ಜೀ ಕನ್ನಡದ ಪಾರು ಧಾರಾವಾಹಿ, ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದಲ್ಲಿ ನಟಿಸಿದ್ದ Sridhar ನಾಯಕ್ ಈಗ ಬಾರದೂರಿಗೆ ಪಯಣಿಸಿದ್ದಾರೆ.. ಬದುಕಿನ ಉತ್ತುಂಗಕ್ಕೆ ಏರುವ ಹೊತ್ತಿನಲ್ಲೇ ವಿಧಿ ತನ್ನ ಆಟ ಮುಗಿಸಿದೆ.. ಬಾಳಿ ಬದುಕಬೇಕಿದ್ದ ನಟನ ಕಥೆಯನ್ನೇ ಮುಗಿಸಿದೆ.

ನಟ Sridhar ಕಳೆದ ಕೆಲವು ದಿನಗಳಿಂದ ಅನಾರೋಗ್ಯ‌ ಸಮಸ್ಯೆಗಳಿಂದ ಬಳಲುತ್ತಿದ್ದರು. ಗುರುತು ಸಿಗದಷ್ಟು ನಿತ್ರಾಣರಾಗಿದ್ದ ಶ್ರೀಧರ್ ಕಳೆದ ಹಲವು ದಿನಗಳಿಂದ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಿರುತೆರೆ ಹಾಗೂ ಸಿನಿಮಾ ಎರಡರಲ್ಲೂ ನಟಿಸಿದ್ದ ಶ್ರೀಧರ್ ನಾಯಕ್ ಆರ್ಥಿಕ ಪರಿಸ್ಥಿತಿ ಕೂಡ ಹದಗೆಟ್ಟಿತ್ತು. ಹೀಗಾಗಿ, ಶ್ರೀಧರ್ ಸಹಾಯಕ್ಕಾಗಿ ನೆರವು ಕೋರಿದ್ದರು. ಕಿರುತೆರೆ ತಾರೆಯರು ಹಾಗೂ ಜನರು ಇವರ ಪರಿಸ್ಥಿತಿ ನೋಡಿ ನೆರವನ್ನು ನೀಡಿದ್ದರು.. ದಿಢೀರ್‌ ಅಂತಾ ಶ್ರೀಧರ್‌ಗೆ ಇದೇನಾಯ್ತು ಅಂತಾ ಮಮ್ಮಲ ಮರುಗಿದ್ದರು..

ಕೊರೊನಾ ಸಂದರ್ಭದಲ್ಲಿ Sridhar ನಾಯಕ್‌ಗೆ ಕೆಲಸವಿಲ್ಲದೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ಇನ್ನೊಂದು ಕಡೆ ಕೌಟುಂಬಿಕ ಸಮಸ್ಯೆ ಕೂಡ ಇತ್ತು. ಆ ವೇಳೆ ಕೆಲಸಕ್ಕಾಗಿ ಶ್ರೀಧರ್‌ ಸಿಕ್ಕಾಪಟ್ಟೆ ಅಲೆದಾಡಿದ್ದರು.. ಚಿಕ್ಕ ಪುಟ್ಟ ಕೆಲಸ ಸಿಗ್ತಿತ್ತೇ ಹೊರತು ದೊಡ್ಡ ಪಾತ್ರಗಳೇನು ಸಿಗುತ್ತಿರಲಿಲ್ಲ. ಹೀಗಾಗಿ ಮನೆ ಬಾಡಿಗೆ ಕಟ್ಟುವುದಕ್ಕೂ ಕಷ್ಟವಾಗುತ್ತಿತ್ತು ಅಂತಾ ಶ್ರೀಧರ್‌ ನೋವು ತೋಡಿಕೊಂಡಿದ್ದರು.. ಇತ್ತೀಚೆಗಷ್ಟೇ ಆಸ್ಪತ್ರೆಯಲ್ಲಿದ್ದಾಗ ಶ್ರೀಧರ್‌ ಫೋಟೋ ಒಂದು ವೈರಲ್‌ ಆಗಿತ್ತು.. ಊಟ ಸರಿಯಾಗಿ ಮಾಡದೆ ದೇಹದಲ್ಲಿ ವಿಟಮಿನ್ ಹಾಗೂ ಪ್ರೋಟಿನ್ ಕಡಿಮೆಯಾಗಿತ್ತು. ಇದರಿಂದ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಹೋಯ್ತು.. ನನಗೆ ಊಟ ಹಾಕೋರೂ ಯಾರು ಇಲ್ಲ.. ಪತ್ನಿಯೂ ನನ್ನನ್ನು ಬಿಟ್ಟು ಹೋಗಿದ್ದಾಳೆ ಅಂತಾ ಸ್ವತ: ಶ್ರೀಧರ್ ನಾಯಕ್ ಹೇಳಿಕೊಂಡಿದ್ದರು..

