Author: Bosstv News Desk

ಬೆಂಗಳೂರು: ಕೋಗಿಲು ಲೇಔಟ್ ನಲ್ಲಿ ಅಕ್ರಮ ಮನೆ ತೆರವು ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದೆ. ಸಾಕಷ್ಟು ವಿವಾದಗಳ ಬಳಿಕ ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಸಂತ್ರಸ್ತರಿಗೆ ನಿವೇಶನ ನೀಡುವ ಭರವಸೆ ನೀಡಿದ್ದರು. ಈಗ ಜಮೀರ್ (Zameer Ahmed), ಕರ್ನಾಟಕದವರಿಗೆ ಮಾತ್ರ ನೀಡುತ್ತೇವೆ ಎಂದಿದ್ದಾರೆ. ಕೋಗಿಲು ಲೇಔಟ್ (Kogilu Layout) ಅಕ್ರಮ ಮನೆ ತೆರವು ವಿಚಾರಕ್ಕೆ ಪಾಕಿಸ್ತಾನ ಎಂಟ್ರಿಗೆ ಸಚಿವ ಜಮೀರ್ ಕಿಡಿಕಾರಿದ್ದಾರೆ. ಪಾಕಿಸ್ತಾನಕ್ಕೂ ಈ ವಿಷಯಕ್ಕೂ ಏನು ಸಂಬಂಧ? ಪಾಕಿಸ್ತಾನಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮ ಬಗ್ಗೆ ಹೇಳೋಕೆ ಅರ‍್ಯಾರು? ನಮ್ಮ ದೇಶದಲ್ಲಿ ನಾವು ಇದ್ದೇವೆ. ಮುಸ್ಲಿಮರನ್ನ ನೋಡಿಕೊಳ್ಳೋಕೆ, ಅವರು ಯಾರು ನಮಗೆ ಹೇಳೋಕೆ ಎಂದು ಕಿಡಿಕಾರಿದ್ದಾರೆ. ಎಲ್ಲಾ ವಿವರ ಕೊಡ್ತೀನಿ. ಡಾಕ್ಯುಮೆಂಟ್ ಪರಿಶೀಲನೆ ಮಾಡಿ ಅಂತ ಸಿಎಂ, ಡಿಸಿಎಂ ಅವರು ಸೂಚನೆ ನೀಡಿದ್ದಾರೆ. ನಮ್ಮ ಕರ್ನಾಟಕದವರು ಇದ್ದರೆ ಮಾತ್ರ ಮನೆ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ. ಆಚೆಯಿಂದ ಬಂದವರಿಗೆ ನಾವು ಮನೆ ಕೊಡೊಲ್ಲ ಎಂದು ಹೇಳಿದ್ದಾರೆ. ವೇಣುಗೋಪಾಲ್ ಹಸ್ತಕ್ಷೇಪ ಏನೂ ಇಲ್ಲ. ವೇಣುಗೋಪಾಲ್…

Read More

ಬೆಂಗಳೂರು: ಮೊಬೈಲ್ ಫೋನ್ ನೋಡಿ ಲೈಂಗಿಕ ಕ್ರಿಕೆಯ ಒತ್ತಾಯ ಮಾಡುತ್ತಿದ್ದ ಪತಿಯ ಕಾಟಕ್ಕೆ ಪತ್ನಿ ಬೇಸತ್ತು ಹೋಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆಯೊಂದು ನಡೆದಿದೆ. ಒಂದೇ ಕಂಪನಿಯಲ್ಲಿ ಎಚ್ ಆರ್ ಆಗಿದ್ದ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದೇ ವರ್ಷದ ಸೆಪ್ಟೆಂಬರ್ ನಲ್ಲಿ ಇಬ್ಬರು ಮದುವೆಯಾಗಿದ್ದರು. ಆದರೆ, ಈಗ ಪತ್ನಿ, ಪತಿಯ ಕಾಟಕ್ಕೆ ಬೆಚ್ಚಿ ಬಿದ್ದಿದ್ದಾಳೆ. ಮದುವೆಯಾಗಿ ಕೆಲ ದಿನಗಳು ಚೆನ್ನಾಗಿಯೇ ಇದ್ದ ಪತಿ ಮಂಜುನಾಥ್ ಈಗ ಸೈಕೋ ರೀತಿ ವರ್ತಿಸುತ್ತಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುವ ಈತ, ಮನೆಯಲ್ಲಿ ಎಲ್ಲರ ಮುಂದೆಯೇ ಬೆತ್ತಲೆಯಾಗಿ ಓಡಾಡುತ್ತಾನೆ. ಅತ್ತೆ ಮಾವನ ಮುಂದೆಯೇ ಬಟ್ಟೆಯಿಲ್ಲದೆ ತಿರುಗಾಡುತ್ತಾನಂತೆ. ಅಲ್ಲದೇ, ಪ್ಯಾಸೇಜ್ ಗೆ ಹೋಗಿ ನಿಂತು ಕೂಡ ಅಕ್ಕಪಕ್ಕದವರಿಗೆ ಮುಜುಗುರ ಸೃಷ್ಟಿ ಮಾಡುತ್ತಾನೆ ಎಂದು ಆರೋಪಿಸಿರುವ ಪತ್ನಿ ಈಗ ಪೊಲೀಸರ ಮೊರೆ ಹೋಗಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆಕೊಟ್ಟಿದ್ದ ಗಂಡ ಮಂಜುನಾಥ್ ಮನೆ ಬಿಟ್ಟು ಹೋಗಿದ್ದ.…

