Subscribe to Updates
Get the latest creative news from FooBar about art, design and business.
Author: Bosstv News Desk
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ (Biklu Shiva) ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್‌ಗೆ (Byrati Basavaraj) ಸಂಕಷ್ಟ ಶುರುವಾಗಿದ್ದು, ಬಂಧನ ಭೀತಿ ಎದುರಾಗಿದೆ. ಬಿಕ್ಲು ಶಿವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ. ಹೀಗಾಗಿ ಮಾಜಿ ಸಚಿವರಿಗೆ ಬಂಧನ ಭೀತಿ ಎದುರಾಗಿದೆ. ಸಿಐಡಿ ಅಧಿಕಾರಿಗಳು ಕೋಕಾ ಕಾಯ್ದೆಯನ್ನು ಬೈರತಿ ಬಸವರಾಜ್ ಮೇಲೆ ಹಾಕಲಾಗಿತ್ತು. ಅದನ್ನು ಪ್ರಶ್ನಿಸಿ ಬೈರತಿ ಬಸವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಸವರಾಜ್‌ಗೆ ಈ ವಿಚಾರದಲ್ಲಿ ರಿಲೀಫ್ ಸಿಕ್ಕಿದೆ. ಆದರೆ, ಬಂಧನದಿಂದ ತಪ್ಪಿಸಿಕೊಳ್ಳಲು ಮಾತ್ರ ಆಗುತ್ತಿಲ್ಲ. ಹೈಕೋರ್ಟ್‌ನಲ್ಲಿಯೇ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ. ನಿಯಮಾನುಸಾರವಾಗಿ ಕೆಳಹಂತದ ನ್ಯಾಯಾಲಯದಲ್ಲಿಯೇ ನಿರೀಕ್ಷಣಾ ಜಾಮೀನು ಪಡೆದುಕೊಳ್ಳಬಹುದು. ನಿರೀಕ್ಷಣಾ ಜಾಮೀನು ತೀರ್ಮಾನ ಮಾಡುವುದು ಕೆಳಹಂತದ ನ್ಯಾಯಾಲಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ, ಜಾಮೀನು ಸಿಗುವವರೆಗೂ ಮಧ್ಯಂತರ ರಕ್ಷಣೆಗೆ ಮನವಿಯನ್ನು ಹೈಕೋರ್ಟ್ ನಿರಾಕರಿಸಿದೆ.
ಕಾರವಾರ: ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು 5 ವರ್ಷವೂ ನಾನೇ ಸಿಎಂ. ನನ್ನ ಪರವಾಗಿಯೇ ಹೈಕಮಾಂಡ್ ಇದೆ. ನಮ್ಮ ಮಧ್ಯೆ ಯಾವ ಒಪ್ಪಂದವೂ ಆಗಿಲ್ಲ ಎಂಬ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಒಪ್ಪಂದ ಆಗಿದೆ ಎಂಬ ಹೇಳಿಕೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂದ್ರೆ ಗ್ರಾಮದ ಜಗದೀಶ್ವರಿ ಅಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನನ್ನ ಹಾಗೂ ಸಿದ್ದರಾಮಯ್ಯ (Siddaramaiah) ಮಧ್ಯೆ ಒಪ್ಪಂದ ಆಗಿದೆ. ನಾವಿಬ್ಬರೂ ಮಾತನಾಡಿಕೊಂಡಿದ್ದೇವೆ. ಹೈಕಮಾಂಡ್(High Command) ಸಿದ್ದರಾಮಯ್ಯ ಪರ ಇರುವುದರಿಂದಲೇ ಅವರು ಸಿಎಂ ಆಗಿದ್ದಾರೆ. ನಾವು ಒಪ್ಪಂದದಂತೆಯೇ ನಡೆದುಕೊಳ್ಳುತ್ತೇವೆ ಎಂದಿದ್ದಾರೆ. 5 ವರ್ಷದ ಹಿಂದೆ ಈ ಸ್ಥಳಕ್ಕೆ ಬಂದು ಪ್ರಾರ್ಥನೆ ಮಾಡಿದ್ದೆ. ಅದು ಈಗ ಈಡೇರಿದೆ. ಹೀಗಾಗಿ ಬಂದಿದ್ದೇನೆ. ಮುಂದೆಯೂ ಬರುತ್ತೇನೆ. ತಾಯಿ ಆಶೀರ್ವಾದ ಮಾಡು ಎಂದು ಕೇಳಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಶಕ್ತಿ ದೇವತೆಯಾಗಿರುವ ಜಗದೀಶ್ವರಿ ಅಮ್ಮನವರ…
ಬೆಂಗಳೂರು: ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಕಿರಾತಕನೊಬ್ಬ ಭೀಕರವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ. ಮನೆ ಮುಂದೆ ಆಟವಾಡುತ್ತಿದ್ದ ಬಾಲಕನಿಗೆ ಕಿರಾತಕ ಹಿಂಬದಿಯಿಂದ ಜಾಡಿಸಿ ಒದ್ದಿದ್ದಾನೆ. ಈ ಘಟನೆ ಬೆಂಗಳೂರಿನ ತ್ಯಾಗರಾಜನಗರದಲ್ಲಿ ಡಿ.14ರಂದು ನಡೆದಿದೆ. ಅಜ್ಜಿ ಮನೆಗೆ ಬಂದಿದ್ದ ಬಾಲಕ ನೀವ್ ಜೈನ್ ತನ್ನ ಪಾಡಿಗೆ ತಾನು ರಸ್ತೆಯಲ್ಲಿ ನಿಂತು ಆಟವಾಡುತ್ತಿದ್ದ. ಈ ವೇಳೆ ರಂಜನ್ ಜಾಡಿಸಿ ಒದ್ದಿದ್ದರಿಂದ ಬಾಲಕ ಮುಗ್ಗರಿಸಿ ಬಿದ್ದಿದ್ದಾನೆ. ಫುಟ್ಬಾಲ್ ರೀತಿ ರಂಜನ್ ಒದ್ದಿದ್ದ ಕಾರಣ ಬಾಲಕನಿಗೆ ತರಚಿದ ಗಾಯಗಳಾಗಿವೆ. ಬಾಲಕನನ್ನು ರಂಜನ್ ಒದೆಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿ ವಿರುದ್ಧ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಸ್ಟೇಷನ್ ಬೇಲ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ.
ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ (Winter Session) ಮತ್ತೊಮ್ಮೆ ಕುರ್ಚಿ ಫೈಟ್ ರಾರಾಜಿಸಿದೆ. ಚರ್ಚೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ (Congress) ಕುರ್ಚಿ ಕದನದ ಚರ್ಚೆ ಕೂಡ ನಡೆಯಿತು. ಈ ವೇಳೆ ಸಿಎಂ ಕಾಲೆಳೆದ ವಿಪಕ್ಷ ನಾಯಕ ಆರ್.ಅಶೋಕ್ (R Ashok), ನೀವು 4 ದಿನಗಳಿಂದ ಬಳಲಿದ್ರಿ, ನಾವು ರಾಜಕೀಯ ನಿಶ್ಯಕ್ತಿ ಅನ್ಕೊಂಡಿದ್ವಿ. ನಿಮಗೆ ರಾಜಕೀಯ ಶಕ್ತಿ ಬಂದಿದೆಯಾ? ಎಂದರು. ಇದಕ್ಕೆ ಉತ್ತರ ನೀಡಿದ ಸಿಎಂ, ನನಗೆ ರಾಜಕೀಯ ನಿಶ್ಯಕ್ತಿ ಇಲ್ವೇ ಇಲ್ಲ, ಅಂತಹ ಅವಕಾಶ ಸೃಷ್ಟಿಯಾಗೋದಿಲ್ಲ. ರಾಜಕೀಯವನ್ನು ಅಷ್ಟೊಂದು ತಲೆ ಕೆಡಿಸಿಕೊಂಡು ಮಾಡೋ ಅಗತ್ಯವೂ ಇಲ್ಲ ಎಂದು ಹೇಳಿದರು. ಈ ವೇಳೆ ಎರಡೂವರೆ ವರ್ಷ ಸಿಎಂ ಅಂತ ತೀರ್ಮಾನ ಆಗಿಲ್ಲ. ಶಾಸಕರು 5 ವರ್ಷಕ್ಕೆ ಸಿಎಂ ಆಯ್ಕೆ ಮಾಡಿದ್ದಾರೆ. ನಾನು ಐದು ವರ್ಷಕ್ಕೆ ಸಿಎಂ ಆಗಿ ಆಯ್ಕೆ ಆಗಿದ್ದೇನೆ ಎಂದು ಆರ್. ಅಶೋಕ್ ಮಾತಿಗೆ ತಿರುಗೇಟು ಕೊಟ್ಟು, ನೀನು ಬೇಕಾದರೆ ನಾನೇ 5 ವರ್ಷ ಸಿಎಂ ಅಂತಾ ಹೇಳು ಅಶೋಕ್…
ಕಾರವಾರ: ಸಮುದ್ರದ (Sea) ಅಲೆಗಳಿಗೆ ಸಿಲುಕಿ ಇಬ್ಬರು ಸಹೋದರರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ಹೊನ್ನಾವರದ (Honnavar) ಮಂಕಿಯಲ್ಲಿ ನಡೆದಿದೆ. ಮದನ್ ನಾರಾಯಣ ಖಾರ್ವಿ (17), ಸುಜನ್ ನಾರಾಯಣ ಖಾರ್ವಿ (15) ಸಮುದ್ರದ ಪಾಲಾದ ಸಹೋದರರು ಎನ್ನಲಾಗಿದೆ. ಇಬ್ಬರೂ ಸಹೋದರರು ಗುರುವಾರ ಸಂಜೆ ಸಮುದ್ರಕ್ಕೆ ಆಟ ಆಡಲು ಇಳಿದಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಇಬ್ಬರು ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಗುರುವಾರ ತಡರಾತ್ರಿ ಇಬ್ಬರ ಶವಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಮಂಕಿ ಪೊಲೀಸರು ಭೇಟಿ ನೀಡಿದ್ದರು. ಈ ಕುರಿತು ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಜುಲೈ ದಂಗೆಯ ಸಂಘಟಕ ಷರೀಫ್ ಉಸ್ಮಾನ್ ಹಾದಿ(Sharif Osman Hadi) ಸಿಂಗಾಪುರದಲ್ಲಿ ನಿಧನರಾದ ಆನಂತರ ಢಾಕಾ ಮತ್ತು ಚಟ್ಟೋಗ್ರಾಮ್ ಸೇರಿದಂತೆ ಬಾಂಗ್ಲಾದೇಶದ ಹಲವೆಡೆ ಪ್ರತಿಭಟನೆಗಳು (Bangladesh Protests) ನಡೆಯುತ್ತಿವೆ. ಹೀಗಾಗಿ ಬಾಂಗ್ಲಾದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಉಸ್ಮಾನ್ ಹಾದಿ ಮೇಲೆ ಫೈರಿಂಗ್ ನಡೆದಿತ್ತು. ಹೀಗಾಗಿ ಅವರು ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿತಿಕ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹೀಗಾಗಿ ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ರಾಜ್‌ಶಾಹಿಯಲ್ಲಿರುವ ಅವಾಮಿ ಲೀಗ್‌ನ ಕಚೇರಿಗೆ ಬೆಂಕಿ ಹಚ್ಚಲಾಗಿದೆ ಎಂದು ಕೂಡ ವರದಿಯಾಗಿದೆ. ಬಂಗಾಳಿ ಭಾಷೆಯ ಪತ್ರಿಕೆಗಳಲ್ಲಿ ಒಂದಾದ ಪ್ರೋಥೋಮ್ ಅಲೋ ಕಚೇರಿಯ ಮೇಲೂ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಮೊಹಮ್ಮದ್ ಯೂನುಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ವರ್ಷವಷ್ಟೇ ಪ್ರಧಾನಿ ಶೇಖ್ ಹಸೀನಾರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಕಷ್ಟು ಪ್ರತಿಭಟನೆಗಳು ನಡೆದು ದೊಡ್ಡ ಹಿಂಸಾಚಾರಕ್ಕೆ ಕಾರಣವಾಗಿತ್ತು. ಹೀಗಾಗಿ ಹಸೀನಾ ಪಲಾಯನ ಮಾಡಿ ಭಾರತಕ್ಕೆ ಬಂದಿದ್ದರು.
ರಿಯಾದ್: ಮರುಭೂಮಿಯಾಗಿರುವ ಸೌದಿ ಅರೇಬಿಯಾದಲ್ಲಿ ಹಿಮಪಾತ ಬಿದ್ದಿದೆ. ಅಲ್ಲದೇ, ಗುಡುಗು ಸಹಿತ ಭಾರೀ ಮಳೆಯಾಗಿದೆ. ಸೌದಿ ಅರೇಬಿಯಾದ ಉತ್ತರದ ತಬೂಕ್ ಪ್ರದೇಶದ ಜಬಲ್ ಅಲ್ ಲಾವ್ಜ್ ಬೆಟ್ಟ ಮತ್ತು ಇತರ ಬೆಟ್ಟಗಳು ಹಿಮದಿಂದ ಆವೃತವಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಅಲ್ಲದೇ, ತಬೂಕ್, ಹೈಲ್, ಅಲ್ ಖಾಸಿಂ, ರಿಯಾದ್‌ನ ಉತ್ತರ ಭಾಗ ಮತ್ತು ಮದೀನಾ ಪ್ರದೇಶಗಳಲ್ಲಿ ಹಿಮಪಾತ ಹಾಗೂ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಕೂಡ ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.ಕೆಲವೆಡೆ ತಾಪಮಾನ ಮೈನಸ್ 4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಬಿರುಗಾಳಿ, ಆಲಿಕಲ್ಲು, ಹಠಾತ್ ಪ್ರವಾಹ ಮತ್ತು ಸಮುದ್ರದಲ್ಲಿ ಎತ್ತರದ ಅಲೆಗಳು ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಜನರು ಸುರಕ್ಷಿತವಾಗಿರುವಂತೆ ತಿಳಿಸಲಾಗಿದೆ.
ಬೆಳಗಾವಿ: ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಅವರ ಕಾರು ಡಿ. 18ರಂದು ರಾತ್ರಿ ಅಪಘಾತವಾಗಿದ್ದು, ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಹೊರವಲಯದಲ್ಲಿ ನಡೆದಿದೆ. ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮಂಜುನಾಥ್ ಬೈರ್ನಟ್ಟಿ(30) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕಾರು ಕೂಡ ಪಲ್ಟಿಯಾಗಿದೆ. ಚಾಲಕ ಹಾಗೂ ಪಿಎಸ್ ರಾಜೇಂದ್ರ ಪ್ರಸಾದ್ ಅವರು ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಮೃತ ಯುವಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಸಕ್ಕರೆ ಕಾರ್ಖಾನೆಯ ನೌಕರರಾಗಿದ್ದರು ಎನ್ನಲಾಗಿದೆ. ರಾಜೇಂದ್ರ ಪ್ರಸಾದ್ ಅವರು ಸವದತ್ತಿ ಯಲ್ಲಮ್ಮ ದೇವಿಯ ದೇವಸ್ಥಾನಕ್ಕೆ ಹೋಗಿ ಮರಳಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಳು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕ್ಕಬಳ್ಳಾಪುರ: ಸಾರಿಗೆ ಬಸ್ ಒಳಗೆ ನುಗ್ಗಿದ ಖದೀಮರು, ಬರೋಬ್ಬರಿ 55 ಲಕ್ಷ ರೂ. ಕದ್ದು ಪರಾರಿಯಾಗಿರುವ ಘಟನೆಯೊಂದು ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಹತ್ತಿರ ಈ ಘಟನೆ ನಡೆದಿದೆ. ಉದ್ಯಮಿಯೊಬ್ಬರಿಗೆ ಸೇರಿದ್ದ 55 ಲಕ್ಷ ರೂ. ಹಣವನ್ನು ಸಾರಿಗೆ ಬಸ್ ನಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಬಸ್ ನಲ್ಲಿ ಹಣ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ಹಣ ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ. ಗುರುವಾರ ರಾತ್ರಿ ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಪ್ರಯಾಣಿಕರ ಊಟಕ್ಕೆಂದು ಕೆಎ 57 ಎಫ್-3911 ಸಂಖ್ಯೆಯ ಬಸ್ ನಿಲ್ಲಿಸಲಾಗಿತ್ತು. ಊಟಕ್ಕೆಂದು ಕೆಳಗೆ ಇಳಿದು ಬರುವಷ್ಟರಲ್ಲಿ ಹಣದ ಬ್ಯಾಗ್ ನಾಪತ್ತೆಯಾಗಿದೆ. ಕಳುವಾದ ಹಣ ಹೈದರಾಬಾದ್ ಮೂಲದ ಉದ್ಯಮಿ ಕೆ.ವೆಂಕಟೇಶ್ವರ ರಾವ್ಗೆ ಸೇರಿದ್ದು, ಬೆಂಗಳೂರಿನಲ್ಲಿದ್ದ ಮನೆ ಮಾರಾಟದಿಂದ ಬಂದಿದ್ದ ನಗದನ್ನು ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಟಾಟಾ ಇಂಡಿಕಾ ಕಾರಿನಲ್ಲಿ ಬಂದಿದ್ದ ವ್ಯಕ್ತಿ ಹಣ ದೋಚಿದ್ದಾನೆ ಎಂದು ಬಸ್ನಲ್ಲಿದ್ದ ಇನ್ನಿತರ ಪ್ರಯಾಣಿಕರು ಹೇಳಿದ್ದಾರೆ. ಕಾರಿನಿಂದ ಇಳಿದು ನೇರವಾಗಿ ಬಸ್ನೊಳಗೆ…
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನಟ ದರ್ಶನ್, ಪವಿತ್ರಾ ಸೇರಿದಂತೆ ಆರೋಪಿಗಳು ಜೈಲಿನಲ್ಲಿದ್ದಾರೆ. ಆದರೆ, ಜೈಲಿನಲ್ಲೇ ಪವಿತ್ರಾಗೌಡ, ದರ್ಶನ್ ರನ್ನು ಭೇಟಿ ಮಾಡಲು ಯತ್ನ ನಡೆಸಿದ್ದಾರೆಂದು ತಿಳಿದು ಬಂದಿದೆ. ಸಹ ವಿಚಾರಣಾಧೀನ ಕೈದಿ ಪವಿತ್ರಾಗೌಡ, ದರ್ಶನ್ ಭೇಟಿಗೆ ಯತ್ನ ನಡೆಸಿದ್ದಾರೆಂದು ಮೂಲಗಳಿಂದ ತಿಳಿದು ಬರುತ್ತಿದೆ. ಪವಿತ್ರಾ ಗೌಡರ (Pavithra Gowda) ಭೇಟಿಯನ್ನು ದರ್ಶನ್ ತಿರಸ್ಕರಿಸಿದ್ದಾರೆಂದು ತಿಳಿದು ಬಂದಿದೆ.ಇನ್ನೊಂದೆಡೆ ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಶುರುವಾಗಿದೆ.