ಪಂಜಾಬ್​ನ ಆದಂಪುರ ಏರ್​ಬೇಸ್​​ಗೆ ಇಂದು ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಭಾರತ-ಪಾಕಿಸ್ತಾನ ಕದನ ವಿರಾಮದ ಬಳಿಕ ಇಂದು ಪಂಜಾಬ್‌ನ ಅದಂಪುರ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಈ ವೇಳೆ ವಾಯುಪಡೆ ಸೈನಿಕರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಸಿಬ್ಬಂದಿಯಿಂದ ಯುದ್ದದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಹಾಗೇ ಅಲ್ಲಿನ ಸೈನಿಕರ ಜೊತೆ ಕಾಲ ಕಳೆದು, ಸಂವಾದ ನಡೆಸಿ ಅವರಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು. ಮೇ 9 ಮತ್ತು 10ರ ಮಧ್ಯರಾತ್ರಿ ಪಾಕಿಸ್ತಾನ ದಾಳಿ ಮಾಡಲು ಪ್ರಯತ್ನಿಸಿದ ವಾಯುಪಡೆಯ ಕೇಂದ್ರಗಳಲ್ಲಿ ಆದಮ್‌ಪುರವೂ ಒಂದು. ಹೀಗಾಗಿ ಸೈನಿಕರಿಗೆ ಅಭಿನಂದನೆ ತಿಳಿಸಿದ್ದಾರೆ.

ಪಾಕಿಸ್ತಾನ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ತಡೆದು ತಟಸ್ಥಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಆದಂಪುರ ವಾಯುನೆಲೆಯಲ್ಲಿ ಬೀಡುಬಿಟ್ಟಿದ್ದ ವಾಯುಪಡೆಯ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. “ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆಯನ್ನು ಸಾರುವವರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿತ್ತು. ನಮ್ಮ ಸಶಸ್ತ್ರ ಪಡೆಗಳು ನಮ್ಮ ರಾಷ್ಟ್ರಕ್ಕಾಗಿ ಮಾಡುವ ಎಲ್ಲದಕ್ಕೂ ಭಾರತವು ಅವರಿಗೆ ಶಾಶ್ವತವಾಗಿ ಕೃತಜ್ಞವಾಗಿದೆ” ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಬಳಿಕ ವಾಯುಪಡೆ ಸೈನಿಕರನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಾಕ್‌ ಸೈನಿಕರನನ್ನು ನಂಬಿಕೊಂಡಿ ಉಗ್ರರು ಕೂತಿದ್ರು. ಭಾರತದ ಮೇಲೆ ಕಣ್ಣು ಹಾಕಿದ್ರೆ ವಿನಾಶ ಖಂಡಿತ. ಭಾರತೀಯ ಮೂರು ಸೇನೆ ಪಾಕಿಸ್ತಾನ ಸೈನಿಕರನ್ನ ಮಣ್ಣು ಮುಕ್ಕಿಸಿದೆ. ನಾವು ಮನೆಗೆ ನುಗ್ಗಿ ಹೊಡೆಯುತ್ತಿವೆ. ನಮ್ಮ ಡ್ರೋನ್‌, ಕ್ಷಿಪಣಿಗಳಿಂದ ಪಾಕ್‌ ನಿದ್ದೆಗೆಟ್ಟಿದೆ. ಪಾಕ್‌ ತಿರುಗೇಟು ಕೋಡೋ ಒಂದು ಅವಕಾಶ ಕೊಡಲ್ಲ ಎಂದು ಹೇಳಿದರು.

ಇನ್ನು ಮೂರು ಸೇನೆಯ ಕಾರ್ಯಾಚರಣೆ ಅದ್ಭುತವಾಗಿತ್ತು. ನಮ್ಮ ಬಳಿ ಜಗತ್ತಿನ ಶ್ರೇಷ್ಠ ತಂತ್ರಜ್ಞಾನವಿದೆ. ನಮ್ಮ ತಂತ್ರಜ್ಞನಾವನ್ನು ಪಾಕ್‌ಗೆ ಎದುರಿಸಲಾಗಲ್ಲ. ಹೊಸ ತಂತ್ರಜ್ಞಾನದ ಜೊತೆ ಸವಾಲೂಗಳು ಇವೆ. ಪಾಕಿಸ್ತಾನಕ್ಕೆ ತಿರುಗೇಟು ಕೊಡೋ ಒಂದು ಅವಕಾಶನೂ ನಾವು ಕೊಡಲ್ಲ. ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿದ್ರೆ ಸುಮ್ಮನಿರಲ್ಲ ಎಂದು ಪ್ರಧಾನಿ ಮೋದಿ ಗುಡುಗಿದರು.

Share.
Leave A Reply