Author: Bosstv News Desk

ರಿಯಾದ್‌: 56 ಸಾವಿರ ಪಾಕಿಸ್ತಾನಿ ಭಿಕ್ಷುಕರನ್ನು(Pakistani Beggars) ಸೌದಿ ಅರೇಬಿಯಾದಿಂದ (Saudi Arabia) ಹೊರ ಹಾಕಲಾಗಿದೆ ಎಂದು ವರದಿಯಾಗಿದೆ. ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪಾಕಿಸ್ತಾನಿ ಪ್ರಜೆಗಳ ತಪಾಸಣೆ ಹೆಚ್ಚಿಸಿದ್ದು, ಈ ಭಿಕ್ಷಾಟನೆಯ ದೇಶದ ಅಂತಾರಾಷ್ಟ್ರೀಯ ಪ್ರತಿಷ್ಠೆಗೆ ಹಾನಿ ಮಾಡುತ್ತಿದೆ ಎಂದು ಹೇಳಿದೆ. ಅಲ್ಲದೇ, ಪಾಕ್ ಗೆ ಖಡಕ್ ಎಚ್ಚರಿಕೆಯನ್ನೂ ನೀಡಿದೆ. ಈ ಹಿನ್ನೆಲೆಯಲ್ಲಿ 56 ಸಾವಿರ ಪಾಕಿಸ್ತಾನಿ ಭಿಕ್ಷುಕರನ್ನು ಗಡಿಪಾರು ಮಾಡಿದೆ. ಯುಎಇ ಹೆಚ್ಚಿನ ಪಾಕಿಸ್ತಾನಿ ನಾಗರಿಕರ ಮೇಲೆ ವೀಸಾ ನಿರ್ಬಂಧಗಳನ್ನು ವಿಧಿಸಿದೆ. ಕೆಲವರು ದೇಶಕ್ಕೆ ಬಂದ ನಂತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಕೂಡ ಕಳವಳ ವ್ಯಕ್ತಪಡಿಸಿದೆ. ಸೌದಿ ಅರೇಬಿಯಾ ಈ ವರ್ಷ ಭಿಕ್ಷಾಟನೆ ಆರೋಪದ ಮೇಲೆ 24,000 ಪಾಕಿಸ್ತಾನಿಗಳನ್ನು ಗಡಿಪಾರು ಮಾಡಿದಂತಾಗಿದೆ. ದುಬೈನಿಂದ ಸುಮಾರು 6 ಸಾವಿರ ವ್ಯಕ್ತಿಗಳು ಮರಳಿ ಹೋಗಿದ್ದಾರೆ. ಅಜೆರ್ಬೈಜಾನ್ ಸುಮಾರು 2,500 ಪಾಕಿಸ್ತಾನಿ ಭಿಕ್ಷುಕರನ್ನು ಗಡಿಪಾರು ಮಾಡಿದೆ ಎಂದು ವರದಿಯಾಗಿದೆ.

Read More

ಬೆಂಗಳೂರು: ಮುಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಆದೇಶವನ್ನು ಕೋರ್ಟ್ ಮುಂದೂಡಿದೆ. ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧದ ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಕೆಯಾಗಿತ್ತು. ಇದರ ಆದೇಶವನ್ನು ಕೋರ್ಟ್ ಡಿ. 23ಕ್ಕೆ ಕಾಯ್ದಿರಿಸಿದೆ. ಲೋಕಾಯುಕ್ತ ಸಲ್ಲಿಕೆ ಮಾಡಿದ್ದ ಬಿ ರಿಪೋರ್ಟ್ ಪ್ರಶ್ನಿಸಿ, ದೂರುದಾರ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಕೇಸ್ ಡೈರಿ ನೀಡುವಂತೆ ಎಸ್‌ಪಿಪಿ ಸೂಚನೆ ನೀಡಿದೆ. ಬಿ-ರಿಪೋರ್ಟ್ ಸಂಬಂಧಿಸಿದಂತೆ ಹೆಚ್ಚುವರಿ ವಾದವಿದ್ದರೆ ಸಲ್ಲಿಸುವಂತೆ ಇಡಿ, ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದೆ. ಅಲ್ಲದೇ, ಅಂತಿಮ ವರದಿ ಸಲ್ಲಿಕೆ ಮಾಡದಿರುವು ಬಗ್ಗೆ ಕೂಡ ಕೋರ್ಟ್ ಪ್ರಶ್ನಿಸಿದೆ. ಉತ್ತರಿಸಿದ ವೆಂಕಟೇಶ್ ಅರಬಾಟಿ, ಈಗಾಗಲೇ ಅಂತಿಮ ವರದಿ ತಯಾರಿ ಆಗಿದೆ. ಅನುಮತಿ ಸಿಗದ ಕಾರಣ ಸಲ್ಲಿಸಿಲ್ಲ. ಸಮಯ ನೀಡಿದರೆ ಸಲ್ಲಿಸಲು ಸಿದ್ಧ ಎಂದು ಹೇಳಿದ್ದಾರೆ. ಆಕ್ಷೇಪ ವ್ಯಕ್ತಪಡಿಸಿದ ದೂರುದಾರ ಸ್ನೇಹಮಯಿ ಕೃಷ್ಣ, ಕೋರ್ಟ್ ದಾರಿ ತಪ್ಪಿಸುವ…

