ಕಳೆದ ಎರಡೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ ಪೋಸ್ಟ್ ವಾರ್ ಇದೀಗ ಕಾನೂನು ಮೆಟ್ಟಿಲೇರಿದ್ದು, ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದವರಿಗೆ ನಡುಕ ಶುರುವಾಗಿದೆ. ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಮೆಸೇಜ್ ಬಂದ ಹಿನ್ನೆಲೆ ನಟಿ ರಮ್ಯಾಗೆ ಈಗಾಗಲೇ 43 ಅಕೌಂಟ್‌ಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಪ್ರಮೋದ ಗೌಡ ಎಂಬ ವ್ಯಕ್ತಿ ಸೇರಿ 43 ಅಕೌಂಟ್ ವಿರುದ್ಧ ದೂರು ನೀಡಲಾಗಿದೆ.

ಇಷ್ಟೆಲ್ಲಾ ಆದರೂ ಡಿ-ಬಾಸ್ ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್‌ಗಳು ಮುಂದುವರಿದಿವೆ. ದೂರು ದಾಖಲಾದ 43 ಅಕೌಂಟ್‌ಗಳ ಪೈಕಿ ಒಂದು ಅಕೌಂಟ್ `ದಿ-ಡೆವಿಲ್-ಲವ್-181′ ನಿಂದ ಪದೇ ಪದೇ ಅಶ್ಲೀಲ ಸ್ಟೇಟಸ್ ಹಾಗೂ ಮೆಸೇಜ್‌ಗಳು ಬರುತ್ತಲೇ ಇವೆ ಅಂತಾ ರಮ್ಯಾ ಕಿಡಿಕಾರಿದ್ದಾರೆ.. ಇನ್ನೊಂದು ಕಡೆ ಡಿ-ಬಾಸ್ ಅಭಿಮಾನಿಗಳು ಸ್ವಲ್ಪ ದಿನ ಸುಮ್ನಿರೋಣ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

ನಟಿ ರಮ್ಯಾ Vs ದರ್ಶನ್‌ ಫ್ಯಾನ್ಸ್‌ ವಾರ್‌ ? ಏನಿದು ಪ್ರಕರಣ?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾ ಪದೇ ಪದೇ ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಜೊತೆಗೆ ಡಿ-ಬಾಸ್ ಅಭಿಮಾನಿಗಳು ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ನಟಿ ಕೂಡ ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ಕಂಪ್ಲೇಟ್‌ ಕೂಡ ಕೊಟ್ಟಿದ್ರು. ಜೊತೆಗೆ ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ರಮ್ಯಾಗೆ ಅಶ್ಲೀಲ ಕಮೆಂಟ್ ಮಾಡಿದ್ದವರ ಅಕೌಂಟ್‌ಗಳನ್ನು ಬಹಿರಂಗಗೊಳಿಸಿ, ದೂರು ದಾಖಲಿಸಿದ್ದರು.

Share.
Leave A Reply