ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಕಳೆದ ಭಾನುವಾರಷ್ಟೇ ಗ್ರ್ಯಾಂಡ್‌ ಲಾಂಚ್ ಆಗಿದೆ. ‌ಆದ್ರೆ, ಬಿಗ್‌ಬಾಸ್‌ ಶುರುವಾದ ಒಂದೇ ದಿನದಲ್ಲಿ ಕರಾವಳಿ ಪುಟ್ಟಿ ರಕ್ಷಿತಾ ಶೆಟ್ಟಿ ಎಲಿಮಿನೇಟ್‌ ಆಗಿದ್ದು, ಫ್ಯಾನ್ಸ್‌ಗೆ ಬರಸಿಡಿಲೇ ಬಡಿದಂತಾಗಿತ್ತು. ಒಂದೇ ದಿನಕ್ಕೆ ಬಂದ ಪುಟ್ಟ ಹೋದ ಪುಟ್ಟ ಅಂತಾ ಅವಮಾನ ಮಾಡಿದ್ರು ಅಂತಾ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯಾಗಿತ್ತು.. ಇದ್ದೊಬ್ಬ ಝನ್‌ ಜೀ ಕೂಡ ಎಕ್ಸಿಟ್‌ ಆಗೋಯ್ತಲ್ಲ ಅಂತಾ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದ್ರೀಗ ಬಿಗ್‌ಬಾಸ್‌ ಅಡ್ಡಾದಿಂದಲೇ ಗುಡ್‌ನ್ಯೂಸ್‌ ಒಂದು ಹೊರಬಿದ್ದಿದೆ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿಗಳಾಗಿ ಹೋದ 19 ಮಂದಿಯಲ್ಲಿ ಓರ್ವ ಸ್ಪರ್ಧಿಯನ್ನು ಒಂದು ದಿನ ಕಳೆಯುವುದರೊಳಗೆ ಎಲಿಮಿನೇಟ್ ಮಾಡಿ ಹೊರಗೆ ಕಳುಹಿಸಲಾಗಿದೆ. ಆದರೆ ಇದು ಕೂಡ ಒಂದು ಗಿಮಿಕ್ಕಾ? ಅಂತಾ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಯಾಕೆಂದರೆ, ತಮಿಳು ಬಿಗ್ ಬಾಸ್‌ನಲ್ಲೂ ಹಿಂಗೆ ಆಗಿತ್ತು. ಇದೇ ರೀತಿ ರಕ್ಷಿತಾ ಶೆಟ್ಟಿಯನ್ನು ವಾಪಸ್‌ ಕರೆಸಿಕೊಳ್ತಾರಾ ಅಂತೆಲ್ಲಾ ಚರ್ಚೆಯಾಗುತ್ತಿದೆ.

ಇನ್ನು ಕಳೆದ ವರ್ಷ ನಡೆದ ಬಿಗ್ ಬಾಸ್ ತಮಿಳು 8ರ ಸೀಸನ್‌ನಲ್ಲಿ ಇದೇ ರೀತಿ ಒಂದು ಟ್ವಿಸ್ಟ್ ನೀಡಲಾಗಿತ್ತು. ವಿಜಯ್ ಸೇತುಪತಿ ನಿರೂಪಣೆ ಮಾಡುತ್ತಿದ್ದ ಆ ಶೋನಲ್ಲಿ ಒಟ್ಟು 19 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ತಮಿಳು ಶೋಗೆ ಕಾಲಿಟ್ಟಿದ್ದರು. ಅದರಲ್ಲಿ ನಟಿ ಸಚನಾ ನಮಿದಾಸ್ ಅವರನ್ನು ಕೂಡ ಬಿಗ್ ಬಾಸ್‌ ಮನೆಗೆ ಕಳುಹಿಸಲಾಗಿತ್ತು.. ಈ ಬಾರಿ ರಕ್ಷಿತಾ ಶೆಟ್ಟಿಯಂತೆ ಅಂದು ನಟಿ ಸಚನಾ ನಮಿದಾಸ್ ಕೂಡ ಅತ್ಯಂತ ಕಿರಿಯ ಸ್ಪರ್ಧಿ ಆಗಿದ್ದರು. ಆದರೆ ಮನೆಯವರೆಲ್ಲಾ ಸೇರಿಕೊಂಡು ಸಚನಾರನ್ನು ಬಿಗ್ ಬಾಸ್ ತಮಿಳು 8 ಶೋನಿಂದ ಒಂದೇ ದಿನಕ್ಕೆ ಎಲಿಮಿನೇಟ್ ಮಾಡಿದ್ದರು. ಅದೇ ರೀತಿ ಈಗ ರಕ್ಷಿತಾ ಶೆಟ್ಟಿ ಅವರನ್ನು ಮನೆಯಿಂದ ಎಲಿಮಿನೇಟ್ ಮಾಡಲಾಗಿದೆ. ಅಂದು ಒಂದೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಸಚನಾ ಅವರನ್ನು ಎಲಿಮಿನೇಟ್ ಮಾಡಿದ ಮೇಲೆ 3-4 ದಿನ ಕಳೆಯುವುದರೊಳಗೆ ಪುನಃ ಅವರನ್ನು ಮನೆಯೊಳಗೆ ಕರೆಸಿಕೊಳ್ಳಲಾಗಿತ್ತು. ಮತ್ತೆ ಬಿಗ್‌ಬಾಸ್ ಮನೆಯೊಳಗೆ ಬಂದ ಸಚನಾ ಸುಮಾರು 60ಕ್ಕೂ ಅಧಿಕ ದಿನ ಬಿಗ್ ಬಾಸ್ ಮನೆಯೊಳಗೆ ಇದ್ದರು. ಇದೀಗ ರಕ್ಷಿತಾ ಶೆಟ್ಟಿಯನ್ನು ಅದೇ ರೀತಿ ಪುನಃ ಬಿಗ್ ಬಾಸ್ ಮನೆಯೊಳಗೆ ಕರೆಸಿಕೊಳ್ಳಲಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.

Read Also : ರಿಷಬ್ ಶೆಟ್ಟಿ ಚಿತ್ರಕ್ಕೆ 100% ಟ್ಯಾಕ್ಸ್! : ಕಾಂತಾರಕ್ಕೆ ಟ್ರಂಪ್‌ ಗಂಡಾಂತರ..!

Share.
Leave A Reply