ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಅದೆಷ್ಟೋ ಸಸ್ಯಗಳು ನಮ್ಮ ಆರೋಗ್ಯಕ್ಕೆ ಹೇಳಲಾಗದಷ್ಟು ಪ್ರಯೋಜನಗಳನ್ನು ನೀಡುತ್ತವೆ. ಅಂತಹ ವಿಸ್ಮಯಕಾರಿ ಸಸ್ಯಗಳಲ್ಲಿ ನಾಚಿಕೆ ಮುಳ್ಳು ಕೂಡ ಒಂದು. ಈ ಗಿಡಕ್ಕೆ ಹಲವಾರು ಹೆಸರುಗಳಿವೆ. ಮುಟ್ಟಿದರೆ ಮುನಿ, ನಾಚಿಕೆ ಮುಳ್ಳು, ಲಜ್ವಂತಿ, ಮಿಮೋಸಾ ಹಾಗೆ ಇಂಗ್ಲಿಷ್‌ನಲ್ಲಿ ಟಚ್‌ ಮಿ ನಾಟ್‌ ಪ್ಲ್ಯಾಂಟ್‌ ಅಂತಾರೆ. ಮುಳ್ಳುಗಳಿಂದ ಕೂಡಿರುವ ಈ ಸಸ್ಯ ಎಲ್ಲಾದ್ರೂ ಕಾಣ್ಸಿದ್ರೆ ಅದ್ರಿಂದ ಮಾರುದ್ದ ದೂರ ಹೋಗೋರೇ ಹೆಚ್ಚು. ಆದ್ರೆ, ಇದರಿಂದ ಸಿಗುವ ಅದ್ಭುತ ಆರೋಗ್ಯ ಲಾಭಗಳ ಬಗ್ಗೆ ಗೊತ್ತಾದ್ರೆ ನೀವಿದನ್ನ ಮನೆಗೆ ತಗೊಂಡ್‌ ಹೋಗೋದು ಗ್ಯಾರಂಟಿ. ಸೋ, ಇದ್ರ ಔಷಧೀಯ ಗುಣಗಳನ್ನ ಕ್ವಿಕ್‌ ಆಗಿ ನೋಡೋಣ.

ಮಧುಮೇಹಿಗಳಿಗೆ ವರದಾನ ಮುಟ್ಟಿದರೆ ಮುನಿ

ಮುಟ್ಟಿದರೆ ಮುನಿ ಎಲೆಗಳು ಮತ್ತು ಬೇರುಗಳು ಮಧುಮೇಹ ರೋಗಿಗಳಿಗೆ ವರದಾನವಾಗಿದೆ. ಇದರ ಎಲೆ ಹಾಗೂ ಬೇರನ್ನು ಒಣಗಿಸಿ ಪುಡಿ ಮಾಡಿ. ಪ್ರತಿದಿನ ಒಂದು ಗ್ಲಾಸ್‌ ನೀರಿಗೆ ಒಂದು ಚಮಚ ಈ ಪುಡಿಯನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯೋದ್ರಿಂದ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿರುತ್ತೆ. ಹಾಗೆ ಪೈಲ್ಸ್‌ ಅಥವಾ ಮೂಲವ್ಯಾಧಿ ಸಮಸ್ಯೆಯಿಂದ ಬಳಲ್ತಾ ಇರೋರು ಕೂಡ ಈ ರೆಮಿಡಿಯನ್ನ ಫಾಲೋ ಮಾಡ್ಬೋದು.

ಮಹಿಳೆಯರ ಹಲವು ಸಮಸ್ಯೆಗಳಿಗೆ ಇದೇ ಪರಿಹಾರ

ನಾಚಿಕೆ ಮುಳ್ಳಿನ ರಸವನ್ನು ಚರ್ಮದ ಮೇಲೆ ಲೇಪಿಸಿದರೆ ತುರಿಕೆ, ಮೊಡವೆಗಳು, ಅಲರ್ಜಿಯಂತಹ ಸಮಸ್ಯೆಗಳಿಂದ ರಕ್ಷಣೆ ಸಿಗುತ್ತೆ. ಇದರ ಆಂಟಿ-ಸೆಪ್ಟಿಕ್ ಗುಣ ಚರ್ಮವನ್ನು ಶುಚಿಗೊಳಿಸಲು ಸಹಾಯಕ. ಡೆಲಿವರಿ ಬಳಿಕ ಕೆಲ ಮಹಿಳೆಯರ ದೇಹದ ತೂಕ ಹೆಚ್ಚಾಗುತ್ತೆ. ಈ ಸಮಯದಲ್ಲಿ ನಾಚಿಕೆ ಸೊಪ್ಪಿನ ರಸವನ್ನು ಹೊಟ್ಟೆ ಮೇಲೆ ಹಚ್ಚಿ ಮಸಾಜ್ ಮಾಡಿದರೆ ಬೆಲ್ಲಿ ಫ್ಯಾಟ್‌ ಕಡಿಮೆಯಾಗುತ್ತೆ. ನಾಚಿಕೆ ಮುಳ್ಳಿನ ಎಲೆ, ಕಾಂಡವನ್ನು ಜಜ್ಜಿ ಅದರ ರಸವನ್ನು ಕುದಿಸಿ ಕುಡಿಯುವುದರಿಂದ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಹಾಗೆಯೇ ಮಹಿಳೆಯರ ಮುಟ್ಟಿನ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಸಹಕಾರಿ

ಇತ್ತೀಚೆಗೆ ಜನರಲ್ಲಿ ಕಿಡ್ನಿ ಸ್ಟೋನ್‌ ಸಮಸ್ಯೆ ಕೂಡ ಹೆಚ್ಚಾಗಿದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಕಿಡ್ನಿಯಲ್ಲಿ ಮರಳಿನ ರೀತಿ ಕಲ್ಲುಗಳು ಬೆಳೆದು ಸಹಿಸಲಾರದ ನೋವನ್ನು ನೀಡುತ್ತದೆ. ಈ ಸಮಯದಲ್ಲಿ ನಾಚಿಕೆ ಸೊಪ್ಪಿನ ಕಷಾಯವನ್ನು ಮಾಡಿ ಕುಡಿದರೆ ಶೀಘ್ರದಲ್ಲಿ ನೋವು ಕಡಿಮೆಯಾಗುತ್ತದೆ. ಕ್ರಮೇಣ ಕಿಡ್ನಿ ಕಲ್ಲುಗಳು ಕೂಡ ಕರಗುತ್ವೆ. ಪುರುಷರಲ್ಲಿ ಕಾಣಿಸಿಕೊಳ್ಳುವ ಪ್ರೊಸ್ಟೇಟ್ ಗ್ರಂಥಿಯ ಉಬ್ಬುವಿಕೆ ಸಮಸ್ಯೆಗೂ ಈ ಸಸ್ಯ ಉಪಯುಕ್ತವಾಗಿದೆ. ಇದರ ಸೊಪ್ಪಿನಿಂದ ಉಂಡೆ ಮಾಡಿ ನಿತ್ಯ ಸೇವಿಸಿದರೆ ಗ್ರಂಥಿಯ ಬೆಳವಣಿಗೆ ಹತೋಟಿಗೆ ಬರುತ್ತದೆ.

ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ ನಾಚಿಕೆ ಮುಳ್ಳು!

ನಾಚಿಕೆ ಮುಳ್ಳಿನ ಎಲೆಗಳನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ. ಇದರ ಎಲೆಗಳು ಮತ್ತು ಬೇರುಗಳು ಗ್ಯಾಸ್, ಅಜೀರ್ಣ ಮತ್ತು ಹೊಟ್ಟೆಯ ಹುಳುಗಳಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿವೆ. ಹಳ್ಳಿಗಳಲ್ಲಿ ಈ ಎಲೆಗಳಿಗೆ ಜೇನುತುಪ್ಪ ಬೆರೆಸಿ ತಿನ್ನುವ ರೂಢಿಯಿದೆ. ಇದ್ರಿಂದ ಜೀರ್ಣಾಂಗ ವ್ಯವಸ್ಥೆ ಸುಗಮಗೊಂಡು ಮಲಬದ್ಧತೆ ಸಮಸ್ಯೆ ಕೂಡ ಕಡಿಮೆಯಾಗುತ್ತೆ.

ನೋವು ಮತ್ತು ಊತಕ್ಕೆ ಪರಿಹಾರ

ಮುಟ್ಟಿದರೆ ಮುನಿ ಎಲೆಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಇದು ನೋವು ಮತ್ತು ಊತವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಗಾಯ, ಉಳುಕು, ಊತ ಅಥವಾ ಸಂಧಿವಾತದ ಮೇಲೆ ಈ ಗಿಡದ ಬೇರುಗಳು ಮತ್ತು ಎಲೆಗಳನ್ನು ಅರೆದು ಲೇಪಿಸಿ ಬಟ್ಟೆಯಿಂದ ಕಟ್ಟಿದರೆ ತಕ್ಷಣದ ಪರಿಹಾರವನ್ನು ನೀಡುತ್ತದೆ. ಇದು ದೇಹದ ಒಳಗಿನ ಉರಿಯೂತವನ್ನು ಕಡಿಮೆ ಮಾಡೋದಿಕ್ಕೆ ಕೂಡ ಸಹಾಯ ಮಾಡುತ್ತೆ. ನಾಚಿಕೆ ಮುಳ್ಳಿನ ಎಲೆಗಳನ್ನು ಜಜ್ಜಿ ಗಾಯದ ಮೇಲೆ ಹಚ್ಚಿದರೆ ರಕ್ತಹರಿವು ತಕ್ಷಣ ನಿಲ್ಲುತ್ತೆ. ಇದು ಆಂಟಿ-ಹೆಮೋರಾಜಿಕ್ ಗುಣ ಹೊಂದಿದ್ದು, ತೀವ್ರ ಗಾಯದ ಪ್ರಾಥಮಿಕ ಚಿಕಿತ್ಸೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ.

ತಂಬುಳಿ, ಚಟ್ನಿಗಳಲ್ಲೂ ನಾಚಿಕೆ ಮುಳ್ಳಿನ ಬಳಕೆ

ಇನ್ನು ನಾಚಿಕೆ ಮುಳ್ಳು ಕೇವಲ ಔಷಧಿಗೆ ಮಾತ್ರವಲ್ಲ ಇವುಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿಯೂ ಉಪಯೋಗ ಮಾಡಬಹುದು. ಮುಟ್ಟಿದರೆ ಮುನಿ ಗಿಡದ ಎಲೆಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ತೆಂಗಿನ ತುರಿಯೊಂದಿಗೆ ಸೇರಿಸಿ ರುಬ್ಬಿ ಚಟ್ನಿ ಮಾಡ್ಬಹುದು. ಹಾಗೆ ಇದಿಕ್ಕೆ ಮೊಸರು ಸೇರಿಸಿ ತಂಬುಳಿ ಕೂಡ ಮಾಡ್ಬಹುದು.

Read Also : ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದ ಹೊಸಳ್ಳಿ ಗ್ರಾಮಸ್ಥರು! : ಗಣಿಗಾರಿಕೆ ನಿಲ್ಲಿಸಿ ಇಲ್ಲಾ ದಯಾಮರಣಕ್ಕೆ ಅವಕಾಶ ನೀಡಿ!

Share.
Leave A Reply