ಅಯ್ಯೋ ಮೆಟ್ಲು ಹತ್ತೋಕ್ ಆಗಲ್ಲ ಕಾಲು ನೋಯುತ್ತೆ. ಕೈ ಕಾಲುಗಳಲ್ಲಿ ಸೆಳೆತ ಬರುತ್ತೆ, ಸುಸ್ತು- ಆಯಾಸ ಅಂತೂ ಕಟ್ಟಿಟ್ಟ ಬುತ್ತಿ. ವಯಸ್ಸಾಕ್ತಿದ್ ಹಾಗೆ ಮೂಳೆಗಳು ವೀಕ್ ಆಗೋದ್ಯಾಕ್ ಗೊತ್ತಾ? ಮೂಳೆಗಳ ಮಧ್ಯೆ ಕೊಲಾಜೆನ್ ಎನ್ನುವಂತಹ ಕಂಪೌಂಡ್ ಇರುತ್ತೆ. ಇದು ಅಂಟಿನ ರೀತಿ ಕೆಲ್ಸ ಮಾಡುತ್ತೆ. ಅಂದ್ರೆ ಮೂಳೆಗಳನ್ನ ಜೋಡಿಸಿಟ್ಟುಕೊಳ್ಳುವಲ್ಲಿ ಸಹಾಯ ಮಾಡುತ್ತೆ. ವಯಸ್ಸು 25 ಆಗ್ತಿದ್ದಂತೆ ಕೊಲಾಜೆನ್ ಎಂಬ ಅಂಟು ಕಡಿಮೆ ಆಗ್ತಾ ಹೋಗುತ್ತೆ. ಪ್ರತೀ ವರ್ಷ ಒಂದೊಂದು ಪರ್ಸೆಂಟ್ ಕೊಲಾಜೆನ್ ಕಡಿಮೆಯಾಗುತ್ತೆ. ಹೀಗಾಗಿ 50-60 ವಯಸ್ಸಾಗ್ತಿದ್ದಂತೆ ಮೂಳೆಗಳು ವೀಕ್ ಆಗೋದು, ಸೆಳೆತ ಬರೋದು, ಅರ್ಥ್ರೈಟಿಸ್ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ವೆ. ಇದಿಕ್ಕೆ ಸೊಲ್ಯೂಷನ್ ನಿಮ್ಮ ಅಡುಗೆ ಮನೆಯಲ್ಲಿದೆ. ಈ 8 ಪವರ್‌ಫುಲ್ ತರಕಾರಿಗಳನ್ನ ನೀವು ತಿನ್ನೋದ್ರಿಂದ ನಿಮ್ಮ ಮೂಳೆಗಳ ಆರೋಗ್ಯ ವೃದ್ಧಿಯಾಗುತ್ತೆ.
ಕ್ಯಾಬೇಜ್

ನಡೆಯೋವಾಗ ಕಾಲುಗಳಲ್ಲಿ ಕಟ್, ಕಟ್ ಸೌಂಡ್ ಬರೋದು ಅಥವಾ ಮಸಲ್ ಕ್ರ್ಯಾಂಪ್ಸ್ ಉಂಟಾಗೋದು ಈ ರೀತಿಯ ಸಮಸ್ಯೆಗಳಿರೋರು ಕ್ಯಾಬೇಜ್‌ಅನ್ನ ವಾರದಲ್ಲಿ 2 ಬಾರಿ ಸೇವಿಸಿ. ಇದನ್ನ ನೀವು ಪಲ್ಯ, ಸಲಾಡ್ ಮಾಡಿ ತಿನ್ಬಹುದು ಅಥವಾ ದೋಸೆ, ಇಡ್ಲಿ, ಚಪಾತಿ ಮಾಡೊವಾಗ ಕೂಡ ಹಾಕ್ಬಹುದು. ಕ್ಯಾಬೇಜ್‌ನಲ್ಲಿ ಗ್ಲೂಟಮಿನ್ ಎಂಬ ಅಂಶವಿದ್ದು ಇದು ಬೋನ್ ಹೆಲ್ತ್ ಇಂಪ್ರೂವ್ ಮಾಡೋದಿಕ್ಕೆ ಸಹಾಯ ಮಾಡುತ್ತೆ.
