ಅಮೃತಧಾರೆ ಧಾರಾವಾಹಿ ಬಹುತೇಕ ಎಲ್ಲರಿಗೂ ಗೊತ್ತು.. ಈ ಸೀರಿಯಲ್‌ನಲ್ಲಿ ನಟಿಸಿ ಜನಮನಗೆದ್ದಿದ್ದು ಇದೇ ಶ್ರುತಿ.. ಮಂಜುಳಾ ಅಲಿಯಾಸ್ ಶ್ರುತಿ.. ಕಿರುತೆರೆಯಲ್ಲಿ ನಟಿಸೋದ್ರ ಜೊತೆಗೆ ಖಾಸಗಿ ವಾಹಿನಿಯಲ್ಲೂ ನಿರೂಪಕಿಯಾಗಿದ್ರು.. ಆದ್ರೀಗ ಈ ಕಿರುತೆರೆ ನಟಿ ಮೇಲೆ ಡೆಡ್ಲಿ ಅಟ್ಯಾಕ್ ನಡೆದಿದೆ… ಕತ್ತು, ತೊಡೆಯ ಭಾಗಕ್ಕೆ ಬಲವಾಗಿ ಚಾಕುವಿನಿಂದ ಇರಿಯಲಾಗಿದೆ..
ಇಷ್ಟಕ್ಕೂ ಸೀರಿಯಲ್ ಸ್ಟಾರ್ ಶ್ರುತಿಗೆ ಚಾಕುವಿನಿಂದ ಇರಿದಿದ್ದು ಬೇರೆ ಯಾರೂ ಅಲ್ಲ.. ಈಕೆಯ ಪತಿ ಅಂಬರೀಶ್.. 20 ವರ್ಷಗಳ ಹಿಂದೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ರು.. ಈ ದಂಪತಿಗೆ ಇಬ್ಬರೂ ಮಕ್ಕಳೂ ಇದ್ದಾರೆ. ಯಾವಾಗ ಅನುಮಾನ ಅನ್ನೋ ಭೂತ ಅಂಬರೀಶ್ ತಲೆ ಹೊಕ್ಕಿತೋ ಅಲ್ಲಿಂದ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ.. ಆಗಾಗ ಜಗಳವನ್ನೂ ಮಾಡುತ್ತಿದ್ರು.. ಆದ್ರೆ, ಈ ಬಾರಿ ಗಂಡ ಕೊಲೆ ಮಾಡಲೆಂದೇ ಚಾಕುವಿನಿಂದ ದಾಳಿ ಮಾಡಿದ್ದಾನೆ ಅಂತಾ ಶ್ರುತಿ ಪೊಲೀಸರಿಗೆ ದೂರು ನೀಡಿದ್ದಾರೆ..
ಶ್ರುತಿ ಹಾಗೂ ಅಂಬರೀಶ್ ಮಕ್ಕಳೊಂದಿಗೆ ಹನುಮಂತ ನಗರದ ಮುನೇಶ್ವರ ಲೇಔಟ್‌ನಲ್ಲಿ ಮನೆ ಲೀಸ್‌ಗೆ ಪಡೆದು ವಾಸವಿದ್ರು. ಇತ್ತೀಚೆಗೆ ಶ್ರುತಿ ನಡವಳಿಕೆ ಗಂಡ ಅಂಬರೀಶ್‌ಗೆ ಇಷ್ಟ ಆಗುತ್ತಿರಲಿಲ್ಲ.. ಇದ್ರಿಂದಾಗಿ ಇಬ್ಬರ ಮಧ್ಯೆ ಹೊಂದಾಣಿಕೆಯೂ ಸರಿ ಇರಲಿಲ್ಲ. ಆಗಾಗ ಕಿರಿಕ್ ಮಾಡಿಕೊಳ್ತಿದ್ರಂತೆ.. ಈ ಎಲ್ಲಾ ಕಾರಣದಿಂದಾಗಿ ಶ್ರುತಿ ಕಳೆದ ಏಪ್ರಿಲ್‌ನಲ್ಲಿ ದೂರವಾಗಿದ್ದು, ಅಣ್ಣನ ಮನೆಯಲ್ಲಿದ್ರು.. ಇಬ್ಬರ ನಡುವೆ ಲೀಸ್ ಹಣಕ್ಕಾಗಿ ಸಹ ಜಗಳ ನಡೆದಿತ್ತು.. ಈ ಬಗ್ಗೆ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಶ್ರುತಿ ದೂರು ದಾಖಲಿಸಿದ್ರು. ಇದಾದ ಬಳಿಕ ಕಳೆದ ಗುರುವಾರ ಅಂದ್ರೆ ಜುಲೈ 3ರಂದು ರಾಜಿ ಸಂಧಾನ ಮಾಡಿ ಗಂಡ ಹೆಂಡತಿ ಒಂದಾಗಿದ್ರು.. ಇಬ್ಬರು ಒಂದಾದ ಮಾರನೇ ದಿನ ಅಂದ್ರೆ ಜುಲೈ 4ರಂದು ಪತಿ ಅಂಬರೀಶ್, ಪತ್ನಿ ಮೇಲೆ ಅಟ್ಯಾಕ್ ಮಾಡಿದ್ದಾನೆ..
ಮಕ್ಕಳು ಕಾಲೇಜಿಗೆ ಹೋದ ನಂತರ ಹೆಂಡತಿ ಮೇಲೆ ಹಲ್ಲೆ ಮಾಡಿದ್ದು, ಪೆಪ್ಪರ್ ಸ್ಪ್ರೇ ಹೊಡೆದು ಚಾಕು ಇರಿದು ಕೊಲೆಗೆ ಯತ್ನ ಮಾಡಿದ್ದಾನೆ.. ಸಿನಿಮಾ ಸ್ಟೈಲ್ ನಲ್ಲಿ ತಲೆ ಕೂದಲು ಹಿಡಿದು ಗೋಡೆ ತಲೆ ಗುದ್ದಿಸಿದ್ದಾನೆ. ಚಾಕುವಿನಿಂದ ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರುತಿಗೆ ಚಿಕಿತ್ಸೆ ನೀಡಲಾಗ್ತಿದೆ.. ಮತ್ತೊಂದ್ಕಡೆ, ಘಟನೆ ಸಂಬಂಧ ಹಲ್ಲೆಗೊಳಗಾದ ಶ್ರುತಿ ಹನುಮಂತ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂಸಾರ ಮತ್ತು ಹಣಕಾಸು ವಿಚಾರಕ್ಕೆ ಕೊಲೆ ಯತ್ನ ಮಾಡಿರೋದಾಗಿ ದೂರು ನೀಡಿದ್ದು, ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅಂಬರೀಶ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