Read More

ನವದೆಹಲಿ: ಬುರ್ಖಾ ಧರಿಸದೆ ಹೊರಗೆ ಹೋಗಿದ್ದಕ್ಕೆ ಪತ್ನಿ ಹಾಗೂ ಮಕ್ಕಳನ್ನು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ನಂತರ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಡಿ. 10ರಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ 33 ವರ್ಷದ ಫಾರೂಕ್ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದ. ನಂತರ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಕೊಲೆ ಮಾಡಿದ್ದ. ನಂತರ ತನ್ನ ಮನೆಯೊಳಗೆ 3 ಶವಗಳನ್ನು ಹೂತು ಹಾಕಿದ್ದ ಎನ್ನಲಾಗಿದೆ. ಆರೋಪಿಯು ಪತ್ನಿ ತಾಹಿರಾ (32)ಗೆ ಬುರ್ಖಾ ಹಾಕದೆ ಹೊರಗೆ ಹೋಗುವಂತಿಲ್ಲ ಎಂದು ತಾಕೀತು ಮಾಡಿದ್ದ ಎನ್ನಲಾಗಿದೆ. ಆದರೆ, ಫಾರೂಕ್ ಮನೆಯ ಖರ್ಚುಗಳಿಗೆ ಸರಿಯಾಗಿ ಹಣ ನೀಡದಿದ್ದಕ್ಕೆ ಪತ್ನಿ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಹೀಗೆ ಜಗಳವಾಡಿದ ನಂತರ ಇತ್ತೀಚೆಗೆ ಬುರ್ಖಾ ಧರಿಸದೆ ತಾಹಿರಾ, ಮುಜಫರ್ ನಗರದ ನಾರಾ ಗ್ರಾಮದಲ್ಲಿರುವ ತನ್ನ ತಾಯಿ ಮನೆಗೆ ಹೋಗಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಆರೋಪಿಯು ಡಿ. 10ರಂದು ರಾತ್ರಿ…

Read More

ಮಂಗಳೂರು: ಗಡಿಪಾರು ಶಿಕ್ಷೆಗೆ ಒಳಗಾಗಿರುವ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ರಾಯಚೂರು ಜಿಲ್ಲೆಯ ಮಾನ್ವಿ (Manvi)ಗೆ ಗಡಿಪಾರಾಗಿದ್ದಾರೆ. ಈ ಕುರಿತು ಪುತ್ತೂರು ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹಿಂದೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದನ್ನು ತಿಮರೋಡಿ ಹೈಕೋರ್ಟ್‌ನಲ್ಲಿ(High Court) ಪ್ರಶ್ನಿಸಿದ್ದರು. ಹೈಕೋರ್ಟ್ (High Court) ಅರ್ಜಿಯನ್ನು ಮರು ಪರಿಶೀಲಿಸಿತ್ತು. ಅರ್ಜಿ ಆದೇಶ ಮರುಪರಿಶೀಲನೆ ಮಾಡಿ ಒಂದು ವರ್ಷ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿಗೆ ಗಡಿಪಾರು ಮಾಡಿ ಡಿ.17ರಂದು ಆದೇಶ ಹೊರಡಿಸಲಾಗಿದೆ. ಗಡಿಪಾರು ಆದೇಶ ಪ್ರತಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದಿದೆ. ಈ ಸಂದರ್ಭದಲ್ಲಿ ಅವರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಪೊಲೀಸರು ಮನೆಗೆ ಹೋಗಿ ನೋಟಿಸ್‌ ಅಂಟಿಸಿ ಬಂದಿದ್ದಾರೆ. ತಿಮರೋಡಿಯನ್ನು ಒಂದು ವರ್ಷ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಸೆ.20 ರಂದು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದರು. ತಿಮರೋಡಿ ಮೇಲೆ ಸುಮಾರು 32 ಪ್ರಕರಣಗಳು…