ಈರುಳ್ಳಿ ಹಾಗೂ ಬೆಳ್ಳುಳ್ಳಿ

ಬೆಳಗ್ಗೆ ಟೈಮಲ್ಲಿ ಬೆರಳುಗಳು ತುಂಬಾನೆ ಸ್ಟಿಫ್ ಅಥವಾ ಅಲುಗಾಡಿಸಲು ಆಗದೇ ಇರೋ ರೀತಿ ಅನ್ಸೋದು, ಸಂಜೆ ಆಗ್ತಿದ್ದಾಗೆ ಪಾದಗಳು ಊದಿಕೊಳ್ಳೊದು ಈ ರೀತಿಯ ಸಮಸ್ಯೆ ಇರೋರು ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನ ಹೆಚ್ಚಾಗಿ ಸೇವಿಸಿದ್ರೆ ಒಳ್ಳೇದು. ಬೆಳ್ಳುಳ್ಳಿಯಲ್ಲಿನ ಸಲ್ಫರ್ ಹಾಗೂ ಈರುಳ್ಳಿಯಲ್ಲಿರುವಂತಹ ಕ್ವೆರ್ಸೆಟಿನ್ ಎಂಬ ಆಂಟಿ ಆಕ್ಸಿಡೆಂಟ್, ಕೊಲಾಜೆನ್ ಉತ್ಪಾದನೆಯನ್ನ ಹೆಚ್ಚಿಸುತ್ತೆ. ಇದ್ರಿಂದ ಮೂಳೆಗಳ ಆರೋಗ್ಯ ಕೂಡ ಸುಧಾರಿಸುತ್ತೆ.
ಕ್ಯಾಪ್ಸಿಕಮ್

ವಯಸ್ಸಾಗ್ತಿದ್ದಾಗೆ ಗ್ರಿಪ್ ಅಥವಾ ಹಿಡಿತ ವೀಕ್ ಆಗುತ್ತೆ. ಒಂದು ಬಕೆಟ್ ನೀರನ್ನ ಕೂಡ ಎತ್ತವಷ್ಟು ಗ್ರಿಪ್ ಇರೋದಿಲ್ಲ. ತರಕಾರಿಗಳಲ್ಲಿ ಅತೀ ಹೆಚ್ಚು ವಿಟಮಿನ್ ಸಿ ಇರುವಂತಹ ತರಕಾರಿಗಳಲ್ಲಿ ಕ್ಯಾಪ್ಸಿಕಮ್ ಕೂಡ ಒಂದಾಗಿದೆ. ವಿಟಮಿನ್ ಸಿ ಕೊಲಾಜನ್ ಉತ್ಪತ್ತಿಯನ್ನ ಉತ್ತೇಜಿಸುವ ಮೂಲಕ ಜಾಯಿಂಟ್ಸ್ ಹೆಲ್ತ್‌ಅನ್ನ ಇಂಪ್ರೂವ್ ಮಾಡುತ್ತೆ. ಇದ್ರಿಂದ ಗ್ರಿಪ್ ಸಮಸ್ಯೆ, ಗಾಯಗಳು ಬೇಗ ಮಾಸದೇ ಇರುವಂತದ್ದು ಇವೆಲ್ಲಾ ಕಾಣಿಸಿಕೊಳ್ಳೋದಿಲ್ಲ. ಸೋ ಕ್ಯಾಪ್ಸಿಕಮ್ಅನ್ನ ನೀವು ಸಲಾಡ್‌ಗಳಲ್ಲಿ ಹಸಿಯಾಗಿ ಕೂಡ ಬಳಸ್ಬಹುದು. ಇನ್ನು ಸಾಮಾನ್ಯವಾಗಿ ಕ್ಯಾಪ್ಸಿಕಮ್ ಬೀಜಗಳನ್ನ ಅಡುಗೆಯಲ್ಲಿ ಬಳಸೋದಿಲ್ಲ. ಇದನ್ನ ಕಸದ ಬುಟ್ಟಿಗೆ ಎಸಿಯೋ ಬದಲು ಕ್ಯಾಪ್ಸಿಕಮ್ ಬೀಜಗಳ ಮೈಕ್ರೋಗ್ರೀನ್ ತಯಾರಿಸಿ ಅದನ್ನ ಕೂಡ ಸಲಾಡ್, ಸೂಪ ಅಥವಾ ಫುಡ್ ಗಾರ್ನಿಶಿಂಗ್ ವೇಳೆ ಬಳಸ್ಬಹುದು.
