Subscribe to Updates
Get the latest creative news from FooBar about art, design and business.
Author: Bosstv News Desk
ಕೊಪ್ಪಳ: ಭೀಕರ ಅಪಘಾತಕ್ಕೆ ಮೂವರು ಯುವಕರು ಬಲಿಯಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ಕೊಪ್ಪಳ (Koppal) ತಾಲೂಕಿನ ಇಂದರಗಿ ಗ್ರಾಮದ ಹತ್ತಿರ ನಡೆದಿದೆ. ಬೈಕ್ ಹಾಗೂ ಬುಲೆರೋ ವಾಹನಗಳ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕೊಪ್ಪಳ ತಾಲೂಕಿನ ಹೊಸಹಳ್ಳಿ ಗ್ರಾಮದ ನಿವಾಸಿಗಳಾದ ವಾಜೀದ್, ರಾಜಾ ಹುಸೇನ್, ಗಂಗಾವತಿ ತಾಲೂಕಿನ ಶ್ರೀರಾಮನಗರದ ಆಸೀಫ್ ಸಾವನ್ನಪ್ಪಿದ ದುರ್ದೈವಿಗಳು ಎನ್ನಲಾಗಿದೆ. ಮೂವರೂ ಯುವಕರು ಬೈಕ್ ನಲ್ಲಿದ್ದರು ಎನ್ನಲಾಗಿದೆ. ಬೈಕ್ ನಲ್ಲಿ ಶ್ರೀರಾಮನಗರದಿಂದ ಹೊಸಹಳ್ಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆಯುತ್ತಿದ್ದಾರೆ. ಬುಲೆರೋ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಬೆಂಗಳೂರು: ಮುಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಇಂದು ಮಹತ್ವದ ದಿನವಾಗಿದೆ. ಮುಡಾ ಹಗರಣ (MUDA Scam) ಪ್ರಕರಣದಲ್ಲಿ ಲೋಕಾಯುಕ್ತ (Lokayukta) ಕ್ಲೀನ್ ಚಿಟ್ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯ ತೀರ್ಪು ನೀಡಲಿದೆ. ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಾದ- ಪ್ರತಿವಾದ ಆಲಿಸಿದ ಕೋರ್ಟ್, ಆದೇಶ ಪ್ರಕಟಿಸಿತ್ತು. ಇಂದು ಆದೇಶ ಪ್ರಕಟವಾಗಲಿದ್ದು, ನ್ಯಾಯಾಲಯ ಬಿ ರಿಪೋರ್ಟ್ ಒಪ್ಪಿದರೆ ಸಿಎಂ ಕುಟುಂಬಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗುತ್ತದೆ. ಇಲ್ಲವಾದರೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂದು ಲೋಕಾಯುಕ್ತದಿಂದ ಅಂತಿಮ ವರದಿ ಸಲ್ಲಿಕೆಯಾಗಲಿದೆ. ಇದು ಸಲ್ಲಿಕೆಯಾದ ನಂತರ ಬಿ ರಿಪೋರ್ಟ್ ಆದೇಶ ಹೊರಬೀಳಲಿದೆ. ಸಿದ್ದರಾಮಯ್ಯ (Siddaramaiah) ಪತ್ನಿ ಮೂಡಾದಿಂದ (MUDA) ಪಡೆದಿದ್ದ 14 ಸೈಟ್‌ಗಳ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ನ್ಯಾಯಾಯಲದ ಮೆಟ್ಟಿಲು ಏರಿದ್ದರು.