Read More

ಚಿತ್ರದುರ್ಗ: ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಬೈಕ್ ನಿಂದ ಬಿದ್ದು ಎಎಸ್ ಐ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೈಕಿಗೆ ಅಡ್ಡಬಂದ‌ ನಾಯಿಯನ್ನು ತಪ್ಪಿಸಲು ಮುಂದಾಗಿ ಎಎಸ್‌ಐ ಬೈಕ್‌ನಿಂದ ಬಿದ್ದಿದ್ದಾರೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಕ್ರಾಸ್ ಬಳಿ ನಡೆದಿದೆ. ಪರಶರಾಂಪುರ ಪೊಲೀಸ್ ಠಾಣೆಯ ಎಎಸ್‌ಐ ಮಂಜುನಾಥ್ (50) ಸಾವನ್ನಪ್ಪಿರುವ ಎಎಸ್ ಐ ಎನ್ನಲಾಗಿದೆ. ಇವರು ಐಮಂಗಲ ಪೊಲೀಸ್ ತರಬೇತಿ ಶಾಲೆಯಿಂದ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್ ನಲ್ಲಿ ಮತ್ತೋರ್ವ ಪೊಲೀಸ್ ಪೇದೆ ಇದ್ದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ಪೇದೆಯನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ರಾಯಚೂರು: ಮಂತ್ರಾಲಯದ (Mantaralaya) ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಗುರುಗಳು ಕೋಟ್ಯಾಧೀಶರಾಗಿದ್ದಾರೆ. ಇತ್ತೀಚೆಗೆ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ಹೋದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಕಳೆದ 20 ದಿನಗಳಲ್ಲಿ ಮಂತ್ರಾಲಯದಲ್ಲಿ 3.73 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಡಿಸೆಂಬರ್ ತಿಂಗಳಲ್ಲಿ ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ (Guru Raghavendra Swamy Mutt) ಲಕ್ಷಾಂತರ ಭಕ್ತರು ಭೇಟಿ ನೀಡಿದ್ದರು. ಹೀಗಾಗಿ 20 ದಿನಗಳಲ್ಲಿ 3,73,66,587 ರೂ. ಕಾಣಿಕೆ ಸಂಗ್ರಹವಾಗಿದೆ. ಈ ಪೈಕಿ ಸಂಗ್ರಹವಾದ ಕಾಣಿಕೆಯಲ್ಲಿ 3,62,69,247 ರೂ. ಕರೆನ್ಸಿ ನೋಟುಗಳು ಹಾಗೂ 10,97,340 ರೂ. ನಾಣ್ಯಗಳು ಸಂಗ್ರಹವಾಗಿವೆ. ಅಲ್ಲದೇ, 87 ಗ್ರಾಂ ಚಿನ್ನ, 910 ಗ್ರಾಂ ಬೆಳ್ಳಿ ಕೂಡ ಕಾಣಿಕೆ ರೂಪದಲ್ಲಿ ಬಂದಿವೆ.