Read More

ಬೆಳಗಾವಿ: ಬೆಳಗಾವಿ ಸುವರ್ಣಸೌಧದಲ್ಲಿ ಇಂದು ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ(ತಡೆ, ನಿಷೇಧ ಮತ್ತು ಪರಿಹಾರ)- ಮಸೂದೆ 2025ನ್ನು ಅಂಗೀಕರಿಸಲಾಯಿತು. ಹೀಗಾಗಿ ಇನ್ನು ಮುಂದೆ ಸಾಮಾಜಿಕ ಬಹಿಷ್ಕಾರ ಹಾಕುವುದು ಶಿಕ್ಷಾರ್ಹ ಅಪರಾಧವಾಗಿದೆ. ವಿಧೇಯಕ ಕುರಿತಾಗಿ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಈ “ವಿಧೇಯಕವನ್ನು ಯಾರೂ ವಿರೋಧಿಸುವುದಿಲ್ಲ. ನಮ್ಮದು ಒಂದೇ ರಕ್ತ ಎಂದು ಹೇಳುತ್ತಾರೆ. ಆದರೆ ಸಲೂನಿನಲ್ಲಿ ದಲಿತರು ಬಂದಿದ್ದಾರೆ ಎಂದು ಬಹಿಷ್ಕಾರ ಹಾಕಲಾಗಿದೆ. ಜಾತಿ ತಾರತಮ್ಯ ಅಕ್ಷಮ್ಯ ಅಪರಾಧ. ಹೀಗಾಗಿ ಈ ವಿಧೇಯಕವನ್ನು ಸ್ವಾಗತ ಮಾಡುತ್ತೇವೆ ಎಂದು ಹೇಳಿದರು. ಆನಂತರ ಈ ವಿಧೇಯಕದ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ, ನೇಮಿರಾಜ್ ನಾಯ್ಕ, ಹರೀಶ್ ಪೂಂಜಾ ಸೇರಿದಂತೆ ಹಲವರು ಮಾತನಾಡಿದರು. ಈ ವಿಧೇಯಕದ ಪ್ರಕಾರ ಇನ್ನು ಮುಂದೆ, ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ 1 ಲಕ್ಷ ರೂ. ದಂಡ ಹಾಗೂ 3 ವರ್ಷದವರೆಗಿನ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ. ಅಲ್ಲದೇ, ಸಾಮಾಜಿಕ ಬಹಿಷ್ಕರಿಸುವ…

Read More

ಬೆಂಗಳೂರು: ರಾಜ್ಯದಲ್ಲಿ ಗಾಳಿ ಕಲುಷಿತವಾಗುತ್ತಿರುವ ಸಮಸ್ಯೆ ಒಂದು ಕಡೆಯಾದರೆ, ಚಳಿಯ ಕಾಟ ಮತ್ತೊಂದು ಕಡೆ. ನಾಳೆ ಉತ್ತರ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳಲ್ಲಿ ಹೆಚ್ಚು ಚಳಿ ಇರುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೇ ಹೆಚ್ಚು ಚಳಿ ಇರುವ ಸಾಧ್ಯತೆ ಇದೆ. ಬೀದರ್, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಾಳೆ ಹೆಚ್ಚಿನ ಪ್ರಮಾಣದಲ್ಲಿ ಶೀತಗಾಳಿ ಬೀಸಲಿದೆ ಎನ್ನಲಾಗುತ್ತಿದೆ. ಅಲ್ಲದೇ, ಇನ್ನುಳಿದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಚಳಿ ಇರುವ ಸಾಧ್ಯತೆ ಇದೆ. ಇನ್ನುಳಿದಂತೆ ದಕ್ಷಿಣ ಒಳನಾಡು ಮತ್ತು ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಅಥವಾ ಸಾಧಾರಣ ಚಳಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಮೈಸೂರು, ಮಂಡ್ಯ ಮತ್ತು ಹಾಸನದಲ್ಲಿ ನಾಳೆ ಒಣ ಹಾಗೂ ಚಳಿಯ ಎರಡೂ ಅನುಭವವಾಗುವ ಸಾಧ್ಯತೆ ಇದೆ. ಬೆಳಗ್ಗೆ ತಂಪು ಹೆಚ್ಚಾಗಿರಲಿದ್ದು, ನಂತರ ಒಣ ಹವೆ…

