ಕನ್ನಡ ಚಿತ್ರರಂಗದ ಮೇರು ನಟ ಹಾಗೂ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ (Ambi ) ಅವರಿಗೆ ಹುಟ್ಟು ಹಬ್ಬದ ದಿನಾಚರಣೆ.. ಅವರು ಇಂದು ಬದುಕಿದ್ದಿದ್ದರೆ, ಅವರಿಗೆ 73 ನೇ ವರ್ಷ. ಇಂದು ಅಂಬರೀಷ್ ನಮ್ಮ ಜೊತೆಗಿಲ್ಲ ಆದ್ರೂ ಅಭಿಮಾನಿಗಳ ಪ್ರೀತಿ ಹುಚ್ಚು ಅಭಿಮಾನದಲ್ಲಿ ಅವರನ್ನ ಕಾಣುತ್ತೇವೆ.. ಇಂದು ಅವರ ಅಭಿಮಾನಿಗಳು ಹಲವೆಡೆ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ..
ಇನ್ನು ಸುಮಲತಾ ಅಂಬರೀಶ್ ಅಂಬಿ ಸಮಾಧಿಗೆ ತೆರಳಿ ಪೂಜೆ ಮಾಡಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಅಂಬರೀಶ್ ಹುಟ್ಟುಹಬ್ಬವನ್ನ ಆಚರಿಸಿದ್ರು.




ಸುಮಲತಾ ಅಂಬರೀಶ್ ಅವರು ಅಂಬಿ ಹುಟ್ಟಿದ ದಿನಕ್ಕೆ ಭಾವುಕ ಪೋಸ್ಟ್ ಅನ್ನ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಅಂಬಿ ಜೊತೆಗಿನ ನೆನಪನ್ನ ಮೆಲಕುಹಾಕಿದ್ದಾರೆ.
ಇಂದು, ನಿಮ್ಮ 73ನೇ ಜನ್ಮದಿನ… ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣ, ಪ್ರತಿದಿನ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಉಳಿದಿದೆ… ಒಟ್ಟಿಗೆ ಕಳೆದ ಆಯಾ ದಿನಗಳ ನೆನಪುಗಳ ಜೊತೆ ಇಂದು ನಿಮ್ಮ ಅನುಪಸ್ಥಿತಿಯ ಅತೀವ ದುಃಖವನ್ನು ಉಂಟು ಮಾಡುತ್ತಿದೆ… ಆದರೆ, ನೀವು ತೋರಿದ ಪ್ರೀತಿ ಎಂದೆಂದಿಗೂ ನನ್ನ ಮನದಲ್ಲಿ ಜೀವಂತವಾಗಿದೆ. ಅನು ಕ್ಷಣವೂ ನೀವು ನಮ್ಮೊಂದಿಗೆ ಇದ್ದೀರಿ ಎನ್ನುವ ನಂಬಿಕೆಯೊಂದಿಗೆ ಬದುಕುತ್ತಿದ್ದೇವೆ. ಈ ನಂಬಿಕೆಯೇ ನನಗೆ ಸ್ಫೂರ್ತಿ ಹಾಗೂ ಸಾಂತ್ವನ ನೀಡುತ್ತದೆ. ದಿನಗಳು ಕಳೆದಿದ್ದರೂ, ನಿಮ್ಮಲ್ಲಿದ್ದ ಪ್ರೀತಿ, ದಯೆ, ಸಹಾನುಭೂತಿ, ಔದಾರ್ಯತೆಯ ಗುಣ ನನಗೆ ಸದಾ ಸ್ಫೂರ್ತಿ ನೀಡುತ್ತಲೇ ಇದೆ. ನೀವು ನನ್ನ ಜೀವನಕ್ಕೆ ತಂದ ಪ್ರತಿ ನಗು, ಪ್ರತಿ ಸಂತೋಷದ ಕ್ಷಣಕ್ಕಾಗಿ ನಾನು ಕೃತಜ್ಞನಾಗಿದ್ದೇನೆ.
Also Read: ಬಿ.ಕೆ.ಹರಿಪ್ರಸಾದ್ ಜೊತೆಗೆ CM Siddaramaiah ಉಪಾಹಾರ ಭೇಟಿ : ರಾಜಕೀಯ ವಿದ್ಯಮಾನಗಳ ಚರ್ಚೆ
ಇಂದು, ನಿಮ್ಮ 73ನೇ ಜನ್ಮದಿನ… ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣ, ಪ್ರತಿದಿನ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಉಳಿದಿದೆ… ಒಟ್ಟಿಗೆ ಕಳೆದ ಆಯಾ ದಿನಗಳ ನೆನಪುಗಳ ಜೊತೆ ಇಂದು ನಿಮ್ಮ ಅನುಪಸ್ಥಿತಿಯ ಅತೀವ ದುಃಖವನ್ನು ಉಂಟು ಮಾಡುತ್ತಿದೆ… ಆದರೆ, ನೀವು ತೋರಿದ ಪ್ರೀತಿ ಎಂದೆಂದಿಗೂ ನನ್ನ ಮನದಲ್ಲಿ ಜೀವಂತವಾಗಿದೆ. ಅನು ಕ್ಷಣವೂ ನೀವು… pic.twitter.com/WFanPwiFAp
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) May 28, 2025
ಈ ನಿಮ್ಮ ಜೀವನಕ್ಕೆ ಅಂತ್ಯವಿಲ್ಲ, ನಿಮ್ಮ ನೆನಪುಗಳ ನಗುವಿನಲ್ಲಿ, ಅಳುವಿನಲ್ಲಿ, ನಿಮ್ಮನ್ನು ಪ್ರೀತಿಸುವ-ಆರಾಧಿಸುವ ಹೃದಯಗಳಲ್ಲಿ, ಕೋಟ್ಯಂತರ ಕನ್ನಡಿಗರ ಮನದಲ್ಲಿ ಮತ್ತು ಜೀವನಗಳಲ್ಲಿ ಸದಾ ಜೀವಂತವಾಗಿರುತ್ತದೆ. ಅಂಬಿ ಅಮರ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
