18 ವರ್ಷಗಳ ಕಾಲ ಅಭಿಮಾನಿಗಳು ಕಂಡಿದ್ದ ಕನಸು ಇಂದು ನನಸಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಅಭಿಮಾನಿಗಳ ಸಂಭ್ರಮ ಸಖತ್ ಜೋರಾಗಿದೆ. ದೇಶಾದ್ಯಂತ ಅಭಿ ಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಈ ಸಂಭ್ರಮದ ಹೊತ್ತಿನಲ್ಲಿ ಅಭಿಮಾನಿಯೊಬ್ಬನು ಪ್ರಾಣ ಕಳೆದುಕೊಂಡಿದ್ದಾನೆ. ಪಂಜಾಬ್ ಮತ್ತು ಬೆಂಗಳೂರು ನಡುವಿನ ಪಂದ್ಯದಲ್ಲಿ ಬೆಂಗಳೂರು ಭರ್ಜರಿ ಜಯ ಸಾಧಿಸಿದೆ. 18 ವರ್ಷಗಳಕಾಲ ಕಾತುರದಿಂದ ಕಾದಿದ್ದ ಐಪಿಎಲ್ ಟ್ರೋಫಿ ಬೆಂಗಳೂರಿಗೆ ಮನೆ ಅಂಗಳಕ್ಕೆ ಆಗಮಿಸಲಿದೆ.
ಈ ಸಂತಸದ ಸಮಯದಲ್ಲಿ ಸಂಭ್ರಮಾಚರಣೆಯ ಖುಷಿಯಲ್ಲಿ ಶಿವಮೊಗ್ಗದಲ್ಲಿ ಅಭಿಮಾನಿಯೊಬ್ಬನ ಜೀವ ಹೋಗಿದೆ. ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಅಭಿಮಾನಿಗಳು ಬೈಕ್ ರ್ಯಾಲಿ ಮಾಡುತ್ತಿದ್ದು, ಸವಳಂಗ ರಸ್ತೆಯ ಉಷಾ ನರ್ಸಿಂಗ್ ಹೋಂ ಸರ್ಕಲ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಯುವಕನ ಪ್ರಾಣ ಹೋಗಿದೆ. ಆರ್‌ಸಿಬಿ ಸಂಭ್ರಮದ ನಡುವೆ ಈಗ ಆರ್‌ಸಿಬಿ ಅಭಿಮಾನಿಯ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
