ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌​ಶಿಪ್ ಫೈನಲ್‌ ಪಂದ್ಯವು 4ನೇ ದಿನದಾಟಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಹಾಲಿ ಚಾಂಪಿಯನ್‌ ಕಾಂಗರೂಗಳ ಜೊತೆ ಫೈನಲ್‌ ಸೆಣಸಾಟ ನಡೆಸುತ್ತಿರುವ ದಕ್ಷಿಣ ಆಫ್ರಿಕಾ ಆಸೀಸ್‌ನ ಅಹಂ ಮುರಿಯುವ ಲಕ್ಷಣಗಳು ಎದ್ದು ಕಾಣುತ್ತಿದೆ. ಜೂನ್ 11 ಪ್ರಾರಂಭವಾದ ಟೆಸ್ಟ್ ಚಾಂಪಿಯನ್‌​ಶಿಪ್ ಪಂದ್ಯ ಇಂದೇ ನಿರ್ಣಾಯಕ ಹಂತವನ್ನ ತಲುಪುವ ಸಾಧ್ಯತೆ ಇದೆ.

ಎರಡನೇ ಇನ್ನಿಂಗ್ಸ್‌ ಪ್ರಾರಂಭಿಸಿದ ಆಸೀಸ್‌ ಉತ್ತಮ ಆರಂಭನ್ನ ಕಾಣಲಿಲ್ಲ,ಅಲೆಕ್ಸ್ ಕ್ಯಾರಿ 43 ರನ್ ಹಾಗೂ ಮಿಚೆಲ್ ಸ್ಟಾರ್ಕ್‌ನ ಅಜೇಯ 58 ರನ್ ಆಸ್ಟ್ರೇಲಿಯಾ 207 ರನ್‌ ಕಲೆಹಾಕುವಲ್ಲಿ ಮಹತ್ತರ ಪಾತ್ರ ವಹಿಸಿತು. ಆದರೆ ಸೌತ್ ಆಫ್ರಿಕಾ ವೇಗಿ ರಬಾಡ ಮಾರಕ ದಾಳಿಗೆ ಆಸೀಸ್‌ ದಾಂಡಿಗರು ತರಗೆಲೆಯಂತೆ ಉದುರಿಹೋದರು. ಮೊದಲ ಇನಿಂಗ್ಸ್​ನಲ್ಲಿನ 74 ರನ್‌ಗಳ ಹಿನ್ನಡೆ ಕಂಡಿದ್ದ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಮಾರ್ಕ್ರಮ್ ಬ್ಯಾಟಿಂಗ್‌ ನೆರವಿನಿಂದ ಭರ್ಜರಿ ಆರಂಭ ಕಂಡಿತು.

ಹೌದು ಆರಂಭಿಕನಾಗಿ ಕಣಕ್ಕೆ ಇಳಿದ ಮಾರ್ಕ್ರಮ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ 159 ಎಸೆತಗಳಲ್ಲಿ 11 ಫೋರ್‌ಗಳೊಂದಿಗೆ ಅಜೇಯ 102 ರನ್ ಬಾರಿಸಿದರೆ, ನಾಯಕ ಟೆಂಬಾ ಬವುಮಾ ಅಜೇಯ 65 ರನ್‌ನೊಂದಿಗೆ ಆಸೀಸ್‌ಗೆ ಸೋಲಿನ ಹಾದಿಯನ್ನ ತೋರಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಸೌತ್ ಆಫ್ರಿಕಾ ತಂಡವು 2 ವಿಕೆಟ್ ಕಳೆದುಕೊಂಡು 213 ರನ್​ ಕಲೆಹಾಕಿ ಭರ್ಜರಿಯಾಗಿ ಮುನ್ನುಗ್ಗುತ್ತಿದ್ದು ಇಂದು ವಿಶ್ವ ಟೆಸ್ಟ್ ಚಾಂಪಿಯನ್‌​ಶಿಪ್ ಫೈನಲ್‌ ಯಾರ ಪಾಲಾಗಲಿದೆ ಎಂದು ಖಚಿತವಾಗುತ್ತದೆ. ಟ್ರೋಫಿ ಗೆಲ್ಲಲು ಸೌತ್ ಆಫ್ರಿಕಾಗೆ 69 ರನ್‌ ಬೇಕಿದ್ದು, ಅತ್ತ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 8 ವಿಕೆಟ್‌ನ ಅವಶ್ಯಕತೆಯಿದೆ. ಮಾರ್ಕ್ರಮ್ ಮತ್ತು ಬವುಮಾ ಉತ್ತಮ ಆಟವನ್ನ ಆಡುತ್ತಿದ್ದು ಈ ಬಾರಿ ಆಂಪಿಯನ್‌ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತದೆ.

Share.
Leave A Reply