ಬೆಂಗಳೂರು, ಜು.01: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಯರ ಜೀವನದ ಪವಿತ್ರ ಪಯಣವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ. ರಾಯರ ಮಹಿಮೆಯನ್ನು ತೆರೆ ಮೇಲೆ ಅಚ್ಚುಕಟ್ಟಾಗಿ ಮೂಡಿಸುತ್ತಿರುವ ಈ ಕಥಾಹಂದರಕ್ಕೆ ಮನೆಮನೆಯಿಂದಲೂ ಉತ್ತಮ ಮೆಚ್ಚುಗೆ ಸಿಕ್ಕಿದೆ.

ಕಳೆದ ವಾರದ ಕಥೆಯಲ್ಲಿ ಪೂರ್ವಾಶ್ರಮದ ಹೆಂಡತಿ ಸರಸ್ವತಿಗೆ ಸದ್ಗತಿ ಕೊಟ್ಟ ಸಂಚಿಕೆ ಮನದುಂಬಿ ಬಂತು. ಪ್ರೇಕ್ಷಕರನ್ನು ಅಲುಗಾಡದಂತೆ ಸರೆ ಹಿಡಿಯಿತು. ರಾಯರ ಪಾತ್ರದಲ್ಲಿ ಪರಿಕ್ಷೀತ್‌‌ರ ನಟನೆ ರಾಯರನ್ನೇ ನೋಡಿದಷ್ಟು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ರಾಯರು ದೀಕ್ಷೆ ಪಡೆದ ನಂತರ ಮೂಲರಾಮನ ಆಜ್ಞಾಪನೆಯಂತೆ ದಿವ್ಯ ಸಂಚಾರಕ್ಕೆ ಹೊರಟರು. ಭುವನಗಿರಿಯಲ್ಲಿ ಪಾದ ಪೂಜೆ ಮುಗಿಸಿಕೊಂಡು ಹೊರಟು ಕರಟಗಿರಿಯ ಹತ್ತಿರ ವನ ಭೋಜನಕ್ಕೆ ಕುಳಿತಾಗ ಅಲ್ಲಿಗೆ ಕರಟಗಿರಿಯ ದೇಸಾಯಿ ಅವರು ಬಂದು ತಮ್ಮ ಮನೆಯ ಪೂಜೆಗೆ ರಾಯರನ್ನು ಆಹ್ವಾನಿಸುತ್ತಾರೆ. ಅವರ ಒತ್ತಾಯಕ್ಕೆ ಮಣಿದು ಮನೆಗೆ ರಾಯರು ಬರುತ್ತಾರೆ.

ರಾಯರ ಆಗಮನವನ್ನು ವಿಜೃಂಭಣೆಯಿಂದ ಆಚರಿಸಲು ದೇಸಾಯಿ ಅವರು ಬಕ್ಷಭೋಜನಗಳನ್ನು ತಯಾರಿಸಲು ಹೇಳುತ್ತಾರೆ, ಅದರಂತೆ ಮನೆಯಲ್ಲಿ ಸಕಲವು ಸಿದ್ದತೆ ನಡೆಯುತ್ತದೆ. ಅಡುಗೆ ಮನೆಯಲ್ಲಿ ತಯಾರಾದ ಮಾವಿನಕಾಯಿ ಸಿಕರಣೆ ರುಚಿ ಸವಿಯಲು ಹೋಗಿ ದೇಸಾಯಿ ಅವರ ಮಗ ಅದರೋಳಗೆ ಬಿದ್ದು ಪ್ರಾಣ ಬಿಡುತ್ತಾನೆ. ಪೂಜೆಯಲ್ಲಿ ನಿರತರಾಗಿದ್ದ ರಾಘವೇಂದ್ರ ತೀರ್ಥಂಕರರಿಗೆ ಇದರ ಅರಿವಾಗುತ್ತದೆ. ಸತ್ತ ಮಗುವನ್ನ ಪೂಜಾ ಸ್ಥಳಕ್ಕೆ ತರಿಸಿ ತಮ್ಮ ಮಂತ್ರ ಪ್ರೋಕ್ಷಣೆಯಿಂದ ಮಗುವನ್ನು ಬದುಕಿಸುತ್ತಾರೆ. ಪವಾಡವು ಭಕ್ತರನ್ನು ವಿಸ್ಮಯಗೊಳಿಸಿದೆ.

ಈ ವಾರ “ದೇಸಾಯಿ ಅವರ ಮನೆಗೆ ರಾಯರ ಆಗಮನ” ಈ ವಾರಾಂತ್ಯ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದೆ. ಈ ಭಕ್ತಿಯ ಕಥೆಯಲ್ಲಿ ದೇಸಾಯಿ ಪಾತ್ರದಲ್ಲಿ ಹಿರಿಯ ನಟರಾದ “B.C ಪಾಟೀಲ್” ಅವರು ಮಾಡುತ್ತಿದ್ದಾರೆ. ಮೊದಲ ಬಾರಿಗೆ ಕಿರುತೆರೆಯಲ್ಲಿ ಬಿ.ಸಿ ಪಾಟೀಲ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ, ಅವರ ಪತ್ನಿಯಾಗಿ “ಅರುಣಾ ಬಾಲರಾಜ್” ಕೂಡ ಇದ್ದಾರೆ. ಈ ಭಕ್ತಿ ಪ್ರಧಾನ ಕಥೆಯನ್ನು ವೀಕ್ಷಿಸಿ ‘ಶ್ರೀ ರಾಘವೇಂದ್ರ ಮಹಾತ್ಮೆ’ ಇದೇ ಶನಿವಾರ ಹಾಗೂ ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ.

Share.
Leave A Reply