ಕನ್ನಡ ಚಿತ್ರರಂಗದ ಕಲಾ ಸರಸ್ವತಿ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಬಿ.ಸರೋಜಾದೇವಿಯವರು ಕಳೆದ ವಾರವಷ್ಟೇ ನಮ್ಮಿಂದ ಅಗಲಿದ್ದಾರೆ. ಇವರ ಅಗಲಿಕೆಗೆ ಕನ್ನಡ ಚಿತ್ರರಂಗ ಹಾಗೂ ಕರುನಾಡಿನ ಜನತೆ ಕಂಬನಿ ಮಿಡಿದಿತ್ತು. ಕನ್ನಡದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಅವರು ಸ್ಯಾಂಡಲ್‌ವುಡ್‌ನ ಮೇರು ನಟಿಯಾಗಿದ್ರು.
ಡಾ.ರಾಜ್‌ಕುಮಾರ್ ಅವರೊಂದಿಗೆ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅವರು, ತಮಿಳು, ತೆಲುಗು ಚಿತ್ರರಂಗದಲ್ಲೂ ಮಿಂಚಿದ್ದಾರೆ. ಕನ್ನಡ ಸಿನಿಮಾಗಳ ಜೊತೆಜೊತೆಗೆ ತೆಲುಗು ತಮಿಳು ಚಿತ್ರರಂಗದ ಖ್ಯಾತ ನಟರೊಂದಿಗೆ ಅಭಿನಯಿಸುವ ಮೂಲಕ ತಮ್ಮ ಛಾಪನ್ನ ಮೂಡಿಸಿದ್ರು.
ಇನ್ನೂ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಹೀಗಾಗಿ ಹಿರಿಯ ಕಲಾವಿದೆ ಬಿ.ಸರೋಜಾದೇವಿ ಅವರ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡುವಂತೆ ಕನ್ನಡ ಚಿತ್ರರಂಗ ಒತ್ತಾಯಿಸಿದೆ. ಈ ಬೆನ್ನಲ್ಲೇ ಹಿರಿಯ ನಟಿ ತಾರಾ ಅನುರಾಧ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
