ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಾರೋಗ್ಯ ಕುರಿತು ಸದ್ಯ ಭಾರೀ ಚರ್ಚೆಯಾಗ್ತಿದೆ. ಟ್ರಂಪ್ ಆರೋಗ್ಯ ಸಮಸ್ಯೆ ಎದುರಿಸ್ತಿದ್ದಾರೆ ಅನ್ನೋ ಬಗ್ಗೆ ಸಾಕಷ್ಟು ಊಹಾಪೋಹಗಳು ಶುರುವಾಗಿವೆ. ಈ ನಡುವಲ್ಲೇ ಟ್ರಂಪ್ ಅವರಿಗೆ ಏನಾದರೂ ಹೆಚ್ಚು ಕಡಿಮೆಯಾದ್ರೆ ನಾನು ಅಧ್ಯಕ್ಷನಾಗಿ ದೇಶವನ್ನು ಮುನ್ನಡೆಸಲು ಸಿದ್ದ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದೀಗ ಇವರ ಹೇಳಿಕೆ ಜಗತ್ತಿನಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಹೀಗಾಗಿ ಟ್ರಂಪ್ ಆರೋಗ್ಯ ತೀರಾ ಹದಗೆಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗುತ್ತಿದೆ.
ಯುಎಸ್‌ಎ ಟುಡೇ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೆಡಿ ವ್ಯಾನ್ಸ್, ಟ್ರಂಪ್ ಅವರ ಕಾರ್ಯವೈಖರಿಯನ್ನ ಶ್ಲಾಘಿಸಿದ್ದಾರೆ. ಶ್ವೇತಭವನದಲ್ಲಿ ಎಲ್ಲರಿಗಿಂತಲೂ ಹೆಚ್ಚು ಚುರುಕಾಗಿರುವ ವ್ಯಕ್ತಿ ಎಂದರೆ ಅವರು ಡೊನಾಲ್ಡ್ ಟ್ರಂಪ್. ಟ್ರಂಪ್ ಅವರು ಆರೋಗ್ಯವಾಗಿದ್ದಾರೆ. ಅವರೊಂದಿಗೆ ಕೆಲಸ ಮಾಡುವ ಹೆಚ್ಚಿನವರು ಚಿಕ್ಕ ವಯಸ್ಸಿನವರು. ಆದರೆ, ನಮ್ಮೆಲ್ಲರಿಗಿಂತಲೂ ಕೊನೆಯಲ್ಲಿ ಮಲಗುವುದು ಡೊನಾಲ್ಡ್ ಟ್ರಂಪ್. ಬೆಳಿಗ್ಗೆ ಮೊದಲಿಗೆ ಏಳುವುದು ಅವರೇ. ಅವರು ನಮ್ಮೆಲ್ಲರಿಗೂ ಮಾದರಿ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಆದ್ರೆ ಅಧ್ಯಕ್ಷರಿಗೆ ಯಾವ ಸಂದರ್ಭದಲ್ಲಾದರೂ ಏನಾದರೂ ಅನಾಹುತವಾಗಬಹುದು. ಅವರು ಎರಡು ಬಾರಿ ಶೂಟೌಟ್‌ನಿಂದ ತಪ್ಪಿಸಿಕೊಂಡಿದ್ದಾರೆ. ಅವರಿಗೆ ದೇವರ ದಯೆಯಿಂದ ಏನೂ ಆಗಬಾರದು, ಆದಾಗ್ಯೂ, ಏನಾದರೂ ಆದ್ರೆ, ನಾನು ಅಧ್ಯಕ್ಷನಾಗಿ ದೇಶವನ್ನು ಮುನ್ನಡೆಸಲು ಸಿದ್ಧ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರೊಂದಿಗಿನ ಭೇಟಿಯ ಸಮಯದಲ್ಲಿ ಟ್ರಂಪ್ ಅವರ ಕೈಯಲ್ಲಿ ಕೆಲ ಗಾಯ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಟ್ರಂಪ್ ಅವರ ಆರೋಗ್ಯ ಕುರಿತು ಸಾಕಷ್ಟು ಚರ್ಚೆ ಶುರುವಾಗಿತ್ತು. ಇನ್ನು ಟ್ರಂಪ್ ಅವರಿಕೆ ಚಿಕಿತ್ಸೆ ನೀಡುವ ವೈದ್ಯ ಡಾ. ಸೀನ್ ಬಾರ್ಬೆಲ್ಲಾ ಅವರು ಮಾಹಿತಿ ನೀಡಿ, ಟ್ರಂಪ್ ಅವರು ದೀರ್ಘಕಾಲ ಸಿವಿಐ ಆರೋಗ್ಯ ಸಮಸ್ಯೆಯಿಂದ ಬಳುತ್ತಿದ್ದಾರೆ. ಈ ರೋಗದ ಲಕ್ಷಣಗಳಿದ್ದು, 70 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಅಧ್ಯಕ್ಷೀಯ ಚುನವಣೆ ಪ್ರಚಾರ ಸಂದರ್ಭದಲ್ಲಿ ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿಯೂ ನಡೆದಿತ್ತು.
Read Also : ಪ್ರಧಾನಿ ಮೋದಿ ಜಪಾನ್ ಪ್ರವಾಸ, ಟೋಕಿಯೋ ತಲುಪಿದ ʼನಮೋʼಗೆ ಅದ್ದೂರಿ ಸ್ವಾಗತ
