಾಗಿ ರಾಜ್ಯಪಾಲರು ಮತ್ತು ಸರ್ಕಾರದ ವಿರುದ್ಧ ಸಂಘರ್ಷ ಶುರುವಾಗಿದೆ. ಅಧಿವೇಶನ ಉದ್ದೇಶಿಸಿ ಮಾತನಾಡಲು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ವಿಧಾನಸಭೆಗೆ ಬುರುವುದೇ ಅನುಮಾನ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ ಮನವೊಲಿಸಿತ್ತು. ಆ ವೇಳೆ ರಾಜ್ಯಪಾಲರು ಕೆಲವು 11 ಪ್ಯಾರಾಗಳನ್ನು ಕೈ ಬಿಡಬೇಕೆಂದು ಸೂಚಿಸಿದ್ದರು. ಆಗ ಸಿಎಂ ಜೊತೆ ಚರ್ಚಿಸಿ, ನಿರ್ಧಾರ ಕೈಗೊಳ್ಳುವುದಾಗಿ ನಿಯೋಗ ತಿಳಿಸಿತ್ತು. ಅದರಂತೆ ರಾಜ್ಯಪಾಲರು ಅಧಿವೇಶನಕ್ಕೆ ಆಗಮಿಸಿ, ಕೇವಲ ಒಂದೆರಡು ವಾಕ್ಯಗಳಲ್ಲಿ ಮಾತನಾಡಿ ಶುಭಾಶಯ ತಿಳಿಸಿದ್ದಾರೆ. ಆದರೆ, ಸರ್ಕಾರ ನೀಡಿರುವ…

Read More

ಗದಗ: ಜಿಲ್ಲೆಯ (Gadag) ಲಕ್ಕುಂಡಿಯಲ್ಲಿ (Lakkundi)ಯಲ್ಲಿ ನಿಧಿ ಸಿಕ್ಕಿದ್ದೇ ಸಿಕ್ಕಿದ್ದು ಅಲ್ಲಿಯ ಜಮೀನುಗಳಿಗೂ ಬಂಗಾರದ ಮೌಲ್ಯ ಬಂದಂತಾಗಿದೆ. ಹೀಗಾಗಿ ಅಲ್ಲಿನ ಭೂಮಿಯೆಲ್ಲ ಈಗ ನಿಧಿಮಯವಾಗುತ್ತಿದೆ. ಅಲ್ಲಿನ ಜನರಿಗೆ ಜಾಕ್ ಪಾಟ್ ಹೊಡೆಯುತ್ತಿದೆ. ಲಕ್ಕುಂಡಿಯಲ್ಲಿ ಮನೆಗೆ ಪಾಯ ಆಗೆಯುತ್ತಿದ್ದ ವೇಳೆ ನಿಧಿ ಸಿಕ್ಕಿದ್ದು, ದೊಡ್ಡ ಸುದ್ದಿಯಾಗಿತ್ತು. ಆನಂತರ ಅಲ್ಲಿ ಉತ್ಖನನ ಕಾರ್ಯ ಆರಂಭವಾಗಿ, ಹಲವಾರು ಪ್ರಾಚ್ಯ ವಸ್ತುಗಳು ಸಿಕ್ಕಿವೆ. ಈಗ ಉತ್ಖನನ ಕಾರ್ಯ ಅಲ್ಲಿ ಮುಂದುವರೆದಿದೆ. ಇದರ ಮಧ್ಯೆ ಲಕ್ಕುಂಡಿಯಲ್ಲಿ ಜಮೀನಿನ ಬೆಲೆ ಎರಡು ವರ್ಷಗಳ ಹಿಂದಿನ ದರಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ ಎಂದು ವರದಿಯಾಗುತ್ತಿದೆ. ಅದು ಗರಿಷ್ಠ ಮಟ್ಟ ಮುಟ್ಟಿದೆ ಎನ್ನಲಾಗುತ್ತಿದೆ. ಕಳೆದ ಎರಡ್ಮೂರು ವರ್ಷಗಳ ಹಿಂದೆ ಲಕ್ಕುಂಡಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಸ್ತೆಯಲ್ಲಿರುವ ಭೂಮಿಯ ಬೆಲೆ ಎಕೆರೆಗೆ 50 ಲಕ್ಷ ರೂ. ಗಳಾಗಿತ್ತು. ಈಗ ಅದರ ಬೆಲೆ ದುಪ್ಪಟ್ಟಾಗಿದೆ ಎಂದು ವರದಿ ಹೇಳುತ್ತಿವೆ. ಇದು ಸಾರ್ವಕಾಲಿಕ ಗರಿಷ್ಠ ದರ ಎನ್ನಲಾಗುತ್ತಿದೆ. ಈ ಭೂಮಿಯ ಮೇಲೆ ಈಗ ರಿಯಲ್ ಎಸ್ಟೇಟ್ ನವರ ಕಣ್ಣು…

Read More

ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈಗಾಗಲೇ ಬಂಗ್ಲೆಗುಡ್ಡೆಯಲ್ಲಿ (Banglegudde) ಸಿಕ್ಕಿರುವ 7 ಅಸ್ಥಿ ಪಂಜರಗಳನ್ನು ವಿಶೇಷ ತನಿಖಾ ತಂಡ (SIT) ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದೆ. ಧರ್ಮಸ್ಥಳದ (Dharmasthala) ಪೊಲೀಸ್ ಠಾಣೆಯಲ್ಲಿ ಕಳೆದ ಕೆಲವು ವರ್ಷಗಳಿಂದ ದಾಖಲಾಗಿರುವ 74 ಮಹಿಳೆಯರ ನಾಪತ್ತೆ ಪ್ರಕರಣಗಳು ಹಾಗೂ ಅನಾಥ ಶವಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸದಾಗಿ ತನಿಖೆ ನಡೆಸುವಂತೆ ಕೋರಿ ಹೊಸ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಧರ್ಮಸ್ಥಳದಲ್ಲಿ ಅತ್ಯಾಚಾರವಾಗಿ ಕೊಲೆಯಾದ ಸೌಜನ್ಯ (Sowjanya) ತಾಯಿ ಕುಸುಮವತಿ ಗೌಡ (Kusumavathi) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ (Supreme Court) ಮಾರ್ಚ್ 23ಕ್ಕೆ ಮುಂದೂಡಿಕೆ ಮಾಡಿದೆ. ಇದರ ಮಧ್ಯೆಯೂ ಈಗ ಬುರುಡೆ ರಹಸ್ಯದ (Dharmasthala Case) ತನಿಖೆಯನ್ನು ಈಗಾಗಲೇ ಎಸ್ ಐಟಿ ಚುರುಕುಗೊಳಿಸಿದ್ದು, ಬಂಗ್ಲೆಗುಡ್ಡೆ ಅರಣ್ಯದಲ್ಲಿ ಉತ್ಖನನ ಕೈಗೊಂಡಿತ್ತು. ಸೆ.17 ರಂದು 5 ಅಸ್ಥಿಪಂಜರ, ಸೆ.18 ರಂದು 2 ಅಸ್ಥಿಪಂಜರ ಪತ್ತೆಯಾಗಿತ್ತು. ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿದ್ದ ಅಸ್ಥಿಪಂಜರಗಳು ಸಿಕ್ಕಿದ್ದವು. ಈ…

