ತಿರುವನಂತಪುರಂ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇಡೀ ವಿಶ್ವವೇ ಈ ಭೇಟಿಯನ್ನು ಬೆರಗು ಕಣ್ಣಿನಿಂದ ನೋಡುತ್ತಿದ್ದರೆ, ವಿರೋಧಿ ರಾಷ್ಟ್ರಗಳಿಗೆ ಭಯ ಹುಟ್ಟಿದೆ. ಈ ಮಧ್ಯೆ ಕೇರಳ ಕಾಂಗ್ರೆಸ್, ಶಿಷ್ಟಾಚಾರದ ಸಭ್ಯತೆ ಮರೆಯಿತೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಪುಟಿನ್ ಆಗಮನದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕೇರಳ ಕಾಂಗ್ರೆಸ್, “ವ್ಲಾಡಿಮಿರ್‌ ಪುಟಿನ್‌, ನರೇಂದ್ರ ಮೋದಿ ಅವರ ಅನುಯಾಯಿಗಳ ಹೊಸ ಪಾವ್‌ ಪಾವ್‌” ಎಂದು ಲೇವಡಿ ಮಾಡಿದೆ. ಪುಟಿನ್‌ ಈಗ ಪ್ರಧಾನಿ ಮೋದಿ ಅಭಿಮಾನಿಗಳ ಹೊಸ ನಾಯಕರಾಗಿದ್ದಾರೆ ಎಂದು ಹಾಸ್ಯಾಸ್ಪದವಾಗಿ ಹೇಳಲಾಗಿದೆ.

ಹೊಸ ಡ್ಯಾಡಿ ಅಲರ್ಟ್…. ಪುಟಿನ್ ಮೋದಿ ಭಕ್ತರ ಹೊಸ ಪಾವ್‌ಪಾವ್. ಡಿಸೆಂಬರ್‌ ಅಂತ್ಯದೊಳಗೆ ಮೋದಿ ಬೇರೆ ಡ್ಯಾಡಿಯನ್ನು ಅಪ್ಪಿಕೊಳ್ಳುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಪುಟಿನ್‌ ತಮ್ಮ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂಬ ಭರವಸೆ ಇದೆ” ಎಂದು ಕೇರಳ ಕಾಂಗ್ರೆಸ್‌ ಎಕ್ಸ್ ನಲ್ಲಿ ಬರೆದುಕೊಂಡಿದೆ. ಇದಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ದೇಶದ ನಾಯಕರೊಂದಿಗೆ ಭಿನ್ನಾಭಿಪ್ರಾಯ ಇದ್ದರೂ ವಿದೇಶಿ ನಾಯಕರೊಂದಿಗೆ ಸಭ್ಯತೆ ಕಾಯ್ದುಕೊಳ್ಳುವುದು ದೇಶದ ಗೌರವಕ್ಕೆ ಒಳ್ಳೆಯದು. ರಾಜತಾಂತ್ರಿಕ ವಿಷಯದಲ್ಲಿ ಈ ರೀತಿಯ ಅಪಮಾನ ಸಲ್ಲದು ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಷ್ಯಾ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡುವ ಅತಿಥಿಗಳ ಪಟ್ಟಿಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನ ಹಲವು ನಾಯಕರ ಹೆಸರು ಇಲ್ಲದಿರುವುದರಿಂದಾಗಿ ಹತಾಶೆಯಿಂದ ಕಾಂಗ್ರೆಸ್ ಈ ರೀತಿ ಟ್ವೀಟ್ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

Share.
Leave A Reply