ನನ್ನ ದೇಹ ಚರ್ಚಿತ ವಿಷಯವಲ್ಲ ಎಂದು ಟ್ರೋಲಿಗರಿಗೆ ಸಾನ್ವಿ ಸುದೀಪ್ ಉತ್ತರ ಕೊಟ್ಟಿದ್ದಾರೆ.

ನೆಗೆಟಿವ್ ಟ್ರೋಲ್ (Negative Troll) ಮಾಡುವವರಿಗೆ ಕಿಚ್ಚ ಸುದೀಪ್ (Kichcha Sudeep) ಪುತ್ರಿ ಸಾನ್ವಿ (Sanvi Sudeep) ಕಟುವಾಗಿ ಈ ಮೂಲಕ ಟೀಕಿಸಿದ್ದಾರೆ. ಈ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿದ್ದಾರೆ. ನನ್ನ ದೇಹವು ಚರ್ಚೆಯ ವಿಷಯವಲ್ಲ. ನಿಮ್ಮ ಅಭಿಪ್ರಾಯ ಬೇಕಾದರೇ ನಾನು ಕೇಳುತ್ತೇನೆ ಎಂದಿದ್ದಾರೆ.

ಇತ್ತ ಸುದೀಪ್ ಕೂಡ ಮಾರ್ಕ್ ಕೃತಜ್ಞತಾ ಸುದ್ದಿಗೋಷ್ಠಿಯಲ್ಲಿ ಮಗಳನ್ನು ಟ್ರೋಲ್ ಮಾಡುತ್ತಿದ್ದವರಿಗೆ ಕೌಂಟರ್ ಕೊಟ್ಟಿದ್ದಾರೆ. ನಮಗೆ ಪ್ರೋತ್ಸಾಹ ಕೊಡುವವರ ಬಗ್ಗೆ ಮಾತಾಡೋಣ, ನನ್ನ ಬಗ್ಗೆ, ನನ್ನ ಮಗಳ ಬಗ್ಗೆ ನೆಗೆಟಿವ್ ಮಾತನಾಡುವ ಯಾವನೋ ಬಗ್ಗೆ ನಾನು ಯಾಕೆ ಮಾತಾಡಲಿ. ನನ್ನ ಮಗಳು, ಅವಳು ಏನು ಅಂತಾ ನನಗೆ ಗೊತ್ತು. ನನ್ನ ಮಗಳು ನನಗಿಂತ ತುಂಬಾ ಎತ್ತರಕ್ಕೆ ಬೆಳಿತಾಳೆ ಎಂದು ಬಾದ್ ಷಾ ತಮ್ಮ ಮಗಳ ಬಗ್ಗೆ ಹೆಮ್ಮೆ ಪಟ್ಟಿದ್ದರು. ಈಗ ಮಗಳು ಕಟುವಾಗಿ ಟೀಕಿಸಿದ್ದಾರೆ.

Share.
Leave A Reply