Read More

ಬೆಂಗಳೂರು: ವ್ಯಕ್ತಿಯೋರ್ವ ಲೇಡಿ ಫಿಟ್ನೆಸ್ ಇನ್‌ಫ್ಲೂಯೆನ್ಸರ್‌ಗೆ ಅಶ್ಲೀಲ ಮೆಸೆಜ್ ಮಾಡಿ ಮಾನಸಿಕವಾಗಿ ಹಿಂಸೆ ಮಾಡಿ ಹರಿಯಾಣದಿಂದ ಕರ್ನಾಟಕಕ್ಕೆ ಬಂದು ಪೊಲೀಸರ ಅತಿಥಿಯಾಗಿದ್ದಾನೆ. ಪಾಗಲ್ ಪ್ರೇಮಿಯನ್ನು ಹರಿಯಾಣ ಮೂಲದ ಸುಧೀರ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಯುವತಿಗೆ ಅಶ್ಲೀಲ ಮೆಸೆಜ್ ಮಾಡಿ, ಕಿರುಕುಳ ನೀಡಿದ್ದಾನೆ. ಅಲ್ಲದೇ, ದೂರದ ಹರಿಯಾಣದಿಂದ ಕರ್ನಾಟಕಕ್ಕೆ ಬಂದಿದ್ದಾನೆ. ಸಂತ್ರಸ್ತ ಯುವತಿ ಬೆಂಗಳೂರಲ್ಲಿ ಲೇಡಿ ಫಿಟ್ನೆಸ್, ನ್ಯೂಟ್ರೀಷಿಯನ್ ಇನ್‌ಫ್ಲೂಯೆನ್ಸರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಯುವತಿಗೆ ಬಂಧಿತ ಆರೋಪಿ ಇನ್‌ಸ್ಟಾ ಮೂಲಕ ಲೈಂಗಿಕವಾಗಿ ಪ್ರಚೋದಿಸುವಂತೆ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಮೊದಲು ಇನ್‌ಸ್ಟಾದಲ್ಲಿ ಯುವತಿಗೆ ಅಶ್ಲೀಲ ಮೆಸೆಜ್ ಮಾಡಿ ಹಿಂಸೆ ನೀಡಿದ್ದಾನೆ. ನಂತರ ವಾಟ್ಸಪ್ ನಂಬರ್ ಪಡೆದು ಅದರಲ್ಲೂ ಅಶ್ಲಿಲ ಮೆಸೆಜ್ ಮಾಡಿದ್ದಾನೆ. ಯುವತಿಯನ್ನು ಹುಡುಕಿಕೊಂಡು ಹರಿಯಾಣದಿಂದ ಕರ್ನಾಟಕಕ್ಕೆ ಬಂದಿದ್ದ. ಬೆಂಗಳೂರಿಗೆ ಬಂದು ಜಿಮ್ ಸಹೋದ್ಯೋಗಿಗಳ ಬಳಿ ವಿಚಾರಿಸಿದ್ದ. ವಿಚಾರ ತಿಳಿಯುತ್ತಿದ್ದಂತೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ದೂರಿನ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗ ಮಹಿಳಾ ಠಾಣೆಯ ಪೊಲೀಸರು ಆರೋಪಿಯನ್ನು…

Read More

ಬೆಂಗಳೂರು: ಮಹಿಳೆಯರ (Women’s) ಒಳ ಉಡುಪು ಕದ್ದು ವಿಕೃತ ಮೆರೆಯುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಬ್ಬಗೋಡೆಯ ವಿದ್ಯಾನಗರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೇರಳ (Kerala) ಮೂಲದ ಅಮಲ್ (23) ಬಂಧಿತ ಆರೋಪಿ ಎನ್ನಲಾಗಿದೆ. ಬಂಧಿತ ಆರೋಪಿಯು ಮಹಿಳೆಯರ ಒಳ ಉಡುಪುಗಳನ್ನು ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಮಹಡಿ, ಮನೆಯಾಚೆ ಒಣಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ಕದ್ದು ಅವುಗಳನ್ನು ತಾನೂ ಧರಿಸುತ್ತಿದ್ದ. ಆನಂತರ ಅವುಗಳನ್ನು ಹಾಕಿಕೊಂಡು ಫೋಟೋ ತೆಗೆದುಕೊಂಡು ಆರೋಪಿ ವಿಕೃತಿ ಮೆರೆಯುತ್ತಿದ್ದ ಎನ್ನಲಾಗಿದೆ.ಆರೋಪಿಯು ಮನೆಯ ಹೊರಗೆ ಹಾಗೂ ಮಹಡಿಯ ಮೇಲೆ ಒಳ ಉಡುಪುಗಳನ್ನು ಹಾಕಿದ್ದನ್ನು ದೂರದಿಂದಲೇ ಪರಿಶೀಲನೆ ಮಾಡಿ ಆನಂತರ ಯಾರೂ ಇಲ್ಲದ ಸಂದರ್ಭದಲ್ಲಿ ನುಗ್ಗಿ ಕದಿಯುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ. ಕದ್ದ ಒಳ ಉಡುಪುಗಳನ್ನು ಧರಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿರುವುದು ಮೊಬೈಲ್ನಲ್ಲಿ ಪತ್ತೆಯಾಗಿವೆ. ಅಲ್ಲದೇ, ಆರೋಪಿ ತಾನಿದ್ದ ಮನೆಯಲ್ಲೂ ಮಹಿಳೆಯರ ಒಳ ಉಡುಪು ಸಂಗ್ರಹಿಸಿಟ್ಟುಕೊಂಡಿರುವುದು ಕಂಡು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ…

