ಅಗ್ನಿಸಾಕ್ಷಿ ಹಾಗೂ ಸೀತಾ ರಾಮ ಸೀರಿಯಲ್‌ ಮೂಲಕ ಕನ್ನಡಿಗರ ಮನೆಮಾತಾಗಿರುವ, ಡಿಂಪಲ್‌ ಚೆಲುವೆ ವೈಷ್ಣವಿ ಗೌಡ (Vaishnavi Gowda Marriage) ಅವರು ರಿಸೇಂಟ್‌ ಆಗೇ ಅದ್ಧೂರಿಯಾಗಿ ಎಂಗೆಜ್‌ಮೆಂಟ್‌ ಆಗಿದ್ರು. ವೈಷ್ಣವಿ ಗೌಡ ನಾಯಕಿ ಸೀತಾ ಆಗಿ ನಟಿಸಿದ ‘ಸೀತಾ ರಾಮ’ ಸೀರಿಯಲ್‌ ಮೊನ್ನೆಮೊನ್ನೆಯಷ್ಟೇ ಎಂಡ್‌ ಆಯ್ತು. 

ಸೀತಾ ರಾಮ ಸೀರಿಯಲ್‌ ಖ್ಯಾತಿ ಮುಕ್ತಾಯವಾಗಿದ್ದು, ಸೀರಿಯಲ್ ಕಮಿಟ್‌ಮೆಂಟ್‌ ಮುಗಿಸಿರುವ ವೈಷ್ಣವಿ ಗೌಡ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ವೈಷ್ಣವಿ ಗೌಡ – ಅನುಕೂಲ್ ಮಿಶ್ರಾ ವಿವಾಹಕ್ಕೆ ದಿನಗಣನೆ ಶುರುವಾಗಿದೆ. ಸದ್ಯ ಕೆಲಸದಿಂದ ಬಿಡುವಾಗಿರೋ ನಟಿ ವೈಷ್ಣವಿ ಈಗ ಮದುವೆ ತಯಾರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಈಗಾಗಲೇ ವೈಷ್ಣವಿ ಗೌಡ ಮನೆಯಲ್ಲಿ ಮದುವೆ ತಯಾರಿ ಆರಂಭವಾಗಿದೆ. ವೈಷ್ಣವಿ ಗೌಡ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿವೆ.

ಈ ಕುರಿತು ವೈಷ್ಣವಿ ಗೌಡ ಹಳದಿ ಶಾಸ್ತ್ರದ ಫೋಟೋಗಳನ್ನು ಇನ್ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ವೈಷ್ಣವಿ ಗೌಡ ಹಳದಿ ಶಾಸ್ತ್ರದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Share.
Leave A Reply