Also Read: ತೂಕ ಇಳಿಸೋದಿಕ್ಕೆ ಈ 5 ರೀತಿಯ ಅಕ್ಕಿಗಳನ್ನ ಒಮ್ಮೆ ಟ್ರೈ ಮಾಡಿ..Results ನೋಡಿ

ಇನ್ನು, ಸಾಯುವ ಮುನ್ನ ಶ್ರೀಧರ್ ಅವರು ಪತ್ನಿ ವಿರುದ್ಧ ಮಾತನಾಡಿದ್ದರು. ಆದ್ರೀಗ ತನ್ನ ವಿರುದ್ಧ ಆರೋಪ ಮಾಡಿದ್ದ ಗಂಡನ ಬಗ್ಗೆ ಶ್ರೀಧರ್ ಪತ್ನಿ ಜ್ಯೋತಿ ಸ್ಪಷ್ಟನೆ ಕೊಟ್ಟಿದ್ದಾರೆ. ಶ್ರೀಧರ್ ಪತ್ನಿ ಜ್ಯೋತಿ ಆಡಿಯೋ ಮೂಲಕ ಕ್ಲಾರಿಟಿ ಕೊಟ್ಟಿದ್ದಾರೆ.. ಮದುವೆಯಾದ ಎರಡೇ ವರ್ಷದಲ್ಲಿ ನನ್ನಿಂದ ದೂರವಾದರು. ಇಬ್ಬರು ಬಡತನದಿಂದ ಬಂದವರು, ಒಟ್ಟಿಗೆ ಆದರ್ಶ ಫಿಲಂ ಸಂಸ್ಥೆಯಲ್ಲಿ ಪರಿಚಯವಾಗಿ ಮದುವೆಯಾಗಿದ್ದೆವು. ಮದುವೆಯಾದ ನಂತರ ಶ್ರೀಧರ್ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ ತೆಗೀತಿದ್ದ.. ಶ್ರೀಧರ್ ಗೆ ಹುಡುಗಿಯರ ಸಹವಾಸ ಇತ್ತು. ಶ್ರೀಧರ್ HIV induces Informa ಕಾಯಿಲೆಯಿಂದ ಬಳಲುತ್ತಿದ್ದರೂ, ಮತ್ತು ಕ್ಯಾನ್ಸರ್ ಕೂಡ ಇತ್ತು. ನನಗೆ ಬೇರೆ ಅವರ ಜೊತೆ ಸಂಬಂಧ ಇದೆ ಅಂತ ಶ್ರೀಧರ್ ನನ್ನಿಂದ ದೂರವಾಗಿದ್ದ ಅಂಥಾ ಹೇಳಿಕೊಂಡಿದ್ದಾರೆ.

ಈ ಎಲ್ಲಾ ಆರೋಪ, ಕೌಟುಂಬಿಕ ಕಲಹಗಳ ಮಧ್ಯೆ ಶ್ರೀಧರ್‌ ಬದುಕು ಒಂದು ದೊಡ್ಡ ಹೋರಾಟ.. ಬಡತನದಿಂದ ಬಂದು, ಬದುಕು ಕಟ್ಟಿಕೊಳ್ಳಲು ಸೀರಿಯಲ್‌ಗಾಗಿ ಅಲೆದಾಡಿ ಚಾನ್ಸ್‌ ಗಿಟ್ಟಿಸಿಕೊಂಡರೂ ಸಿಕ್ಕಿದ್ದು ಸಣ್ಣಪುಟ್ಟ ಪಾತ್ರ.. ಅದರಲ್ಲೇ ದುಡಿದು ಜೀವನ ನಡೆಸುವ ಅನಿವಾರ್ಯತೆಯ ಹೊತ್ತಲ್ಲಿ ಮಾರಕ ಕಾಯಿಲೆ ಅವರನ್ನು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿಸಿ ಬಿಟ್ಟಿತ್ತು.. ಆಸ್ಪತ್ರೆಯಲ್ಲಿ ಎಲುಬು ತೊಗಲಿನ ದೇಹವಷ್ಟೇ ಉಳಿದಿತ್ತು.. ಸುಮಾರು ಎರಡೂವರೆ ತಿಂಗಳ ಕಾಲ ಸಾವಿನೊಂದಿಗೆ ಹೋರಾಡಿ ಶ್ರೀಧರ್‌ ಕೊನೆಗೂ ಸಾವಿನ ಮುಂದೆ ಸೋಲೊಪ್ಪಿಕೊಂಡಿದ್ದಾರೆ.. 47ನೇ ವಯಸ್ಸಿಗೆ ಶ್ರೀಧರ್‌ ಬದುಕಿನ ಪಯಣ ಮುಗಿಸಿದ್ದು, ಕಿರುತೆರೆ ತಾರೆಯರು ಕಂಬನಿ ಮಿಡಿದಿದ್ದಾರೆ.

Share.
Leave A Reply