Read More

ಬಳ್ಳಾರಿ: ಬ್ಯಾನರ್ ಗಲಾಟೆ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ದೊಡ್ಡ ವಾಕ್ಸಮರಕ್ಕೂ ಅದು ಕಾರಣವಾಗಿದೆ. ಈಗಾಗಲೇ ಈ ಘಟನೆ ಓರ್ವ ಕಾರ್ಯಕರ್ತನ ಬಲಿ ಪಡೆದಿದ್ದು, ಈಗ ರಾಜಕಾರಣಿಗಳು ಹೆಣದ ಮೇಲೆ ರಾಜಕೀಯ ಆರಂಭಿಸಿದ್ದಾರೆ. ಈಗ ಗಲಾಟೆ ವಿಚಾರವಾಗಿ ಶಾಸಕ ನಾರಾ ಭರತ್ ರೆಡ್ಡಿ (Nara Bharath Reddy) ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಶಾಸಕ ಜನಾರ್ದನ್ ರೆಡ್ಡಿ ತಮ್ಮ ಕೊಲೆಗೆ ಯತ್ನಿಸಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ. ಇನ್ನು ಬಿಜೆಪಿ ಕಾರ್ಯಕರ್ತ ನಾಗರಾಜ್ ಅವರು ಅಕ್ರಮ ಪ್ರವೇಶ, ಜಾತಿ ನಿಂದನೆ, ಕೊಲೆ ಯತ್ನ ಸೇರಿದಂತೆ ಇನ್ನಿತರ ವಿಷಯಗಳ ಆರೋಪ ಮಾಡಿ ದೂರು ಸಲ್ಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸಮ್ಮುಖದಲ್ಲಿ ಗಂಗಾವತಿ (Gangavathi) ಶಾಸಕ ಜನಾರ್ದನ ರೆಡ್ಡಿ (Janardhana Reddy) ಹಾಗೂ ಬಿಜೆಪಿ ಕಾರ್ಯಕರ್ತ ನಾಗರಾಜ್ ಬ್ರೂಸ್‌ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಎಸ್ಪಿ ರವಿಕುಮಾರ್ ಹಾಗೂ ಬ್ರೂಸ್‌ಪೇಟೆ ಠಾಣೆ ಪೊಲೀಸರು ಜನಾರ್ದನ ರೆಡ್ಡಿ ಮನೆಗೆ…