ವಾಷಿಂಗ್ಟನ್: ಅಮೆರಿಕ ಸರ್ಕಾರ ಯೋಧರಿಗೆ ಬಂಪರ್ ಗಿಫ್ಟ್ ಘೋಷಿಸಿದೆ. ಅಮೆರಿಕವನ್ನು ವಲಸಿಗರಹಿತ ದೇಶ ಮಾಡುವತ್ತ ಹೆಜ್ಜೆ ಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಈಗಾಗಲೇ ಹಲವಾರು ಕಠಿಣ ವಲಸೆ ನೀತಿಗಳನ್ನು ಜಾರಿಗೆ ತಂದಿದ್ದಾರೆ. ಈ ಮಧ್ಯೆ ಅಲ್ಲಿನ ಸೈನಿಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಅಮೆರಿಕದ ಸ್ಥಾಪನಾ ವರ್ಷಾಚರಣೆಯ ಹಿನ್ನೆಲೆಯಲ್ಲಿ ʻವಾರಿಯರ್ ಡಿವಿಡೆಂಡ್ʼ (Warrior Dividend) ಅಂಗವಾಗಿ ಪ್ರತಿ ಅಮೆರಿಕನ್ ಸೈನಿಕರಿಗೆ (US Soldier) 1,776 ಡಾಲರ್ ಘೋಷಿಸಿದ್ದಾರೆ. ಭಾರತೀಯ ರೂಪಾಯಿಯಂತೆ 1.60 ಲಕ್ಷ ರೂ. ವಿಶೇಷ ನಗದು ಪಾವತಿಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ ದೇಶಾದ್ಯಂತ ಇರುವ 14.5 ಲಕ್ಷ ಸೈನಿಕರು ಕ್ರಿಸ್‌ಮಸ್‌ಗೆ ಮುನ್ನವೇ ತಲಾ 1.60 ಲಕ್ಷ ರೂ. ನೆರವು ಪಡೆಯಲಿದ್ದಾರೆ. ಈ ವಿಷಯವಾಗಿ ಮಾತನಾಡಿರುವ ಟ್ರಂಪ್, 14.5 ಲಕ್ಷ ಮಿಲಿಟರಿ ಸಿಬ್ಬಂದಿಗೆ ವಿಶೇಷ ನಗದು ಪಾವತಿಯ ಬಗ್ಗೆ ಘೋಷಣೆ ಮಾಡಲಾಗಿದೆ. ಇದು ಹೆಮ್ಮೆಯ ಕ್ಷಣ. ರಾಷ್ಟ್ರ ಸ್ಥಾಪನೆಯ ಗೌರವಾರ್ಥವಾಗಿ ಪ್ರತಿ ಸೈನಿಕರಿಗೆ ವಾರಿಯರ್ ಡಿವಿಡೆಂಡ್ ಘೋಷಿಸಿದ್ದೇವೆ ಎಂದಿದ್ದಾರೆ.ಸುಂಕದಿಂದಾಗಿ ನಾವು…
ಬೆಂಗಳೂರು: ಸಿಲಿಕಾನ್ ಸಿಟಿ ಲಕ್ಷಾಂತರ ಜನರಿಗೆ ಅನ್ನದ ಸಿಟಿಯಾಗಿದೆ. ಹೀಗಾಗಿ ಬೆಂಗಳೂರಿಗರು ಎಚ್ಚರಿಕೆಯಿಂದ ಇರಬೇಕಾಗಿದೆ. ಸಿಲಿಕಾನ್ ಸಿಟಿಯಲ್ಲಿ ಇಂದು ಗಾಳಿಯ ಗುಣಮಟ್ಟ (Air Quality) ಹೆಚ್ಚಿನ ಕಳಪೆಯಾಗಿದೆ. ಅಲ್ಲದೇ, ಇಂದು ಇಡೀ ದಿನಾ ತುಂಪಾ ಕಳಪೆಯಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಾಳಿಮಟ್ಟದಲ್ಲಿ ಸರಾಸರಿ ವರದಿಯಾಗಿದೆ. 89 ಮತ್ತು 159 ರ ನಡುವೆ ಈ ಮಟ್ಟ ಇರಲಿದೆ ಎನ್ನಲಾಗಿದೆ. ನಿನ್ನೆ ನಗರದಲ್ಲಿ ಇದೇ ಮಟ್ಟ 85ರಷ್ಟಿತ್ತು. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡು ಬಂದ ಅಪರೂಪದ ಗಾಳಿಯ ಗುಣಮಟ್ಟ ಇದು ಎನ್ನಲಾಗಿದೆ.ಗಾಳಿ ಮಟ್ಟ ಇಳಿಕೆಗೆ PM2.5 ಮತ್ತು PM10 ಪ್ರಮುಖ ಕಾರಣವಾಗಿದ್ದು, PM2.5 ಮಟ್ಟಗಳು ಸುಮಾರು 54 µg/m³ ಆಗಿವೆ. ಈ ಹಿನ್ನೆಲೆಯಲ್ಲಿ ಮಕ್ಕಳು, ವೃದ್ಧರು ಹಾಗೂ ಉಸಿರಾಟದಲ್ಲಿ ತೊಂದರೆ ಎದುರಿಸುತ್ತಿರುವ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಲ್ಲದೇ, ಮೈಸೂರಿನಲ್ಲಿ ಗಾಳಿಯ ಮಟ್ಟ 88 ಇದೆ. ಕಲಬುರ್ಗಿಯಲ್ಲಿ ಅಪಾಯದಲ್ಲಿದೆ. ಶಿವಮೊಗ್ಗದಲ್ಲಿ ಸಾಮಾನ್ಯ ಗಾಳಿ ಮಟ್ಟ ಇದೆ.…
