ನವದೆಹಲಿ : ಭಾರತೀಯ ಸೈನಿಕರು ಆಪ್‌ರೇಷನ್ ಸಿಂದೂರ(Operation Sindoor)ದ ಮೂಲಕ ಭಯೋತ್ಪಾದಕರ ನೆಲೆಗಳನ್ನು ನಾಶ ಮಾಡಿ ಪರಾಕ್ರಮ ಮೆರೆದಿದ್ದಾರೆ.. ಪಾಕಿಸ್ತಾನ ಹಾಗೂ ಪಿಒಕೆಯಲ್ಲಿನ 9 ಉಗ್ರರ ನೆಲೆಗಳನ್ನ ನಮ್ಮ ಸೈನಿಕರು ಉಡೀಸ್ ಮಾಡಿದ್ದಾರೆ.. ಇದರಿಂದ ಪಾಕಿಸ್ತಾನ (Pakistan) ದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.. ಪಾಕಿಸ್ತಾನ ಹಾಗೂ ಜಮ್ಮು ಕಾಶ್ಮೀರದ ಉಗ್ರರು ಆಕ್ರಮಿಸಿದ ಪ್ರದೇಶಗಳ ಮೇಲೆ ಆಪ್‌ರೇಷನ್ ಸಿಂಧೂರದ ಮೂಲಕ ರಣಭೀಕರ ದಾಳಿ ನಡೆಸಿತ್ತು.. ಈಗ ಆಪ್‌ರೇಷನ್ ಸಿಂಧೂರ ಸಕ್ಸ್‌ಸ್ ಆಗಿದ್ದು, ಭಾರತೀಯರೆಲ್ಲರೂ ಮಂದಹಾಸ ಬೀರಿದ್ದಾರೆ. ದೇಶದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇನ್ನು ಆಪ್‌ರೇಷನ್ ಸಿಂಧೂರ ಸಕ್ಸಸ್ ಬೆನ್ನಲ್ಲೇ ಕೇಂದ್ರ ಸರ್ಕಾರ ಸರ್ವ ಪಕ್ಷಗಳ ಸಭೆ ನಡೆಸಿದ್ದು, ದೆಹಲಿಯಲ್ಲಿ ಎಲ್ಲಾ ಪಕ್ಷಗಳ ಜೊತೆ ಚರ್ಚಿಸಲಾಗಿದೆ.. ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಮೀಟಿಂಗ್ ನಡೆಸಿದ್ದು, ಈ ಸಭೆಗೆ ಪ್ರಧಾನಿ ಮೋದಿ ಭಾಗವಹಿಸಿಲ್ಲ..

ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಗೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು.. ಈ ದಾಳಿಯಿಂದ ಉಗ್ರರಿಗೆ ಪಾಠ ಕಲಿಸಲು ತೀರ್ಮಾನಿಸಿದ್ದ ಭಾರತ ಸರ್ಕಾರ ಮಧ್ಯರಾತ್ರಿ ಪಾಕ್ ಮೇಲೆ Operation Sindoor ನಡೆಸಿ ಯಶಸ್ವಿ ಪ್ರತೀಕಾರ ತೀರಿಸಿಕೊಂಡಿದೆ.. ಈ ದಾಳಿ ನಡೆಸೋ ಮುಂಚೆ ಸಚಿವ ಸಂಪುಟ ಸಭೆ ನಡೆದಿತ್ತು. ಸಭೆಯಲ್ಲಿ ಸರ್ವ ಪಕ್ಷಗಳು ಸಂಪೂರ್ಣ ಬೆಂಬಲ ಘೋಷಣೆ ಮಾಡಿದ್ದವು..
ಹೀಗಾಗಿ ನಿನ್ನೆ ಆಪರೇಷನ್ ಸಿಂದೂರ್ ಕೈಗೊಂಡು ಭಯೋತ್ಪಾದಕರ ಪ್ರದೇಶಗಳ ಮೇಲೆ ಯಶಸ್ವಿ ದಾಳಿ ನಡೆಸಿದೆ.. ಇದರ ಪರಿಣಾಮ ಕುರಿತು ಇಂದು ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ದಾಳಿ ಕುರಿತು ವಿವರ ನೀಡಲಾಗಿದೆ.. ಭಾರತೀಯ ಸೇನೆ ನಡೆಸಿದ Operation Sindoor ಹೇಗಿತ್ತು? ಯಾವೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು? ಸರ್ಕಾರ ಮತ್ತು ಸೇನೆಯ ಮುಂದಿನ ನಡೆ ಏನು? ಒಂದು ವೇಳೆ ಪಾಕಿಸ್ತಾನ ದಾಳಿ ನಡೆದಿರೆ ಕ್ರಮಗಳೇನು? ಎಂಬ ಬಗ್ಗೆ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿವರಿಸಿದ್ದಾರೆ ಎನ್ನಲಾಗುತ್ತಿದೆ..
Also Read : ಆಪರೇಷನ್ ಸಿಂದೂರ್‌ಗೆ ಬಲಿಯಾದ ಉಗ್ರರು ಇವರೇ..!
Operation Sindoor: ಸಂಸತ್ ಭವನದಲ್ಲಿ ನಡೆದ ಸಭೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆರೋಗ್ಯ ಸಚಿವ ಜೆಪಿ ನಡ್ಡಾ, ವಿದೇಶಾಂಗ ಸಚಿವ ಎಸ್.ಜೈಶಂಕರ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಸುಪ್ರಿಯಾ ಸುಳೆ, ಸಂಜಯ್ ಝಾ, ಸೇರಿದಂತೆ ಹಲವು ಪಕ್ಷಗಳ ಮುಖಂಡರು ಭಾಗಿಯಾಗಿದ್ದರು..