Read More

ಕಿಚ್ಚ ಸುದೀಪ್ ಅಭಿನಯದ ಮಾರ್ಕ್ (Mark) ಸಿನಿಮಾ ತೆರೆಯ ಮೇಲೆ ದೊಡ್ಡ ಸದ್ದು ಮಾಡುತ್ತಿದೆ. ಕನ್ನಡದಲ್ಲಿ ಈಗಾಗಲೇ ಅಬ್ಬರಿಸುತ್ತಿರುವ ಮಾರ್ಕ್ ಚಿತ್ರ ತಮಿಳುನಾಡಿನಲ್ಲಿ ಜ. 1ರಂದು ಬಿಡುಗಡೆಯಾಗಿತ್ತು. ಈಗ ಅಲ್ಲಿ ಕೂಡ ಭಾರೀ ಸದ್ದು ಮಾಡುತ್ತಿದೆ. ತಮಿಳಿಗರು ಕಿಚ್ಚನ ಅಭಿನಯವನ್ನು ಭಾರೀ ಇಷ್ಟಪಡುತ್ತಿದ್ದಾರೆ. ತಮಿಳು ಸಿನಿಮಾ ರೀತಿಯೇ ಫೀಲ್ ಆಗುತ್ತಿದೆ ಅಂತಿದ್ದಾರೆ. ಈ ನಿಟ್ಟಿನಲ್ಲಿ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮಾರ್ಕ್’ ಸಿನಿಮಾದಲ್ಲಿ ಅನೇಕ ತಮಿಳು ಕಲಾವಿದರು ಅಭಿನಯಿಸಿದ್ದಾರೆ. ನವೀನ್ ಚಂದ್ರ, ಯೋಗಿ ಬಾಬು ಸೇರಿದಂತೆ ಬಹುತೇಕರು ತಮಿಳಿಗರು. ನಿರ್ದೇಶಕ ವಿಜಯ್ ಕಾರ್ತಿಕೇಯ ಕೂಡ ತಮಿಳಿನವರೇ. ಸುದೀಪ್ ಕೂಡ ತಮ್ಮ ಪಾತ್ರ ತಮಿಳಿನಲ್ಲಿ ಡಬ್ ಮಾಡಿದ್ದಾರೆ. ಹೀಗಾಗಿ ಅಲ್ಲಿನ ಜನರು ಈ ಚಿತ್ರವನ್ನು ತುಂಬಾ ಇಷ್ಟ ಪಡುತ್ತಿದ್ದಾರೆ. ‘ಮಾರ್ಕ್’ ಚಿತ್ರಕ್ಕೆ ತಮಿಳಿನಲ್ಲಿ 60ಕ್ಕೂ ಹೆಚ್ಚು ಶೋಗಳನ್ನು ಕಂಡಿವೆ. ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಂಕ್ರಾಂತಿ ಪ್ರಯುಕ್ತ ಜನವರಿ 14ರಂದು ರಿಲೀಸ್ ಆಗಲಿದೆ. ಅಲ್ಲಿವರೆಗೆ ‘ಮಾರ್ಕ್’ ಚಿತ್ರ ಆ…

Read More

ತಿರುಪತಿ: ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ದೊಡ್ಡ ಭದ್ರತಾ ಲೋಪ ಬೆಳಕಿಗೆ ಬಂದಿದ್ದು, ಕುಡುಕನೋರ್ವ ಗೋಪುರ ಎರಿ ಅವಾಂತರ ಸೃಷ್ಟಿಸಿದ್ದಾನೆ. ತಿರುಪತಿ ಗೋವಿಂದನ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಕುಡುಕ ಮದ್ಯದ ನಶೆಯಲ್ಲಿ ಕಂಪೌಂಡ್ ಹಾರಿ ಒಳಗೆ ಹೋಗಿದ್ದಲ್ಲದೆ ಗೋಪುರ ಏರಿ ಕುಳಿತಿದ್ದಾನೆ. ದೇವಸ್ಥಾನದಲ್ಲಿ ಏಕಾಂತ ಸೇವೆ ಮುಗಿದ ನಂತರ ಈ ಘಟನೆ ನಡೆದಿದೆ. ಕಂಪೌಂಡ್ ಹಾರಿ ಒಳಗೆ ಹೋಗಿ ಆತ ಈ ಕೃತ್ಯ ಎಸಗಿದ್ದಾನೆ. ಏಕಾಏಕಿ ಕುಡುಕನ ಅವಾಂತರ ಕಣ್ಣಿಗೆ ಬೀಳುತ್ತಿದ್ದಂತೆ ಅಲ್ಲಿದ್ದವರು ಕ್ಷಣಕಾಲ ಭಯಭೀತರಾಗಿದ್ದರು. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಮೂರ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಕುಡುಕನನ್ನು ನಿಜಾಮಾಬಾದ್ ಜಿಲ್ಲೆಯ ಕೂರ್ಮಾವಾಡಾದ ಪೆದ್ದ ಮಲ್ಲ ರೆಡ್ಡಿ ಕಾಲೋನಿಯ ನಿವಾಸಿ ತಿರುಪತಿ ಎನ್ನಲಾಗಿದೆ. ಸದ್ಯ ಈ ಕುರಿತು ತನಿಖೆ ನಡೆಯುತ್ತಿದ್ದು, ಆತ ಗೋಪುರ ಹತ್ತಿರುವುದು ನಶೆಯ ಏಟಿನಲ್ಲೋ ಅಥವಾ ಬೇರೆ ಕಾರಣಕ್ಕೋ ಎನ್ನುವುದು ತಿಳಿಯಲಿದೆ.

Read More