Read More

ಮಂಡ್ಯ: ಬೆದರಿಕೆ ಹಾಕಿದ್ದ ರೌಡಿಶೀಟರ್ ನನ್ನೇ ಹತ್ಯೆ ಮಾಡಿರುವ ಘಟನೆಯೊಂದು ಜಿಲ್ಲೆಯ (Mandya) ಪಾಂಡವಪುರ ತಾಲ್ಲೂಕಿನ ಅಮೃತಿ ಗ್ರಾಮದ ಹತ್ತಿರ ನಡೆದಿತ್ತು. ಘಟನೆಯ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಸದ್ಯ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಘಟನೆ ನ. 29ರಂದು ನಡೆದಿತ್ತು. ರೌಡಿ ಶೀಟರ್ ಮಹೇಶ್ ಹತ್ಯೆಯಾಗಿದ್ದ. ಕೊಲೆಯಾದ ನಂತರ ಆರೋಪಿಗಳು ಪರಾರಿಯಾಗಿದ್ದರು. ಇದೀಗ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳು ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಸವರಾಜು, ಶಶಾಂಕ್‌, ಹೇಮಂತ್ ಕುಮಾರ್, ಸುಮಂತ್ ಬಂಧಿತ ಆರೋಪಿಗಳು.ಕೊಲೆಯಾಗಿರುವ ರೌಡಿ ಶೀಟರ್ ಮಹೇಶ್, ಕೊಲೆ ಮಾಡಿರುವ ಆರೋಪಿಗಳ ಗುಂಪಿಗೆ ಹಲವು ದಿನಗಳಿಂದ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಹೀಗಾಗಿ ಗಾಬರಿಗೊಂಡಿದ್ದ ಯುವಕರು, ಸಿನಿಮಾ ಸ್ಟೈಲ್ ನಲ್ಲಿ ರೌಡಿಶೀಟರ್ ನನ್ನೇ ಮುಗಿಸಿದ್ದಾರೆ ಎನ್ನಲಾಗಿದೆ. ಕೊಲೆಯಾಗಿರುವ ಮಹೇಶ ಲಕ್ಷ್ಮೀಸಾಗರದ ನಿವಾಸಿ. ಆತನ ವಿರುದ್ಧ 8 ಪ್ರಕರಣಗಳು ದಾಖಲಾಗಿದ್ದವು. ಆತ 2023ರಲ್ಲಿ ಗಡಿಪಾರು ಕೂಡ ಆಗಿದ್ದ. ಗಡಿಪಾರು ಆಗಿ ಬಂದ ನಂತರ ಆಟೋ ಓಡಿಸಿಕೊಂಡು ಜೀವನ…

Read More

ಬೆಳಗಾವಿ: ರಾಜ್ಯ ಕಾಂಗ್ರೆಸ್ (Congress) ಸರ್ಕಾರವು ದ್ವೇಷ ಭಾಷಣ ನಿಯಂತ್ರಣ ಮಸೂದೆ ಜಾರಿಗೆ ತರುವ ಮೂಲಕ ವಿಪಕ್ಷದ ಧ್ವನಿ ಅಡಗಿಸುವ ಹುನ್ನಾರ ನಡೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(BY Vijayendra) ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವ ವಿರೋದಿ ನಡೆ. ಸ್ಪೀಕರ್ ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ಈ ಮಸೂದೆ ಮೂಲಕ ಪತ್ರಕರ್ತರ ಧ್ವನಿ ಕೂಡ ನಿಯಂತ್ರಿಸುವ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಯಾರಾದರೂ ತಮ್ಮ ಅಭಿಪ್ರಾಯ ತಿಳಿಸಿದರೆ, ಹತ್ತಿಕ್ಕಿ, 7-8 ವರ್ಷ ಜೈಲಿಗೆ ಹಾಕುವ ದುಸ್ಸಾಹಸಕ್ಕೆ ಕೈ ಹಾಕಿದೆ. ಹೊರಟಿದ್ದಾರೆ ಎಂದು ಆಕ್ಷೇಪಿಸಿದರು. ಮಂಡ್ಯ ಜಿಲ್ಲೆಯ ಸ್ವಾತಂತ್ರ್ಯ ಯೋಧರಿಗೆ 8 ತಿಂಗಳಿಂದ ಈ ಕಾಂಗ್ರೆಸ್ ಸರಕಾರ ಗೌರವಧನ ನೀಡಿಲ್ಲ. ಯಾವನಿಗೋ ದಬ್ಬಾಳಿಕೆ, ಬೆದರಿಕೆ ಹಾಕಿದಂತೆ ನನಗೆ ಬೆದರಿಕೆ ಹಾಕಲು ಬರಬೇಡಿ. ನಾನೂ ಕೂಡ ಜನಸೇವಕ ಎಂದಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರು ಭ್ರಷ್ಟಾಚಾರದ ಕುರಿತು ತಮ್ಮ ಬಾಯಲ್ಲಿ ಮಾತನಾಡದೇ ಇರುವುದು ಒಳ್ಳೆಯದು. ರಾಜ್ಯದ ರಾಜಕೀಯದಲ್ಲಿ…

Read More

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅವಘಡವೊಂದು ನಡೆದಿದ್ದು, ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ನಿರ್ಮಾಣ ಹಂತದ ಕಟ್ಟಡದ 4ನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆ ಬಿದ್ದ ಪರಿಣಾಮ ಮಗು ಸಾವನ್ನಪ್ಪಿದೆ. ಸಿಲಿಕಾನ್ ಸಿಟಿಯ ಎಚ್ ಎಎಲ್ ನ ಚಿನ್ನಪ್ಪನಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಶ್ರೀಶೈಲ್ ಎಂಬುವವರ ಪುತ್ರಿ ಮನುಶ್ರೀ ಅಲಿಯಾಸ್ ಪಾರು(4) ಸಾವನ್ನಪ್ಪಿರುವ ದುರ್ದೈವ ಮಗು. ಸಾವನ್ನಪ್ಪಿದ ಮಗುವಿನ ಕುಟುಂಬಸ್ಥರು ವಿಜಯಪುರ ಮೂಲದವರು ಎನ್ನಲಾಗಿದೆ. ಅಲ್ಲದೇ, ಘಟನೆಯಲ್ಲಿ ಮತ್ತಿಬ್ಬರು ಮಕ್ಕಳು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಎಚ್‌ಎಎಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿ ಸಿಮೆಂಟ್ ಶೀಟ್ನ ಶೆಡ್‌ನಲ್ಲಿ ಕುಟುಂಬ ವಾಸವಾಗಿತ್ತು. ಶ್ರಿಯನ್ (6) ಮತ್ತು ಶೇಖರ್(5) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ಮಾಣ ಹಂತದ ಕಟ್ಟಡವು ಶ್ರೀನಿವಾಸುಲು ಎಂಬುವವರಿಗೆ ಸೇರಿದೆ ಎನ್ನಲಾಗಿದೆ. ಮಾಲೀಕನ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ. 4ನೇ ಮಹಡಿಯಿಂದ ಸುಮಾರು 10 ರಿಂದ 12 ಸಿಮೆಂಟ್ ಇಟ್ಟಿಗೆ ಬಿದ್ದಿವೆ ಎನ್ನಲಾಗಿದೆ.

Read More

ಬೆಂಗಳೂರು: ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಸದ್ಯ ಈ ವದಂತಿಗೆ ವಿಧಾನಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಸ್ಪಷ್ಟನೆ ನೀಡಿದ್ದಾರೆ. ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ಈ ಕುರಿತು ಉತ್ತರ ನೀಡಿದ್ದಾರೆ. ಮೊಟ್ಟೆಯಲ್ಲಿ ಯಾವುದೇ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿಲ್ಲ. ಅದು ತಿನ್ನಲು ಸುರಕ್ಷಿತವಾಗಿದೆ. ಮೊಟ್ಟೆ ಬಗ್ಗೆ ಹಬ್ಬಿರುವುದು ವದಂತಿಯಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಹಿಂದಿನ ವರ್ಷ 147 ಮೊಟ್ಟೆ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಈ ಪೈಕಿ ಒಂದು ಫೇಲ್ ಆಗಿದ್ದು, ಉಳಿದವು ಉತ್ತಮವಾಗಿವೆ. ಮೊಟ್ಟೆ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಮೊಟ್ಟೆಯನ್ನು ಶಾಲಾ ಮಕ್ಕಳಿಗೂ ಕೊಡಬಹುದು ಎಂದು ಹೇಳಿದ್ದಾರೆ. ಮೊಟ್ಟೆಯಲ್ಲಿ `ಜೀನೋಟಾಕ್ಸಿಕ್’ ಕೂಡಿದೆ ಎಂಬ ವಿಡಿಯೋ ಇತ್ತೀಚೆಗೆ ಹರಿದಾಡಿತ್ತು. ಸದ್ಯ ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.

Read More