ಬೆಂಗಳೂರು, ಜ.10: ಇಡೀ ಸಿನಿ ದುನಿಯಾದಲ್ಲಿ ಸಖತ್‌ ಸೆನ್ಸೇಷನ್‌ ಸೃಷ್ಟಿಸಿರುವ ಟಾಕ್ಸಿಕ್‌ ಸಿನಿಮಾಗೆ ಸಂಕಷ್ಟವೊಂದು ಎದುರಾಗಿದೆ. ರಾಕಿಂಗ್ ಸ್ಟಾರ್ ಯಶ್‌ರ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ವಿರುದ್ಧ ದೂರು ದಾಖಲಾಗಿದೆ. ಹೌದು.. ಈ ಸಿನಿಮಾದ ಟೀಸರ್ ಬಿಡುಗಡೆ ನಂತರ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಟೀಸರ್‌ನಲ್ಲಿ ಅಸಭ್ಯ ದೃಶ್ಯಗಳಿವೆ. ಅದು ಮಕ್ಕಳ ಮೇಲೆ ಪರಿಣಾಮ ಬೀರಬಹುದು, ಫ್ಯಾಮಿಲಿ ಜೊತೆ ಕುಳಿತು ನೋಡುವಂತೆ ಟೀಸರ್ ಇಲ್ಲ ಎಂಬಿತ್ಯಾದಿ ಮಾತುಗಳು ಸಾಕಷ್ಟು ಕೇಳಿಬಂದಿದ್ದು, ನಿರ್ದೇಶಕಿ ಗೀತು ಮೋಹನ್ ದಾಸ್ ಹಾಗೂ ನಟ ಯಶ್ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ..

ಈ ಸಂಬಂಧ ವಕೀಲ ಲೋಹಿತ್ ಕುಮಾರ್ ಅವರು ಕೇಂದ್ರ ಸೆನ್ಸಾರ್ ಮಂಡಳಿಗೆ ದೂರು ಕೂಡ ಸಲ್ಲಿಸಿದ್ದಾರೆ. ಈ ಕುರಿತು ಈಗಾಗ್ಲೇ ಹೇಳಿಕೆ ನೀಡಿರುವ ದೂರುದಾರರು, ಚಿತ್ರಮಂದಿರಗಳಲ್ಲಿ ಎ ಸರ್ಟಿಫಿಕೇಟ್ ಇದ್ದರೆ ಮಕ್ಕಳನ್ನು ಕರೆದುಕೊಂಡು ಫ್ಯಾಮಿಲಿ ಆಡಿಯನ್ಸ್ ನೋಡಲು ಸಾಧ್ಯವಿಲ್ಲ. ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್‌ಗಳಿಗೆ ಯಾವುದೇ ಮಾರ್ಗಸೂಚಿಗಳಿಲ್ಲದಿರುವುದು ಸಮಸ್ಯೆಯಾಗಿದೆ ಅಂತಾ ತಿಳಿಸಿದ್ದಾರೆ. ಸೆನ್ಸಾರ್ ಮಂಡಳಿ ಟೀಸರ್‌ಗಳಿಗೂ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ದೂರು ಸಲ್ಲಿಸಿದ್ದೇನೆ ಅಂತಾ ಮಾಹಿತಿ ನೀಡಿದ್ದಾರೆ.

ಇನ್ನು, ಜನವರಿ 8 ಅಂದರೆ ಯಶ್‌ ಜನ್ಮದಿನದಂದು ಟಾಕ್ಸಿಕ್‌ ಚಿತ್ರತಂಡ‌ ಬರ್ತ್‌ಡೇ ಗಿಫ್ಟ್ ನೀಡಿತ್ತು. ಟಾಕ್ಸಿಕ್‌ ಟೀಸರ್‌ ರಿಲೀಸ್‌ ಮಾಡುವ ಮೂಲಕ ಹೊಸ ಸೇನ್ಸೇಷನ್‌ ಸೃಷ್ಟಿ ಮಾಡಿತ್ತು.. ಯುಟ್ಯೂಬ್‌, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಸೇರಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ವರ್ಲ್ಡ್‌ ವೈಡ್‌ 200 ಮಿಲಿಯನ್‌ಗೂ ಹೆಚ್ಚು ವ್ಯೂವ್ಸ್‌ ಪಡೆದು ಸಖತ್‌ ಹವಾ ಎಬ್ಬಿಸಿದೆ. ಯಶ್‌ ಜೊತೆ ಹಾಲಿವುಡ್‌ ನಟಿ ನಟಾಲಿ ಬರ್ನ್‌, ಭಾರತೀಯ ನಟಿಯರಾದ ಕಿಯಾರಾ ಅಡ್ವಾನಿ, ನಯನತಾರಾ, ರುಕ್ಮಿಣಿ ವಸಂತ್‌ ಸೇರಿ ತಾರಾಗಣವನ್ನೇ ಹೊಂದಿರುವ ಈ ಸಿನಿಮಾ ಮಾರ್ಚ್‌ 19ರಂದು ಸಿನಿಮಾ ರಿಲೀಸ್‌ ಆಗುತ್ತಿದೆ.‌ ಇಂಥಾ ಹೊತ್ತಲ್ಲಿ ಸಿನಿಮಾ ವಿರುದ್ಧ ದೂರು ನೀಡಿರೋದು ಅಭಿಮಾನಿಗಳಿಗೆ ಆತಂಕ ಉಂಟು ಮಾಡಿದೆ. ಮುಂದೇನಾಗುತ್ತೋ ನೋಡಬೇಕು..

Share.
Leave A Reply