ಕೆಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿದ್ದಕ್ಕೆ ವಾಲ್ಮೀಕಿ ಸಮುದಾಯ ಆಕ್ರೋಶಗೊಂಡಿದೆ. ರಾಜಣ್ಣ ಫೋಟೋ ಹಿಡಿದು ತುಮಕೂರಿನಲ್ಲಿ ಅವರ ಬೆಂಬಲಿಗರು ಸಿಡಿದೆದ್ದಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪೋಸ್ಟರ್ ಹಿಡಿದು ಅವರ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಇತ್ತ ರಾಜಣ್ಣ ಸಚಿವ ಸ್ಥಾನದಿಂದ ವಜಾಗೊಂಡ ಬಳಿಕ ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಳ್ತಿಲ್ಲ.. ವಿಧಾನಸಭೆ ಅಧಿವೇಶನದಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಹೀಗಿರುವಾಗ ಸಚಿವ ಸತೀಶ್‌ ಜಾರಕಿಹೊಳಿ ರಾಜಣ್ಣರನ್ನ ಭೇಟಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಇತರೆ ನಾಯಕರು ರಾಜಣ್ಣನವರನ್ನು ಭೇಟಿ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, ಯಾರೇ ಆದರೂ ಅಧಿಕಾರ ಹೋದಾಗ ದೂರವಾಗುತ್ತಾರೆ. ಆದರೆ ನಾವು ರಾಜಣ್ಣ ಜೊತೆಗಿದ್ದೇವೆಂದು ಸಂದೇಶ ಕೊಡಲು ಭೇಟಿ ಮಾಡಿದ್ದೇವೆ. ದೆಹಲಿಯಲ್ಲಿ ತಪ್ಪು ತಿಳಿವಳಿಕೆ ಇದೆ. ಅವರಿಗೆ ಮನವರಿಕೆ ಮಾಡುತ್ತೇವೆ ಎಂದಿದ್ದಾರೆ.

ರಾಜಣ್ಣನವರು 2 ವರ್ಷ ಸಚಿವರಾಗಿ ಕೆಲಸ ಮಾಡಿದ್ದಾರೆ. ದೆಹಲಿಯಲ್ಲಿ ತಪ್ಪು ತಿಳಿವಳಿಕೆ ಇದೆ, ಅವರಿಗೆ ಮನವರಿಕೆ ಮಾಡುತ್ತೇವೆ. ಸಂಪುಟದಿಂದ ವಜಾ ಬಗ್ಗೆ ರಾಜಣ್ಣನವರೇ ವಿವರಣೆ ಕೊಡಬೇಕು. ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇವೆ. ಈಗ ಕೈಬಿಟ್ಟಿರುವ ಸಚಿವ ಸ್ಥಾನ ವಾಲ್ಮೀಕಿ ಸಮಾಜಕ್ಕೆ ಕೊಡಬೇಕು. ಅವರನ್ನು ಸಂಪುಟಕ್ಕೆ ಮರು ಸೇರ್ಪಡೆ ವಿಚಾರ ಹೈಕಮಾಂಡ್​ ಗೆ ಬಿಟ್ಟದ್ದು. ಹುಲಿ ಯಾವಾಗಲೂ ಗುರ್ ಅಂತಿರುತ್ತೆ. ಷಡ್ಯಂತ್ರದ ಇರಬಹುದು ಎಂದು ರಾಜಣ್ಣ ಹೇಳಿದ್ದಾರೆ. ಇಬ್ಬರು ವಾಲ್ಮೀಕಿ ಸಮುದಾಯದವರನ್ನೇ ಇಳಿಸಲಾಗಿದೆ. ವಾಲ್ಮೀಕಿ ಸಮುದಾಯದವರನ್ನೇ ಸಂಪುಟಕ್ಕೆ ಸೇರಿಸಲು ನಾವು ದೆಹಲಿಗೆ ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮತ್ತೊಂದೆಡೆ ತುಮಕೂರಿನ ಟೌನ್‌ ಹಾಲ್ ಮುಂಭಾಗ ಸಾವಿರಾರು ಅಭಿಮಾನಿಗಳು, ಕೈಯಲ್ಲಿ ರಾಜಣ್ಣ ಫೋಟೋ ಹಿಡಿದು ಘೋಷಣೆ ಕೂಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿವರೆಗೂ ರ್ಯಾಲಿ ಮಾಡಿದ್ದಾರೆ. ಬಳಿಕ ರಾಜಣ್ಣರನ್ನ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದಯ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ.

ಇನ್ನು ಈ ಬಗ್ಗೆ ವಾಲ್ಮೀಕಿ ಸಮುದಾಯದ ರಾಜನಹಳ್ಳಿಯ ಗುರು ಪೀಠದ ಪ್ರಸನ್ನಾನಂದ ಶ್ರೀ ಪ್ರತಿಕ್ರಿಯಿಸಿದ್ದು, ರಾಜಣ್ಣ ಅವರನ್ನ ಸಂಪುಟದಿಮದ ವಜಾ ಮಾಡಿರುವುದನ್ನು ಖಂಡಿಸಿದ್ದಾರೆ. ಷಡ್ಯಂತ್ರ ಮಾಡಿ ರಾಜಣ್ಣರನ್ನ ವಜಾ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ರಾಜಣ್ಣ ರಾಜೀನಾಮೆ ಸಂಚಲನ ಸೃಷ್ಟಿಸಿದ್ದು, ಒಂದೆ ಡೆ ಬೆಂಬಲಿಗರ ಆಕ್ರೋಶ, ಮತ್ತೊಂದ್ಕಡೆ ವಿಪಕ್ಷ ನಾಯಕರ ಟೀಕಾಪ್ರಹಾರ ಸರ್ಕಾರಕ್ಕೆ ಇಕ್ಕಟ್ಟು ತಂದಿದೆ.

Share.
Leave A Reply