ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಅನ್ನೋ ಕಮಲ್ ಹಾಸನ್ ಹೇಳಿಕೆ ಬೆನ್ನಲ್ಲೇ ಈಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(RGV) ಕನ್ನಡಿಗರನ್ನ ಕೆಣಕಿದ್ದಾರೆ.. ಅಮಿತಾಬ್ ಬಚ್ಚನ್ (Amitabh Bachchan) ಸಿನಿಮಾಗಳನ್ನು ರಿಮೇಕ್ ಮಾಡಿ ರಾಜ್‌ಕುಮಾರ್ ಅವರು ಫೇಮಸ್ ಆದರು ಎಂಬ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇತ್ತೀಚೆಗೆ ಮಾತನಾಡಿದ್ದ ರಾಮ್ ಗೋಪಾಲ್ ವರ್ಮಾ ಸೌಥ್ ಇಂಡಿಯಾ ಸಿನಿಮಾಗಳು ಅಮಿತಾಭ್ ಬಚ್ಚನ್ ಅವರಿಂದ ಬದುಕುಳಿದಿದೆ. ಅಮಿತಾಭ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿ ದಕ್ಷಿಣ ಭಾರತದ ಸ್ಟಾರ್ ನಟರು ಅಭಿಮಾನಿಗಳ ದೇವರಾಗಿದ್ದಾರೆ ಎಂದಿದ್ದು, ರಾಮ್ ಗೋಪಾಲ್ ವರ್ಮಾ ಅವರು 1990ರಲ್ಲಿ ಅಮಿತಾಭ್ ಬಚ್ಚನ್ ಅವರ ಶೈಲಿ ನೋಡಿ ಸೂಪರ್ ಸ್ಟಾರ್‌ಗಳು ಮಸಾಲಾ ಚಿತ್ರಗಳನ್ನು ಮಾಡಲು ಮುಂದಾದರು.
ಡಾ.ರಾಜ್‌ಕುಮಾರ್, ರಜನಿಕಾಂತ್, ಚಿರಂಜೀವಿ, ಎನ್.ಟಿ ರಾಮ ರಾವ್ ಸೇರಿ ಹಲವು ದಕ್ಷಿಣ ಭಾರತದ ನಟರು ಅಭಿಮಾನಿಗಳ ಸೂಪರ್ ಸ್ಟಾರ್ ಆದರು ಎಂದು ಹೇಳಿ, ಮತ್ತೆ ಕನ್ನಡಿಗರನ್ನ ಕೆಣಕಿದ್ದಾರೆ.

ಸದ್ಯ ರಾಮ್ ಗೋಪಾಲ್ ವರ್ಮಾ ತೆಲೆಯಿಲ್ಲದ ಹೇಳಿಕೆಗೆ ಗಣೇಶ್ ಅವರು ಗರಂ ಆಗಿದ್ದು, ಆರ್‌ಜಿವಿ ಸ್ಟೇಟ್‌ಮೆಂಟ್‌ಗೆ ರಿಯಾಕ್ಷನ್ ಕೊಡೋದೇ ದೊಡ್ಡ ತಪ್ಪು. ಕನ್ನಡ ಅಂದ್ರೆ ಡಾ.ರಾಜ್, ಡಾ.ರಾಜ್ ಅಂದ್ರೆ ಕನ್ನಡ, ಡಾ. ರಾಜ್‌ಕುಮಾರ್ ಬಗ್ಗೆ ಮಾತಾಡಿದ್ರೆ, ಆಕಾಶಕ್ಕೆ ಉಗಿದಂತೆ. ಇಂತಹ ಹೇಳಿಕೆಗೆಲ್ಲಾ ರಿಯಾಕ್ಟ್ ಮಾಡಬಾರದು ಎಂದು ತಿರುಗೇಟು ಕೊಟ್ಟಿದ್ದಾರೆ.
