ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಈಗ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತಿದೆ. ಕೊಲೆ ಆರೋಪ ಹೊತ್ತಿರುವ ನಟ ದರ್ಶನ್‌ಗೆ ಒಂದಾದ ಮೇಲೊಂದು ಸಂಕಷ್ಟಗಳು ಥಳುಕು ಹಾಕಿಕೊಳ್ತಿವೆ.. ಅದ್ರಲ್ಲೂ ದರ್ಶನ್ ಬೇಲ್ ವಿಚಾರ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದು, ಬಹುತೇಕ ಜಾಮೀನು ರದ್ದಾಗುವ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದೆ. ಇದ್ರ ಮಧ್ಯೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮಾಡಿರುವ ಅದೊಂದು ಪೋಸ್ಟ್ ಈಗ ದರ್ಶನ್ ಅಭಿಮಾನಿಗಳನ್ನು ಕೆರಳಿ ಕೆಂಡವಾಗಿಸಿದೆ. ಅಷ್ಟೇ ಅಲ್ಲ, ಒಂದು ಕಾಲದ ಆಪ್ತ ಗೆಳತಿ ರಕ್ಷಿತಾ ಅವರೇ ರಮ್ಯಾ ವಿರುದ್ಧ ಸಿಡಿದೆದ್ದಿದ್ರೆ, ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮೀ ರಮ್ಯಾ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ..
ರಮ್ಯಾ ಪೋಸ್ಟ್‌ಗೆ ಕೆರಳಿದ ರಕ್ಷಿತಾ, ವಿಜಯಲಕ್ಷ್ಮೀ!
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಇತ್ತೀಚೆಗೆ ಒಂದು ಪೋಸ್ಟ್ ಮಾಡಿದ್ದರು. ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಬೇಲ್ ಅರ್ಜಿ ವಿಚಾರಣೆ ನಡೆದಿದ್ದು, ಬೇಲ್ ಕ್ಯಾನ್ಸಲ್ ಆಗುವ ಸಾಧ್ಯತೆ ಇದೆ ಅಂತಾ ಹೇಳಲಾಗುತ್ತಿದೆ.. ಹೀಗಾಗಿ, ನ್ಯಾಯದ ಪರ ರಮ್ಯಾ ಇನ್‌ಸ್ಟಾದಲ್ಲಿ ಪೋಸ್ಟ್ ಹಾಕಿದ್ದರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ರಮ್ಯಾ ಹೇಳಿದ್ದರು.. ಇದನ್ನು ಗಮನಿಸಿದ ದರ್ಶನ್ ಫ್ಯಾನ್ಸ್ ರೊಚ್ಚಿಗೆದ್ದು ರಮ್ಯಾ ವಿರುದ್ಧ ಅಶ್ಲೀಲ ಕಮೆಂಟ್ಸ್ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.. ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನ ಇನ್‌ಬಾಕ್ಸ್‌ಗೆ ಬಂದ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು ಸ್ಟೇಟಸ್ ಹಾಕಿ ಮತ್ತೆ ಆಕ್ರೋಶ ತೋಡಿಕೊಂಡಿದ್ದಾರೆ.. ಹಾಗಾದ್ರೆ, ರಮ್ಯಾ ಪೋಸ್ಟ್‌ನಲ್ಲಿ ಏನಿದೆ? ರಕ್ಷಿತಾ ಕೆರಳಿ ಪೋಸ್ಟ್ ಹಾಕಿದ್ದು ಯಾಕೆ? ವಿಜಯಲಕ್ಷ್ಮೀ ಕಂಪ್ಲೇಂಟ್ ಕೊಡೋಕೆ ಚಿಂತನೆ ನಡೆಸಿದ್ದು ಯಾಕೆ ಅಂತಾ ಹೇಳ್ತೀವಿ.. ಅದಕ್ಕೂ ಮೊದಲು ರಮ್ಯಾ ಏನೆಲ್ಲಾ ಪೋಸ್ಟ್ ಮಾಡಿದ್ರು ಅಂತಾ ನೋಡೋದಾದ್ರೆ,
ರಮ್ಯಾ ಪೋಸ್ಟ್‌ನಲ್ಲಿ ಏನಿದೆ?
