Author: Bosstv News Desk

ಬೆಳಗಾವಿ: ಇಂದಿನಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ತೊಡೆ ತಟ್ಟಲು ವಿಪಕ್ಷಗಳು ಸಿದ್ಧವಾಗಿವೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಆಲಿಸಿ, ಚರ್ಚಿಸಿ, ಪರಿಹರಿಸುವುದಕ್ಕಾಗಿ ಸುವರ್ಣಸೌಧ ನಿರ್ಮಿಸಲಾಯಿತು. ಆದರೆ, ಗದ್ದಲ-ಗೊಂದಲ, ಪ್ರತಿಭಟನೆಗಳಿಗೆ ಮಾತ್ರ ಇಲ್ಲಿಯವರೆಗೆ ಉಭಯ ಕಲಾಪಗಳು ಸಾಕ್ಷಿಯಾಗಿವೆಯೇ ಹೊರತು, ಜನರ ಸಮಸ್ಯೆಗಳು ಮಾತ್ರ ಹಾಗೆಯೇ ಇವೆ ಎಂದು ಜನ ಆರೋಪಿಸುತ್ತಿದ್ದಾರೆ. ಡಿ. 19ರ ವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, 21ಕ್ಕೂ ಅಧಿಕ ವಿಧೇಯಕಗಳ ಮಂಡನೆ ಸಾಧ್ಯತೆ ಇದೆ. ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ (Winter Session) ಆರಂಭವಾಗಲಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಬಾರಿ ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ. ವಿರೋಧ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದರೆ, ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ-ಜೆಡಿಎಸ್ ದೋಸ್ತಿಗಳು ಸಜ್ಜಾಗಿವೆ. ಸಿಎಂ ಕುರ್ಚಿಯ ಫೈಟ್ ಸುವರ್ಣ ಸೌಧದಲ್ಲೂ ಸದ್ದು ಮಾಡುವ ಸಾಧ್ಯತೆ ಇದೆ. ಹೀಗಾಗಿ ಅಧಿವೇಶನದಲ್ಲಿ ಅವಿಶ್ವಾಸ ನಿಲುವಳಿ ಮಂಡನೆಗೆ ವಿಪಕ್ಷ…

Read More

ಮಂಡ್ಯ: ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ಮಂಡ್ಯ (Mandya) ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನ ನಾಗತಿಹಳ್ಳಿ ಎಂಬಲ್ಲಿ ನಡೆದಿದೆ. ಸಾವನ್ನಪ್ಪಿದವರನ್ನು ಚಿಕ್ಕಮಗಳೂರು (Chikkamagaluru) ಮೂಲದ ಚನ್ನೆಗೌಡ (60), ಸರೋಜಮ್ಮ (55), ಜಯಮ್ಮ (70) ಎಂದು ಗುರುತಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಕಾರು ಡಿವೈಡರ್ ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಕಾರು ಪಲ್ಟಿಯಾಗಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕಾರು ತೆರಳುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ತಿರುವಿನಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರಿನಲ್ಲಿ ಮೂವರಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಬೆಳ್ಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಅವರು ಬರೋಬ್ಬರಿ 12 ವರ್ಷಗಳ ನಂತರ ಮತ್ತೊಮ್ಮೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (KSCA)ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೆಎಸ್ ಸಿಎಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಇಂದು ಹೊರ ಬಿದ್ದಿದ್ದು, ವೆಂಕಟೇಶ್ ಪ್ರಸಾದ್‌ (Venkatesh Prasad) ಗೆಲುವು ಕಂಡಿದ್ದಾರೆ. ಕೆಎಸ್ ಸಿಎಗೆ ಇಂದೇ ಮತದಾನ ನಡೆದಿತ್ತು. ಮತದಾನ ನಡೆದ ನಂತರ ಫಲಿತಾಂಶ ಹೊರ ಬಿದ್ದಿದ್ದು, ವೆಂಕಟೇಶ್ ಪ್ರಸಾದ್ 191 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿದಂತೆ ಒಟ್ಟು 16 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿತ್ತು. ಒಟ್ಟು 1,315 ಮತಗಳು ಚಲಾವಣೆಯಾಗಿವೆ. ಸಂಜೆಯ ನಂತರ ಮತದಾನ ಎಣಿಕೆ ಆರಂಭವಾಗಿ ಈಗ ಫಲಿತಾಂಶ ಹೊರ ಬಿದ್ದಿದೆ. ಮಾಜಿ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್ ಹಾಗೂ ಅನಿಲ್ ಕುಂಬ್ಳೆ ಬಣದ ವೆಂಕಟೇಶ್ ಪ್ರಸಾದ್‌ಗೆ ಒಟ್ಟು 749 ಮತಗಳು ಬಿದ್ದಿದ್ದರೆ, ಬ್ರಿಜೇಶ್ ಪಾಟೀಲ್ ಬಣದ ಶಾಂತಕುಮಾರ್‌ಗೆ 558 ಮತಗಳು ಸಿಕ್ಕಿವೆ. ಹೀಗಾಗಿ ವೆಂಕಟೇಶ್ ಪ್ರಸಾದ್‌…