ಬೆಂಗಳೂರು: ಬಿಇ ವಿದ್ಯಾರ್ಥಿಯೋರ್ವನ ನಿರ್ಲಕ್ಷ್ಯಕ್ಕೆ ವೃದ್ಧನ ಬಲಿಯಾಗಿರುವ ಘಟನೆ ನಡೆದಿದೆ. ಸಿಲಿಕಾನ್ ಸಿಟಿಯ (Bengaluru City) ಆರ್‌ಎಂವಿ ಎಕ್ಸ್‌ಟೆನ್ಷನ್ ಹತ್ತಿರ ಈ ಘಟನೆ ನಡೆದಿದೆ. ಚಂದ್ರಶೇಖರ ರೆಡ್ಡಿ (64) ಸ್ಥಳದಲ್ಲೇ ಸಾವನ್ನಪ್ಪಿರುವ ವ್ಯಕ್ತಿ. ಶಿಶಿರ್ ಸುಧೀರ್ ಪಾಟೀಲ್(19) ಎಂಬ ಯುವಕ ಅಡ್ಡಾದಿಡ್ಡಿ ವಾಹನ ಚಲಾಯಿಸಿದ ಪರಿಣಾಮ ವೃದ್ಧ ವ್ಯಕ್ತಿಗೆ ಡಿಕ್ಕಿ ಹೊಡೆಸಿದ್ದಾನೆ. ವೃದ್ಧಗೆ ಗುದ್ದಿದ ನಂತರ ಸಿಯಾಜ್ ಕಾರು ಅಲ್ಲೇ ನಿಂತಿದ್ದ ಎರ್ಟಿಗಾ ಕಾರಿಗೂ ಮತ್ತೆ ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ವೃದ್ಧ ಹಾರಿ ಬಿದ್ದಿದ್ದಾರೆ. ಚಂದ್ರಶೇಖರ್ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೇ, ಶಿಶಿರ್, ಬಿಇ ಪ್ರಥಮ ಸೆಮಿಸ್ಟರ್ ಓದುತ್ತಿದ್ದಾನೆ ಎನ್ನಲಾಗಿದೆ. ಅಲ್ಲದೇ, ಘಟನೆಯಲ್ಲಿ ಯುವತಿ ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡ ಯುವಕ ಹಾಗೂ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಾಸನ: ವಿದ್ಯುತ್ ತಂತಿ ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ (Electric Shock) ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ಹಾಸನದ (Hassan) ಕಾಟೀಹಳ್ಳಿಯ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿಯನ್ನು ಬಿಹಾರ ಮೂಲದ ಬರಿಕುಲ್ (18) ಎಂದು ಗುರುತಿಸಲಾಗಿದೆ. ಅವಘಡದಲ್ಲಿ ಸಲೀಂ (17) ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಅಲ್ಲದೇ, ಮತ್ತೋರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರು ಕಂಬವೇರಿ ವಿದ್ಯುತ್ ತಂತಿ ದುರಸ್ತಿ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರ್ಮಿಕರಿಗೆ ಶಾಕ್ ಹೊಡೆಯುತ್ತಿದ್ದಂತೆ ಅಲ್ಲಿದ್ದವರು ಪರಾರಿಯಾಗಿದ್ದಾರೆ. ಗಾಯಗೊಂಡವರನ್ನು ಸ್ತಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉತ್ತರ ಕನ್ನಡ: ಕಳೆದ ಕೆಲವು ದಿನಗಳಿಂದ ಸರ್ಕಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆಯ ಕರೆಗಳು ಬರುತ್ತಿವೆ. ಈಗ ಮತ್ತೆ ಎರಡು ಕಚೇರಿಗೂ ಬಾಂಬ್ ಬೆದರಿಕೆಯ ಕರೆ ಬಂದಿದೆ. ಉತ್ತರ ಕನ್ನಡದ ಭಟ್ಕಳ ತಹಸೀಲ್ದಾರ್ ಕಚೇರಿ ಹಾಗೂ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಸ್ಫೋಟದ ಬೆದರಿಕೆಯ ಕರೆ ಬಂದಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗುತ್ತಿದೆ. ಸೋಮವಾರವಷ್ಟೇ ಗದಗ ಹಾಗೂ ಮಂಗಳೂರಿನ ಸರ್ಕಾರಿ ಕಚೇರಿಗಳಲ್ಲಿಯೂ ಬಾಂಬ್ ಬೆದರಿಕೆ ಕರೆ ಬಂದಿತ್ತು. ಈಗ ಮತ್ತೊಮ್ಮೆ ಇಂತಹ ಇ-ಮೇಲ್ ಬಂದಿದೆ. ಭಟ್ಕಳ್ ತಹಸೀಲ್ದಾರ್ ಕಚೇರಿಗೆ ಬೆಳಿಗ್ಗೆ 7.25ರ ಸುಮಾರಿಗೆ “ಗೈನಾ ರಮೇಶ್@ಔಟ್‌ಲುಕ್ ಡಾಟ್ ಕಾಂ” ಎಂಬ ಇ-ಮೇಲ್ ಐಡಿಯಿಂದ ಬೆದರಿಕೆಯ ಸಂದೇಶ ಬಂದಿದೆ. ಕಚೇರಿಯಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಲಾಗಿದೆ. “ಎಲ್ಲರನ್ನೂ ತಕ್ಷಣ ತಹಶೀಲ್ದಾರ್ ಕಚೇರಿಯಿಂದ ತೆರವುಗೊಳಿಸಿ” ಎಂದು ಮೇಲ್ ನಲ್ಲಿ ಉಲ್ಲೇಖಿಸಲಾಗಿದೆ. ಸಂದೇಶದ ಒಳಗೆ, ಪ್ರಶಾಂತ್ ಕಿಶೋರ್ ಹಾಗೂ ಸುನೀಲ್ ಕನುಗೋಲು ಮುಂತಾದವರ ಸೂಚನೆಯಂತೆ ತಮಿಳುನಾಡಿನ ಡಿಎಂಕೆ ಸರಕಾರ 2001ರಲ್ಲಿ ಮಾಧ್ಯಮವನ್ನು ಬುಡಮೇಲು…
ಬೆಳಗಾವಿ: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಯ ವಿಚಾರ ದೊಡ್ಡ ಚರ್ಚಿತ ವಿಷಯವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳ ಮಧ್ಯೆ ಇದು ದೊಡ್ಡ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಈ ಮಧ್ಯೆ ಚಳಿಗಾಲದ ಅಧಿವೇಶನದಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ನಾನೇ ಸಿಎಂ ಎಂದು ಹೇಳಿದ್ದಾರೆ. ಸದನದಲ್ಲಿ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ನೀವೇ ಐದು ವರ್ಷ ಸಿಎಂ ಆಗಿರುತ್ತೀರಾ ಸರ್ ಎಂದು ಆರ್. ಅಶೋಕ್ (R.Ashok) ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ (Siddaramaiah) ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಷೇರು ಧನ ಕೊಡುವ ವಿಚಾರದಲ್ಲಿ ತಾರತಮ್ಯ ಆಗಿದೆ ಎಂದು ಸದನದಲ್ಲಿ ಕುಣಿಗಲ್ ರಂಗನಾಥ್ ಪ್ರಶ್ನಿಸಿದ್ದರು. ಆ ವೇಳೆ ಈ ಸ್ವಾರಸ್ಯಕರ ಚರ್ಚೆ ನಡೆಯಿತು. ಐದು ವರ್ಷ ನೀವೇ ಇರಿ ಎಂದು ಜನರು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ. ಅದನ್ನು ನೀನ್ಯಾಕೇ ಕೇಳ್ತೀಯಾ? ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆಗ ಆರ್. ಅಶೋಕ್, ನಾವು…
