Subscribe to Updates
Get the latest creative news from FooBar about art, design and business.
Author: Bosstv News Desk
ವಿಶಾಖಪಟ್ಟಣ: ಭಾರತೀಯ ಕ್ರಿಕೆಟ್ ತಂಡಕ್ಕೆ ಇದೊಂದು ಗೆಲುವು ಬರೋಬ್ಬರಿ ಎರಡು ವರ್ಷಗಳ ನಂತರ ಸಿಕ್ಕಿದ್ದು, ಈಗ ಅದೊಂದು ಕಳವಳ ದೂರಾಗಿದೆ. ಇದೇನಪ್ಪಾ! ಕ್ರಿಕೆಟ್ ತಂಡ ಸೋಲಿಗಿಂತ ಹೆಚ್ಚು ಗೆಲುವು ಸಾಧಿಸಿದೆ. ಉತ್ತಮ ಪ್ರದರ್ಶನ ತೋರಿಸುತ್ತಿದೆ. ಇದ್ಯಾವ ಗೆಲುವು ಅಂತೀರಾ? ಹೌದು! ಬರೋಬ್ಬರಿ 2 ವರ್ಷಗಳ ನಂತರ ಭಾರತ ತಂಡ ಟಾಸ್ ಗೆದ್ದಿದೆ. ಅದು ಬರೋಬ್ಬರಿ 20 ಪಂದ್ಯಗಳಲ್ಲಿ ಟಾಸ್ (Toss) ಸೋತ ನಂತರ ಈಗ 21ನೇ ಪಂದ್ಯದಲ್ಲಿ ಟಾಸ್ ಗೆದ್ದಿದೆ. ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಟಾಸ್ ಗೆಲ್ಲುವ ಮೂಲಕ ತನ್ನ ಕಳವಳವನ್ನು ದೂರ ಮಾಡಿಕೊಂಡಿದೆ. ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ (KL Rahul) ನಾಣ್ಯ ಚಿಮ್ಮಿಸಿ ಹೆಡ್ ಎಂದು ಕಾಲ್ ಮಾಡಿದರು. ಹೆಡ್ ಬಿದ್ದ ಕೂಡಲೇ ಕೆಎಲ್ ರಾಹುಲ್ ನಕ್ಕು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡರು. ಭಾರತ ತಂಡವು ಈ ಹಿಂದೆ…
ಬೆಂಗಳೂರು : ಮನೆಯಲ್ಲಿ ಗ್ಯಾಸ್ ಗೀಸರ್(Gas Geyser) ಸೋರಿಕೆಯಿಂದಾಗಿ ನವವಿವಾಹಿತೆ ಸಾವನ್ನಪ್ಪಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವ ವಿವಾಹಿತೆ (Newlywed Death) ಭೂಮಿಕಾ(24) ಸಾವನ್ನಪ್ಪಿರುವ ದುರ್ದೈವಿ. ಈ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಡೆದಿದೆ ಎನ್ನಲಾಗಿದೆ. ಈ ಘಟನೆ ಕಳೆದ ನಾಲ್ಕೈದು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಭೂಮಿಕಾ ಸ್ನಾನಕ್ಕೆಂದು ತೆರಳಿದಾಗ ಗ್ಯಾಸ್ ಗೀಸರ್ ಲೀಕ್ ಆಗಿ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಯಾರಾದರೂ ಇದ್ದಿದ್ದರೆ ಭೂಮಿಕಾ ಪ್ರಾಣ ಉಳಿಯುತ್ತಿತ್ತು ಎಂದು ಕುಟುಂಬಸ್ಥರು ಭಾವಿಸಿದ್ದಾರೆ. ಭೂಮಿಕಾ ಮೂಲತಃ ಹಾಸನ ತಾಲೂಕಿನವರು ಎನ್ನಲಾಗಿದ್ದು, ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು. ಪತಿ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಗ್ಯಾಸ್ ಗೀಜರ್ ಸೋರಿಕೆಯಾಗಿದ್ದ ವೇಳೆ ಸ್ನಾನದ ಗೃಹದ ಕಿಟಕಿ ಬಾಗಿಲು ಕೂಡ ಬಂದ್ ಆಗಿತ್ತು ಎನ್ನಲಾಗಿದೆ.…
