ದಚ್ಚು ಫ್ಯಾನ್ಸ್‌ ಮತ್ತೆ ಅಬ್ಬರಿಸಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಕಳೆದೆರಡು ದಿನಗಳಿಂದ ನಟ ದರ್ಶನ್ ಫ್ಯಾನ್ಸ್ ಆರ್ಭಟ ಜೋರಾಗಿದೆ. ಕೆಲ ಕಿಡಿಗೇಡಿಗಳ ಹುಚ್ಚಾಟಕ್ಕೆ ಸುಖಾಸುಮ್ಮನೆ ಟ್ರೆಂಡ್ ಶುರುವಾಗಿ ವೈರಲ್ ಆಗಿದೆ. ಟ್ವಿಟ್ಟರ್ ತುಂಬಾ ಮೀಮ್ಸ್, ಟ್ರೋಲ್ ಪೋಸ್ಟ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಕೆಲವರು ಇನ್ನೂ ದಚ್ಚು ಅಭಿಮಾನಿಗಳನ್ನು ಕೆಣಕುತ್ತಲೇ ಇದ್ದಾರೆ.

ಸ್ಟಾರ್‌ ವಾರ್‌ ಅನ್ನೋದು ಹಿಂದಿನ ಕಾಲದಿಂದಲೂ ಇದೆ. ನಟರ ಅಭಿಮಾನಿಗಳು ನಡುವಿನ ಕಿರಿಕ್‌ ಸಾಮಾನ್ಯವಾಗಿತ್ತು. ಕೆಲವೂಮ್ಮೆ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದು ಇದೆ. ಆದರೆ ಈಗ ಟ್ರೆಂಡ್‌ ಚೇಂಜ್‌ ಆಗಿದೆ.‌ ಸೋಷಿಯಲ್‌ ಮೀಡಿಯಾಗಳ ದುನಿಯಾದಲ್ಲಿ ಫ್ಯಾನ್ಸ್‌ ಕಿತ್ತಾಟ ಮಿತಿಮೀರಿದ್ದು, ಸದ್ಯ ಡಿ ಬಾಸ್‌ ಫ್ಯಾನ್ಸ್‌ ಹಾಗೂ ತೆಲುಗು ಸ್ಟಾರ್ಸ್ ಅಭಿಮಾನಿಗಳ ವಾರ್‌ ಜೋರಾಗಿದೆ. ಕಳೆದ ಕೆಲ ದಿನಗಳ ಹಿಂದೆ ನಟ ದರ್ಶನ್ ಫ್ಯಾಮಿಲಿ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು.

ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ದರ್ಶನ್ ಅಭಿಮಾನಿಯೊಬ್ಬರು ಹಂಚಿಕೊಂಡಿದ್ದರು. ಅದನ್ನು ನೋಡಿ ಕೆಲ ತೆಲುಗು ನೆಟ್ಟಿಗರು ಟ್ರೋಲ್ ಮಾಡಿದ್ದರು. ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದವರಿಗೆ ಈ ಬಿಲ್ಡಪ್ ಬೇಕಾ? ಎಂದು ಕಮೆಂಟ್‌ ಹಾಕಿದ್ರು. ಇದಕ್ಕೆ ದರ್ಶನ್ ಅಭಿಮಾನಿಗಳು ತಿರುಗೇಟು ಕೊಟ್ಟಿದ್ದು, ಸೋಷಿಯಲ್ ಮೀಡಿಯಾ ವಾರ್‌ಗೆ ತಿರುಗಿತ್ತು..

ದರ್ಶನ್ ಬಗ್ಗೆ ತೆಲುಗು ನಟರ ಅಭಿಮಾನಿಗಳು ಟ್ರೋಲ್ ಮಾಡಿದ್ದರು. ಪವನ್ ಕಲ್ಯಾಣ್, ಪ್ರಭಾಸ್, ಜ್ಯೂ. ಎನ್‌ಟಿಆರ್ ಫ್ಯಾನ್ಸ್ ಒಟ್ಟಾಗಿ ಮುಗಿಬಿದ್ದರು. ತಮ್ಮ ತಮ್ಮಲ್ಲೇ ಕೆಸರೆರಚಾಟ ಮಾಡುತ್ತಿದ್ದವರು ಒಮ್ಮೆಲೆ ದರ್ಶನ್ ಅಭಿಮಾನಿಗಳ ವಿರುದ್ಧ ನಿಂತರು. ಆದರೆ ಅಷ್ಟೇ ಬೇಗ ಸುಮ್ಮನಾಗಿಬಿಟ್ಟರು. KFI ಕ್ರಿಮಿನಲ್ ದರ್ಶನ್ ಎಂದು ಟ್ರೋಲ್ ಮಾಡುತ್ತಿದ್ದವರು ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸೋಣ, ಇದರಿಂದ ಎಲ್ಲರಿಗೂ ಕೆಟ್ಟ ಹೆಸರು ಎಂದು ಉಲ್ಟಾ ಹೊಡೆದಿದ್ದಾರೆ.‌ ಮುಖ್ಯವಾಗಿ ಪವನ್ ಕಲ್ಯಾಣ್ ಅಭಿಮಾನಿಗಳು ರಾಜಿಗೆ ಮುಂದಾಗಿದ್ದಾರೆ. ಪವನ್ ಕಲ್ಯಾಣ್ ನಟನೆಯ ಹರಿಹರ ವೀರಮಲ್ಲು ಸಿನಿಮಾ ಜುಲೈ 24ಕ್ಕೆ ತೆರೆಗೆ ಬರಲಿದೆ.

ಕರ್ನಾಟಕದಲ್ಲಿಯೂ ದೊಡ್ಡದಾಗಿ ಸಿನಿಮಾ ರಿಲೀಸ್ ಮಾಡಲು ಪ್ರಯತ್ನ ನಡೀತಿದೆ. ಅದಕ್ಕೆ ಸಮಸ್ಯೆ ಆಗಬಾರದು ಅಂತಾ ಈಗ ರಾಜಿಗೆ ಬಂದಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅದೇನೆ ಆಗಲಿ.. ದರ್ಶನ್‌ ಹವಾ ಯಾವಾಗಲೂ ಟ್ರೆಂಡ್‌ನಲ್ಲಿ ಇರುತ್ತೆ. ಅದೇ ರೀತಿ ಪ್ರಪಂಚದಲ್ಲಿ ದರ್ಶನ್‌ ಕೆಣಕಿ ಉಳಿದವರಿಲ್ಲ ಅಂತಾ ಡಿ ಫ್ಯಾನ್ಸ್‌ ಕಾಮೆಂಟ್‌ ಮೂಲಕ ಟಿಎಫ್‌ಐ ಫ್ಯಾನ್ಸ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ.

Share.
Leave A Reply