ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಗೃಹಸಚಿವರ ವಿರುದ್ಧ ಕಿಡಿಕಾರಿದ್ದಾರೆ. ಪರಮೇಶ್ವರ್ ಅವರು ಒಬ್ಬ ಅಸಮರ್ಥ ಗೃಹ ಸಚಿವರು ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ನಡೆದ ಘಟನೆಗಳ ಬಗ್ಗೆ ಮಾತನಾಡಿದ ಅವರು, ಪರಮೇಶ್ವರ್ ಅವರು ಒಬ್ಬ ಅಸಮರ್ಥ ಗೃಹ ಸಚಿವರು. ಕೇಸ್ ವಾಪಸ್ ಪಡೆದಿದ್ದೇ ಅಲ್ಪ ಸಂಖ್ಯಾತರಿಗೆ ಇಷ್ಟು ಧೈರ್ಯ ಬರಲು ಕಾರಣ. ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತಾರೆ, ಚಾಮರಾಜನಗರದಲ್ಲಿ ಐಎಸ್‌ಐ ಧ್ವಜಗಳನ್ನು ಹಾಕಿದ್ದಾರೆ. ಔರಂಗಜೇಬ್‌ನ ಖಡ್ಗ ಪ್ರದರ್ಶನ ಮಾಡುತ್ತಾರೆ. ಅಂತಹವರ ಮೇಲೆ ಏನು ಕ್ರಮ ತೆಗೆದುಕೊಳ್ಳಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಸ್ಲಿಮರ ಮತ ನಿಮಗೆ ಬರುತ್ತದೆ. ಆದ್ರೂ ಇನ್ನೆಷ್ಟು ಓಲೈಕೆ ಮಾಡುತ್ತೀರಿ? ಎಷ್ಟು ದಿನ ಸಿದ್ದರಾಮಯ್ಯ ಅವರ ಈ ತುಘಲಕ್ ದರ್ಬಾರ್ ನಡೆಯುತ್ತೆ. ಇನ್ನಾದರೂ ಹಿಂದೂಗಳ ರಕ್ಷಣೆ ಮಾಡಬೇಕು. ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿ ಬೆಣ್ಣೆ ಹಚ್ಚಬಾರದು ಎಂದು ಕಿಡಿಕಾರಿದರು.
Read Also : ಮದ್ದೂರಿನಲ್ಲಿ ಕಲ್ಲು ತೂರಾಟ ನೋಡಿದರೆ ಹಿಂದೂಗಳಿಗೆ ಭದ್ರತೆ ಇಲ್ಲ : ಶೋಭಾ ಕರಂದ್ಲಾಜೆ