ತಿರುವನಂತಪುರಂ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇಡೀ ವಿಶ್ವವೇ ಈ ಭೇಟಿಯನ್ನು ಬೆರಗು ಕಣ್ಣಿನಿಂದ ನೋಡುತ್ತಿದ್ದರೆ, ವಿರೋಧಿ ರಾಷ್ಟ್ರಗಳಿಗೆ ಭಯ ಹುಟ್ಟಿದೆ. ಈ ಮಧ್ಯೆ ಕೇರಳ ಕಾಂಗ್ರೆಸ್, ಶಿಷ್ಟಾಚಾರದ ಸಭ್ಯತೆ ಮರೆಯಿತೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಪುಟಿನ್ ಆಗಮನದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕೇರಳ ಕಾಂಗ್ರೆಸ್, “ವ್ಲಾಡಿಮಿರ್ ಪುಟಿನ್, ನರೇಂದ್ರ ಮೋದಿ ಅವರ ಅನುಯಾಯಿಗಳ ಹೊಸ ಪಾವ್ ಪಾವ್” ಎಂದು ಲೇವಡಿ ಮಾಡಿದೆ. ಪುಟಿನ್ ಈಗ ಪ್ರಧಾನಿ ಮೋದಿ ಅಭಿಮಾನಿಗಳ ಹೊಸ ನಾಯಕರಾಗಿದ್ದಾರೆ ಎಂದು ಹಾಸ್ಯಾಸ್ಪದವಾಗಿ ಹೇಳಲಾಗಿದೆ. ಹೊಸ ಡ್ಯಾಡಿ ಅಲರ್ಟ್…. ಪುಟಿನ್ ಮೋದಿ ಭಕ್ತರ ಹೊಸ ಪಾವ್‌ಪಾವ್. ಡಿಸೆಂಬರ್ ಅಂತ್ಯದೊಳಗೆ ಮೋದಿ ಬೇರೆ ಡ್ಯಾಡಿಯನ್ನು ಅಪ್ಪಿಕೊಳ್ಳುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಪುಟಿನ್ ತಮ್ಮ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂಬ ಭರವಸೆ ಇದೆ” ಎಂದು ಕೇರಳ ಕಾಂಗ್ರೆಸ್ ಎಕ್ಸ್ ನಲ್ಲಿ ಬರೆದುಕೊಂಡಿದೆ. ಇದಕ್ಕೆ ದೇಶಾದ್ಯಂತ ತೀವ್ರ…
ಮೈಸೂರು: ಬ್ರೇಕ್ ಫಾಸ್ಟ್ ಮೀಟಿಂಗ್ ನಂತರ ಸಿಎಂ ಕುರ್ಚಿಯ ಗುದ್ದಾಟ ತಣ್ಣಗಾಗಿದೆ ಎಂದು ಭಾವಿಸಿದರೂ ಒಳಒಳಗೆ ಮಾತ್ರ ಅದು ಕುದಿಯುತ್ತಲೇ ಇದೆ. ಈಗ ಸಿಎಂ ಕುರ್ಚಿಯ ಕನಸಿನ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ಆದರೆ, ಸಮಯ ಹಾಗೂ ಸಂದರ್ಭ ಎಲ್ಲವನ್ನೂ ನಿರ್ಧರಿಸುತ್ತದೆ. ಈ ವಿಷಯದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ. ಹೈಕಮಾಂಡ್ ತೀರ್ಮಾನಿಸಿದರೆ ಯಾರು ಬೇಕಾದರೂ ಸಿಎಂ ಆಗಬಹುದು. ಆದರೆ, ಈ ವಿಷಯದಲ್ಲಿ ನನ್ನನ್ನು ಎಳೆ ತರಬೇಡಿ ಎಂದಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈಗಾಗಲೇ ಸಿಎಂ ಇದ್ದಾರೆ. ಸಿಎಂ, ಡಿಸಿಎಂ ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಎಲ್ಲರಿಗೂ ಸಿಎಂ ಆಗಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಯಾರು ಆಗಬೇಕು ಎನ್ನುವುದನ್ನು ಹೈಕಮಾಂಡ್ ಮಾತ್ರ ನಿರ್ಧರಿಸುತ್ತದೆ. ಈ ವಿಷಯದಲ್ಲಿ ಬಿಜೆಪಿ ಸುಮ್ಮನೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ನಾಯಕರು ಕೇವಲ ಭಾಷಣ ವೀರರು. ಅವರಿಗೆ ಜನರ…
ಬೆಂಗಳೂರು: ಸರ್ಕಾರಿ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಆಡಳಿತ ಯಂತ್ರ ಕುಸಿಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಉದ್ಯೋಗಾಕಾಂಕ್ಷಿಗಳು ಕೂಡ ಬೀದಿಗಳಿದು ಹೋರಾಟ ನಡೆಸುತ್ತಿದ್ದಾರೆ. ಇದರ ಮಧ್ಯೆ ಈಗ ಸರ್ಕಾರವು ಗುಡ್ ನ್ಯೂಸ್ ನೀಡಲು ಮುಂದಾಗಿದೆ. ರಾಜ್ಯದಲ್ಲಿ ಖಾಲಿ ಇರುವ ಪಿಎಸ್ ಐ ಮತ್ತು ಪಿಸಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಪಿಎಸ್ ಐ ಹಾಗೂ ಪಿಸಿ ಹುದ್ದೆಗಳು ಖಾಲಿ ಇರುವುದರಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸದ್ಯದಲ್ಲಿಯೇ ನೇಮಕಾತಿ ಪ್ರಕ್ರಿಯೆ ಮುಂದುವರೆಸಲಾಗುವುದು ಎಂದಿದ್ದಾರೆ. ಹಿಂದೆ ಇದ್ದ ಸರ್ಕಾರದ ಅವಧಿಯಲ್ಲಿ 545 ಪಿಎಸ್ ಐ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ಉಂಟಾದ ಅಕ್ರಮದಿಂದಾಗಿ ಸಾಕಷ್ಟು ತೊಂದರೆಯಾಗಿತ್ತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಉಳಿಯಬೇಕಾಯಿತು. ಈಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ 545 ಪಿಎಸ್‌ಐ ನೇಮಕಾತಿಯಲ್ಲಿಮ ಸಮಸ್ಯೆಯನ್ನು ಬಗೆಹರಿಸಿ ತರಬೇತಿಗೆ ಕಳುಹಿಸಲಾಗಿದೆ. 402 ಪಿಎಸ್‌ಐ ನೇಮಕಾತಿಯು…
ಇಸ್ಲಾಮಾಬಾದ್: ಪಾಕಿಸ್ತಾನ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿದ್ದಾರೆ. ಆದರೆ, ಇಮ್ರಾನ್ ಖಾನ್ ಮತ್ತು ಪಾಕ್ ಸೇನಾಧ್ಯಕ್ಷ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮಧ್ಯದ ಜಗಳ ಜೋರಾಗಿದ್ದು, ಇಬ್ಬರೂ ಪರಸ್ಪರ ಮಾನಸಿಕ ಅಸ್ವಸ್ಥರೆಂದು ಕರೆದುಕೊಳ್ಳುತ್ತಿದ್ದಾರೆ. ಇಬ್ಬರೂ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಇಮ್ರಾನ್ ಖಾನ್ ಅವರು ಮುನೀರ್ ರನ್ನು ಮಾನಸಿಕವಾಗಿ ಅಸ್ಥಿರವಾಗಿರುವ ಜನರಲ್ ಎಂದು ಕರೆದಿದ್ದಾರೆ. ಇದರಿಂದಾಗಿ ಕೋಪಗೊಂಡಿರುವ ಪಾಕಿಸ್ತಾನ್ ಸೇನೆ, ಮಾನಸಿಕ ಅಸ್ವಸ್ಥ ಮತ್ತು ನಾರ್ಸಿಸಿಸ್ಟ್ ಎಂದು ಇಮ್ರಾನ್ ಖಾನ್ ರನ್ನು ಕರೆದಿದೆ. ಅಲ್ಲದೇ, ಪಾಕ್ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಇಮ್ರಾನ್ ಖಾನ್ ಹಾಗೂ ಬೆಂಬಲಿಗರು, ಕುಟುಂಬಸ್ಥರ ವಿರುದ್ಧ ಕಿಡಿಕಾರಿದ್ದಾರೆ. ದೇಶದಲ್ಲಿ ಅಶಾಂತಿ ಉಂಟು ಮಾಡಲು ಇವರೆಲ್ಲ ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೇ, ತಮ್ಮನ್ನು ಭೇಟಿಯಾಗಲು ಬರುವ ಬೆಂಬಲಿಗರಿಗೆ ಅಶಾಂತಿ ಉಂಟು ಮಾಡಲು ಪ್ರೇರೇಪಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಚಿಕ್ಕಮಗಳೂರು: ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಭೀಕರವಾಗಿ ಹತ್ಯೆಯಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ಕಡೂರು (Kaduru) ತಾಲೂಕಿನ ಸಖರಾಪಟ್ಟಣದ (Sakarayapattana)ಲ್ಲಿ ನಡೆದಿದೆ. ಗಣೇಶಗೌಡ(38) ಕೊಲೆಯಾಗಿರುವ ಮುಖಂಡ. ಗಣೇಶ್ ಗ್ರಾಪಂನ ಸದಸ್ಯರಾಗಿದ್ದರು. ಅಲ್ಲದೇ, ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದು, ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದರು ಎನ್ನಲಾಗಿದೆ. ಆದರೆ, ಎರಡು ಗುಂಪುಗಳ ಮಧ್ಯೆ ನಡೆದ ಮಾರಾಮಾರಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಎರಡು ಗುಂಪುಗಳ ಮಧ್ಯೆ ಪಟ್ಟಣದ ಬಾರ್ ವೊಂದರ ಬಳಿ ಗಲಾಟೆ ನಡೆದಿದೆ. ಅಲ್ಲಿ ಶಮನವಾಗುತ್ತಿದ್ದಂತೆ ಮತ್ತೆ ಅದೇ ಎರಡು ಗುಂಪುಗಳ ಮಧ್ಯೆ ಪಟ್ಟಣದ ಮಠದ ಹತ್ತಿರ ಗಲಾಟೆ ನಡೆದಿದೆ. ಅದು ವಿಕೋಪಕ್ಕೆ ತೆರಳಿ, ಮತ್ತೊಂದು ದುಷ್ಕರ್ಮಿಗಳ ತಂಡ ಗಣೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದೆ ಎನ್ನಲಾಗಿದೆ. ಅಲ್ಲದೇ, ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಸಖರಾಯಪಟ್ಟಣ…
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೂರ್ಯನೇ ಕಾಣುತ್ತಿಲ್ಲ. ಸೂರ್ಯನ ಬರುವಿಕೆಗಾಗಿ ಜನ ಕಾದು ಕುಳಿತಂತಹ ವಾತಾವರಣ ನಿರ್ಮಾಣವಾಗಿದೆ. ಮೋಡಮುಸಕಿದ ವಾತವರಣ (Weather Forecast) ದೊಂದಿಗೆ ಚಳಿಯ ಅನುಭವವಾಗುತ್ತಿದ್ದು ಜನ ಗಡಗಡ ನಡಗುವಂತಾಗಿದೆ. ಅಲ್ಲದೇ, ಸಿಲಿಕಾನ್ ಸಿಟಿ ಸೇರಿದಂತೆ ಹಲವೆಡೆ ಮಳೆ ಕೂಡ ಆಗುತ್ತಿದೆ. ಸೈಕ್ಲೋನ್ ಪರಿಣಾಮ ತಗ್ಗಿದರೂ ಚಳಿ ಮತ್ತು ಮಳೆ ಮುಂದುವರದಿದೆ. ವಾತವರಣದಲ್ಲಿ ಕಡಿಮೆ ತಾಪಮಾನ ಹಿನ್ನಲೆ ಒತ್ತಡ ಕಡಿಮೆಯಾಗಿ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದರೆ, ಹಲವೆಡೆ ತುಂತುರು ಮಳೆಯೊಂದಿಗೆ ಚಳಿ ಕಂಡು ಬರುತ್ತಿದೆ. ಹೀಗಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ಶುಕ್ರವಾರ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಉತ್ತರ ಒಳನಾಡಿನಲ್ಲಿ ಕನಿಷ್ಠ ಉಷ್ಣಾಂಶ 7 ರಿಂದ 19 ಡಿಗ್ರಿಯವರೆಗೆ ದಾಖಲಾಗುತ್ತಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉಷ್ಣಾಂಶ 18-20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಆದರೆ, ಇಂದಿನಿಂದ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…