Read More

ಕೊಪ್ಫಳ: ಪ್ರಸಿದ್ಧ ಹುಲಿಗೆಮ್ಮ (Huligemma Temple) ದೇವಸ್ಥಾನದಲ್ಲಿ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿರುವ ಘಟನೆ ನಡೆದಿದೆ. ದೇವಸ್ಥಾನದ ಆವರಣದಲ್ಲಿ ಶಿಶು ಬಿಸಾಡಿ ಹೋಗಲಾಗಿದೆ. ಶಿಶುವಿನ ದೇಹ ಹುಳುಗಳಿಂದ ತುಂಬಿತ್ತು. ಮಗು ಅಳುವ ಶಬ್ಧ ಕೇಳಿ ಭಕ್ತರು ಗಮನಿಸಿ ಹೋಂ ಗಾರ್ಡ್ ಸಿಬ್ಬಂದಿಗೆ ಹೇಳಿದ್ದಾರೆ. ಶಿಶುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಹುಲಿಗೆಮ್ಮೆ ದೇವಸ್ಥಾನಕ್ಕೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುತ್ತಾರೆ. ಜಾತ್ರೆ ಸಮಯದಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ಇಂತಹ ಪವಿತ್ರ ಸ್ಥಳದಲ್ಲಿ ನವಜಾತ ಶಿಶು ಬಿಸಾಡಿ ಹೋಗಿದ್ದು, ದೊಡ್ಡ ಆಘಾತಕ್ಕೆ ಕಾರಣವಾಗಿದೆ. ಸದ್ಯ ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈದ್ಯರು ಹೇಳಿದಂತೆ, ಶಿಶುವು ತಡರಾತ್ರಿ ಜನಿಸಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದರೆ ಸಕಾಲಿಕ ಚಿಕಿತ್ಸೆಯಿಂದ ಪ್ರಾಣಾಪಾಯದಿಂದ ಪಾರಾಗಿದೆ.

Read More

ನವದೆಹಲಿ: ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ಬಹುಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 25 ವರ್ಷದ ರೈಹಾನ್ ವಾದ್ರಾ ತನ್ನ ಬಹುಕಾಲದ ಗೆಳತಿ ಅವಿವಾ ಬೇಗ್‌ ಜೊತೆ ಈಗ ಮದುವೆಯಾಗಲು ಸಿದ್ಧರಾಗಿದ್ದಾರೆ. ಈ ಮದುವೆಗೆ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಅವಿವಾ ಬೇಗ್ ಮತ್ತು ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದ್ದು, ಪರಸ್ಪರ ಮದುವೆಗೆ ಸಿದ್ಧತೆ ನಡೆಸಿವೆ ಎಂದು ತಿಳಿದು ಬಂದಿದೆ. ರೈಹಾನ್ ವಾದ್ರಾ ಒಬ್ಬ ದೃಶ್ಯ ಕಲಾವಿದ. 10 ವರ್ಷಗಳಿಂದ ತಮ್ಮ ಕ್ಯಾಮೆರಾ ಲೆನ್ಸ್ ಮೂಲಕ ಕೆಲಸ ಮಾಡುತ್ತಿದ್ದಾರೆ. ಮುಂಬೈನ ಕೊಲಾಬಾದಲ್ಲಿರುವ ಸಮಕಾಲೀನ ಕಲಾ ಗ್ಯಾಲರಿಯಾದ ಎಪಿಆರ್‌ಇ ಆರ್ಟ್ ಹೌಸ್‌ನಲ್ಲಿ ಅವರ ಜೀವನ ಚರಿತ್ರೆ ಲಭ್ಯವಿದೆ. ಅವರ ಪೋರ್ಟ್‌ಫೋಲಿಯೊ ವನ್ಯಜೀವಿ ಸೇರಿದಂತೆ ಹಲವು ವಲಯಗಳನ್ನು ಒಳಗೊಂಡಿದೆ. ಅವಿವಾ ಬೇಗ್ ಕೂಡ ಛಾಯಾಗ್ರಾಹಕಿ ಮತ್ತು ನಿರ್ಮಾಪಕಿ ಎಂದು ತಿಳಿದು ಬಂದಿದೆ.

Read More

ಬೀದರ್: ಉದ್ಯಮಿಯಿಂದ ದುಡ್ಡು ಪಡೆದು ಶರಣು ಸಲಗರ್ ಉಲ್ಟಾ ಹೊಡೆದ್ರಾ ಎಂಬ ಅನುಮಾನವೊಂದು ವ್ಯಕ್ತವಾಗುತ್ತಿದೆ. 99 ಲಕ್ಷ ರೂ. ಸಾಲ ಪಡೆದು ಹಿಂತಿರುಗಿಸದ ಆರೋಪದ ಮೇಲೆ ಶಾಸಕ ಶರಣು ಸಲಗರ್ (Sharanu Salagar) ವಿರುದ್ಧ ಈಗಾಗಲೇ ಎಫ್ ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಶಾಸಕರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಉದ್ಯಮಿ ಸಂಜು ಸುಗುರೆ ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಶರಣು ಸಲಗರ್ ನೀಡಿದ ಬೆನ್ನಲ್ಲೇ ಇದೀಗ ಆಡಿಯೋ ವೈರಲ್ ಆಗಿದೆ. ಸಲಗರ್ ಮನೆಗೆ ಉದ್ಯಮಿ ಸಂಜು ಅವರ ಪತ್ನಿ ಹಾಗೂ ಮಗ ಸಲಗರ್ ಅವರ ಮನೆಗೆ ಹೋದಾಗ ನಡೆದ ಸಂಭಾಷಣೆಯ ಆಡಿಯೋ ಇದು ಎನ್ನಲಾಗಿದೆ. ನೀವು ಈ ಬಗ್ಗೆ ಹೇಳುವ ಹಾಗಿಲ್ಲ, ಇದರಲ್ಲಿ ಮಧ್ಯೆ ಬರುವಂತಿಲ್ಲ. ದುಡ್ಡು ಕೊಟ್ಟಿದ್ದು ಅವನು, ತೆಗೆದುಕೊಂಡವನು ನಾನು ಎನ್ನುತ್ತಾರೆ. ಆಗ ಸಂಜು ಅವರ ಪತ್ನಿ ಮಾತನಾಡಿ, ನೀವು ಫೋನ್ ರಿಸೀವ್ ಮಾಡುತ್ತಿಲ್ಲ, ಅದಕ್ಕೆ ನಾವು ಕೇಳಲು ಬಂದಿದ್ದೇವೆ. ಇಲ್ಲದಿದ್ದರೆ ನಾವು ಬರುತ್ತಿರಲಿಲ್ಲ. ನೀವು…

Read More

ಬೆಂಗಳೂರು: ಇಲ್ಲಿಯವರೆಗೆ ಜನರು ಉಡ್ತಾ ಪಂಜಾಬ್ ಅನ್ನೋದನ್ನು ಕೇಳಿದ್ದರು. ಆದರೆ, ಈಗ ಉಡ್ತಾ ಕರ್ನಾಟಕ ಅನ್ನೋವಂತಾಗಿದೆ. ಪಂಜಾಬ್ ರಾಜ್ಯದಲ್ಲಿ ಡ್ರಗ್ ಮಾಫಿಯಾ ಯಾವ ರೀತಿ ಯುವ ಜನರ ಬದುಕನ್ನು ಹಾಳು ಮಾಡುತ್ತಿದೆ ಎನ್ನೋದನ್ನು ಉಡ್ತಾ ಪಂಜಾಬ್ ಚಿತ್ರ ತೋರಿಸಿತ್ತು. ಈಗ ಆ ಪರಿಸ್ಥಿತಿ ಕರ್ನಾಟಕಕ್ಕೂ ಬಂದೋದಗಿದೆ. ರಾಜ್ಯದಲ್ಲೂ ಬೃಹತ್ ಡ್ರಗ್ಸ್ ಮಾಫಿಯಾ ಕಾರ್ಯಾಚರಣೆ ಮಾಡುತ್ತಿದೆ. ದೇಶ, ವಿದೇಶದ ಯುವ ಜನರನ್ನು ಆಕರ್ಷಣೆ ಮಾಡುವ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟ, ಉತ್ಪಾದನಾ ಜಾಲ ವ್ಯವಸ್ಥಿತವಾಗಿ ಕಾರ್ಯರೂಪಗೊಂಡಿದ್ದು, ದೊಡ್ಡ ಆತಂಕಕ್ಕೆ ಕಾರಣವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಸೆರೆಯಾಗಿದ್ದ ಡ್ರಗ್ ಪೆಡ್ಲರ್ ತನಿಖೆಯ ಸಂದರ್ಭದಲ್ಲಿ ನೀಡಿದ್ದ ಮಾಹಿತಿ ಈಗ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದೆ. ಪೆಡ್ಲರ್ ಮಾಹಿತಿಯ ಆಧಾರದಲ್ಲಿ ಮಹಾರಾಷ್ಟ್ರ ಪೊಲೀಸರು ಮೈಸೂರು ಹೊರ ವಲಯದ ರಿಂಗ್ ರಸ್ತೆಯ ಬಳಿ ಇದ್ದ ಡ್ರಗ್ಸ್ ತಯಾರಕಾ ಘಟಕದ ಮೇಲೆ ದಾಳಿ ನಡೆಸಿ ಕೋಟ್ಯಾಂತರ ರೂ. ಮೌಲ್ಯದ ಡ್ರಗ್ ವಶಕ್ಕೆ ಪಡೆದಿದ್ದಾರೆ. ದೇಶ, ವಿದೇಶಕ್ಕೆ ಡ್ರಗ್ಸ್ ಪೂರೈಕೆ ಆಗುತ್ತಿತ್ತು. ಆದರೂ ಇದರ…