ಬೆಂಗಳೂರು: ಭಾರೀ ಏರಿಕೆಯ ಹಾದಿಯಲ್ಲಿರುವ ಚಿನ್ನದ ಬೆಲೆ ಇಂದು ಸ್ವಲ್ಪ ಇಳಿಕೆ ಕಂಡಿದೆ. ಹೀಗಾಗಿ ಚಿನ್ನ ಪ್ರಿಯರು ಸಂತಸ ಪಡುತ್ತಿದ್ದಾರೆ. ಸೋಮವಾರವಷ್ಟೇ 75 ರೂ. ನಷ್ಟು ಏರಿಕೆ ಕಂಡಿದ್ದ ಚಿನ್ನದ ಬೆಲೆ (Gold rate) ಇಂದು 80 ರೂ. ಇಳಿಕೆ ಕಂಡಿದೆ. ಹೀಗಾಗಿ ಅಪರಂಜಿ ಚಿನ್ನದ ಬೆಲೆ 13,400 ರೂ ಗಡಿಗೆ ಬಂದಿದೆ. ಆಭರಣ ಚಿನ್ನದ ಬೆಲೆಯೂ 12,300 ರೂ ಗಡಿಗೆ ಬಂದು ನಿಂತಿದೆ.ಆದರೆ, ಸೋಮವಾರ ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದ್ದು, 3 ರೂ.ನಷ್ಟು ಏರಿಕೆಯಾಗಿದೆ. ದೇಶದಲ್ಲಿ ಇಂದು 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 1,22,700 ರೂ.ಆಗಿದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 1,33,860 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 19,900 ರೂ. ಇದೆ. ಅಲ್ಲದೇ, ಸಿಲಿಕಾನ್ ಸಿಟಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,22,700 ರೂ. ಇದೆ. ಬೆಳ್ಳಿ ಬೆಲೆ 100 ಗ್ರಾಮ್ಗೆ 19,900 ರೂ. ದರ ಆಗಿದೆ. ಭಾರತದಲ್ಲಿ ಚಿನ್ನಾಭರಣ ಬೆಲೆ24…
ಬೆಂಗಳೂರು : ರಾಜ್ಯದಲ್ಲಿ ಸಿಎಂ ಕುರ್ಚಿಯ ಬದಲಾವಣೆಯ ಕೂಗು ಭಾರೀ ಸದ್ದು ಮಾಡುತ್ತಿದೆ. ಕ್ಷಣಕ್ಷಣಕ್ಕೊಂದು ಮಾಹಿತಿ ಹೊರ ಬರುತ್ತಿದ್ದು, ಜನರು ಕುತೂಹಲದಿಂದ ಏನಾಗಬಹುದು ಎಂದು ಕಾಯುತ್ತಿದ್ದಾರೆ. ತಾಳಿಗರೆಗಳಿಂದ ಭವಿಷ್ಯ ನುಡಿಯುತ್ತಿರುವ ಕೋಡಿಮಠದ ಶ್ರೀ ಈಗ ಮತ್ತೊಂದು ಭಯಾನಕ ಭವಿಷ್ಯ ನುಡಿದ್ದಾರೆ. ಸಂಕ್ರಾಂತಿಯ ವೇಳೆ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗುತ್ತದೆ ಎಂದು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ಭವಿಷ್ಯ ಹಲವು ಕುತೂಹಲಕ್ಕೆ ಕಾರಣವಾಗುತ್ತಿದೆ. ಸಂಗಮೇಶನು ಅರಿವನೆ, ಆದರೆ ಒಳಹಡ್ಡ ಬಂದಿದೆ, ಶಿವನ ಮುಡಿಯ ಎರಡು ದುಂಡು ಮಲ್ಲಿಗೆಗಳು ಶಿವನ ಬಲಪಾದ ಸೇರಿಯಾವು, ಮುಂದೆ ಸುಖ್ಯಾಂತ್ಯವಾಗಲಿದೆ. ಸಂಕ್ರಾಂತಿ, ಬಜೆಟ್ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದೆ. ಸುಖಾಂತ್ಯ ಯಾರಿಗಾದರೂ ಆಗಬಹುದು’. ಸಂಕ್ರಾಂತಿಯ ಶುಭಪರ್ವದಲ್ಲಿ ಕರ್ನಾಟಕ ಕಾಂಗ್ರೆಸ್ಸಿನ ರಾಜಕೀಯ ಸುಖಾಂತ್ಯ ಕಾಣಲಿದೆ ಎಂದು ಶ್ರೀ ಹೇಳಿದ್ದಾರೆ. ಇದ ಹಲವಾರು ಚರ್ಚೆಗಳಿಗೆ ಇಂಬು ನೀಡಿದೆ. ಕಾಂಗ್ರೆಸ್ಸಿನ ಅಧಿಕಾರ ಹಸ್ತಾಂತರದ ಸುಖಾಂತ್ಯ, ಸಂಕ್ರಾಂತಿ, ರಾಜ್ಯ ಬಜೆಟ್ ನಂತರ ಎಂದು ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು…