Author: Bosstv News Desk

ಬಾಗಲಕೋಟೆ: ಮೊಬೈಲ್ ಬಳಸಬೇಡಿ ಎಂದು ಹೇಳಿದ್ದಕ್ಕೆ ವಿದ್ಯಾರ್ಥಿನಿಯರು ಹಾಸ್ಟೆಲ್ ತೊರೆದಿರುವ ಘಟನೆ ನಡೆದಿದೆ. ಈ ಘಟನೆ ನವನಗರದ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ. ಹಾಸ್ಟೆಲ್ ನಲ್ಲಿ ಮೊಬೈಲ್ ಬಳಸುವಂತಿಲ್ಲ ಎಂದು ತಾಕೀತು ಮಾಡಿದ್ದಕ್ಕೆ ಕೋಪಗೊಂಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರು ರಾತ್ರೋರಾತ್ರಿ ಹಾಸ್ಟೆಲ್ ತೊರೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿನಿಯರನ್ನು ಪೊಲೀಸರು ವಿಜಯಪುರದಲ್ಲಿ ಪತ್ತೆ ಮಾಡಿ ಕರೆ ತಂದಿದ್ದಾರೆ ಎನ್ನಲಾಗಿದೆ. ಹಾಸ್ಟೆಲ್ ನಲ್ಲೇ ಮೊಬೈಲ್ ಬಳಕೆ ಮಾಡುತ್ತಿದ್ದ ವಿದ್ಯಾರ್ಥಿನಿಯರನ್ನು ತಡೆದ ಹಾಸ್ಟೆಲ್ ಸಿಬ್ಬಂದಿ, ಮೊಬೈಲ್ ಬಳಸಿದರೆ ಪೋಷಕರಿಗೆ ಹೇಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಕೋಪಗೊಂಡ ನಾಲ್ವರು ವಿದ್ಯಾರ್ಥಿನಿಯರು ಬುಧವಾರ ರಾತ್ರಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸಿಬ್ಬಂದಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ರಾತ್ರಿ 8 ಗಂಟೆಗೆ ಹಾಸ್ಟೆಲ್ ತೊರೆದಿದ್ದ ವಿದ್ಯಾರ್ಥಿನಿಯರನ್ನು ಮಧ್ಯರಾತ್ರಿ 12.30ರ ವೇಳೆಗೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಸದ್ಯ ವಿದ್ಯಾರ್ಥಿನಿಯರಿಗೆ ಪೊಲೀಸರು ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ.

Read More

ಕೊಪ್ಪಳ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ (Cylinder Explosion) ಪರಿಣಾಮ 7 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟಕ್ಕೆ ಇಡೀ ಮನೆಯೇ ನೆಲಸಮವಾಗಿದೆ. ಈ ಘಟನೆ ಗಂಗಾವತಿ (Gangavati) ತಾಲೂಕಿನ ಹೆಬ್ಬಾಳ ಎಂಬಲ್ಲಿ ನಡೆದಿದೆ. ರಾಜ (38), ಸುರೇಶ್ (35), ದುರುಗಪ್ಪ (27), ಹುಸೇನಮ್ಮ (40), ನಾಗರಾಜ (18), ದುರುಗಮ್ಮ (17), ವಿಷ್ಣು (16), ಶ್ರೀಕಾಂತ್ (22) ಗಾಯಗೊಂಡ ದುರ್ದೈವಿಗಳು ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಹೆಬ್ಬಾಳ್ ಗ್ರಾಮದ ಹುಸೇನಮ್ಮ ಎಂಬುವವರು ಇತ್ತೀಚೆಗಷ್ಟೇ ಸಿಲಿಂಡರ್ ಖರೀದಿಸಿದ್ದರು. ಅದನ್ನು ಆನ್ ಮಾಡುವಾಗ ಅದು ಸ್ಫೋಟಗೊಂಡಿದೆ. ಇಡೀ ಮನೆ ನೆಲಸಮವಾಗಿದ್ದು, ಪಕ್ಕದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲದೇ, ಅಕ್ಕಪಕ್ಕದ ಮನೆಯವರೂ ಗಾಯಗೊಂಡಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ನವದೆಹಲಿ: ನಟ ರಜನಿಕಾಂತ್‌(Rajinikanth) ಇಂದು 75ನೇ ಹುಟ್ಟು ಹಬ್ಬ (BirthDay) ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಭ ಹಾರೈಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ. ರಜನಿಕಾಂತ್‌ ಅವರ ಅಭಿನಯವು ಪೀಳಿಗೆಗಳನ್ನು ಆಕರ್ಷಿಸಿದೆ ಮತ್ತು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಅವರ ವೈವಿಧ್ಯಮಯ ಪಾತ್ರಗಳು ಒಂದು ಬೆಂಚ್‌ಮಾರ್ಕ್‌ ಸೃಷ್ಟಿಸಿದೆ. ಚಲನಚಿತ್ರ ಜಗತ್ತಿನಲ್ಲಿ ಅವರು 50 ವರ್ಷಗಳನ್ನು ಪೂರೈಸಿದ್ದರಿಂದ ಈ ವರ್ಷ ಗಮನಾರ್ಹವಾಗಿವೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಪ್ರಾರ್ಥಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಲ್ಲದೇ, ನಾಡಿನ ನಾಯಕರು, ಸೆಲೆಬ್ರಿಟಿಗಳು, ಅಭಿಮಾನಿಗಳು ಕೂಡ ರಜನಿಗೆ ವಿಶ್ ಮಾಡಿದ್ದಾರೆ. ತಮಿಳುನಾಡು (Tamilnadu) ಸಿಎಂ ಎಂ.ಕೆ. ಸ್ಟಾಲಿನ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿದ್ದಾರೆ.

Read More

ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಮುಡಾ ಹಗರಣ ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತು. ಸಿಎಂ ಸಿದ್ದರಾಮಯ್ಯ ಅವರ ಕುರ್ಚಿಗೂ ಕಂಟಕವಾಗಿ ಪರಿಣಮಿಸಿತ್ತು. ಸದ್ಯ ಈ ಪ್ರಕರಣದ ತನಿಖೆ ಕೈಗೊಂಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೆಲವು ರಹಸ್ಯಗಳನ್ನು ಹೊರಗೆ ಹಾಕಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಮಾಜಿ ಆಯುಕ್ತ ಜಿಟಿ ದಿನೇಶ್ ಕುಮಾರ್ ತಮ್ಮ ಅಧಿಕಾರಾವಧಿಯಲ್ಲಿ 140 ಕೋಟಿ ರೂ. ಮೌಲ್ಯದ 283 ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿ, 22.47 ಕೋಟಿ ರೂ. ಲಂಚ ಪಡೆದಿದ್ದರು ಎಂಬುವುದು ತನಿಖೆಯಿಂದ ಹೊರ ಬಂದಿದೆ ಎಂದು ವರದಿಯಾಗುತ್ತಿದೆ. ಸುಮಾರು 700 ಕೋಟಿ ರೂ. ಮೌಲ್ಯದ 1,095 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂಬುವುದು ತನಿಖೆಯಿಂದ ಹೊರ ಬಂದಿದೆ. ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಹಗರಣದ ಪ್ರಮುಖ ರೂವಾರಿ ಎಂಬುವುದು ತನಿಖೆಯಿಂದ ಗೊತ್ತಾಗಿದೆ ಎಂದು ದಿ ನ್ಯೂ ಇಂಡಿಯನ್ಸ ಎಕ್ಸೆಪ್ರೆಸ್ ತನ್ನ ವರದಿಯಲ್ಲಿ ಹೇಳಿದೆ.

Read More

ಬೆಳಗಾವಿ: ಕಾಂಗ್ರೆಸ್ ನಲ್ಲಿ ಮತ್ತೆ ಬಣ ರಾಜಕಾರಣ ಜೋರಾಗಿದ್ದು, ಸಿಎಂ ಫೈಟ್ ಶುರುವಾದಂತಿದೆ. ಚಳಿಗಾಲದ ಅಧಿವೇಶನ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿದ್ದು, ಈ ಮಧ್ಯೆ ಆಡಳಿತ ಪಕ್ಷದ(Karnataka Congress) ಬಣ ರಾಜಕಾರಣ ಜೋರಾಗಿ ನಡೆಯುತ್ತಿದೆ. ಬುಧವಾರ ರಾತ್ರಿ ಸಿಎಂ ಸಿದ್ದರಾಮಯ್ಯ (CM Siddaramaiah) ಅಹಿಂದ ನಾಯಕರ ಜೊತೆ ಸಭೆ ನಡೆಸಿದ್ದರು. ಬುಧವಾರ ರಾತ್ರಿ ಮಾಜಿ ಶಾಸಕ ಫಿರೋಜ್ ಸೇಠ್ ನಿವಾಸದಲ್ಲಿ ನಡೆದ ಭೋಜನಕೂಟದಲ್ಲಿ ಸಿಎಂ ಭಾಗವಹಿಸಿದ್ದರು. ಇದರ ಬೆನ್ನಲ್ಲೇ ಗುರುವಾರ ರಾತ್ರಿ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಆಪ್ತರ ಸಭೆ ನಡೆಸಿದ್ದಾರೆ. ಆಪ್ತ ಗಣಿ ಉದ್ಯಮಿ ದೊಡ್ಡಣ್ಣವರ್ ಅವರ ಫಾರ್ಮ್‌ ಹೌಸ್‌ನಲ್ಲಿ ಆಪ್ತ ಸಚಿವರು, ಶಾಸಕರ ಜೊತೆ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಸಭೆ ನಡೆಸಿದ್ದಾರೆ. ಈ ಪಾರ್ಟಿಯನ್ನು ಡಿಕೆಶಿ ಸಹೋದರ ಡಿಕೆ ಸುರೇಶ್‌ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ. ಸಭೆಯಲ್ಲಿ 5ಕ್ಕೂ ಹೆಚ್ಚು ಸಚಿವರು, 40ಕ್ಕೂ ಅಧಿಕ ಶಾಸಕರು ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ, ಸಿಎಂ ಆಪ್ತ ವಲಯದ ಯಾವೊಬ್ಬ ಶಾಸಕ,…

Read More

ಇಟಾನಗರ: ಸಾವಿರಕ್ಕೂ ಹೆಚ್ಚು ಅಡಿ ಪ್ರಪಾತಕ್ಕೆ ಟ್ರಕ್ ವೊಂದು ಉರುಳಿ ಬಿದ್ದ ಪರಿಣಾಮ ಸುಮಾರು ಕನಿಷ್ಠ 18 ಜನ ಕಾರ್ಮಿಕರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಈ ಘಟನೆ ಅರುಣಾಚಲ ಪ್ರದೇಶ(Arunachal Pradesh) ದ ಅಂಜಾವ್ ನಲ್ಲಿ ನಡೆದಿದೆ. ಚಾಲಕನ ಆಜಾಗರೂಕತೆಯಿಂದಾಗಿ ಸುಮಾರು 1 ಸಾವಿರ ಅಡಿ ಪ್ರಪಾತಕ್ಕೆ ಟ್ರಕ್ ಉರುಳಿ ಬಿದ್ದಿದೆ. ಘಟನೆಯಲ್ಲಿ ಅಸ್ಸಾಂನ (Assam) ಟಿನ್ಸುಕಿಯಾ ಜಿಲ್ಲೆಯ 18 ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ. ನಿರ್ಮಾಣ ಹಂತದ ಸೈಟ್ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಕಳೆದ ಎರಡು ದಿನಗಳ ಹಿಂದೆಯೇ ನಡೆದಿದ್ದು, ಯಾರ ಗಮನಕ್ಕೂ ಬಂದಿಲ್ಲ. ಆದರೆ, ಎರಡು ದಿನಗಳ ನಂತರ ಅಪಘಾತಕ್ಕೀಡಾಗಿದ್ದ ವ್ಯಕ್ತಿಯೋರ್ವ ಜಿಆರ್ ಇಎಫ್ ಶಿಬಿರ ತಲುಪಿದ ನಂದರ ಮಾಹಿತಿ ಗೊತ್ತಾಗಿದೆ. ನಂತರ ಕಾರ್ಯಾಚರಣೆ ನಡೆಸಲಾಗಿದೆ. ಸುಮಾರು 200 ಮೀ. ಕೆಳಗೆ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಟ್ರಕ್‌ನ ಅವಶೇಷಗಳು ಪತ್ತೆಯಾಗಿವೆ. ಇಲ್ಲಿಯವರೆಗೆ 18 ಶವಗಳು ಪತ್ತೆಯಾಗಿವೆ. ಈ ಟ್ರಕ್…

Read More

ವಿಜಯಪುರ: ಇಲ್ಲಿನ ಬಸವನಬಾಗೇವಾಡಿ (Basavana Bagewadi) ತಾಲೂಕಿನ ಇಂಗಳೇಶ್ವರ (Ingaleshwar) ಗ್ರಾಮದ ವಿರಕ್ತಮಠದ ಚನ್ನಬಸವ ಶ್ರೀ ಇಂದು ಲಿಂಗೈಕ್ಯರಾಗಿದ್ದಾರೆ. ಚನ್ನಬಸವ ಶ್ರೀಗಳು ತಮ್ಮ 97ನೇ ವಯಸ್ಸಿನಲ್ಲಿ ಭಕ್ತರನ್ನು ಅಗಲಿದ್ದಾರೆ. ಅವರು ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶ್ರೀಗಳು ಬಸವಾದಿ ಶರಣರ ವಚನಗಳ ತತ್ವದಂತೆ ಬದುಕು ಸಾಗಿಸಿ, ಭಕ್ತರನ್ನು ಅದೇ ದಾರಿಗೆ ತರುವ ಕಾಯಕ ಮಾಡಿದ್ದರು. ಇಂಗಳೇಶ್ವರದಿಂದ ಶ್ರೀಕ್ಷೇತ್ರ ಉಳವಿಯವರೆಗೆ ಪಾದಯಾತ್ರೆ ನಡೆಸಿ, ವಚನಗಳ ತತ್ವಗಳನ್ನು ಜನರಿಗೆ ಊಣಬಡಿಸಲು ಯತ್ನಿಸಿದ್ದರು. ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ವಿರಕ್ತ ಮಠದ ಚನ್ನಬಸವ ಮಹಾಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ತಿಳಿದು ದುಃಖವಾಯಿತು.ಇಂಗಳೇಶ್ವರದ ವಚನ ಶಿಲಾಶಾಸನ ಮಂಟಪದಲ್ಲಿ ಕಲ್ಲುಗಳ ಮೇಲೆ ವಚನಗಳನ್ನು ಕೆತ್ತಿಸಿ, ಶರಣರ ಪರಂಪರೆ ಹಾಗೂ ವಿಚಾರಧಾರೆಯನ್ನು ಸಮಾಜಕ್ಕೆ ಸಾರುವ ಕಾರ್ಯವನ್ನು ನಿಸ್ವಾರ್ಥದಿಂದ ಮಾಡುತ್ತಾ ಬಂದವರು. ಧರ್ಮಕಾರ್ಯದ ಜೊತೆ ಸಾಮಾಜಿಕ ಸೇವೆಯನ್ನೂ ಸಲ್ಲಿಸುತ್ತಿದ್ದ ಶ್ರೀಗಳ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ.…

Read More

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳು ಈಗಾಗಲೇ ಚಳಿಯಿಂದಾಗಿ ತತ್ತರಿಸಿ ಹೋಗಿವೆ. ಈ ಮಧ್ಯೆ ಹವಾಮಾನ ಇಲಾಖೆಯು ಕೆಲವು ಜಿಲ್ಲೆಗಳಿಗೆ ಶೀತಗಾಳಿಯ ಎಚ್ಚರಿಕೆ ನೀಡಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ. ಮುಂದಿನ 2 ದಿನಗಳ ಕಾಲ ಉತ್ತರ ಒಳನಾಡನ ಬೆಳಗಾವಿ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಸೇರಿದಂತೆ 7 ಜಿಲ್ಲೆಗಳಲ್ಲಿ ಶೀತ ಗಾಳಿ (cold wave warning) ಬೀಸುವ ಸಾಧ್ಯತೆ ಇದೆ. ಹೀಗಾಗಿ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ. ಇನ್ನುಳಿದಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವುದಿಲ್ಲ ಎಂದು ಹವಾಮಾನ ಇಲಾಖೆ (Karnataka Weather) ಸೂಚಿಸಿದೆ.ಡಿಸೆಂಬರ್‌ 12ರಿಂದ 17ರವರೆಗೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಗುರುವಾರ ಬೀದರ್ ನಲ್ಲಿ ಕನಿಷ್ಠ 9 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ.…

Read More

ಬೆಳಗಾವಿ: 21ನೇ ಶತಮಾನದಲ್ಲೂ ಹಲವಾರು ಅನಿಷ್ಟ ಪದ್ಧತಿಗಳು ರಾಜ್ಯದಲ್ಲಿ ಚಾಲ್ತಿಯಲ್ಲಿವೆ. ಇದರಿಂದಾಗಿ ಹಲವು ಕುಟುಂಬಗಳು ತತ್ತರಿಸಿ ಹೋಗಿದ್ದಂತೂ ಸತ್ಯ. ಸಾಮಾಹಿಕ ಬಹಿಷ್ಕಾರ (Social Boycott) ಕೂಡ ಈ ಸಾಲಿಗೆ ಸೇರುವ ಅನಿಷ್ಟ ಪದ್ಧತಿಯಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿದೆ. ಚಳಿಗಾಲದ ಅಧಿವೇಶನವು ಬೆಳಗಾವಿಯಲ್ಲಿ ನಡೆಯುತ್ತಿದ್ದು (Vidhan Sabha) ಇಂದು ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ ಮಂಡಿಸಲಾಗಿದೆ. ಈ ಕಾನೂನಿನಂತೆ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬ ಸದಸ್ಯರನ್ನು ಬಹಿಷ್ಕಾರ ಹಾಕುವಂತಿಲ್ಲ. ಒಂದು ವೇಳೆ ಈ ಕಾನೂನಿನ ವಿರುದ್ಧವಾಗಿ ನಡೆದುಕೊಂಡರೆ ಅಂತಹ ವ್ಯಕ್ತಿಗಳಿಗೆ 3 ವರ್ಷ ಜೈಲು ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗುವುದು. ಬಹಿಷ್ಕಾರ ಹಾಕುವ ಕುರಿತು ಸಭೆ-ಪಂಚಾಯಿತಿ, ಸಹಾಯ, ಪ್ರಚೋದನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಸಾಮಾಹಿಕ ಬಹಿಷ್ಕಾರಕ್ಕೆ ಒತ್ತಡ ಹಾಕುವ ಮೂಲಕ ನಿರ್ಧಾರ ಕೈಗೊಂಡವರು. ಅದರ ಪರವಾಗಿ ಮತ ಹಾಕಿದವರು ಅಥವಾ ಅಂತಹ…

Read More

ಬೆಂಗಳೂರು: ವಿಡಿಯೋ ಕಾಲ್ ಟಾರ್ಚರ್ ಗೆ ವಿದ್ಯಾರ್ಥಿಯೋರ್ವ ಬಲಿಯಾಗಿರುವ ಘಟನೆ ನಡೆದಿದೆ. ಕೇರಳ ಮೂಲದ ಜಗನ್ ಮೋಹನ್(25) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ ಎನ್ನಲಾಗಿದೆ. ಸಿಲಿಕಾನ್ ಸಿಟಿಯ ಹೊರವಲಯದ ಹೆಸರುಘಟ್ಟ ರಸ್ತೆಯ ಶಾಂತಿನಗರದಲ್ಲಿ ಈ ಘಟನೆ ನಡೆದಿದೆ. ಜಗನ್ ಮೋಹನ್ ಎಂಬಿಎ ಓದುತ್ತಿದ್ದ ಎನ್ನಲಾಗಿದೆ. ಕಾಲೇಜು ಹತ್ತಿರ ರೂಮ್ ಬಾಡಿಗೆ ಪಡೆದು ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ರೂಮ್ ನಲ್ಲೇ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಪತ್ತೆಯಾದ ಡೆತ್‌ನೋಟ್‌ನಲ್ಲಿ ಮೃತ ವಿದ್ಯಾರ್ಥಿ ಮೂರು ನಂಬರ್ ಬರೆದಿದ್ದಾನೆ. ಪರಿಶೀಲನೆ ನಡೆಸಿದಾಗ ಫೇಕ್ ವಿಡಿಯೋ ಕಾಲ್‌ನಲ್ಲಿ 25 ಸಾವಿರ ರೂ. ಹಣ ಕಳೆದುಕೊಂಡಿರುವ ಕುರಿತು ಮಾಹಿತಿ ಸಿಕ್ಕಿದೆ. ದುಷ್ಕರ್ಮಿಗಳು ಬೆತ್ತಲೆ ಬೆತ್ತಲೆ ವಿಡಿಯೋ ಹಾಗೂ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ವಾಯುವ್ಯ ವಿಭಾಗ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More