Read More

ನಟಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ (vijay devarakonda rashmika mandanna) ಮದುವೆ (Marriage) ಬಗ್ಗೆ ಅಭಿಮಾನಿಗಳು ಕಾತುರತಿಂದ ಕಾಯುತ್ತಿದ್ದಾರೆ. ಈ ಕಾತುರತೆಗೆ ಈಗ ಉತ್ತರ ಸಿಕ್ಕಿದ್ದು, ಕೆಲವೇ ದಿನಗಳಲ್ಲಿ ಈ ಜೋಡಿ ಹಸೆಮಣೆ ಏರಲಿದೆ. ಈ ಜೋಡಿ ಅಕ್ಟೋಬರ್ ನಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಈಗ ಮುಂದಿನ ವರ್ಷದ ಫೆಬ್ರವರಿ 26ರಂದು ವಿವಾಹವಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಭರದ ಸಿದ್ಧತೆ ಕೂಡ ನಡೆಯುತ್ತಿದೆ ಎನ್ನಲಾಗಿದೆ. ಗೀತಾ ಗೋವಿಂದಂ ಜೋಡಿ ಶೀಘ್ರದಲ್ಲೇ ನಿಜ ಜೀವನದಲ್ಲಿಯೂ ಸತಿ ಪತಿ ಆಗಲಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಈಗಾಗಲೇ ಐತಿಹಾಸಿಕ ಅರಮನೆಯನ್ನು ಬುಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರಶ್ಮಿಕಾ ಮತ್ತು ವಿಜಯ್ ಅವರ ನಿಶ್ಚಿತಾರ್ಥವು ತುಂಬಾ ಸರಳವಾಗಿ ಮತ್ತು ಯಾರಿಗೂ ತಿಳಿಯದಂತೆ ನಡೆಯಿತು. ನಿಶ್ಚಿತಾರ್ಥದಂತೆಯೇ, ವಿವಾಹವು ಸಹ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಬಹಳ ಖಾಸಗಿಯಾಗಿರುತ್ತದೆ. ಹೈದರಾಬಾದ್‌ಗೆ ಹಿಂದಿರುಗಿದ ನಂತರ ಅವರು ಸ್ನೇಹಿತರು, ಸಂಬಂಧಿಗಳಿಗಾಗಿ ಆರತಕ್ಷತೆಯನ್ನು ಆಯೋಜಿಸಬಹುದು ಎನ್ನಲಾಗುತ್ತಿದೆ. “ನನ್ನ ಸಂಗಾತಿ…

Read More

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳದಲ್ಲಿ ತಾಯಿ–ಮಗ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪರಪುರುಷನ ಸಹವಾಸವೇ ಆಕೆಗೆ ಮುಳುವುಗಾದಿದ್ದು, ಸಂಭಾಷಣೆ, ವಿಡಿಯೋ ಮುಂದಿಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಲಾಗುತ್ತಿತ್ತು ಎಂಬ ಆರೋಪ ಈಗ ಕೇಳಿ ಬಂದಿದೆ. ಇದರಿಂದಾಗಿ ಮನನೊಂದು ಮಹಿಳೆ ತನ್ನ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿರುವುದಾಗಿ ಕೇಳಿ ಬಂದಿದೆ. ಹಂಸಲೇಖ (32) ಹಾಗೂ ಆಕೆಯ 8 ವರ್ಷದ ಪುತ್ರ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡವರು. ಮಲ್ಲಿಕಾರ್ಜುನ ಎಂಬಾತನೊಂದಿಗೆ ಹಂಸಲೇಖ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ. ಆತ ತನ್ನ ಬಳಿ ಇರುವ ಸಂಭಾಷಣೆಗಳು ಮತ್ತು ವಿಡಿಯೋಗಳನ್ನು ಆಧಾರವಾಗಿ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಹಂಸಲೇಖ, ಮಗನೊಂದಿಗೆ ಮನೆ ತೊರೆದು ಶುಕ್ರವಾರ ಸ್ನೇಹಿತೆಯ ಮನೆಯಲ್ಲಿ ಉಳಿದುಕೊಂಡಿದ್ದಳು. ಆದರೆ, ಶುಕ್ರವಾರ ಮಗುವಿನೊಂದಿಗೆ ಕೆರೆ ಹಾರಿದ್ದಾಳೆ. ಪ್ರಕರಣದ ಹಿನ್ನೆಲೆ ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಬ್ಲ್ಯಾಕ್‌ಮೇಲ್ ಆರೋಪದ ಕುರಿತು ತನಿಖೆ ಆರಂಭಿಸಿದ್ದಾರೆ. ಈ ಕುರಿತು ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬಿಸಿದ್ದಾರೆ.

Read More