ಕ್ಯಾರೆಟ್ ಹಾಗೂ ಬೀಟ್‌ರೂಟ್

ನಿಂತಿದ್ದವರು ಸಡನ್ ಆಗಿ ಕೂತ್ಕೊಳೋವಾಗ ಅಥವಾ ಕೂತವರು ಸಡನ್ ಆಗಿ ಏಳೋವಾಗ ಮಂಡಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತೆ ಅಥವಾ ಮೂಳೆಗಳು ಒಂದಕ್ಕೊಂದು ಉಜ್ಜಿಕೊಂಡಂತೆ ಅನ್ಸುತ್ತೆ. ಇನ್ನು ಕೆಲವ್ರಿಗೆ ತುಂಬಾ ಹೊತ್ತು ಕೂತಿದ್ರೆ ಕಾಲುಗಳು ಭಾರ ಅನ್ಸೊದು, ಜೋಮು ಹಿಡಿಯೋದು ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ವೆ. ಇದಿಕ್ಕೆ ಪರಿಹಾರ ಕ್ಯಾರೆಟ್ ಹಾಗೂ ಬೀಟ್‌ರೂಟ್‌ನಲ್ಲಿದೆ. ಕ್ಯಾರೆಟ್‌ನವಲ್ಲಿರುವ ಬೀಟಾ ಕೆರೋಟಿನ್ ನಮ್ಮ ದೇಹ ಸೇರಿದ್ಮೇಲೆ ವಿಟಮಿನ್ ಎ ಆಗಿ ಕ್ನವರ್ಟ್ ಆಗುತ್ತೆ. ಈ ವಿಟಮಿನ್ ಎ ಗ್ರೀಸ್ ರೀತಿ ಕೆಲಸ ಮಾಡುತ್ತೆ. ಯಾವ ರೀತಿ ಗ್ರೀಸ್ ವಾಹನಗಳ ಇಂಜಿನ್ ಸ್ಮೂತ್ ಆಗಿ ಫಂಕ್ಷನ್ ಮಾಡೋದಿಕ್ಕೆ ಸಹಾಯ ಮಾಡುತ್ತೋ ಅದೇ ರೀತಿ ವಿಟಮಿನ್ ಎ ನಮ್ಮ ಜಾಯಿಂಟ್ಸ್‌ಗೆ ಗ್ರೀಸ್ ರೀತಿ ಕೆಲಸ ಮಾಡುತ್ತೆ. ಬೀಟ್‌ರೂಟ್ ಸೇವನೆ ಬ್ಲಡ್ ಫ್ಲೋವನ್ನ ಇಂಪ್ರೂವ್ ಮಾಡುತ್ತೆ. ಇದು ಮೂಳೆಗಳ ಸಂದುಗಳಿಗೆ ಸರಿಯಾದ ಪ್ರಮಾಣದಲ್ಲಿ ಆಕ್ಸಿಜನ್ ಸಪ್ಲೈ ಮಾಡುತ್ತೆ. ಇದ್ರಿಂದ ಕಾಲುಗಳು ಭಾರ ಅನ್ಸೋದು ಅಥವಾ ಜೋಮು ಹಿಡಿಯುವಂತಹ ಸಮಸ್ಯೆಗಳು ಉಂಟಾಗೋದಿಲ್ಲ. ಸೋ ಈ ಎರಡೂ ತರಕಾರಿಗಳನ್ನ ಆದಷ್ಟು ಒಟ್ಟಿಗೆ ಬಳಸೋದು ಉತ್ತಮ. ಇದಿಕ್ಕೆ ಬೆಸ್ಟ್ ರೆಸಿಪಿ ಅಂದ್ರೆ ಕ್ಯಾರೆಟ್ ಹಾಗೂ ಬೀಟ್‌ರೂಟ್ ಜ್ಯೂಸ್. ಬೆಳಗ್ಗೆ ಖಾಲಿ ಹೊಟ್ಟೆಗೆ ಕ್ಯಾರೆಟ್-ಬೀಟ್‌ರೂಟ್ ಜ್ಯೂಸ್‌ಅನ್ನ ಸೇವಿಸಿ.
ಬೆಂಡೆಕಾಯಿ

ಬೆಂಡೆಕಾಯಿ ಲೋಳೆಯುಕ್ತ ತರಕಾರಿ ಆಗಿರೋದ್ರಿಂದ ಇದು ತುಂಬಾ ಜನಕ್ಕೆ ಇಷ್ಟ ಆಗೋದಿಲ್ಲ. ಆದ್ರೆ ಈ ತರಕಾರಿ ಮೂಳೆಗಳ ಆರೋಗ್ಯಕ್ಕೆ ವರದಾನವೇ ಆಗಿದೆ. ಬೆಂಡೆಕಾಯಿಯ ಲೋಳೆಯನ್ನ ಮ್ಯೂಸಿಲೇಜ್ ಅಂತಾ ಕರೀತಾರೆ. ಇದು ಮೂಳೆಗಳ ಮೇಲೆ ಲೂಬ್ರಿಕೆಂಟ್ ರೀತಿ ಕೆಲಸ ಮಾಡುತ್ತೆ. ಜೊತೆಗೆ ವಿಟಮಿನ್ ಸಿ ಹಾಗೂ ಮ್ಯಾಂಗನೀಸ್ ಕೂಡ ಇದ್ದು, ಈ ಪೋಷಕಾಂಶಗಳು ಮೂಳೆಗಳ ಮಧ್ಯೆ ಕುಷನ್ ರೀರಿ ಕೆಲಸ ಮಾಡುತ್ವೆ. ಇದ್ರಿಂದ ಮೂಳೆಗಳ ಸವೆತ ಉಂಟಾಗೋದಿಲ್ಲ.
ನುಗ್ಗೆಕಾಯಿ ಹಾಗೂ ನುಗ್ಗೆ ಸೊಪ್ಪು

ತರಕಾರಿಗಳಲ್ಲಿ ಅತಿಹೆಚ್ಚಿನ ಪೋಷಕಾಂಶಗಳನ್ನ ಹೊಂದಿರುವ ತರಕಾರಿ ಅಂದ್ರೆ ನುಗ್ಗೆಕಾಯಿ. ಸೊಪ್ಪುಗಳ ಕ್ಯಾಟಗರಿಗೆ ಬಂದ್ರೂ ನುಗ್ಗೆ ಸೊಪ್ಪನ್ನ ಬೀಟ್ ಮಾಡೋದಿಕ್ಕೆ ಆಗೋದಿಲ್ಲ. ಈವರೆಗೆ ಹೇಳಿದ ತರಕಾರಿಗಳು ಡ್ಯಾಮೇಜ್ ಆದ್ಮೇಲೆ ನಿಮ್ಮ ಬಾಡಿಯನ್ನ ರಿಪೇರಿ ಮಾಡುತ್ವೆ. ಆದ್ರೆ ನುಗ್ಗೆಕಾಯಿಯನ್ನ ನೀವು ನಿಯಮಿತವಾಗಿ ಸೇವಿಸಿದ್ರೆ, ಡ್ಯಾಮೇಜೇ ಆಗೋದಿಲ್ಲ. ಮೂಳೆಗಳಿಗೆ ಶಕ್ತಿ ನೀಡುವಲ್ಲಿ ನುಗ್ಗೆಕಾಯಿ ಹಾಗೂ ನುಗ್ಗೆಸೊಪ್ಪು ಪ್ರಮುಖ ಪಾತ್ರ ವಹಿಸುತ್ವೆ. ಯಾಕಂದ್ರೆ ಇವುಗಳಲ್ಲಿ ವಿಟಮಿನ್ ಸಿ, ಐರನ್, ಕ್ಯಾಲ್ಷಿಯಮ್ ಸಮೃದ್ಧವಾಗಿದೆ. ಈ ಎಲ್ಲಾ ತರಕಾರಿಗಳನ್ನ ನಿಯಮಿತವಾಗಿ ಸೇವಿಸ್ತಾ ಇದ್ರೆ ಸಂಧಿವಾತ, ಕೀಲುನೋವು ಈ ರೀತಿ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬರೋದಿಲ್ಲ. ಜೊತೆಗೆ ಬಂದಿರೋ ಸಮಸ್ಯೆಗಳು ಕೂಡ ಕಡಿಮೆ ಆಗುತ್ವೆ. ಈ ತರಕಾರಿಗಳ ಜೊತೆ ಪ್ರೋಟೀನ್‌ಭರಿತ ಆಹಾರ, ನಿಯಮಿತ ವ್ಯಾಯಾಮ ಕೂಡ ಬಹಳ ಮುಖ್ಯ
