2023ರಿಂದ ಕುಕಿ ಮತ್ತು ಮೈತೈ ಜನಾಂಗೀಯ ಗಲಭೆಗೆ ತುತ್ತಾಗಿರುವ ಮಣಿಪುರ ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರವಾಸ ಕೈಗೊಂಡಿದ್ದಾರೆ. ಮಣಿಪುರದ ಚಂದಾಚೂರ್‌ ಪುರಕ್ಕೆ ಭೇಟಿ ನೀಡಿದ ಮೋದಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಮಣಿಪುರ ಮುಖ್ಯಮಂತ್ರಿ ಎನ್.‌ ಬಿರೇನ್‌ ಸಿಂಗ್‌ ಮೋದಿಯನ್ನ ಆದರದಿಂದ ಬರಮಾಡಿಕೊಂಡರು. ಸಮಾರಂಭಕ್ಕೂ ಮುನ್ನ ಗಲಭೆಯಲ್ಲಿ ಪೋಷಕರನ್ನ ಕಳೆದುಕೊಂದ ಮಕ್ಕಳನ್ನ ಭೇಟಿ ಮಾಡಿದರು. ಇದರ ಜೊತೆಯಲ್ಲಿ ಮಣಿಪುರದಲ್ಲಿ 7,300 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಸಮಾರಂಭದಲ್ಲಿ ಭಾಷಣ ಮಾಡಿದ ಮೋದಿ ಜನಾಂಗೀಯ ಸಂಘರ್ಷದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮಣಿಪುರ ಈ ದೇಶಕ್ಕೆ ಪ್ರಕೃತಿ ನೀಡಿದ ವಿಶೇಷ ಕೊಡುಗೆಯಾಗಿದೆ. ಮಣಿಪುರ ರಾಜ್ಯದ ಹೆಸರಿನಲ್ಲೇ ಮಣಿ ಇದೆ. ಈ ರಾಜ್ಯ ಮುಂಬರುವ ದಿನಗಳಲ್ಲಿ ಸಮಸ್ತ ಈಶಾನ್ಯ ಭಾರತದ ಭಾಗ್ಯ ಬದಲಿಸುವ ಶಕ್ತಿಯಾಗಲಿದೆ ಎಂದು ಕೊಂಡಾಡಿದರು. ತಮ್ಮ ಭಾಷಣದಲ್ಲಿ ಮಣಿಪುರ ಹಿಂಸಾಚಾರವನ್ನು ಉಲ್ಲೇಖಿಸಿದರು. ಕಳೆದ ಎರಡು ವರ್ಷಗಳಿಂದ ಭೀಕರ ಹಿಂಸಾಚಾರದಿಂದ ನಲುಗಿದ್ದ ರಾಜ್ಯ ಈಗ ಶಾಂತಿಯ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದರು. ಮಣಿಪುರದ ಎಲ್ಲಾ ಜನಾಂಗೀಯ ಸಂಘಟನೆಗಳು ಪರಸ್ಪರ ದ್ವೇಷ ಭಾವನೆಯನ್ನು ತೊರೆದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಒಟ್ಟಾಗಬೇಕು. ಪರಸ್ಪರ ಗೌರವ ಮತ್ತು ನಂಬಿಕೆಯ ಆಧಾರದ ಮೇಲೆ ಹೊಸ ಭವಿಷ್ಯ ಕಟ್ಟುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಪಧಾನಿ ಮೋದಿ ಕರೆ ನೀಡಿದರು.

Read Also : ಹಾಸನದ ಗಣೇಶೋತ್ಸವದಲ್ಲಿ ಘನಘೋರ ದುರಂತ : ಯಮದೂತ ಟ್ರಕ್‌ಗೆ 9 ಜನರು ಬಲಿ

Share.
Leave A Reply