Read More

ಬೆಂಗಳೂರು: ಕಿಚ್ಚ ಸುದೀಪ್ (Sudeep) ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವೇ ಇಲ್ಲದಂತಾಗಿದೆ. ಈಗಾಗಲೇ ಸುದೀಪ್ ನಟಿಸಿದ್ದ ‘ಮಾರ್ಕ್’ ಸಿನಿಮಾ ಇದೇ ತಿಂಗಳು ಬಿಡುಗಡೆಯಾಗಲು ಸಿದ್ಧವಾಗಿದ್ದು, ಇದರ ಬೆನ್ನಲ್ಲೇ ಈಗ ಜೋಗಿ ಫ್ರೇಮ್ ಜೊತೆ ಕೆಲಸ ಮಾಡುವ ಸುದ್ದಿ ಹೊರ ಬಿದ್ದಿದೆ. ಹೀಗಾಗಿ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಹಿಂದಿನ ವರ್ಷ ಇದೇ ತಿಂಗಳು ಅಂದರೆ 2024ರ ಡಿಸೆಂಬರ್ ತಿಂಗಳಲ್ಲಿ ಮ್ಯಾಕ್ಸ್ ಚಿತ್ರ ಬಿಡುಗಡೆಯಾಗಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಈಗ ಮತ್ತೆ ಡಿಸೆಂಬರ್ ತಿಂಗಳಲ್ಲಿ ಮತ್ತೊಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಚಿತ್ರದ ಬಗ್ಗೆ ಅಪ್ಡೇಟ್ ಅಭಿಮಾನಿಗಳಿಗೆ ಸಿಕ್ಕಿದೆ. ಈಗಾಗಲೇ ‘ಮಾರ್ಕ್’ ಆಗಿ ಸುದೀಪ್ ಬರುತ್ತಿದ್ದು ಇದು ಕೂಡ ದೊಡ್ಡ ಸದ್ದು ಮಾಡುವ ನಿರೀಕ್ಷೆ ಇದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ಗಮನ ಸೆಳೆಯುತ್ತಿದೆ. ‘ಇದರ ಬೆನ್ನಲ್ಲೇ ಈಗ ಹೊಸ ಸಿನಿಮಾದ ಹೆಸರು ಘೋಷಣೆಯಾಗಿದೆ. ಪ್ರೇಮ್ ಅವರು…

Read More

ಉಡುಪಿ: ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಇಂದು ರಾಜ್ಯಕ್ಕೆ ಆಗಮಿಸಿದ್ದಾರೆ. ಗೀತೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ರಾಜ್ಯಕ್ಕೆ ಬಂದಿದ್ದಾರೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ (Sri Krishna Mutt) ಗೀತೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಮಾರೋಪ ಸಮಾರಂಭಕ್ಕೆ ಪವನ್ ಕಲ್ಯಾಣ್ ಆಗಮಿಸಿದ್ದಾರೆ. ಪರ್ಯಾಯ ಪುತ್ತಿಗೆ ಮಠಾಧೀಶರ ನೇತೃತ್ವದಲ್ಲಿ ಗೀತೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಈ ಗೀತೋತ್ಸವ ಕಾರ್ಯಕ್ರಮವು ಕಳೆದ ತಿಂಗಳಿನಿಂದ ನಡೆಯುತ್ತಿದ್ದು, ಪೇಜಾವರ ಶ್ರೀ ಉದ್ಘಾಟಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಂದು ಇಡೀ ಉಡುಪಿ ಕೇಸರಿಮಯವಾಗಿತ್ತು. ಈಗ ಇದೇ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಆಗಮಿಸಿದ್ದಾರೆ. ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ್ದ ಅವರು ಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ ಮಾಡಲಿದ್ದಾರೆ. ಆನಂತರ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ನಂತರ ಗೀತೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಉಡುಪಿಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Read More

