ದೇಶದಲ್ಲಿ ಡಿಜಿಟಲ್ ಕ್ರಾಂತಿ ಆದ್ಮೇಲೆ ಹ್ಯಾಕರ್ಸ್‌ ಅಟ್ಟಹಾಸ ಹೆಚ್ಚಾಗಿದೆ. ಜಸ್ಟ್ ಒಂದು ಲಿಂಕ್, ಒಂದು ಕಾಲ್‌ ಮಾಡಿ ನಿಮ್ಮ ಮೊಬೈಲ್‌, ಬ್ಯಾಂಕ್‌ ಅಕೌಂಟ್‌ ಹ್ಯಾಕ್ ಮಾಡಿ ಬಿಡ್ತಾರೆ. ಎಷ್ಟೇ ಅಲರ್ಟ್ ಆಗಿದ್ದರೂ ಎಷ್ಟೇ ಬುದ್ದಿವಂತರಾಗಿದ್ದರೂ ಸಹ ಹ್ಯಾಕರ್ಸ್‌ ಚತುರತೆ ಮುಂದೆ ಯಾಮಾರಿ ಬಿಡುತ್ತೇವೆ. ಅದಕ್ಕೆ ಅಪ್ಪಟ ಉದಾಹರಣೆ ಎಂದರೆ ನಟ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ. ಕನ್ನಡ ಚಿತ್ರರಂಗದ ಸೂಪರ್‌ ಜೋಡಿ ಅಂದ್ರೆ ಅದು ಉಪ್ಪಿ ಮತ್ತು ಪ್ರಿಯಾಂಕ.. ಈಗ ಈ ಜೋಡಿಗೆ ಹ್ಯಾಕರ್ಸ್‌ ಕಾಟ ಶುರುವಾಗಿದೆ. ಹೌದು ಪ್ರಿಯಾಂಕ ಉಪೇಂದ್ರಗೆ ಆನ್‌ಲೈನ್‌ ಆರ್ಡರ್‌ ಎಂದು ಲಿಂಕ್‌ ಕಳುಹಿಸಿ ದಂಪತಿಯ ಮೊಬೈಲ್‌ ಹ್ಯಾಕ್‌ ಮಾಡಿದ್ದಾರೆ. ಈ ಕುರಿತಾಗಿ ಉಪ್ಪಿ ಮತ್ತು ಪ್ರಿಯಾಂಕಾ ಮಾಹಿತಿ ಹಂಚಿಕೊಂಡಿದ್ದಾರೆ.

ನನ್ನ ಮತ್ತು ಪ್ರಿಯಾಂಕ ಉಪೇಂದ್ರ ಮೊಬೈಲ್ ಹ್ಯಾಕ್ ಆಗಿದೆ. ದುಡ್ಡು ಕೇಳಿದ್ರೆ ಕಳುಹಿಸಬೇಡಿ‌ ಎಂದು ಎಲ್ಲರಿಗೂ ಮನವಿ ಮಾಡಿದ್ದಾರೆ. ಯಾಕಂದ್ರೆ ಹ್ಯಾಕರ್ಸ್‌ಗಳು ಸೋಷಿಯಲ್ ಮೀಡಿಯಾ ಪೇಜ್‌ಗಳನ್ನ ಹ್ಯಾಕ್ ಮಾಡಿ ಸ್ನೇಹಿತರು, ಸಂಬಂಧಿಕರಿಗೆ ಅವರ ಹೆಸರಲ್ಲಿ ಹಣ ಕೇಳಿ, ಸುಲಭವಾಗಿ ಹಣ ಪಡೆದುಕೊಳ್ಳುತ್ತಾರೆ. ಹೀಗಾಗಿ ಉಪೇಂದ್ರ ಅವರು ಈ ಸಂಬಂಧ ವಿಡಿಯೋ ಮಾಡಿ ಹಾಕಿದ್ದಾರೆ. ಇಂದು ಬೆಳಗ್ಗೆ ಘಟನೆ ನಡೆದಿದ್ದು, ಆರ್ಡರ್ ಹೆಸರಿನಲ್ಲಿ ಈ ಮೋಸ ನಡೆದಿದೆ. ಈ ಘಟನೆ ಕುರಿತು ದೂರು ನೀಡಿದ್ದಾರೆ ಎನ್ನಲಾಗ್ತಿದೆ. ಒಂದೇ ಒಂದು ಲಿಂಕ್ ನಿಂದ ಒಬ್ಬರಲ್ಲ ಇಬ್ಬರ ನಂಬರ್ ಹ್ಯಾಕ್ ಆಗಿದೆ. ಹ್ಯಾಕರ್ಸ್‌ಗಳು ಸೆಲೆಬ್ರೆಟಿಗಳನ್ನೇ ಬಿಟ್ಟಿಲ್ಲ. ಬೆಳಗ್ಗೆ ಹ್ಯಾಶ್ ಟ್ಯಾಗ್ ಹಾಕಿ, ಈ ನಂಬರ್‌ಗೆ ಡಯಲ್ ಮಾಡಿ ಅಂತ ಒಬ್ಬ ಹ್ಯಾಕರ್ ಹೇಳಿದ್ದ. ಪ್ರಿಯಾಂಕ ಕೂಡ ಏನೋ ಆರ್ಡರ್ ಮಾಡಿದ್ದರು. ಹೀಗಾಗಿ ಅದು ಬರುತ್ತೆ ಅಂತ ಆ ವ್ಯಕ್ತಿ ಹೇಳಿದ ಹ್ಯಾಶ್ ಟ್ಯಾಗ್ ಒತ್ತಿದ್ದಾರೆ. ಅದೇ ರೀತಿ ನಾನು ಡಯಲ್ ಮಾಡಿದೆ. ಇದರಿಂದ ಇಬ್ಬರ ಫೋನ್ ಹ್ಯಾಕ್ ಆಗಿದೆ. ಯಾರೂ ಫೋನ್ ಮಾಡಬೇಡಿ, ಹಣ ಕೇಳಿದ್ರೆ ಕೊಡಬೇಡಿ ಎಂದು ಉಪ್ಪಿ ಮತ್ತು ಪ್ರಿಯಾಂಕ ಮನವಿ ಮಾಡಿದ್ದಾರೆ.

Read Also ಭಾರತದ ನಡೆಗೆ ಮೈದಾನದಲ್ಲೇ ಉರಿದು ಬಿದ್ದ ಪಾಕ್..!‌ : ಸೂರ್ಯಕುಮಾರ್ ತಿರುಗೇಟು

Share.
Leave A Reply