ರಾಜ್ಯ ರಾಜಕೀಯದಲ್ಲಿ ಬಿಆರ್‌ ಪಾಟೀಲ್‌ ಆಡಿಯೋ ಹಲ್‌ಚಲ್‌ ಎಬ್ಬಿಸಿದೆ. ಆಡಿಯೋ ವೈರಲ್‌ ಆದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಶಾಸಕ ಬಿಆರ್‌ ಪಾಟೀಲ್‌, ಆಡಿಯೋದಲ್ಲಿರೋ ಧ್ವನಿ ತಮ್ಮದೇ ಅಂತಾ ಸ್ಪಷ್ಟಪಡಿಸಿದ್ದಾರೆ. ಇನ್ನು ಬಿಆರ್‌ ಪಾಟೀಲ್‌ ಆಡಿಯೋ ಪ್ರತಿಪಕ್ಷಗಳಿಗೆ ಆಹಾರವಾಗಿದೆ. ಬಿಆರ್‌ ಪಾಟೀಲ್‌ ಆಡಿಯೋ ಬಗ್ಗೆ ಪ್ರತಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಆರ್ ಪಾಟೀಲ್ ಆಡಿಯೋ ವೈರಲ್ ವಿಚಾರ ಸರ್ಕಾರದ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ‌ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಏನ್ ನಡೀತಿದೆ ಅಂತಾ 224 ಶಾಸಕರಿಗೂ ಗೊತ್ತು. ಶಾಸಕರ ಹಣೆ ಬರಹವೋ..‌ಏನೋ ಶಾಸಕರ‌ ಕ್ಷೇತ್ರಕ್ಕೆ ಯಾವುದಾದರೂ ಕಾರ್ಯಕ್ರಮ ತಗೊಂಡ್ ಹೋಗ್ ಬೇಕು ಅಂದ್ರೆ ಪೇಮೆಂಟ್ ಆಗಲೇಬೇಕು ಎಂದು ಹೇಳಿದರು. ಮಾನ‌ಮರ್ಯಾದೆ ಇದ್ಯಾ ಈ ಮುಖ್ಯಮಂತ್ರಿಗೆ,‌ ಪಕ್ಕದಲ್ಲಿಕೂರಿಸ್ಕೋತಾರೆ ಅಂತಾ ಪರೋಕ್ಷವಾಗಿ ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಕಿಡಿಕಾರಿದರು.

ಇನ್ನು, ಹೆಚ್.ಕೆ‌ ಪಾಟೀಲ್ ಅಕ್ರಮ‌ ಗಣಿಗಾರಿಕೆ ಕುರಿತು ತನಿಖೆಗೆ ಪತ್ರ ವಿಚಾರ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಈಗ ಹೆಚ್ ಕೆ ಪಾಟೀಲ್ ಅಕ್ರಮ ಗಣಿಗಾರಿಕೆ ಕುರಿತು ಪತ್ರ ಬರೆದಿದ್ದಾರೆ. ಬೀದಿ‌ ಬೀದಿಯಲ್ಲಿ ಈ ಸರ್ಕಾರದ ಬಗ್ಗೆ ಚರ್ಚೆ ಆಗ್ತಿದೆ.. ಇವೆಲ್ಲಾ ಒಂದು ಇಲಾಖೆಗಳಾ. ಇವರೆಲ್ಲಾ ಮಂತ್ರಿಗಳಾ? ಈಗ ಹೆಚ್ ಕೆ ಪಾಟೀಲ್ ಅಕ್ರಮ ಗಣಿಗಾರಿಕೆ ಕುರಿತು ಪತ್ರ ಬರೆದಿದ್ದಾರೆ. 2015 – 16ರಲ್ಲಿ ಇದೇ ಹೆಚ್ ಕೆ ಪಾಟೀಲ್ ಶಿಫಾರಸು ಮಾಡ್ತಾರೆ..

ಅದನ್ನ ಇಟ್ಕೊಂಡ್ ದಿನಾ ಪೂಜೆ ಮಾಡ್ತಾವ್ರೆ ಈ ಸರ್ಕಾರದಲ್ಲಿ. ಬೇಕಾದಷ್ಟು ವಿಷಯಗಳಿವೆ ಮಾತಾಡೋಕೆ..ಆದ್ರೆ ಕೆಸರು ಮೇಲೆ ಕಲ್ಲು ಹಾಕಿದಂತೆ. ಬೀದಿ‌ ಬೀದಿಯಲ್ಲಿ ಈ ಸರ್ಕಾರದ ಬಗ್ಗೆ ಚರ್ಚೆ ಆಗ್ತಿದೆ..ಇವೆಲ್ಲಾ ಒಂದು ಇಲಾಖೆಗಳಾ. ಇವರೆಲ್ಲಾ ಮಂತ್ರಿಗಳಾ? ಅಂತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Share.
Leave A Reply