ನವದೆಹಲಿ: ಭಾರತ ಹಾಗೂ ರಷ್ಯಾ ಮಧ್ಯೆ ಇಂದು 23ನೇ ವಾರ್ಷಿಕ ಶೃಂಗಸಭೆ (India Russia 23rd Joint Annual Summit) ನಡೆಯಿತು. ಇಡೀ ದೆಹಲಿ ಇದಕ್ಕೆ ಸಾಕ್ಷಿಯಾಗಿತ್ತು. ದೆಹಲಿಯಾದ್ಯಂತ ಸಂಭ್ರಮ ಕೂಡ ಮನೆ ಮಾಡಿತ್ತು. ಇದೀಗ ಇಡೀ ದೇಶವೇ ಈ ಸಂಭ್ರಮದಲ್ಲಿ ಭಾಗಿಯಾಗಿದೆ. ಏಕೆಂದರೆ ಈ ಸಭೆ ಕೇವಲ ಔಪಚಾರಿಕ ಸಭೆಯಾಗಿರಲಿಲ್ಲ. ಬದಲಾಗಿ ನಮ್ಮ ದೇಶದ ಶತ್ರುಗಳಿಗೂ ನಡುಕ ಹುಟ್ಟಿಸುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಾಗತಿಕ ರಾಜಕೀಯ ಅನಿಶ್ಚಿತ ಪರಿಸ್ಥಿತಿಯಲ್ಲಿ ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧ ಸುಧಾರಿಸುವ ಕುರಿತು ಚರ್ಚಿಸಲಾಯಿತು. ಸಭೆಯ ನಂತರ ‘ಭಾರತ-ರಷ್ಯಾ: ನಂಬಿಕೆ ಮತ್ತು ಗೌರವದ ತಳಹದಿಯಲ್ಲಿ ದೀರ್ಘ ಸಮಯದ ಪ್ರಗತಿದಾಯಕ ಜೊತೆಗಾರಿಕೆ’ ಎಂಬ ಶೀರ್ಷಿಕೆಯಡಿ ಇಬ್ಬರೂ ನಾಯಕರು ಮಾತನಾಡಿದ್ದಾರೆ. ಎರಡೂ ದೇಶಗಳ ವ್ಯಾಪಾರ ವಹಿವಾಟನ್ನು 100 ಬಿಲಿಯನ್ ಡಾಲರ್ಗೆ ಏರಿಸುವ ಮಹತ್ವಾಕಾಂಕ್ಷಿ ಗುರಿ ಹೊಂದಿರುವುದಾಗಿ ನಾಯಕರು ಪ್ರಸ್ತಾಪಿಸಿದ್ದಾರೆ. ಈಗಾಗಲೇ ಎರಡೂ ದೇಶಗಳ…
ದಾವಣಗೆರೆ: ರಾಟ್ ವೀಲರ್ (Rottweiler) ನಾಯಿಗೆ ಮಹಿಳೆಯೋರ್ವರು ಬಲಿಯಾಗಿರುವ ಹೃದಯ ವಿದ್ರಾವಕ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ದಾವಣಗೆರೆ (Davanagere) ಹೊರ ವಲಯದ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ. ರಾಟ್ ವೀಲರ್ ನಾಯಿ ದಾಳಿಯಿಂದ (Rottweiler Attack) ಸಾವನ್ನಪ್ಪಿದ ಮಹಿಳೆಯನ್ನು ಅನಿತಾ (38) ಎನ್ನಲಾಗಿದೆ. ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾರಿನಲ್ಲಿ ಬಂದ ಅಪರಿಚಿತರು 2 ರಾಟ್ ವೀಲರ್ ಜಾತಿಯ ನಾಯಿಗಳನ್ನು ಹೊನ್ನೂರು ಗೊಲ್ಲರಹಟ್ಟಿಯ ಬಳಿ ಬಿಟ್ಟು ಹೋಗಿದ್ದು, ಆ ವೇಳೆ ಮನೆಯಿಂದ ಹೊರ ಬಂದ ಮಹಿಳೆ ಮೇಲೆ ಶ್ವಾನಗಳು ದಾಳಿ ನಡೆಸಿವೆ ಎನ್ನಲಾಗಿದೆ. ನಾಯಿ ದಾಳಿಯಿಂದಾಗಿ ಮಹಿಳೆ ಗಂಭೀರವಾಗಿ ಅಸ್ವಸ್ಥರಾಗಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತಾದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಮಹಿಳೆಯ ದೇಹದ ಸುಮಾರು 50 ಭಾಗಗಳಲ್ಲಿ ನಾಯಿ ಕಚ್ಚಿದೆ ಎಂದು ತಿಳಿದು ಬಂದಿದೆ. ಸದ್ಯ ನಾಯಿ ಬಿಟ್ಟವರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.