ಬೆಂಗಳೂರು ಕಾಲ್ತುಳಿತ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಲ್ತುಳಿತದ ಪ್ರಕರಣದ ಬಗ್ಗೆ ಸರ್ಕಾರ ಗಂಟೆ ಗಂಟೆಗೆ ಒಂದೊಂದು ನಿರ್ಧಾರ ಮಾಡ್ತಿದೆ. ನ್ಯಾಯಾಂಗ ತನಿಖೆ ಅಂದ್ರು, ಸಿಐಡಿ ತನಿಖೆ ಅಂದ್ರು, ಮ್ಯಾಜಿಸ್ಟ್ರೇಟ್ ತನಿಖೆ ಅಂದ್ರು. ಈ ಪ್ರಕರಣವನ್ನ ಮುಂದೆ ಏನು ಮಾಡ್ತಾರೋ ನೋಡೋಣ. ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ, ಇದನ್ನ ಸರ್ಕಾರ ಅಂತ ಕರಿತೀರಾ? ಇವರ ವರ್ಚಸ್ಸಿಗಾಗಿ ನಡೆದ ತಪ್ಪು ಕಾಲ್ತುಳಿತ ಪ್ರಕರಣ. ಮಾಡಿರುವ ತಪ್ಪಿನಿಂದ ಹೊರ ಬರಲು ಶ್ರಮ ಪಡ್ತಿದ್ದಾರೆ ಅಂತ ಆರೋಪಿಸಿದ್ರು.
ಸಾವಿಗೆ ಪರಿಹಾರ ಕೊಡ್ತೀವಿ ಎಂದ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರತಿಯೊಂದು ಜೀವವನ್ನು ದುಡ್ಡಿನಿಂದ ಅಳೆಯಲು ಸಾಧ್ಯವಿಲ್ಲ. ಇದು ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ, ಇನ್ನಾದ್ರೂ ಮಾನವನ ಜೀವಗಳಿಗೆ ಸರಿಯಾದ ಬೆಲೆ ಕೊಡುವುದನ್ನು ಕಲಿಯಲಿ ಎಂದು ಸಲಹೆ ನೀಡಿದ್ದಾರೆ.
ಇನ್ನು ಇದಕ್ಕೂ ಮುನ್ನ ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿಕೆ ಸುರೇಶ್ ಮಾತಿಗೆ ಹೆಚ್‌ಡಿಕೆ ಟಾಂಗ್ ಕೊಟ್ರು. ಹೆಚ್‌ಡಿಕೆ ತಮ್ಮ ಆರೋಗ್ಯ ನೋಡಿಕೊಳ್ಳಲಿ ಎಂಬ ಡಿ.ಕೆ. ಸುರೇಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಆರೋಗ್ಯವನ್ನ ದೇವರು ನೋಡಿಕೊಳ್ಳುತ್ತಾನೆ. ಮಂಡ್ಯ ಜನರ ಶುಭ ಹಾರೈಕೆಯಿಂದ ನನಗೆ ಏನೂ ಆಗಲ್ಲ. ನಾನು ಯಾವುದೇ ಒತ್ತಡದಲ್ಲಿ ಇಲ್ಲ. ಅವರೇ ಒತ್ತಡದಲ್ಲಿ ಇದ್ದಾರೆ ಎಂದು ತಿರುಗೇಟು ಕೊಟ್ರು.
ಮಾತು ತಿರುಚೋದ್ರಲ್ಲಿ ಕುಮಾರಸ್ವಾಮಿ ನಿಸ್ಸೀಮರು ಎಂಬ ಡಿ.ಕೆ. ಸುರೇಶ್ ಮಾತಿಗೆ ಗರಂ ಆದ ಅವರು, ಯಾವ ಮಾತು ತಿರುಚಿದ್ದೀನಿ? ಆರ್‌ಸಿಬಿ ಗೆದ್ದಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದೇನೆ. ಗೆದ್ರು ಅಂತಾ ಅಮಾಯಕರ ಜೀವ ತೆಗೆಯುತ್ತಾರಾ? ಅವರ ಮಾತಿಗೆ ಅರ್ಥ ಇದೆಯಾ? ಅಂತ ಪ್ರಶ್ನಿಸಿದ್ರು.
