ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಶ್ಮಿಕಾ ಮಂದಣ್ಣ ಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.. ಕೊಡವ ಸಮುದಾಯದ ಬಗ್ಗೆ ಹೇಳಿಕೆ ನೀಡುವ ಮೂಲಕ ಈಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.. ಇತ್ತೀಚೆಗಷ್ಟೇ ರಶ್ಮಿಕಾ ನೀಡಿರುವ ಸಂದರ್ಶನದಲ್ಲಿ ಕೊಟ್ಟಿರುವ ಹೇಳಿಕೆಗಳು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ..

ಇಂಟರ್‌ವ್ಯೂವ್‌ನಲ್ಲಿ ಮಾತನಾಡುತ್ತಾ, ಕೂರ್ಗ್‌ ಸಮುದಾಯದಲ್ಲಿ ಇದುವರೆಗೂ ಯಾರೂ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿಲ್ಲ.. ನಮ್ಮ ಇಡೀ ಸಮುದಾಯದಲ್ಲಿ ಉದ್ಯಮಕ್ಕೆ ಪ್ರವೇಶಿಸಿದ ಮೊದಲನೇಯವಳು ಅಂತಾ ಭಾವಿಸುತ್ತೇನೆ ಅಂದಿದ್ದು, ಈ ಹೇಳಿಕೆಗಳು ಇದೀಗ ಎಲ್ಲೆಡೆ ವೈರಲ್‌ ಆಗುತ್ತಿವೆ..

ಖ್ಯಾತ ನಟಿ ಪ್ರೇಮಾ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಹಾಗೂ ಶುಭ್ರ ಅಯ್ಯಪ್ಪ ಸೇರಿ ಹಲವರು ಸಿನಿ ಇಂಡಸ್ಟ್ರಿಯಲ್ಲಿ ಮಿಂಚಿದ್ದಾರೆ.. ಕನ್ನಡ, ತಮಿಳು, ತೆಲುಗು ಹಾಗೂ ಬೋಜ್‌ಪುರಿಯಲ್ಲಿ ಬಣ್ಣ ಹಚ್ಚಿ ಮಿಂಚಿದ್ದಾರೆ. ಈ ಎಲ್ಲಾ ಹೆಸರುಗಳು ರಶ್ಮಿಕಾ ಮಂದಣ್ಣಗೆ ಮರೆತು ಹೋಯ್ತಾ? ಇವರೆಲ್ಲಾ ಕೊಡವರು ಅಲ್ಲವೇ ಅನ್ನೋ ಮಾತುಗಳು ಕೇಳಿ ಬರ್ತಿವೆ..

Share.
Leave A Reply