Subscribe to Updates
Get the latest creative news from FooBar about art, design and business.
Author: Bosstv News Desk
ರಾಯಚೂರು: ಮಂತ್ರಾಲಯದ (Mantralaya) ರಾಘವೇಂದ್ರ ಸ್ವಾಮಿ (Shri Raghavendra Swamy)ಯ ಭಕ್ತರು ಅಪಾರ. ಹಲವರ ಬದುಕಲ್ಲಿ ರಾಯರು ಪವಾಡ ಮಾಡಿದ್ದಾರೆಂದು ಭಕ್ತರು ನಂಬಿದ್ದಾರೆ. ಹೀಗಾಗಿ ಮಂತ್ರಾಲಯಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಮಂತ್ರಾಲಯದಲ್ಲಿ ಹುಂಡಿ ಎಣಿಸುವ ಕಾರ್ಯ ನಡೆದಿದ್ದು, ಕೇವಲ 21 ದಿನಗಳಲ್ಲಿ 3.06 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಮಂತ್ರಾಲಯದಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ 21 ದಿನಗಳಲ್ಲಿ 3,6,81,661 ರೂ. ಕಾಣಿಕೆ ಬಂದಿದೆ. ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಎರಡು ತಿಂಗಳಲ್ಲಿ ಕೋಟ್ಯಂತರ ರೂಪಾಯಿ ಕಾಣಿಕೆ ಸಂಗ್ರಹವಾಗಿದ್ದು, ಕಾಣಿಕೆಯಲ್ಲಿ 2,97,44,661 ರೂ. ಕರೆನ್ಸಿ ನೋಟುಗಳು ಹಾಗೂ 9,37,000 ರೂ. ನಾಣ್ಯಗಳು ಕೂಡ ಇವೆ. ಅಲ್ಲದೇ, 23 ಗ್ರಾಂ ಚಿನ್ನ, 490 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಹುಂಡಿಯಲ್ಲಿ ಪತ್ತೆಯಾಗಿವೆ. ನೂರಾರು ಸಿಬ್ಬಂದಿಗಳು ಹಾಗೂ ವಿವಿಧ ಸೇವಕರು ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.
ಬೆಂಗಳೂರು: ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಹುದ್ದೆಗಳು ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಇದ್ದು, ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂಬ ಆರೋಪ ಕೇಳಿ ಬರುತ್ತಲೇ ಇವೆ. ಇನ್ನೊಂದೆಡೆ ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಹುದ್ದೆ ಭರ್ತಿ ಮಾಡಿಕೊಳ್ಳುವಂತೆ ಮನವಿ ಮಾಡುತ್ತಲೇ ಇದ್ದಾರೆ. ಆದರೂ ಸರ್ಕಾರ ಮಾತ್ರ ಮೌನ ವಹಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ ಇವೆ ಎಂದು ರಾಜ್ಯ ಸರ್ಕಾರವೇ ಮಾಹಿತಿ ನೀಡಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಇದ್ದರೂ ಕೇವಲ 24,300 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದೆ. ಹೀಗಾಗಿ ಬಿಜೆಪಿ ಶಾಸಕ ಯತ್ನಾಳ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಶಾಸಕ ಯತ್ನಾಳ್, ರಾಜ್ಯದಲ್ಲಿ 2,80,000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಅದನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಬೇಕಾಗಿದ್ದ ಸರ್ಕಾರ ಕೇವಲ 24,300 ಹುದ್ದೆಗಳನ್ನು ಭರ್ತಿ ಮಾಡಲು ಮಾತ್ರ ಆರ್ಥಿಕವಾಗಿ ಶಕ್ತವಾಗಿದೆ ಎಂದು ಮುಖ್ಯ ಮಂತ್ರಿಗಳು ಸದನದಲ್ಲಿ…
ಇತ್ತೀಚೆಗಷ್ಟೇ ವಿಶ್ವಕಪ್ ಗೆ ಮುತ್ತಿಕ್ಕಿದ ಭಾರತೀಯ ಮಹಿಳಾ ತಂಡ ಮತ್ತೊಂದು ಸರಣಿಗೆ ಸಜ್ಜಾಗಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ವಿಶ್ವ ಚಾಂಪಿಯನ್ ಮಹಿಳಾ ತಂಡ ಈ ಮೂಲಕ ಮೈದಾನಕ್ಕೆ ಇಳಿಯಲು ಮುಂದಾಗಿದೆ. ಭಾರತೀಯ ಕ್ರಿಕೆಟ್ ತಂಡ (Indian women’s cricket team) ಡಿಸೆಂಬರ್ 21ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಸೆಣಸಲಿದೆ. ಈ ಹಿನ್ನೆಲೆಯಲ್ಲಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ನೇತೃತ್ವದ 15 ಆಟಗಾರ್ತಿಯರ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿ ಪ್ರಕಟಿಸಿದೆ. ಉಪನಾಯಕಿ ಸ್ಮೃತಿ ಮಂಧಾನ ಕೂಡ ಈ ತಂಡದಲ್ಲಿದ್ದಾರೆ. ಭಾರತೀಯ ಕ್ರಿಕೆಟ್ ತಂಡವು ನ. 2ರಂದು ನಡೆದ ವಿಶ್ವಕಪ್ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋಲಿಸಿ ಕಪ್ ಗೆ ಮುತ್ತಿಕ್ಕಿತ್ತು. ಇದು ವಿಶ್ವಕಪ್ ನಂತರ ಟೀಂ ಇಂಡಿಯಾದ ಮೊದಲ ಸರಣಿಯಾಗಿದೆ. ವಿಶ್ವಕಪ್ ವಿಜೇತ ತಂಡದಲ್ಲಿದ್ದ ಬಹುತೇಕ ಆಟಗಾರ್ತಿಯರು ಈ ತಂಡದಲ್ಲಿದ್ದಾರೆ. ಮಂಧಾನ ಇದೇ ನ. 23 ರಂದು…
ಬೆಳಗಾವಿ: ಚಳಿಗಾಲದ ಅಧಿವೇಶನ ಆರಂಭವಾಗಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಬೇಡಿಕೆಗಳು ಭಾರೀ ಸದ್ದು ಮಾಡುತ್ತಿವೆ. ಒಂದೆಡೆ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದ್ದರೆ, ಇನ್ನೊಂದೆಡೆ ಬೆಳಗಾವಿ ಜಿಲ್ಲೆಯ ವಿಭಜನೆಗೆ ಮನವಿ ಮಾಡಲಾಗುತ್ತಿದೆ. ಹೌದು! ರಾಜ್ಯದ ದೊಡ್ಡ ಜಿಲ್ಲೆಗಳಲ್ಲಿ ಬೆಳಗಾವಿ ಮುಂಚೂಣಿಯಲ್ಲಿದೆ. ಬರೋಬ್ಬರಿ 18 ಜನ ವಿಧಾನಸಭಾ ಸದಸ್ಯರು ಈ ಕ್ಷೇತ್ರದಲ್ಲಿದ್ದಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ತಲೆನೋವಾಗುತ್ತಿದೆ. ಅಭಿವೃದ್ಧಿಯ ದೃಷ್ಟಿಯಿಂದ ಆಡಳಿತ ವಿಕೇಂದ್ರೀಕರಣ ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದಲೂ ಬೆಳಗಾವಿ ವಿಭಜನೆಗೆ ಆಗ್ರಹಿಸಲಾಗುತ್ತಿದೆ. ಆದರೆ, ಸಣ್ಣ ಸಣ್ಣ ಜಿಲ್ಲೆಗಳು ಒಡೆದು ಹೋಳಾಗಿವೆಯೇ ಹೊರತು, ಬೆಳಗಾವಿ ಮಾತ್ರ ವಿಭಜನೆಯಾಗುತ್ತಿಲ್ಲ. ಕಾಂಗ್ರೆಸ್ ಶಾಸಕ ಭರಮಗೌಡ (ರಾಜು) ಕಾಗೆ ಕೆಲವು ದಿನಗಳ ಹಿಂದೆಯಷ್ಟೇ ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಸಿಎಂಗೆ ಪತ್ರ ಬರೆದು ಜಿಲ್ಲಾ ವಿಭಜನೆಗೆ ಮನವಿ ಮಾಡಿದ್ದರು. ಈಗ ಅಧಿವೇಶನದಲ್ಲೂ ಈ ಕುರಿತು ಚರ್ಚೆಯಾಗುತ್ತಿದೆ. ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವಂತೆ…
ಬೆಂಗಳೂರು: ಐಪಿಎಲ್ ಟೂರ್ನಿ ಆರಂಭವಾದರೆ ಸಾಕು ಭಾರತೀಯರ ಸಂತಸಕ್ಕೆ ಪಾರವೇ ಇಲ್ಲ. ಭಾರತೀಯ ಕ್ರೀಡಾಭಿಮಾನಿಗಳ ಪಾಲಿಗೆ ಐಪಿಎಲ್, ವಿಶ್ವಕಪ್ ಗಿಂತಲೂ ದೊಡ್ಡದು. ಈಗ 2026 ರ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಐಪಿಎಲ್ ಗಾಗಿ ಸದ್ಯದಲ್ಲೇ ಮಿನಿ ಹರಾಜು ಕೂಡ ನಡೆಯಲಿದೆ. ಐಪಿಎಲ್, ಬಿಸಿಸಿಐಗೆ ಸಾಕಷ್ಟು ಲಾಭ ತಂದು ಕೊಟ್ಟಿದೆ. ಆದರೆ, ಈಗ ಅದರ ಕ್ರೇಜ್ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವರ್ಷದಿಂದ ವರ್ಷಕ್ಕೆ ಐಪಿಎಲ್ ಕ್ರೇಜ್ ಕಡಿಮೆಯಾಗುತ್ತಿದೆ. ಏಕೆಂದರೆ ಐಪಿಎಲ್ ತಂಡಗಳ ಬ್ರಾಂಡ್ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತವಾಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಸದ್ಯದ ಮಾಹಿತಿಯಂತೆ ಗುಜರಾತ್ ಟೈಟಾನ್ಸ್ ಹೊರತುಪಡಿಸಿ ಪ್ರತಿಯೊಂದು ತಂಡದ ಬ್ರಾಂಡ್ ಮೌಲ್ಯವು ಕುಸಿದಿದೆ. ರಾಜಸ್ಥಾನ ರಾಯಲ್ಸ್ ತಂಡದ ಬ್ರಾಂಡ್ ಮೌಲ್ಯ ಶೇ. 35ರಷ್ಟು ಕುಸಿತ ಕಂಡಿದೆ ಎನ್ನಲಾಗುತ್ತಿದೆ. ಇನ್ನುಳಿದಂತೆ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಬ್ರಾಂಡ್ ಮೌಲ್ಯ ಶೇ. 34, ಕೋಲ್ಕತ್ತಾ ನೈಟ್ ರೈಡರ್ಸ್ ಮೌಲ್ಯ ಶೇ. 33, ಡೆಲ್ಲಿ…
