ಭಾರತೀಯ ರೈಲ್ವೇಯಲ್ಲಿ ಕೆಲಸ ಖಾಲಿ ಇದ್ದು ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ರೈಲ್ವೆ ನೇಮಕಾತಿ ಮಂಡಳಿಯು ಈ ಬಾರಿ ಗ್ರಾಜುಯೇಟ್ ಮತ್ತು ಅಂಡರ್ ಗ್ರಾಜುಯೇಟ್ ವರ್ಗಗಳಲ್ಲಿ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆ ಕೈಗೊಂಡಿದೆ. ಇದರ ಮೂಲಕ ಪದವೀಧರರು ಹಾಗೂ ಪದವಿಪೂರ್ವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಒಟ್ಟು 8850 ಹುದ್ದೆಗಳು ಲಭ್ಯವಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅಪ್ಲೈ ಮಾಡ್ಬಹುದು. ಪದವೀಧರ ವರ್ಗಕ್ಕೆ 5817 ಹುದ್ದೆಗಳು ಮತ್ತು ಪದವಿಪೂರ್ವ ವರ್ಗಕ್ಕೆ 3058 ಹುದ್ದೆಗಳು ಮೀಸಲಾಗಿವೆ. ಪದವೀಧರ ಹುದ್ದೆಗಳಿಗೆ 18ರಿಂದ 33 ವರ್ಷಗಳ ವಯೋಮಿತಿ ಹಾಗೂ ಪದವಿಪೂರ್ವ ಹುದ್ದೆಗಳಿಗೆ 18ರಿಂದ 30 ವರ್ಷಗಳ ವಯೋಮಿತಿ ಅನ್ವಯಿಸುತ್ತೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ ನೀಡಲಾಗಿದೆ. ಗ್ರಾಜುವೇಟ್‌ ವರ್ಗದ ಅಭ್ಯರ್ಥಿಗಳು ಅಕ್ಟೋಬರ್‌ 21ರಿಂದ ನವೆಂಬರ್ 20ರವರೆಗೆ ಹಾಗೂ ಅಂಡರ್‌ಗ್ರಾಜುವೇಟ್‌ ವರ್ಗದ ಅಭ್ಯರ್ಥಿಗಳು ಅಕ್ಟೋಬರ್ 28ರಿಂದ ನವೆಂಬರ್ 27ರವರೆಗೆ ಅರ್ಜಿಯನ್ನ ಸಲ್ಲಿಸಬಹುದು. ಸಾಮಾನ್ಯ, ಓಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು 500 ರೂ. ಪಾವತಿಸಬೇಕು. ಎಸ್‌ಸಿ, ಎಸ್‌ಟಿ, ಮಹಿಳಾ, ದಿವ್ಯಾಂಗ ಹಾಗೂ ಮಾಜಿ ಸೈನಿಕರಿಗೆ 250 ರೂ. ಶುಲ್ಕ ನಿಗದಿಯಾಗಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಪಾವತಿಸಿದ ಶುಲ್ಕದ ಒಂದು ಭಾಗವನ್ನು ಮರುಪಾವತಿಸಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಹಂತ ಹಂತವಾಗಿ ನಡೆಯಲಿದೆ. ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ CBT-1 ನಡೆಯಲಿದೆ. ನಂತರ ಮುಖ್ಯ ಪರೀಕ್ಷೆ CBT-2 ನಡೆಯುತ್ತದೆ.

Share.
Leave A Reply