ರೇಣುಕಾಸ್ವಾಮಿ ಮಾಡಿದ್ದ ಮೆಸೇಜ್‌ಗಳಿಗೂ ಡಿ ಬಾಸ್ ಫ್ಯಾನ್ಸ್ ಮಾಡುತ್ತಿರುವ ಮೆಸೇಜ್‌ಗಳ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಈ ರೀತಿಯ ಸ್ತ್ರೀದ್ವೇಷದ ಮನಸ್ಥಿತಿಯನ್ನು ಹೊಂದಿರುವ ಟ್ರೋಲ್‌ಗಳಿಂದಾಗಿ ಮಹಿಳೆಯರು ಮತ್ತು ಯುವತಿಯರು ಕಿರುಕುಳ, ಅತ್ಯಾಚಾರ ಮತ್ತು ಕೊಲೆಗೆ ಒಳಗಾಗುತ್ತಾರೆ.. ಹೀಗೆ ಇದು ರಮ್ಯಾ ಸ್ಟೇಟಸ್ ಕಥೆಯಾದ್ರೆ, ಇತ್ತ ಒಂದು ಕಾಲದ ಆಪ್ತ ಗೆಳತಿ ಚಂದನವನದ ಕೊಲೀಗ್ ನಟಿ ರಕ್ಷಿತಾ ಪ್ರೇಮ್ ಕೂಡ ಕೆರಳಿ ಕೆಂಡವಾಗಿದ್ದಾರೆ.. ರಮ್ಯಾ ಮಾಡಿದ್ದ ಪೋಸ್ಟ್‌ಗೆ ಪ್ರತಿಯಾಗಿ ಇನ್‌ಸ್ಟಾದಲ್ಲಿ ಸ್ಟೇಟಸ್ ಹಾಕಿದ್ದಾರೆ.
ರಕ್ಷಿತಾ ಸ್ಟೇಟಸ್‌ನಲ್ಲಿ ಏನಿದೆ?
ನಿಮಗೆ ವ್ಯಕ್ತಿಗಳ ಮಾನಸಿಕ ಆರೋಗ್ಯ ನೋಡಲು ಸಾಧ್ಯವಿಲ್ಲ. ಯಾವಾಗಲೂ ದಯೆ ಇರಲಿ. ನಾನು ನಿಜವಾಗಿಯೂ ಏನು ವೈರಲ್ ಆಗಬೇಕೆಂದು ಬಯಸುತ್ತೇನೆ ಎಂದು ನಿಮಗೆ ತಿಳಿದಿದೆಯೇ? ಮೂಲಭೂತ ಮಾನವೀಯ ಸಭ್ಯತೆ.
ಮತ್ತೊಂದು ವಿಚಾರ ಅಂದ್ರೆ ನಟಿ ರಮ್ಯಾ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಿಡಿದೆದ್ದಿದ್ದಾರೆ. ರಮ್ಯಾ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ವಿಜಯಲಕ್ಷ್ಮೀ ಪ್ಲ್ಯಾನ್ ಮಾಡಿದ್ದು, ಅದಕ್ಕೂ ಮೊದಲು ಇನ್‌ಸ್ಟಾದಲ್ಲಿ ಸ್ಟೇಟಸ್ ಹಾಕಿಕೊಂಡು ರಮ್ಯಾಗೆ ಟಾಂಗ್ ಕೊಟ್ಟಿದ್ದಾರೆ.
ವಿಜಯಲಕ್ಷ್ಮೀ ಸ್ಟೋರಿಯಲ್ಲೇನಿದೆ?
ಮೂರ್ಖನನ್ನ ಅವನ ಮಾತಿನಿಂದ ಗುರುತಿಸಬಹುದು. ಮತ್ತು ಬುದ್ದಿವಂತನನ್ನ ಮೌನದಿಂದ ಗುರುತಿಸಬಹುದು ಅಂತಾ ಇನ್ಸ್ಟಾದಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ.
ಇನ್ನು, ವಿವಾದ ಜೋರಾಗ್ತಿದ್ದಂತೆ ದರ್ಶನ್ ಫ್ಯಾನ್ಸ್ ಅಲರ್ಟ್ ಆಗಿದ್ದಾರೆ.. ಯಾವುದಕ್ಕೂ ಕಿವಿಗೊಡೋದು ಬೇಡ.. ಸೈಲೆಂಟಾಗಿರಿ ಅಂತಾ ದರ್ಶನ್ ಅಭಿಮಾನಿಗಳ ಪೋಸ್ಟ್ ವೈರಲ್ ಆಗುತ್ತಿದೆ. ಮುಂದೇನಾಗುತ್ತೇ ಅನ್ನೋದನ್ನು ಕಾದು ನೋಡ್ಬೇಕು.