ಬೀದರ್: ವಿದ್ಯಾರ್ಥಿನಿಯೋರ್ವಳು ತಾನೇ ಪ್ರತಿದಿನ ಶಾಲೆಗೆ ತೆರಳುತ್ತಿದ್ದ ಬಸ್ ಗೆ ಸಿಲುಕಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಈ ಘಟನೆ ಜಿಲ್ಲೆಯ (Bidar) ಜನವಾಡ ಗ್ರಾಮದಲ್ಲಿ ನಡೆದಿದೆ. 8 ವರ್ಷದ ಬಾಲಕಿ (School Girl) ರುತ್ವಿ ಸಾವನ್ನಪ್ಪಿರುವ ದುರ್ದೈವಿ. ಬಾಲಕಿ ರುತ್ವಿ ಜನವಾಡದಲ್ಲಿರುವ ಗುರುನಾನಕ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದಳು. ರುತ್ವಿ ಗಡಿಕುಶನೂರು ಗ್ರಾಮದವಳು ಎನ್ನಲಾಗಿದೆ. ಡಿ. 9ರಂದು ಶಾಲೆ ಮುಗಿದ ನಂತರ ಮನೆಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಶಾಲೆಯಿಂದ ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಗಡಿಕುಶನೂರು ಗ್ರಾಮದ ರುತ್ವಿ ಬಸ್ ಇಳಿದು ನಿಂತಿದ್ದನ್ನು ಗಮನಿಸದ ಡ್ರೈವರ್ ಮುಂದಕ್ಕೆ ವಾಹನ ಚಲಾಯಿಸಿದ್ದಾನೆ. ಆ ವೇಳೆ ವಾಹನದ ಹಿಂದಿನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾಳೆ. ಬಸ್ ಚಾಲಕ ಚಾಲಕ, ಗುರುನಾನಕ್ ಶಾಲೆಯಿಂದ ಮನೆಯ ವರೆಗೂ ಡ್ರಾಪ್ ಮಾಡಿದ್ದ. ಬಾಲಕಿ ಸ್ಕೂಲ್ ಬಸ್ ಇಳಿದು ಪಕ್ಕದಲ್ಲೇ ನಿಂತಿರುವುದನ್ನು ಗಮನಿಸದೆ ಚಲಾಯಿಸಿದ್ದ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾಳೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ…
ಹಾಸನ: ಯುವಕನೋರ್ವ ಕೊಲೆ ಮಾಡಿ, ಶವದ ಮುಂದೆ ನಿಂತು ಸೆಲ್ಫಿ ವಿಡಿಯೋ(Selfie Video) ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಭಯಾನಕ ಘಟನೆಯೊಂದು ನಡೆದಿದೆ. ಈ ಘಟನೆ ನಗರದ (Hassan) ಬಿಟ್ಟಗೋಡನಹಳ್ಳಿ ಬೈಪಾಸ್ ರಸ್ತೆಯ ಹತ್ತಿರ ನಡೆದಿದೆ. ತಾಲೂಕಿನ ಹೂವಿನಹಳ್ಳಿ ಕಾವಲು ಗ್ರಾಮದ ಕೀರ್ತಿ ಕೊಲೆಯಾಗಿರುವ ಯುವಕ ಎನ್ನಲಾಗಿದೆ. ಆಲೂರು ತಾಲ್ಲೂಕಿನ ಕಣಗಾಲ್ ಗ್ರಾಮದ ಉಲ್ಲಾಸ್ ಹಾಗೂ ಆತನ ಸ್ನೇಹಿತರು ಕೊಲೆ ಮಾಡಿರುವ ಆರೋಪಿಗಳು ಎನ್ನಲಾಗಿದೆ. ಆರೋಪಿಗಳು ಕಲ್ಲು ಎತ್ತಿ ಹಾಕಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಂತರ ಶವದ ಮುಂದೆ ನಿಂತು ಕೊಲೆ ಮಾಡಿರುವುದಾಗಿ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ ಎನ್ನಲಾಗಿದೆ. ಕೊಲೆಯಾಗಿರುವ ಕೀರ್ತಿ ಹಾಗೂ ಉಲ್ಲಾಸ್ ಇಬ್ಬರೂ ಆಟೋ ಚಾಲಕರು ಎನ್ನಲಾಗಿದೆ. ಇಬ್ಬರು ಸ್ನೇಹಿತರಾಗಿದ್ದರು. ಆದರೆ, ಸೋಮವಾರದ ದಿನ ಇಬ್ಬರ ಮಧ್ಯೆ ಜಗಳವಾಗಿದೆ. ಇದರಿಂದ ಕೋಪಗೊಂಡ ಉಲ್ಲಾಸ್, ತನ್ನ ಸ್ನೇಹಿತರೊಂದಿಗೆ ಗಾಂಜಾ ಸೇವಿಸಿ ಕೀರ್ತಿ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.…
ಬೆಂಗಳೂರು: ಮಹಿಳಾ ನೌಕರರಿಗೆ ಋತುಚಕ್ರದ ವೇಳೆ ಒಂದು ದಿನ ವೇತನ ಸಹಿತ ರಜೆ ನೀಡುವ ಬಗ್ಗೆ ಸರ್ಕಾರ ಆದೇಶ ನೀಡಿತ್ತು. ಆದರೆ, ಈ ನಿರ್ಧಾರವನ್ನು ಬೆಂಗಳೂರು ಹೋಟೆಲ್ ಗಳ ಸಂಘ ವಿರೋಧಿಸಿತ್ತು. ಅಲ್ಲದೇ, ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸರ್ಕಾರಕ್ಕೆ ಇಂತಹ ನಿಯಮವನ್ನು ವಿಧಿಸಲು ಕಾನೂನು ಅಧಿಕಾರವಿಲ್ಲ ಎಂದು ವಾದಿಸಿತ್ತು.ವಿಚಾರಣೆ ನಡೆಸಿರುವ ಕೋರ್ಟ್, ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ಸರ್ಕಾರದ ಮುಟ್ಟು ರಜೆಯನ್ನು ಮಹಿಳಾ ಉದ್ಯೋಗಿಗಳು ಸ್ವಾಗತಿಸಿದ್ದರು. ಬಹುತೇಕ ಸಂಸ್ಥೆಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿತ್ತು ಕೂಡ. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ವಿವರವಾದ ಪ್ರತಿಕ್ರಿಯೆಯನ್ನು ನ್ಯಾಯಾಲಯ ಕೋರಿದೆ. ಅಲ್ಲದೇ, ಚಳಿಗಾಲದ ರಜೆಯ ನಂತರ ಮುಂದಿನ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ. ಈ ಹಿನ್ನೆಲೆಯಲ್ಲಿ ಮುಟ್ಟು ರಜೆಗೆ ತಡೆಯಾಜ್ಞೆ ಬಿದ್ದಿದೆ. ಋತುಚಕ್ರದ ಸಮಯದಲ್ಲಿ ಪ್ರತಿ ತಿಂಗಳು ಒಂದು ದಿನದ ರಜೆಯಂತೆ ವರ್ಷಕ್ಕೆ 12 ದಿನಗಳ ವೇತನ ಸಹಿತ ರಜೆಯ ಸೌಲಭ್ಯವನ್ನು ಉದ್ಯೋಗದಾತರು ಒದಗಿಸಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿತ್ತು. ಈಗ ಆದೇಶಕ್ಕೆ ವಿಘ್ನ ಶುರುವಾಗಿದ್ದು,…
ಬೆಂಗಳೂರು: ಕ್ರಿಕೆಟ್ ಅಂಗಳಕ್ಕೆ ನಿವೃತ್ತಿ ಹೇಳಿರುವ ಯುವರಾಜ್ ಸಿಂಗ್ ಮದ್ಯ ಮಾರಾಟಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ದುಬಾರಿ ಬೆಲೆಯ ಮದ್ಯ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಯುವರಾಜ್ ಸಿಂಗ್ ಅವರು ಪ್ರೀಮಿಯಂ ಟಕಿಲಾ ಬ್ರ್ಯಾಂಡ್ “ಫಿನೋ” ಅನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಗುರುಗ್ರಾಮದ ಕೋಕಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುರೇಶ್ ರೈನಾ, ಯಜುವೇಂದ್ರ ಚಾಹಲ್ ಮತ್ತು ಮೊಹಮ್ಮದ್ ಕೈಫ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ಉದ್ಯೋಗವನ್ನು ಯುವರಾಜ್ ಸಿಂಗ್, ಭಾರತೀಯ-ಅಮೇರಿಕನ್ ಉದ್ಯಮಿಗಳ ಸಹಯೋಗದೊಂದಿಗೆ ಪ್ರಾರಂಭಿಸಿದ್ದಾರೆ. ಭಾರತದಲ್ಲಿ ಈ ಬ್ರ್ಯಾಂಡ್‌ನ ನೇತೃತ್ವವನ್ನು ಆಯೇಷಾ ಗುಪ್ತಾ ವಹಿಸಿದ್ದಾರೆ. ಈಗಾಗಲೇ ಈ ಬ್ರ್ಯಾಂಡ್ ದೆಹಲಿ, ಹರಿಯಾಣ ಮತ್ತು ಮಹಾರಾಷ್ಟ್ರದ ಆಯ್ದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಿದೆ. ಫಿನೋ ನಾಲ್ಕು ವಿಭಿನ್ನ ವೇರಿಯಂಟ್ ಗಳಲ್ಲಿ ಬಿಡುಗಡೆಯಾಗಿದ್ದು, ಪ್ರತಿಯೊಂದೂ ಬಾಟಲಿಗೂ 10 ಸಾವಿರಕ್ಕೂ ಅಧಿಕ ಬೆಲೆ ಇದೆ. ಫಿನೋ ಟಕಿಲಾ ಶುದ್ಧತೆಗೆ ಹೆಸರುವಾಸಿಯಾಗಿದ್ದು, ಈ ಮದ್ಯವನ್ನು ಶೇ. 100ರಷ್ಟು ಬ್ಲೂ ವೆಬರ್ ಅಗೇವ್ ನಿಂದ ತಯಾರಿಸಲಾಗುತ್ತದೆ.
ಬೆಂಗಳೂರು: ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಆಗ್ರಹಿಸಿ ರೈತರು ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಿದ್ದರು. ನಂತರ ಸರ್ಕಾರವು ಕಬ್ಬಿಗೆ ದರ ನಿಗದಿ ಮಾಡಿತ್ತು. ಇದನ್ನು ಪ್ರಶ್ನಿಸಿ ಸಕ್ಕರೆ ಕಾರ್ಖಾನೆಗಳು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, ಸರ್ಕಾರಕ್ಕೆ ನೋಟಿಸ್ ನೀಡಿದೆ. ರಿಟ್ ಅರ್ಜಿಯ ಹಿನ್ನೆಲೆಯಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ಮುಂದಿನ ವಿಚಾರಣೆಯನ್ನು ಡಿ. 17ಕ್ಕೆ ನಿಗದಿ ಪಡಿಸಿದೆ. ರೈತರ ಹೋರಾಟದ ನಂತರ ರಾಜ್ಯ ಸರ್ಕಾರವು ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 3,250 ರೂ. ದರ ನಿಗದಿ ಮಾಡಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕಟಾವು, ಸಾಗಾಣಿಕೆ ಸೇರಿದರೆ ಕಾರ್ಖಾನೆಗಳಿಗೆ 4,150 ರೂ. ವೆಚ್ಚವಾಗಲಿದೆ. ಇದು ಸಕ್ಕರೆ ಕಾರ್ಖಾನೆಗಳ ನಷ್ಟಕ್ಕೆ ಕಾರಣವಾಗಲಿದೆ ಎಂದು ಮಾಲೀಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೇಣುಕಾ ಶುಗರ್ಸ್,…