ಕಾರವಾರ: ಪೀಠೋಪಕರಣ (Furniture Store) ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್‌ (Short Circuit) ಉಂಟಾದ ಪರಿಣಾಮ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರ ಕನ್ನಡ(Uttara Kannada) ಜಿಲ್ಲೆಯ ಮುಂಡಗೋಡ(Mundagodu)ದ ಕಿಲ್ಲೆ ಓಣಿಯ ಖಾದರ್ಲಿಂಕ್ ಹತ್ತಿರ ನಡೆದಿದೆ. ಕಿಲ್ಲೆ ಓಣಿಯ ಯೂನುಸ್ ಹೊಸಕೊಪ್ಪ ಎಂಬ ವ್ಯಕ್ತಿಗೆ ಸೇರಿದ್ದ ಪೀಠೋಪಕರಣದ ಮಹಿಳೆ ಹಾಗೂ ಅಯಾನ್ ಹಾನಗಲ್ ಎಂಬುವರಿಗೆ ಸೇರಿದ ಹಾರ್ಡವೇರ್ ಮಳಿಗೆಗೆಳಿಗೆ ಬೆಂಕಿ ತಗುಲಿದ್ದು, ಸುಮಾರು 50 ಲಕ್ಷ ರೂ.ಗೂ ಅಧಿಕ ಪ್ರಮಾಣದ ನಷ್ಟ ಉಂಟಾಗಿದೆ. ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾರ ಪ್ರಮಾಣದ ಬೆಲೆಬಾಳುವ ಕಟ್ಟಿಗೆ ತುಂಡು, ಪೀಠೋಪಕರಣ ಹಾಗೂ ಕಾರು ಬೆಂಕಿಗೆ ಆಹುತಿಯಾಗಿವೆ. ಅಲ್ಲದೇ, ಅಕ್ಕಪಕ್ಕದ ಮಳಿಗೆಗಳಿಗೂ ಬೆಂಕಿ ಆವರಿಸುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿದ್ದಾರೆ. ಹೀಗಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡ ಟೆಸ್ಟ್ ಸರಣಿ ಸೋತ ನಂತರ ಏಕದಿನ ಸರಣಿ ಗೆದ್ದು ಬೀಗಿದೆ. ಈಗ ತಂಡದ ಮುಂದೆ ಮತ್ತೊಂದು ಸವಾಲು ಇದ್ದು, ಟಿ20 ಗೆಲ್ಲುವ ಉತ್ಸಾಹದಲ್ಲಿದೆ. ಈಗಾಗಲೇ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದಿದೆ. ಈಗ ಎರಡೂ ತಂಡಗಳ ಮಧ್ಯೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಟೂರ್ನಿ ಡಿ. 9ರಿಂದ ಆರಂಭವಾಗಲಿದೆ. ಪ್ರತಿಯೊಂದು ಪಂದ್ಯ ಸಂಜೆ 6.30ಕ್ಕೆ ಆರಂಭವಾಗಲಿವೆ. ಟಿ20 ವಿಶ್ವಕಪ್ 2026 ರ ಹೊಸ್ತಿಲಿನಲ್ಲಿ ಈ ಸರಣಿಯು ಹೆಚ್ಚಿನ ಮಹತ್ವ ಪಡೆದಿದೆ. ಹೀಗಾಗಿ ಈ ಟೂರ್ನಿ ಆಟಗಾರರಿಗೆ ಹೆಚ್ಚಿನ ಮಹತ್ವ ಪಡೆದಿದೆ. ಆಟಗಾರರು ಉತ್ತಮ ಪ್ರದರ್ಶನ ತೋರಿ ಆಯ್ಕೆದಾರರ ಮನ ಗೆಲ್ಲಲು ಮುಂದಾಗಿದ್ದಾರೆ. ಏಕದಿನ ಸರಣಿಯಲ್ಲಿ ತವರಿನಲ್ಲಿ ಪ್ರಾಬಲ್ಯ ಕಾಯ್ದುಕೊಂಡಿದ್ದ ಭಾರತ ತಂಡ ಈಗ ಟಿ20 ಮಾದರಿಯಲ್ಲಿ ತನ್ನ ಬಲ ಪ್ರದರ್ಶಿಸಲು ಮುಂದಾಗಿದೆ. ಸೂರ್ಯಕುಮಾರ್ ಯಾದವ್ ಈ ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಶುಭ್ಮನ್ ಗಿಲ್ ಉಪನಾಯಕನಾಗಿ…

