ಟೆಸ್ಟ್‌ ಫಾರ್ಮ್ಯಾಟ್‌ನಲ್ಲಿ ಹಲವು ವರ್ಷಗಳಿಂದ ಟೀಮ್‌ ಇಂಡಿಯಾ( Team India )ವನ್ನು ಮುನ್ನಡೆಸುತ್ತಿದ್ದ ರೋಹಿತ್‌ ಶರ್ಮಾ, ರೆಡ್‌ಬಾಲ್‌ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ.‌ ಐಪಿಎಲ್‌ (IPL) ಮುಗಿದ ನಂತರ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ 5 ಮ್ಯಾಚ್‌ಗಳ ಟೆಸ್ಟ್ ಸರಣಿಯಲ್ಲಿ ರೋಹಿತ್‌ ಶರ್ಮಗೆ(Rohit Sharma) ನಾಯಕತ್ವದಿಂದ ಕೊಕ್‌ ಕೊಡಲಾಗುತ್ತದೆ ಎಂಬ ಸುದ್ದಿಗಳು ಹರಡುತ್ತಿದ್ದಂತೆ ರೋಹಿತ್‌ ಈ ನಿರ್ಧಾರ ಕೈಗೊಂಡಿದ್ದಾರೆ. 38 ವರ್ಷದ ಈ ಸ್ಟಾರ್‌ ಬ್ಯಾಟರ್ 67 ಟೆಸ್ಟ್‌ ಮ್ಯಾಚ್‌ಗಳನ್ನು ಆಡಿದ್ದು 40.57ರ ಆವರೇಜ್‌ನಲ್ಲಿ 12 ಸೆಂಚ್ಯುರಿ ಸಹಿತ 4301 ರನ್‌ ಭಾರಿಸಿದ್ದಾರೆ.

ಕಳೆದ ಕೆಲ ತಿಂಗಳಿಂದ ಟೆಸ್ಟ್‌ನಲ್ಲಿ Rohit Sharma ತೀವ್ರ ಕಳಪೆ ಫಾರ್ಮ್‌ ಹೊಂದಿದ್ದರು. ಇದು ತಂಡದ ಬ್ಯಾಲೆನ್ಸ್‌ ಮೇಲೆ ಪರಿಣಾಮ ಬೀರಿದ್ದರಿಂದ ನ್ಯೂಜಿಲೆಂಡ್‌ ವಿರುದ್ಧ ತವರಲ್ಲಿ ಕ್ಲೀನ್‌ಸ್ವೀಪ್‌ ಸೋಲು ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲೂ ತಂಡ ಹೀನಾಯ ಪ್ರದರ್ಶನ ನೀಡಿತ್ತು. ಇದೀಗ ರೋಹಿತ್‌ ನಿವೃತ್ತಿ ಘೋಷಿಸಿರುವುದರಿಂದ ಯುವ ಆಟಗಾರರ ನಾಯಕತ್ವದಲ್ಲಿ ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ತೆರಳಲಿದೆ.

ಟೆಸ್ಟ್‌ ನಾಯಕತ್ವಕ್ಕೆ ಜಸ್ಪ್ರೀತ್‌ ಬೂಮ್ರಾ ಮೊದಲ ಆಯ್ಕೆಯಾದರೂ ವೇಗದ ಬೌಲರ್‌ ಎದುರಿಸುವ ಫಿಟ್‌ನೆಸ್‌ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಶುಬ್‌ಮನ್‌ ಗಿಲ್‌ ಅಥವಾ ಕನ್ನಡಿಗ ಕೆ.ಎಲ್‌. ರಾಹುಲ್‌ಗೆ ಕ್ಯಾಪ್ಟೆನ್ಸಿ ಒಲಿದು ಬರುವ ಸಾಧ್ಯತೆ ಕಂಡುಬರುತ್ತಿದೆ.

Also Read :  ಮಸೂದ್‌ ಅಜರ್‌ ಕುಟುಂಬ ಸರ್ವನಾಶ!?

ಇನ್ನೊಂದೆಡೆ, ಈಗಾಗಲೇ ಅಂತಾರಾಷ್ಟ್ರೀಯ ಟಿ20 (T20)ಯಿಂದ ರಿಟೈರ್ಡ್‌ ಆಗಿರುವ ರೋಹಿತ್‌ ಶರ್ಮಾ, ಸದ್ಯಕ್ಕೆ ಏಕದಿನ ಫಾರ್ಮ್ಯಾಟ್‌ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದು, ಅಲ್ಲೂ ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ. ಆದರೆ ವನ್‌ಡೇಯಲ್ಲಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುತ್ತಾರ ಎಂಬ ಕುತೂಹಲ ಮುಂದುವರಿದಿದೆ.

Share.
Leave A Reply