Read More

ಬೆಳಗಾವಿ: ನಾಳೆಯಿಂದ ಬೆಳಗಾವಿ ಚಳಿಗಾಲದ ಅಧಿವೇಶನ (Belagavi Winter Session) ಆರಂಭವಾಗಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಚಳಿಗಾಲದ ಅಧಿವೇಶನವು 10 ದಿನಗಳ ಕಾಲ ನಡೆಯಲಿದೆ. ಪ್ರತಿ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗಿದ್ದು, ಇಲ್ಲಿಯವರೆಗೆ 13 ಬಾರಿ ಉಭಯ ಸದನಗಳ ಅಧಿವೇಶನ ನಡೆದಿದೆ. ಇಲ್ಲಿಯವರೆಗೆ ಈ ಅಧಿವೇಶನಕ್ಕಾಗಿ ಒಟ್ಟು 170 ಕೋಟಿ ರೂ. ವೆಚ್ಚ ಆಗಿದೆ. ಈ ಬಾರಿ 21 ಕೋಟಿ ರೂ. ಖರ್ಚಾಗುವ ಲೆಕ್ಕಾಚಾರವಿದೆ. ಹೀಗಾಗಿ ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.ಶಾಸಕರು, ಅಧಿಕಾರಿಗಳ ವಸತಿಗಾಗಿ 3 ಸಾವಿರ ಕೋಠಡಿಗಳು ಬುಕ್ಕಿಂಗ್ ಆಗಿವೆ. 6 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿವೆ. ಪೊಲೀಸರಿಗಾಗಿ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚಿಸುವುದಕ್ಕಾಗಿ ಬೆಳಗಾವಿ ಅಧಿವೇಶನ ನಡೆಸಲಾಗುತ್ತದೆ. ಆದರೆ, ಅಧಿವೇಶನ ಬೆಂಗಳೂರು ಅಧಿವೇಶನದಂತೆ ಚರ್ಚೆ, ಜಗಳಕ್ಕೆ ಸೀಮಿತವಾಗುತ್ತಿದೆಯೇ ಹೊರತು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಜನ…

Read More

ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕೆಲಸ ಮುಗಿಸಿ ಮನೆಗೆ ಹೋದ ನಂತರವೂ ಬಾಸ್ ಗಳ ಕಿರಿಕಿರಿ ತಪ್ಪಿದ್ದಲ್ಲ ಎಂಬ ಮಾತು ಕೇಳಿ ಬರುತ್ತಲೇ ಇವೆ. ಇಂತಹ ಘಟನೆಗಳಿಂದಾಗಿ ತೀವ್ರ ಒತ್ತಡ ಎದುರಿಸುತ್ತಿದ್ದೇವೆಂದು ಹಲವರು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿದ್ದರು. ಈಗ ಕೇಂದ್ರ ಸರ್ಕಾರ ಇಂತಹ ಒತ್ತಡಗಳಿಗೆ ಮುಕ್ತಿ ಹಾಡಲು ಮುಂದಾಗಿದೆ. ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಕೆಲವು ಮಹತ್ವದ ಮಸೂದೆಗಳನ್ನು ಮಂಡಿಸಲಾಗಿದೆ. ಈ ಪೈಕಿ “ರೈಟ್ ಟು ಡಿಸ್ಕನೆಕ್ಟ್ ಬಿಲ್ 2025” (ದೂರವಾಣಿ ಸಂಪರ್ಕ ಕಡಿತಗೊಳಿಸುವ ಹಕ್ಕು) ಮಂಡಿಸಲಾಗಿದೆ. ಈ ಮೂಲಕ ಖಾಸಗಿ ಉದ್ಯೋಗಿಗಳ ಹಕ್ಕುಗಳ ರಕ್ಷಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಕೆಲಸದ ಸಮಯ ಮುಕ್ತಾಯವಾದ ನಂತರ ಹಾಗೂ ರಜಾ ದಿನಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ದೂರವಾಣಿ ಕರೆಗಳು ಮತ್ತು ಇಮೇಲ್‌ಗಳಿಂದ “ರೈಟ್ ಟು ಡಿಸ್ಕನೆಕ್ಟ್ ಬಿಲ್ 2025” ನ್ನು ಉದ್ಯೋಗಿಗೆ ನೀಡಲು ನೌಕರರ ಕಲ್ಯಾಣ ಪ್ರಾಧಿಕಾರ ರಚಿಸಲಾಗುತ್ತದೆ. ಈ ಬಿಲ್ ನಂತೆ, ಕೆಲಸದ ಸಮಯದ ನಂತರ ಕಚೇರಿಯ ಕರೆಗಳು ಮತ್ತು ಇಮೇಲ್‌ಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ.…

Read More

ಮಂಡ್ಯ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (H.D Kumaraswamy) ಬಹಿರಂಗವಾಗಿ ಆದಿಚುಂಚನಗಿರಿ ಶ್ರೀಗಳ(Nirmala Nandanath swamiji)ಕ್ಷಮೆ ಕೋರಿದ್ದಾರೆ. ಇಂದು ನಡೆದ ವಿಸಿ ಫಾರ್ಮ್ ನ ಕೃಷಿ ಮೇಳದಲ್ಲಿ ಕ್ಷಮೆ ಯಾಚಿಸಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿಗಳು ಸಮಾಜದ ಗೌರವ ಉಳಿಸುವುದಕ್ಕಾಗಿ ಬೀದಿಗೆ ಬಂದವರು. ಅವರಿಗೆ ದೇವೇಗೌಡರು ಸಿಎಂ ಆಗಲಿ ಎಂಬ ಕನಸು ಇತ್ತು. ನನ್ನನ್ನು ಕಂಡರೆ ಅವರಿಗೆ ದೊಡ್ಡ ಪ್ರೀತಿ. ನನ್ನಿಂದ ಈಗ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಅಪಚಾರವಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ. ಹಿಂದೆ ಕುಮಾರಸ್ವಾಮಿ, ನಾನು ಎರಡು ಬಾರಿ ಸಿಎಂ ಆಗಿ ಅಧಿಕಾರ ಕಳೆದುಕೊಂಡಾಗ ಯಾವುದೇ ಮಠಾಧೀಶರರ ನೆರವು ಕೇಳಿರಲಿಲ್ಲ. ಮಠಾಧೀಶರ ಕೆಲಸವೇ ಬೇರೆ ಎಂದು ಹೇಳಿದ್ದರು. ರಾಜ್ಯದಲ್ಲಿ ನಡೆಯುತ್ತಿರುವ ಜಾತೀಯ ರಾಜಕಾರಣದಿಂದ ರಾಜ್ಯಕ್ಕೆ ನಷ್ಟವಾಗುತ್ತದೆಯೇ ಹೊರತು ಯಾರಿಗೂ ಲಾಭವಾಗುವುದಿಲ್ಲ. ಇದು ಸಮಾಜಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂಬ ಹೇಳಿಕೆ ನೀಡಿದ್ದರು. ಈಗ ಇದೇ ವಿಷಯವಾಗಿ ಕ್ಷಮೆ ಯಾಚಿಸಿದ್ದಾರೆ. ಸ್ವಾಮೀಜಿಗಳು ಅವರದ್ದೇ ಆದ ಕಲ್ಪನೆಗಳನ್ನು ಹೊಂದಿದ್ದಾರೆ. ಇಂತಹ ಸ್ವಾಮಿಗಳು ಇಲ್ಲಿಗೆ ಬರಬಾರದು. ಅವರಿಗೆ…

Read More